
ಚಿತ್ರ ನಟಿಯರು, ರೂಪದರ್ಶಿಗಳು ಎಂದರೆ ಅವರು ಮೈಯೆಲ್ಲಾ ಕಣ್ಣಾಗಿರಬೇಕು. ಒಂದು ಕಡೆ ಮೈಗೆ ಅಹಿತಕರ ಎನ್ನಿಸುವ ಉಡುಗೆ, ಅದು ತೀರಾ ಚಿಕ್ಕದ್ದೇ ಆಗಿರಬಹುದು ಅಥವಾ ನೆಲವೆಲ್ಲಾ ಗುಡಿಸುವ ಭರ್ಜರಿ ಬಟ್ಟೆಯೇ ಆಗಿರಬಹುದು, ಇನ್ನೊಂದೆಡೆ ಹೈಹೀಲ್ಸ್... ಇವೆಲ್ಲವೂ ಅನಿವಾರ್ಯವಾಗಿಬಿಟ್ಟಿವೆ. ಇವು ಇದ್ದರೇನೇ ಅಂದ ಚೆಂದ ಎನ್ನುವ ಮನಸ್ಥಿತಿ ಈ ಬಣ್ಣದ ಲೋಕದಲ್ಲಿ ಇರುವ ಕಾರಣ, ಅವರ ಜೊತೆಗೇ ಅವರು ಬಾಳ್ವೆ ನಡೆಸಬೇಕಾದ ಅನಿವಾರ್ಯತೆ ಉಂಟಾಗಿದೆ. ಅವರ ಮೇಲೆ ಸದಾ ಕ್ಯಾಮೆರಾ ಕಣ್ಣು ನೆಟ್ಟೇ ಇರುವ ಕಾರಣ, ಎಷ್ಟೇ ಅನ್ಕಂಫರ್ಟ್ ಬಟ್ಟೆ ಇತ್ಯಾದಿ ಇದ್ದರೂ ಕೃತಕವಾಗಿಯಾದರೂ ನಗುತ್ತಲೇ ಕೈಬೀಸುತ್ತಾ ಹೋಗುವ ಅನಿವಾರ್ಯತೆ ಅವರದ್ದು. ಅದೇ ರೀತಿ ಮಾಡಲು ಹೋಗಿ ಬಾಲಿವುಡ್ ನಟಿ ಹಾಗೂ ರೂಪದರ್ಶಿ ಕಂಗನಾ ಶರ್ಮಾ ಆಯ ತಪ್ಪಿ ಮೆಟ್ಟಿಲಿನಿಂದ ಜಾರಿ ಬಿದ್ದಿರುವ ಆಘಾತಕಾಗಿ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಮುಂಬೈನ ರೆಸ್ಟೋರೆಂಟ್ ಒಂದರಲ್ಲಿ ಅವರು ತಂಗಿದ್ದ ವೇಳೆ ವೇಳೆ ಈ ಘಟನೆ ನಡೆದಿದೆ. ನಟಿ ಕಂಗನಾ ಅವರು ತುಂಡುಡುಗೆ ತೊಟ್ಟು ಹೈಹೀಲ್ಸ್ ಹಾಕಿದ್ದರೆ. ಅವರು ಹೋಟೆಲ್ನಲ್ಲಿ ಉಳಿದಿರುವ ಸುದ್ದಿ ಪಾಪರಾಜಿಗಳಿಗೆ ಗೊತ್ತಾದರೆ ಬಿಡ್ತಾರೆಯೇ? ಅವರನ್ನು ಸುತ್ತುವರೆದು ಬಿಟ್ಟಿದರು. ಆ ಸಮಯದಲ್ಲಿ ಅವರಿಗೆಲ್ಲಾ ಸೊಗಸಾದ ಪೋಸ್ ನೀಡುವುದು ಈಕೆಯ ಕೆಲಸ ಆಗಿತ್ತು. ನಗುವಿನ ಜೊತೆ ಕೈಬೀಸುತ್ತಾ ಬಂದ ನಟಿಗೆ, ಅಲ್ಲಿ ಮೆಟ್ಟಿಲು ಇರುವುದು ಗೊತ್ತಾಗಲೇ ಇಲ್ಲ. ಹೇಳಿ ಕೇಳಿ ಸಿಕ್ಕಾಪಟ್ಟೆ ಹೈ ಹೀಲ್ಸ್ ಹಾಕಿದ್ದರು ಅವರು. ಮೆಟ್ಟಿಲು ಇರುವುದು ತಿಳಿಯದೇ ಮುಂದೆ ಅಡಿ ಇಟ್ಟಿದ್ದೇ ತಡ, ಅವರ ಹೈಹೀಲ್ಸ್ ಆಯ ತಪ್ಪಿ ಕಾಲು ತಿರುಚಿ ಬಿದ್ದೇ ಬಿಟ್ಟಿದ್ದಾರೆ. ಅಷ್ಟರಲ್ಲಿ ಅಲ್ಲಿದ್ದವರು ನಟಿಯನ್ನು ಎತ್ತಲು ಬಂದಿದ್ದಾರೆ. ಆದರೆ, ಕಂಗನಾ ಅವರ ಮುಖ ನೋಡಿದರೆ ಅವರಿಗೆ ಗಂಭೀರ ಸಮಸ್ಯೆ ಆಗಿರುವುದು ಕಾಣಿಸುತ್ತದೆ. ಕಾಲನ್ನು ಮುಟ್ಟಿಕೊಂಡು ಅವರು ನೋಡುತ್ತಿದ್ದರೂ, ಅವರ ಬಿದ್ದಿರುವ ಪರಿ ನೋಡಿದರೆ ಸೊಂಟಕ್ಕೂ ಸಮಸ್ಯೆ ಆಗಿರಬಹುದೇನೋ ಎಂದು ಎನ್ನಿಸುವುದು ಉಂಟು.
ಬಿಕಿನಿ ಧರಿಸಲು ಹಿಂದೇಟು ಹಾಕಿ ಮಿಸ್ ವರ್ಲ್ಡ್ ಗೆದ್ದ ಏಕೈಕ ಬಾಲಿವುಡ್ ನಟಿ ಈಕೆ: ಅಮ್ಮ ಹೇಳಿದ ಸ್ಟೋರಿ ಕೇಳಿ...
ವೈರಲ್ ಆಗಿರುವ ವಿಡಿಯೋದಲ್ಲಿ, ಕಂಗನಾ ತಮ್ಮ ಪಾದವನ್ನು ಒತ್ತಿಕೊಳ್ಳುತ್ತಾ ಯಾವುದಾದರೂ ಗಾಯಗಳಾಗಿವೆಯೇ ಎಂದು ಪರಿಶೀಲಿಸುತ್ತಿದ್ದಾರೆ. ಅವರ ಮುಖದಲ್ಲಿ ತೀವ್ರ ನೋವು ಇದ್ದರೂ, ಕ್ಯಾಮೆರಾ ಕಣ್ಣುಗಳು ತಮ್ಮ ಮೇಲೆ ಇರುವುದರಿಂದ ಕೃತಕವಾಗಿ ನಗೆ ಬೀರುವುದನ್ನೂ ನೋಡಬಹುದು. ಅಭಿಮಾನಿಗಳು ಕಂಗನಾ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿದ್ದಾರೆ. ನಟಿ, ರೂಪದರ್ಶಿಗಳ ಕೃತಕ ಬದುಕಿನ ಬಗ್ಗೆ ಹಲವರು ಕಮೆಂಟ್ನಲ್ಲಿ ತಿಳಿಸುತ್ತಿದ್ದಾರೆ. ತಮಗೆ ಅನನುಕೂಲ ಆಗುವಂಥ ಉಡುಗೆ- ತೊಡುಗೆ ಏಕೆ ತೊಡಬೇಕು ಎಂದು ಕೆಲವರು ಪ್ರಶ್ನಿಸಿದರೆ, ನೆಲ ನೋಡಿ ನಡೆಯುವುದನ್ನು ಮಾಡೆಲ್ ಆದವಳು ಕಲಿಯುವುದು ಅನಿವಾರ್ಯ ಎಂದು ಮತ್ತೆ ಕೆಲವರು ಪಾಠ ಮಾಡುತ್ತಿದ್ದಾರೆ.
ಇನ್ನು ನಟಿಯ ಕುರಿತು ಹೇಳುವುದಾದರೆ, ಕಂಗನಾ ಇದಾಗಲೇಕೆಲವು ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಗ್ರೇಟ್ ಗ್ರ್ಯಾಂಡ್ ಮಸ್ತಿ, ತೇರೆ ಜಿಸ್ಮ್, ರಾಮ್ರತನ್ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಾಯಕಿಯಾಗಿದ್ದಾರೆ. ಆದರೆ ಸಿನಿಮಾ ಅಷ್ಟು ಅವರ ಕೈಹಿಡಿಯಲಿಲ್ಲ. ಆದ್ದರಿಂದ ಅವರು ನಟನೆಯಿಂದ ಸ್ವಲ್ಪ ದೂರವೇ ಇದ್ದು, ಮಾಡೆಲಿಂಗ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆ್ಯಕ್ಟೀವ್ ಇರುವ ನಟಿ, 2.8 ಮಿಲಿಯನ್‌ಗಿಂತಲೂ ಹೆಚ್ಚು ಇನ್‌ಸ್ಟಾಗ್ರಾಮ್ ಅನುಯಾಯಿಗಳನ್ನು ಹೊಂದಿದ್ದಾರೆ. “2019 ರಲ್ಲಿ, ನಾನು ಯೋಗೇಶ್ ಅವರನ್ನು ವಿವಾಹವಾಗಿದ್ದಾರೆ ನಟಿ. ಆದರೆ ಕುಟುಂಬದ ಜವಾಬ್ದಾರಿ ತಮ್ಮ ಮೇಲೆಯೇ ಸಂಪೂರ್ಣ ಇದ್ದುದರಿಂದ ಮದುವೆಯ ಮುನ್ನ ಹಲವಾರು ಬಾರಿ ಯೋಚಿಸಿದ್ದೆ ಎಂದಿದ್ದರು ನಟಿ. ಜೊತೆಗೆ ಇವರ ಅಪ್ಪ-ಅಮ್ಮನ ಸಾಂಸಾರಿಕ ಜೀವನವೂ ಸರಿಯಿಲ್ಲದಿದ್ದರೆ ಕಾರಣ, ಮದುವೆಗೆ ಒಲ್ಲೆ ಎಂದಿದ್ದ ನಟಿ ಕೊನೆಗೂ ವಿವಾಹವಾಗಿದ್ದಾರೆ. ಈಗ ಮಾಡೆಲಿಂಗ್ ಮೂಲಕ ಸಾಕಷ್ಟು ಸಂಪಾದನೆ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.