Kamal Haasan-Rajinikanth: "ಯಾರು ಹೀರೋ?"- ಇಡೀ ಜಗತ್ತು ಕೇಳುತ್ತಿರೋ ಈ ಸೆನ್ಸೇಷನಲ್ ಪ್ರಶ್ನೆಗೆ ಉತ್ತರವೇನು?

Published : Feb 21, 2026, 01:06 PM IST
Kamal Haasan Rajinikanth

ಸಾರಾಂಶ

ರಜನಿ ಮತ್ತು ಕಮಲ್ ಈ ಹಿಂದೆ 'ಪದಿನಾರು ವಯದಿನಿಲೆ', 'ಇಳಮೈ ಊಂಜಲಾಡುಗಿರುದು', ಮತ್ತು 'ಅಪೂರ್ವ ರಾಗಂಗಳ್' ಅಂತಹ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. 1980ರ ದಶಕದ ನಂತರ ಇಬ್ಬರೂ ತಮ್ಮದೇ ಆದ ಪ್ರತ್ಯೇಕ ಸಾಮ್ರಾಜ್ಯ ಕಟ್ಟಿಕೊಂಡಿದ್ದರು. ಈಗ ಮತ್ತೆ ಈ 'KH x RK' ಜೋಡಿ ಒಂದಾಗಿದೆ.

ಹೀರೋ ಯಾರು?

ದಕ್ಷಿಣ ಭಾರತದ ಚಿತ್ರರಂಗ ಮಾತ್ರವಲ್ಲದೆ, ಇಡೀ ಭಾರತೀಯ ಸಿನಿ ದುನಿಯಾ ದಶಕಗಳಿಂದ ಕಾಯುತ್ತಿದ್ದ ಆ ಕ್ಷಣ ಈಗ ಬಂದೇ ಬಿಟ್ಟಿದೆ. "ಯಾರು ಹೀರೋ?" ಎನ್ನುವ ಒಂದೇ ಒಂದು ಪ್ರಶ್ನೆಯ ಮೂಲಕ ಇಡೀ ಸೋಶಿಯಲ್ ಮೀಡಿಯಾವನ್ನು ಶೇಕ್ ಮಾಡಿದೆ 'KH x RK Reunion' ವಿಡಿಯೋ. ಹೌದು, ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಮತ್ತು ಅಭಿನಯ ಚತುರ ಕಮಲ್ ಹಾಸನ್ (Kamal Haasan) ಸುಮಾರು 40 ವರ್ಷಗಳ ನಂತರ ಮತ್ತೆ ಬೆಳ್ಳಿಪರದೆ ಮೇಲೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸುದ್ಧಿ ಕೇಳಿ ಸಿನಿಮಾ ಪ್ರೇಮಿಗಳ ಹಬ್ಬದ ಸಂಭ್ರಮ ಮೇಳೈಸಿದೆ.

ಏನಿದೆ ಈ ಸ್ಪೆಷಲ್ ಝಲಕ್‌ನಲ್ಲಿ?

ರೆಡ್ ಜೈಂಟ್ ಮೂವೀಸ್ ಬಿಡುಗಡೆ ಮಾಡಿರುವ ಈ ಪುಟ್ಟ ವಿಡಿಯೋದಲ್ಲಿ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರ ಮಜಾ ಸಂಭಾಷಣೆಯೊಂದಿಗೆ ವಿಡಿಯೋ ಆರಂಭವಾಗುತ್ತದೆ. "ಯಾವ ರೂಮ್‌ಗೆ ಮೊದಲು ಹೋಗೋಣ?" ಎಂಬ ಗೊಂದಲದಲ್ಲಿರುವ ಇವರಿಬ್ಬರ ಸಂಭಾಷಣೆಯ ಹಿನ್ನೆಲೆಯಲ್ಲಿ 'ದಿ ಗಾಡ್ ಫಾದರ್' ಮತ್ತು 'ಒನ್ಸ್ ಅಪಾನ್ ಎ ಟೈಮ್ ಇನ್ ಅಮೇರಿಕಾ' ಅಂತಹ ಕ್ಲಾಸಿಕ್ ಸಿನಿಮಾಗಳ ಪೋಸ್ಟರ್‌ಗಳನ್ನು ನಾವು ಗಮನಿಸಬಹುದು. ಇದು ಚಿತ್ರದ ಗ್ಯಾಂಗ್‌ಸ್ಟರ್ ಶೈಲಿಯನ್ನು ಎತ್ತಿ ತೋರಿಸುತ್ತದೆ.

ಅಲ್ಲಿಂದ ಸೀದಾ ಗ್ಯಾರೇಜ್ ಒಳಗೆ ಪ್ರವೇಶಿಸುವ ಇಬ್ಬರು ದಿಗ್ಗಜರು ತಮ್ಮ ಸ್ಟೈಲಿಶ್ ನಡಿಗೆಯ ಮೂಲಕ ಕಿಚ್ಚು ಹಚ್ಚುತ್ತಾರೆ. ಕಮಲ್ ಹಾಸನ್ ಅವರ ಗಂಭೀರ ನೋಟ ಮತ್ತು ರಜನಿಕಾಂತ್ ಅವರ ಸಿಗ್ನೇಚರ್ ಸ್ಟೈಲ್ ಅಭಿಮಾನಿಗಳಿಗೆ ಹಳೆಯ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತದೆ. ವಿಶೇಷವಾಗಿ ಈ ವಿಡಿಯೋದಲ್ಲಿ ರೇಸಿಂಗ್ ಕಾರ್‌ಗಳು, ಸ್ಟೈಲಿಶ್ ಆಗಿ ಕಾಣುವ ಸುಂದರಿಯರು ಮತ್ತು ವಿಂಟೇಜ್ ಮರ್ಸಿಡಿಸ್ ಕಾರುಗಳು ಒಂದು ಪಕ್ಕಾ ಕಮರ್ಷಿಯಲ್ ಮತ್ತು ಸ್ಟೈಲಿಶ್ ಸಿನೆಮಾದ ಮುನ್ಸೂಚನೆ ನೀಡುತ್ತವೆ.

"ಯಾರು ಹೀರೋ?" - ಸೆನ್ಸೇಷನಲ್ ಸಂಭಾಷಣೆ:

ವಿಡಿಯೋದ ಕೊನೆಯಲ್ಲಿ ಕಮಲ್ ಹಾಸನ್ ಅವರು "ಸರಿ, ಎಲ್ಲವೂ ಚೆನ್ನಾಗಿದೆ.. ಆದರೆ ಯಾರು ಹೀರೋ?" ಎಂದು ಕೇಳುತ್ತಾರೆ. ಇದಕ್ಕೆ ರಜನಿಕಾಂತ್ ಅವರು ಕೂಡ "ಕೇಳ್ತಿದ್ದಾರೆ ಅಲ್ವಾ ಜಿ, ಯಾರು ಹೀರೋ ಅಂತ ಹೇಳಿ" ಎಂದು ನಗುತ್ತಾ ಕೇಳುವ ಆ ಕ್ಷಣ ಇದೆಯಲ್ಲಾ.. ಅದು ನಿಜಕ್ಕೂ ಸಿನೆಮಾ ಅಭಿಮಾನಿಗಳಿಗೆ ಪೈಸಾ ವಸೂಲ್ ಕ್ಷಣ! ಇಬ್ಬರು ಸಮಬಲದ ನಾಯಕರು ಒಂದಾದಾಗ ಇಂತಹ ಪ್ರಶ್ನೆಗಳು ಸಹಜ, ಆದರೆ ಉತ್ತರ ಮಾತ್ರ ಕುತೂಹಲ ಮೂಡಿಸಿದೆ.

ತಾಂತ್ರಿಕ ವರ್ಗದ ಬಲ:

ಈ ಚಿತ್ರವನ್ನು 'ಜೈಲರ್' ಖ್ಯಾತಿಯ ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸುತ್ತಿದ್ದು, 'ರಾಕ್‌ಸ್ಟಾರ್' ಅನಿರುದ್ಧ್ ಅವರ "ಆಜಾ ಆಜಾ ರಾಜಾ.." ಎಂಬ ಬಿಜಿಎಂ (BGM) ಕಿವಿಗಳಲ್ಲಿ ಗುಂಯ್ ಎಂದು ಸದ್ದು ಮಾಡುತ್ತಿದೆ. ರಾಜೀವ್ ಮೆನನ್ ಅವರ ಅದ್ಭುತ ಛಾಯಾಗ್ರಹಣ ವಿಡಿಯೋಗೆ ಶ್ರೀಮಂತಿಕೆ ನೀಡಿದೆ. ರೆಡ್ ಜೈಂಟ್ ಮೂವೀಸ್ ಸಂಸ್ಥೆಯು ಈ ಬೃಹತ್ ಪ್ರಾಜೆಕ್ಟ್ ಅನ್ನು ನಿರ್ಮಾಣ ಮಾಡುತ್ತಿದ್ದು, ಇದು ಕಾಲಿವುಡ್‌ನ ಸಾರ್ವಕಾಲಿಕ ದೊಡ್ಡ ಬ್ಲಾಕ್‌ಬಸ್ಟರ್ ಆಗುವುದರಲ್ಲಿ ಸಂಶಯವಿಲ್ಲ.

ಇತಿಹಾಸ ಮರುಕಳಿಸುತ್ತಿದೆ:

ರಜನಿ ಮತ್ತು ಕಮಲ್ ಈ ಹಿಂದೆ 'ಪದಿನಾರು ವಯದಿನಿಲೆ', 'ಇಳಮೈ ಊಂಜಲಾಡುಗಿರುದು', ಮತ್ತು 'ಅಪೂರ್ವ ರಾಗಂಗಳ್' ಅಂತಹ ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. 1980ರ ದಶಕದ ನಂತರ ಇಬ್ಬರೂ ತಮ್ಮದೇ ಆದ ಪ್ರತ್ಯೇಕ ಸಾಮ್ರಾಜ್ಯ ಕಟ್ಟಿಕೊಂಡಿದ್ದರು. ಈಗ ಮತ್ತೆ ಈ 'KH x RK' ಜೋಡಿ ಒಂದಾಗಿರುವುದು ಭಾರತೀಯ ಚಿತ್ರರಂಗದ ಪಾಲಿಗೆ ಅತಿದೊಡ್ಡ 'ರಿಯೂನಿಯನ್' ಆಗಿದೆ.

ಒಟ್ಟಿನಲ್ಲಿ, ಈ ಸಣ್ಣ ಝಲಕ್ ಸಿನೆಮಾ ಲೋಕದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಚಿತ್ರದ ಶೂಟಿಂಗ್ ಮತ್ತು ಬಿಡುಗಡೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ರೌಡಿ ಸ್ಟಾರ್‌ಗಳ ಅಬ್ಬರಕ್ಕೆ ಈಗ ದೊಡ್ಡಣ್ಣಗಳ ಎಂಟ್ರಿ ಆಗಿದೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ-ವಿಜಯ್ ಪ್ರೇಮಕಥೆ ಹಿಂದಿದೆ ಒಂದು ದೊಡ್ಡ ರಹಸ್ಯ; ಏನೇ ಷಡ್ಯಂತ್ರ ಮಾಡಿದ್ರೂ ಈ ಜೋಡಿನ ಕಾಪಾಡ್ತಿರೋದು ಯಾವುದು?
Cocktail 2 ಕಥೆ ಲೀಕ್: ರಶ್ಮಿಕಾ ಮಂದಣ್ಣ ಸಲಿಂಗಕಾಮಿ… ಮದುವೆಗೂ ಮುನ್ನ ಶಾಕ್ ಕೊಟ್ಟ ನಟಿ!