ಬಹುನಿರೀಕ್ಷಿತ ಚಿತ್ರ ಕಲ್ಕಿ 2898 ADನ ಟ್ರೈಲರ್, ಯುಟ್ಯೂಬ್ ನಲ್ಲಿ ಅಬ್ಬರಿಸುತ್ತಿದೆ. ಚಿತ್ರದ ಟೈಲರ್ ಸಾಕಷ್ಟು ಕುತೂಹಲ ಹುಟ್ಟಿಸಿದೆ. ದೀಪಿಕಾ ಪಡುಕೋಣೆ ಚಿತ್ರದಲ್ಲಿ ಬೇಬಿ ಬಂಪ್ ಕಾಣಿಸಿದ್ದು, ಕೆಲವೊಂದು ಪ್ರಶ್ನೆ ಹುಟ್ಟುಹಾಕಿದ್ದಾರೆ.
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಚೊಚ್ಚಲ ಮಗುವಿಗೆ ಜನ್ಮ ನೀಡಲಿರುವ ದೀಪಿಕಾ ಗರ್ಭಿಣಿ. ಅನೇಕ ಬಾರಿ ಅವರ ಬೇಬಿ ಬಂಪ್ ಗಮನ ಸೆಳೆದಿದೆ. ಈ ಸುಂದರ ಕ್ಷಣವನ್ನು ಎಂಜಾಯ್ ಮಾಡ್ತಿರುವ ದೀಪಿಕಾ ಈ ಟೈಂನಲ್ಲೂ ಬ್ಯುಸಿ. ಅವರು ಸದ್ಯ ಕಲ್ಕಿ 2898 AD ವಿಷ್ಯದಲ್ಲಿ ಚರ್ಚೆಯಲ್ಲಿದ್ದಾರೆ. ಹಾಟ್ ಆಂಡ್ ಬ್ಯೂಟಿಫುಲ್ ಲೇಡಿ ದೀಪಿಕಾ ಸೂಪರ್ ಸ್ಟಾರ್ ಪ್ರಭಾಸ್ ಅಮ್ಮನ ಪಾತ್ರದಲ್ಲಿ ಮಿಂಚಲಿದ್ದಾರಾ ಎಂಬ ಅನುಮಾನವೊಂದು ಎಲ್ಲರ ಮನದಲ್ಲಿ ಮೂಡಿದೆ. ಇದಕ್ಕೆ ಕಾರಣ, ಕಲ್ಕಿ 2898 ADನ ಟ್ರೈಲರ್.
ಬಹುನಿರೀಕ್ಷಿತ (Long Awaited) ಚಿತ್ರ ಕಲ್ಕಿ 2898 ADನ ಟ್ರೈಲರ್ (Trailer ) ಯುಟ್ಯೂಬ್ ನಲ್ಲಿ ಅಬ್ಬರಿಸುತ್ತಿದೆ. ಸೋಲಿಲ್ಲದ ನಟ ಪ್ರಭಾಸ್ (Prabhas), ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ ಹಾಗೂ ಬಹುಭಾಷಾ ನಟ ಕಮಲ್ ಹಾಸನ್ ರಂತಹ ದಿಗ್ಗಜ ನಟರು ಕಾಣಿಸಿಕೊಂಡ ಸಿನಿಮಾದ ಟ್ರೈಲರ್, ಬಿಡುಗಡೆಯಾದ ಕೆಲವೇ ನಿಮಿಷದಲ್ಲಿ ಅಬ್ಬರಿಸಿದೆ. 600 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿರುವ ಸಿನಿಮಾ ಇದು. ಕೋರಿಯೋಗ್ರಫಿ, ಡೈಲಾಗ್, ಫೈಟ್ ಎಲ್ಲವೂ ಭಿನ್ನವಾಗಿ ಮೂಡಿ ಬಂದಿದ್ದು, ಅಭಿಮಾನಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದೆ.
ದೀಪಿಕಾ ಪಡುಕೋಣೆಗೆ ಪಾಪರಾಜಿಗಳ ಕಾಟ; ಗರ್ಭಿಣಿಗೆ ಹೀಗೇಕೆ ತೊಂದರೆ ಕೊಡ್ತೀರಿ ಎಂದ ಫ್ಯಾನ್ಸ್
ಹಿಂದಿ ಟ್ರೇಲರ್ ಒಂದು ಗಂಟೆಯಲ್ಲಿ ಒಂದೂವರೆ ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ರೆ, ತೆಲುಗು ಟ್ರೇಲರ್ 2 ಗಂಟೆಗಳಲ್ಲಿ ಎರಡು ಮಿಲಿಯನ್ ಗೂ ಹೆಚ್ಚು ವೀಕ್ಷಣೆ ಪಡೆದಿದೆ. ಟ್ರೇಲರ್‌ನ ಆರಂಭದಲ್ಲಿ ಕಾಶಿ ಬಗ್ಗೆ ಮಾತನಾಡೋದನ್ನು ಕೇಳ್ಬಹುದು.
ಆರಂಭದಲ್ಲಿ ಕಾಶಿಯನ್ನು ಪ್ರಪಂಚದ ಮೊದಲ ಮತ್ತು ಕೊನೆಯ ನಗರ ಎಂದು ವಿವರಿಸಲಾಗಿದೆ. ಪ್ರಭಾಸ್, ದೀಪಿಕಾ, ಕಮಲ್ ಹಾಸನ್ ಮತ್ತು ಅಮಿತಾಬ್ ಬಚ್ಚನ್ ಅವರಲ್ಲದೆ ಬಾಲಿವುಡ್ ನಟಿ ದಿಶಾ ಪಟಾನಿಯ ಟ್ರೇಲರ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಟ್ರೇಲರ್‌ನಲ್ಲಿ ದೀಪಿಕಾ ಪಡುಕೋಣೆ ಅಸ್ತವ್ಯಸ್ತಗೊಂಡ ಕೂದಲಿನೊಂದಿಗೆ ಅಸಮಾಧಾನಗೊಂಡಂತೆ ಕಾಣ್ತಿದ್ದಾರೆ. ಟ್ರೇಲರ್ ಆರಂಭದಲ್ಲಿ ದೀಪಿಕಾ ಮಲಗಿದ್ದು, ಹೊಟ್ಟೆ ಮೇಲೆ ಕೈ ಇಡೋದನ್ನು ಕಾಣ್ಬಹುದು. ಸಿನಿಮಾದಲ್ಲೂ ನಟಿ ಗರ್ಭಿಣಿ ಎಂಬುದನ್ನು ನೀವು ಅರ್ಧ ಮಾಡ್ಕೊಳ್ಳಬಹುದು. ಮುಂದಿನ ದೃಶ್ಯದಲ್ಲಿ ಅಮಿತಾಭ್ ಬಚ್ಚನ್ ಜೊತೆ ಮಾತನಾಡುತ್ತಿರುವುದನ್ನು ತೋರಿಸಲಾಗಿದೆ. ಟ್ರೈಲರ್ ಕೊನೆಯಲ್ಲಿ ದೀಪಿಕಾ ಒಂದು ಡೈಲಾಗ್ ಹೇಳ್ತಾರೆ, ಅದ್ರಿಂದಾಗಿ ದೀಪಿ, ಪ್ರಭಾಸ್ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆಂಬ ಅನುಮಾನ ಹುಟ್ಟುತ್ತೆ. ತನ್ನ ಮೊದಲ ಉಸಿರನ್ನೇ ತೆಗೆದುಕೊಳ್ಳದ ವ್ಯಕ್ತಿ ಕೊನೆ ಉಸಿರಿಗೆ ಹೇಗೆ ಕಾರಣವಾಗ್ತಾನೆ ಎಂಬ ದೀಪಿಕಾ ಮಾತಿಗೆ, ವಿಲನ್ ಪಾತ್ರದಲ್ಲಿ ಮಿಂಚುತ್ತಿರುವ ಕಮಲ್ ಹಾಸನ್ ಉತ್ತರ ನೀಡ್ತಾರೆ. ದೀಪಿಕಾ ಕಿವಿಯಲ್ಲಿ , ಹೆದರಬೇಡ, ಹೊಸ ಯುಗ ಬರ್ತಿದೆ ಎನ್ನುತ್ತಾರೆ.
ರಾಕಿಂಗ್ ಸ್ಟಾರ್ ಯಶ್ ಕೀರ್ತಿ ಪತಾಕೆಗೆ ಮತ್ತೊಂದು ಗರಿ! ಆ ಲಿಸ್ಟ್‌ನಲ್ಲಿ ಮತ್ತೆ ಟಾಪ್‌ಗೆ ಬಂದ ನ್ಯಾಷನಲ್ ಸ್ಟಾರ್..!
ಇದೊಂದೇ ಡೈಲಾಗ್ ಅನೇಕ ಸಂಶಯ ಹುಟ್ಟುಹಾಕಿದೆ. ಭವಿಷ್ಯದಲ್ಲಿ ದೀಪಿಕಾ ಜನ್ಮ ನೀಡುವ ಮಗು ಪ್ರಭಾಸ್ ಆಗಿರಬಹುದು ಎನ್ನಲಾಗ್ತಿದೆ. ಅಂದ್ರೆ ಇಬ್ಬರನ್ನು ತಾಯಿ ಮತ್ತು ಮಗನ ಪಾತ್ರಗಳಲ್ಲಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಗ್ತಿದೆ ಎಂಬ ಸುದ್ದಿ ಇದೆ. ಇನ್ನು ಕಮಲ್ ಹಾಸನ್ ಕೊನೆ ಡೈಲಾಗ್, ಚಿತ್ರದ ಇನ್ನೊಂದು ಭಾಗ ಬರಲಿದೆ ಎಂಬುದನ್ನು ಸೂಚಿಸ್ತಿದೆ. ದೀಪಿಕಾ ಮಗು ಪ್ರಭಾಸ್ ಆಗಿದ್ದು, ಹೊಸ ಯುಗದಲ್ಲಿ ಹುಟ್ಟುತ್ತಾರೆ. ಅದನ್ನು ನಿರ್ದೇಶಕರು ಎರಡನೇ ಭಾಗದಲ್ಲಿ ತೋರಿಸಲಿದ್ದಾರೆ ಎಂದು ಪ್ರೇಕ್ಷಕರು ನಂಬಿದ್ದಾರೆ.
ಕಲ್ಕಿ 2898 ADನ, ಚಿತ್ರ ಈಗಾಗಲೇ ಸಾಕಷ್ಟು ಸದ್ದು ಮಾಡಿದ್ದು, ಅದನ್ನು ವೀಕ್ಷಿಸಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಜೂನ್ 27 ರಂದು ಚಿತ್ರ ಬಿಡುಗಡೆಯಾಗಲಿದೆ. 600 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಚಿತ್ರವನ್ನು ನಾಗ್ ಅಶ್ವಿನ್ ನಿರ್ದೇಶಿಸಿದ್ದಾರೆ.