ಸಮಂತಾ- ನಾಗಚೈತನ್ಯ ಡೈವೋರ್ಸ್‌ಗೆ ಆ ಸ್ಟಾರ್‌ ನಟನೇ ಕಾರಣವಂತೆ!

By Suvarna News  |  First Published Oct 3, 2021, 1:31 PM IST

* ವಿಚ್ಛೇದನಕ್ಕೆ ಮುಂದಾದ ದಕ್ಷಿಣ ಭಾರತದ ಕ್ಯೂಟ್ ಕಪಲ್

* ಸಮಂತಾ- ನಾಗಚೈತನ್ಯ ವಿಚ್ಛೇದನ, ಅಭಿಮಾನಿಗಳಿಗೆ ಶಾಕ್

* ಸ್ಟಾರ್‌ ದಂಪತಿಯ ವಿಚ್ಛೇದನಕ್ಕೆ ಇವರೇ ಕಾರಣವಂತೆ


ಮುಂಬೈ(ಆ.03): ದಕ್ಷಿಣ ಭಾರತದ ಸೂಪರ್ ಸ್ಟಾರ್ ನಾಗಾರ್ಜುನ(Nagarjuna) ಸೊಸೆ ಸಮಂತಾ ಮತ್ತು ಮಗ ನಾಗ ಚೈತನ್ಯ(Naga Chaitanya) ವಿಚ್ಛೇದನ ಪಡೆದಿದ್ದಾರೆ. ಶನಿವಾರ, ಸಮಂತಾ(Samantha Akkineni) ಸ್ವತಃ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡುವ ಮೂಲಕ ಇದನ್ನು ಒಪ್ಪಿಕೊಂಡಿದ್ದಾರೆ. ಆದರೀಗ ಈ ವಿಚಾರವಾಗಿ, ಸಮಂತಾ ವಿಚ್ಛೇದನದ ಬಗ್ಗೆ ಕಂಗನಾ ರಣಾವತ್(Kangana Ranaut ) ಪ್ರತಿಕ್ರಿಯೆ ಭಾರೀ ಸದ್ದು ಮಾಡುತ್ತಿದೆ. ಹೌದುಸಮಂತಾ-ನಾಗ ವಿಚ್ಛೇದನಕ್ಕೆ ಕಂಗನಾ ಬಾಲಿವುಡ್ ನಟ ಅಮೀರ್ ಖಾನ್ ಅವರನ್ನು ದೂಷಿಸಿದ್ದಾರೆ. ಇನ್ನು ಕೆಲ ದಿನಗಳ ಹಿಂದಷ್ಟೇ ಅಮೀರ್ ಖಾನ್ ತನ್ನ ಎರಡನೇ ಪತ್ನಿ ಕಿರಣ್ ರಾವ್‌ಗೂ ವಿಚ್ಛೇದನ ನೀಡಿದ್ದಾರೆ ಎಂಬುವುದು ಉಲ್ಲೇಖನೀಯ.

ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನದ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ಕಂಗನಾ ರಣಾವತ್ ಪೋಸ್ಟ್ ಹಂಚಿಕೊಂಡಿದ್ದಾರೆ. ಇದರಲ್ಲಿ ಈ ದಕ್ಷಿಣ ಭಾರತದ ನಟ, ತನ್ನ ಪತ್ನಿಗೆ ದಿಢೀರ್ ವಿಚ್ಛೇದನ ನೀಡಿದ್ದಾರೆ. 10 ವರ್ಷಗಳಿಗಿಂತ ಹೆಚ್ಚು ಕಾಲ ಆಪ್ತರಾಗಿದ್ದ ಈ ಜೋಡಿ, 4 ವರ್ಷಗಳ ದಾಂಪತ್ಯ ಬದುಕು ಬಾಳಿದ್ದಾರೆ. ಇತ್ತೀಚೆಗಷ್ಟೇ ಅವರು ಬಾಲಿವುಡ್‌ನಲ್ಲಿ ವಿಚ್ಛೇದನ ತಜ್ಞ ಎಂದೇ ಕರೆಯಲ್ಪಡುವ ಸೂಪರ್‌ಸ್ಟಾರ್‌ನೊಂದಿಗೆ ಸಂಪರ್ಕಕ್ಕೆ ಬಂದಿದ್ದರು. ಅವರು ಅನೇಕ ಮಹಿಳೆಯರು ಮತ್ತು ಮಕ್ಕಳ ಜೀವನವನ್ನು ಹಾಳುಮಾಡಿದ್ದು, ಅವರನ್ನು ಪ್ರಚೋದಿಸುತ್ತಿದ್ದಾರೆ. ನಾನು ಏನು ಮಾತನಾಡುತ್ತಿದ್ದೇನೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದಿದ್ದಾರೆ. ಇನ್ನು ಲಡಾಖ್‌ನಲ್ಲಿ 'ಲಾಲ್ ಸಿಂಗ್ ಚಡ್ಡಾ' ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅಮೀರ್ ಖಾನ್(Aamir Khan) ಮತ್ತು ನಾಗ ಚೈತನ್ಯ ಭೇಟಿಯಾಗಿದ್ದರು ಎಂಬುವುದು ಉಲ್ಲೇಖನೀಯ.

Tap to resize

Latest Videos

undefined

ಮೊನ್ನೆ ಶನಿವಾರ, ಸಾಮಾಜಿಕ ಜಾಲತಾಣದಲ್ಲಿ ತಾನು ಹಾಗೂ ನಾಗಚೈತನ್ಯ ಬೇರ್ಪಡುತ್ತಿರುವುದನ್ನು ಖಚಿತಪಡಿಸುತ್ತಾ ಬಹಳ ಚರ್ಚೆಯ ನಂತರ, ನಾಗ ಚೈತನ್ಯ ಮತ್ತು ವಿಚ್ಛೇದನ ಪಡೆಯಲು ನಿರ್ಧರಿಸಿದ್ದೇವೆ. ಒಂದು ದಶಕಕ್ಕೂ ಹೆಚ್ಚು ಕಾಲದ ನಮ್ಮ ಸ್ನೇಹ, ನಮ್ಮ ಸಂಬಂಧದ ಕೇಂದ್ರಬಿಂದುವಾಗಿತ್ತು ಮತ್ತು ಭವಿಷ್ಯದಲ್ಲಿ ನಮ್ಮ ನಡುವಿನ ಈ ಸ್ನೇಹ ಬಾಂಧವ್ಯ ಮುಂದುವರಿಯುತ್ತದೆ ಎಂದಿದ್ದರು. ಅಲ್ಲದೇ ನಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳು ಈ ಕಷ್ಟದ ಸಮಯದಲ್ಲಿ ನಮ್ಮನ್ನು ಬೆಂಬಲಿಸಬೇಕು ಮತ್ತು ಖಾಸಗಿತನಕ್ಕೆ ಧಕ್ಕೆಯುಂಟು ಮಾಡಬಾರದು ಎಂದು ವಿನಂತಿಸುತ್ತೇವೆ ಇದರಿಂದ ನಾವು ಈ ಪರಿಸ್ಥಿತಿಯನ್ನು ಮರೆತು ಮುಂದೆ ಹೋಗಬಹುದು ಎಂದೂ ಮನವಿ ಮಾಡಿದ್ದರು.

ನಾಲ್ಕು ವರ್ಷದ ಹಿಂದೆ ವಿವಾಹ

ಸಮಂತಾ ಮತ್ತು ನಾಗ ಚೈತನ್ಯ ಅಕ್ಟೋಬರ್ 6, 2017 ರಂದು ಗೋವಾದಲ್ಲಿ ಹಿಂದೂ ಮತ್ತು ಕ್ರಿಶ್ಚಿಯನ್ ಪದ್ಧತಿಗಳ ಪ್ರಕಾರ ವಿವಾಹವಾಗಿದ್ದರು. ಮದುವೆಯ ನಂತರ, ಸಮಂತಾ ತನ್ನ ಹೆಸರನ್ನು ಅಕ್ಕಿನೇನಿ ಎಂದು ಬದಲಾಯಿಸಿಕೊಂಡರು. ಆದರೆ ಇತ್ತೀಚೆಗಷ್ಟೇ ಅವರು ತನ್ನ ಟ್ವಿಟರ್ ಹ್ಯಾಂಡಲ್‌ನಿಂದ ಅಕ್ಕಿನೇನಿಯನ್ನು ತೆಗೆದುಹಾಕಿ ತಮ್ಮ ಹೆಸರನ್ನು ಸಮಂತಾ ರುತ್ ಪ್ರಭು ಎಂದು ಬದಲಾಯಿಸಿದ್ದರು. 4 ದಿನಗಳ ನಂತರ, ಇಬ್ಬರೂ ವಿವಾಹ ವಾರ್ಷಿಕೋತ್ಸವ ಆಚರಿಸುವವರಿದ್ದರು. ಆದರೀಗ ಈ ಆಚರಣೆಗೂ ಮೊದಲೇ ವಿಚ್ಛೇದನ ಪಡೆದಿದ್ದಾರೆ.

click me!