Kangana Ranaut; ಮತ್ತೆ ಟ್ವಿಟ್ಟರ್‌ಗೆ ಬಂದ ನಟಿ ಕಂಗನಾ: ಮೊದಲು ಹೇಳಿದ್ದೇನು?

Published : Jan 25, 2023, 12:57 PM IST
Kangana Ranaut; ಮತ್ತೆ ಟ್ವಿಟ್ಟರ್‌ಗೆ ಬಂದ ನಟಿ ಕಂಗನಾ: ಮೊದಲು ಹೇಳಿದ್ದೇನು?

ಸಾರಾಂಶ

ಬಾಲಿವುಡ್ ನಟಿ ಕಂಗನಾ ರಣಾವತ್ ಟ್ವಿಟ್ಟರ್‌ಗೆ ಮರಳಿದ್ದಾರೆ. ವಾಪಾಸ್ ಆಗ್ತಿದ್ದ ಹಾಗೆ ಕಂಗನಾ ಮೊದಲು ಹೇಳಿದ್ದೇನು ನೋಡಿ.

ನಟಿ ಕಂಗನಾ ರಣಾವತ್ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತಾರೆ. ವಿವಾದಾತ್ಮಕ ಹೇಳಿಕೆ ಹಾಗು ಪೋಸ್ಟ್ ಗಳ ಮೂಲಕ ಸದ್ದು ಮಾಡುವ ಕಂಗನಾ ಇದೀಗ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿದ್ದಾರೆ. ಕಂಗನಾ ಮತ್ತೆ ಟ್ವಿಟ್ಟರ್‌ಗೆ ಮರಳಿದ್ದಾರೆ. ನಟಿ ಕಂಗನಾ ಅವರ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಲಾಗಿತ್ತು. ಇದೀಗ ಮತ್ತೆ ಪಾವಾಸ್ ಆಗುವ ಮೂಲಕ ಅಭಿಮಾನಿಗಳಿಗೆ ಸಂತಸ ಸುದ್ದಿ ನೀಡಿದ್ದಾರೆ. ಟ್ವಿಟ್ಟರ್‌ಗೆ ವಾಪಾಸ್ ಆಗ್ತಿದ್ದ ಹಾಗೆ ಎಲ್ಲರಿಗಾ ನಮಸ್ಕಾರ, ಮತ್ತೆ ಇಲ್ಲಿಗೆ ಹಿಂತಿರುಗಲು ತುಂಬಾ ಸಂತೋಷವಾಗುತ್ತಿಗೆ' ಎಂದು ಹೇಳಿದ್ದಾರೆ. 

ಕಂಗನಾ ಟ್ವಿಟ್ಟರ್‌ಗೆ ಮರಳಿರುವುದಾಗಿ ಟ್ವೀಟ್ ಮಾಡುತ್ತಿದ್ದಂತೆ ಅನೇಕರು ಕಾಮೆಂಟ್ ಮಾಡಿ ಸ್ವಾಗತಿಸಿದರು. ಅಭಿಮಾನಿಗಳು ಮತ್ತು ಸಿನಿಮಾ ಗಣ್ಯರು ಟ್ವೀಟ್ ಮೂಲಕ ಸ್ವಾಗತ ಕೋರಿದರು. ಸಂಭ್ರಮ  ಹಂಚಿಕೊಂಡರು. ಕಂಗನಾ ಸಾಲು ಸಾಲು ಟ್ವೀಟ್ ಮಾಡಿದ್ದಾರೆ. ಎಮರ್ಜೆನ್ಸಿ ಸಿನಿಮಾದ ಮೇಕಿಂಗ್ ವಿಡಿಯೋಗಳನ್ನು ಶೇರ್ ಮಾಡಿದ್ದಾರೆ. 'ಎಮರ್ಜೆನ್ಸ್ ಮುಕ್ತಾಯವಾಗಿದೆ. ಯಶಸ್ವಿಯಾಗಿ ಸಿನಿಮಾದ ಚಿತ್ರೀಕರಣ ಮುಗಿಸಲಾಗಿದೆ. ಅಕ್ಟೋಬರ್ 20ರಂದು ಚಿತ್ರಮಂದಿರಗಳಲ್ಲಿ ಸಿಗೋಣ' ಎಂದು ಹೇಳಿದ್ದಾರೆ. 

ನಟಿ ಕಂಗನಾ ರಣಾವತ್ ಅವರ ಟ್ವಿಟ್ಟರ್ ಖಾತೆ ಮೇ 2021ರಲ್ಲಿ ಶಾಶ್ವತವಾಗಿ ಅಮಾನತುಗೊಳಿಸಲಾಗಿತ್ತು. ಪುನರಾವರ್ತಿತ ಉಲ್ಲಂಘನೆಗಳಿಗಾಗಿ ಕಂಗನಾ ಟ್ವಿಟ್ಟರ್ ಖಾತೆ ಅಮಾನತು ಆಗಿತ್ತು. ಇದೀಗ ಟ್ವಿಟ್ಟರ್ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕೈಗೆ ಬಂದಾಗ ಕಂಗನಾ ಅಭಿಮಾನಿಗಳು ಕೇಳಿಕೊಂಡಿದ್ದರು. ನಟಿಯ ಖಾತೆಯನ್ನು 
ಮರುಸ್ಥಾಪಿಸಿ ಎಂದು ಒತ್ತಾಯ ಮಾಡಿದ್ದರು. ಇದೀಗ ಕಂಗನಾ ಟ್ವಿಟ್ಟರ್‌ಗೆ ವಾಪಾಸ್ ಆಗಿದ್ದಾರೆ. 

ನಟಿ ಕಂಗನಾ ಸದ್ಯ ಬಹುನಿರೀಕ್ಷೆಯ ಎಮರ್ಜೆನ್ಸಿ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಈ ಸಿನಿಮಾಗೆ ಕಂಗನಾ  ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣ ಕೂಡ ಮಾಡಿದ್ದಾರೆ. ಕಂಗನಾ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಂದಿರಾ ಗಾಂಧಿ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ಫೋಟೋಗಳು ಈಗಾಗಲೇ ವೈರಲ್ ಆಗಿವೆ. ಇತ್ತೀಚಿಗಷ್ಟೆ ಶೂಟಿಂಗ್ ಸಮಯದ ಕಷ್ಟದ ಅನುಭವವನ್ನು ಬಿಚ್ಚಿಟ್ಟಿದ್ದರು. ಚಿತ್ರಕ್ಕಾಗಿ ಎಲ್ಲಾ ಆಸ್ತಿ ಅಡವಿಟ್ಟಿದ್ದೆ ಎಂದು ಕಂಗನಾ ಹೇಳಿದ್ದರು.

ಈ ಸಿನಿಮಾಗಾಗಿ ಎಲ್ಲಾ ಆಸ್ತಿ ಅಡ ಇಟ್ಟೆ, ಇದು ನನಗೆ ಪುನರ್ಜನ್ಮ...: ನಟಿ ಕಂಗನಾ ರಣಾವತ್

'ನಾನು ನಟಿಯಾಗಿ ಎಮರ್ಜೆನ್ಸಿ ಮುಗಿಸುತ್ತಿದ್ದೇನೆ. ನನ್ನ ಜೀವನದ ಒಂದು ಅದ್ಭುತ ಹಂತ ಸಂಪೂರ್ಣವಾಗಿ ಕೊನೆಯಾಗುತ್ತಾ ಬರ್ತಿದೆ. ನನ್ನ ಎಲ್ಲಾ ಆಸ್ತಿಯನ್ನು ಅಡ ಇಡುವುದರಿಂದ ನಾನು ಡೇಂಗ್ಯೂ ರೋಗಕ್ಕೆ ಒಳಗಾಗಿದ್ದು, ಕಡಿಮೆ ರಕ್ತ ಕಣಗಳ ನಡುವೆಯೂ ಚಿತ್ರೀಕರಣ ಮಾಡಿದ್ದೇವೆ.  ನಾನು ಇಲ್ಲಿ (ಸಾಮಾಜಿಕ ಮಾಧ್ಯಮ) ನನ್ನ ಭಾವನೆಗಳ ಬಗ್ಗೆ ತುಂಬಾ ಮುಕ್ತವಾಗಿ ಹೇಳಿದ್ದೇನೆ. ನಾನು ಅಲ್ಲಿ ಎಲ್ಲವನ್ನೂ ಶೇರ್ ಮಾಡಿಲ್ಲ. ಯಾಕೆಂದರೆ ಪ್ರಾಮಾಣಿಕವಾಗಿ ಕಾಳಜಿ ವಹಿಸುವ ಜನರು ಅನಗತ್ಯವಾಗಿ ಚಿಂತುವುದನ್ನು ನಾನು ಬಯಸುವುದಿಲ್ಲ ಹಾಗೂ ನಾನು ಬೀಳುವುದನ್ನು ನೋಡಲು  ಬಯಸುವವರು, ನನ್ನನ್ನು ನೋಯಿಸಲು ಎಲ್ಲವನ್ನೂ ಮಾಡುತ್ತಿರೋರಿಗೆ ನನ್ನ ನೋವಿನ ಸಂತೋಷ ನೀಡಲು ಬಯಸುವುದಿಲ್ಲ' ಎಂದು ಹೇಳಿದ್ದರು. 

Tunisha Sharma death; ಬಹುಪತ್ನಿತ್ವ ವಿರುದ್ಧ ಕಠಿಣ ಕಾನೂನು ತರಬೇಕು; ಮೋದಿಗೆ ನಟಿ ಕಂಗನಾ ಮನವಿ

ಕಂಗನಾ 2021 ರಲ್ಲಿ ಎಮರ್ಜೆನ್ಸಿ ಸಿನಿಮಾ ಘೋಷಿಸಿದರು. ರಿತೇಶ್ ಶಾ ಬರೆದಿದ ಸ್ಕ್ರಿಪ್ಟ್‌ಗೆ ಕಂಗನಾ ಆಕ್ಷನ್ ಕಟ್ ಹೇಳಿದ್ದಾರೆ. ಕಂಗನಾ ಕೊನೆಯ ಚಿತ್ರ ಧಾಕಡ್ ಚಿತ್ರವನ್ನು ಸಹ ರಿತೇಶ್ ಬರೆದಿದ್ದರು ಆದರೆ ಆ ಸಿನಿಮಾ ಹೀನಾಯ ಸೋಲು ಕಂಡಿತ್ತು. ಈ ಸಿನಿಮಾದಲ್ಲಿ ಅನುಪಮ್ ಖೇರ್, ಮಿಲಿಂದ್ ಸೋಮನ್, ಮಹಿಮಾ ಚೌಧರಿ, ಸತೀಶ್ ಕೌಶಿಕ್ ಮತ್ತು ಶ್ರೇಯಸ್ ತಲ್ಪಾಡೆ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಡಾರ್ಲಿಂಗ್.. ಆ ಪ್ರೀತಿಯನ್ನು ಕಂಡು ನಿನಗೆ ಆನಂದಬಾಷ್ಪ ಬಂದಿರುತ್ತದೆ; ರಾಜಮೌಳಿ ಪತ್ರದ ಮರ್ಮವೇನು?
'ರೀನಾ, ಕಿರಣ್ & ಲವರ್ ಗೌರಿ.. 'ನಾವೆಲ್ಲರೂ ಒಂದೇ ಫ್ಯಾಮಿಲಿ' ಎಂದ ಅಮೀರ್ ಖಾನ್; ಒಳಗೊಳಗೇ ನಕ್ಕ ನೆಟ್ಟಿಗರು!