ಪಾಪರಾಜಿಗಳಿಗೆ ಮುಖ ತೋರಿಸದೇ ಸತಾಯಿಸಿದ್ದಾರೆ ಕಾಜೋಲ್, ಅಜೆಯ್ ದೇವಗನ್ ಪುತ್ರಿ ನೀಸಾ. ಇದರ ವಿಡಿಯೋ ವೈರಲ್ ಆಗಿದ್ದು, ಥಹರೇವಾರಿ ಕಮೆಂಟ್ಸ್ ಬಂದಿವೆ.
ನಟ-ನಟಿಯರು ಎಲ್ಲಿಗೆ ಹೋದರೂ ಅವರನ್ನು ಪಾಪರಾಜಿಗಳು ಬಿಡದೇ ಕಾಡುವುದು ಸಹಜ. ಹಲವು ಸ್ಟಾರ್ಸ್ ಪಾಪರಾಜಿಗಳನ್ನು ದುಡ್ಡು ಕೊಟ್ಟು ಕರೆಸಿಕೊಳ್ಳುತ್ತಾರೆ ಎಂದು ಈಚೆಗಷ್ಟೇ ನಟಿ ಪ್ರಿಯಾಮಣಿ ಶಾಕಿಂಗ್ ಹೇಳಿಕೆ ನೀಡಿದ್ದರು. ಬಾಲಿವುಡ್ ತಾರೆಯರು ಕ್ಲಿಕ್ ಆಗಲು ಪಾಪರಾಜಿಗಳಿಗೆ ಹಣ ನೀಡುತ್ತಾರೆ. ಇದೊಂದು ಟ್ರೆಂಡ್ ಆಗಿ ಬೆಳೆದುಕೊಂಡಿದೆ. ಪಾಪರಾಜಿ ಏಜೆನ್ಸಿಗಳಿವೆ ಮತ್ತು ಎಷ್ಟು ಛಾಯಾಗ್ರಾಹಕರು ವಿಮಾನ ನಿಲ್ದಾಣ ಅಥವಾ ಜಿಮ್‌ಗೆ ಅಥವಾ ಎಲ್ಲಿ ಬೇಕಾದರೂ ಬರುತ್ತಾರೆ. ಜಿಮ್, ರೆಸ್ಟಾರೆಂಟ್ ಅಥವಾ ಇನ್ನಾವುದೇ ಸ್ಥಳದಲ್ಲಿ ಇದನ್ನು 'ಸ್ಪಾಟೆಡ್' ಎಂದು ಕರೆಯಲಾಗುತ್ತದೆ. ಸ್ಟಾರ್‌ಗಳು ಪಾಪರಾಜಿಗಳಿಗೆ ಇಂತಿಷ್ಟು ಹಣ ಎಂದು ನೀಡುತ್ತಾರೆ. ಇದೆ ಕಾರಣಕ್ಕೆ ಅವರು ಎಲ್ಲಿಗೆ ಹೋದರೂ ಕ್ಯಾಮೆರಾ ಫೋಕಸ್ ಆಗಿರುತ್ತದೆ ಎಂದು ಹೇಳಿಕೊಂಡಿದ್ದರು. ಅಚ್ಚರಿಯ ವಿಷಯ ಎಂದರೆ, ನೋಡುಗರಿಗೆ ಮಾತ್ರ ಇದು ಎಲ್ಲವೂ ಸಡನ್ ಎಂದು ಕಾಣಿಸುತ್ತದೆ. ಪಾಪರಾಜಿಗಳಿಗೆ ನಟ-ನಟಿಯರ ವಿಷ್ಯ ತಿಳಿಯುವುದು ಹೇಗೆ ಅನ್ನಿಸುತ್ತದೆ. ಆದರೆ ತಾವು ಸುದ್ದಿಯಲ್ಲಿ ಇರಲು ನಟರು ಏನು ಮಾಡುತ್ತಾರೆ ಎನ್ನುವ ರಹಸ್ಯವನ್ನು ಪ್ರಿಯಾಮಣಿ ಬಿಚ್ಚಿಟ್ಟಿದ್ದರು. ಪಾಪರಾಜಿಗಳ ಏಜೆನ್ಸಿಗಳು ಅವಶ್ಯಕತೆಯ ಆಧಾರದ ಮೇಲೆ ವಿಧಿಸುವ ಬೆಲೆಗಳ ಪಟ್ಟಿಯನ್ನು ನೋಡಿ ನನಗೆ ಆಶ್ಚರ್ಯವಾಯಿತು ಎಂದಿದ್ದರು.
ಅದೇನೇ ಇದ್ದರೂ ಇದೀಗ ನಟರಾದ ಅಜಯ್ ದೇವಗನ್ ಮತ್ತು ಕಾಜೋಲ್ (Kajol) ಅವರ ಪುತ್ರಿ ನೀಸಾ ದೇವಗನ್ ಹಿಂದೆ ಹೋಗಿರುವ ಪಾಪರಾಜಿಗಳು ಮಾತ್ರ ಸುಸ್ತು ಹೊಡೆದಿದ್ದಾರೆ. ನೀಸಾ ಸದ್ಯ ಸಾಮಾಜಿಕ ಮಾಧ್ಯಮದ ತಾರೆ. ಇಂಟರ್ನೆಟ್ನಲ್ಲಿ ಪ್ರಸಿದ್ಧವಾಗಿರುವ ಎಲ್ಲಾ ಬಾಲಿವುಡ್ ಮಕ್ಕಳಲ್ಲಿ, ನೀಸಾ ಬಹುಶಃ ಹೆಚ್ಚು ಪ್ರೀತಿಪಾತ್ರರಾಗಿದ್ದಾರೆ. ಈ ಸ್ಟಾರ್ ಕಿಡ್ ಆಗಾಗ್ಗೆ ಪಾರ್ಟಿ ಮಾಡುವುದು ಮತ್ತು ಸ್ನೇಹಿತರೊಂದಿಗೆ ಮೋಜು ಮಾಡುವುದು ಕಂಡುಬರುತ್ತದೆ. ಆದ್ದರಿಂದ ಅವರು ಎಲ್ಲೇ ಹೋದರೂ ಕ್ಯಾಮೆರಾ ಕಣ್ಣುಗಳು ಅವರನ್ನು ಹಿಂಬಾಲಿಸುತ್ತಲೇ ಇರುತ್ತದೆ. ನೀಸಾ ಬಾಲಿವುಡ್‌ನ ಸ್ಟಾರ್ ಕಿಡ್‌ಗಳಲ್ಲಿ ಒಬ್ಬರಾಗಿರುವ ಕಾರಣ ಅವರ ಹೆಸರು ಸಾಮಾನ್ಯವಾಗಿ ಎಲ್ಲರ ಬಾಯಲ್ಲಿ ಇರುತ್ತದೆ. ಅನೇಕ ಜನರು ಸಾಮಾನ್ಯವಾಗಿ ಯಾರ ಹೆಸರಿನ ಬಗ್ಗೆ ಗೊಂದಲಕ್ಕೊಳಗಾಗುವುದಿಲ್ಲ. ಆದರೆ ಕೆಲವೊಮ್ಮೆ ಇಂಗ್ಲಿಷ್ ಸ್ಪೆಲ್ಲಿಂಗ್ಗಳು ವಿಚಿತ್ರವಾಗಿರುವ ಕಾರಣ, ಅವುಗಳನ್ನು ತಪ್ಪಾಗಿ ಉಚ್ಛರಿಸುವುದು ಸಹಜ. ಅದೇ ರೀತಿ ಆಗಿದೆ ಈಗ ಅಜಯ್ ದೇವಗನ್ ಮತ್ತು ಕಾಜೋಲ್ ಅವರ ಮಗಳ ಕಥೆ ಕೂಡ.
ಡ್ರೆಸ್ ಒಳಗೇ ಬ್ರಹ್ಮಾಂಡ ತೋರಿದ ಉರ್ಫಿ ಜಾವೇದ್! ವೈರಲ್ ವಿಡಿಯೋಗೆ ಉಫ್ ಎಂದ ಫ್ಯಾನ್ಸ್...
ಈಕೆಯ ನಿಜವಾದ ಹೆಸರು ನೀಸಾ (Nysa). ಆದರೆ ಹಲವರು ಈಕೆಯನ್ನು ನ್ಯಾಸ ಎಂದು ಕರೆಯುವುದು ಉಂಟು. ಬಹುತೇಕ ಎಲ್ಲಾ ಮಾಧ್ಯಮಗಳಲ್ಲಿ ಕೂಡ ಈಕೆಯ ಹೆಸರು ನ್ಯಾಸ ಎಂದೇ ಬಿತ್ತರಗೊಳ್ಳುತ್ತದೆ ಹಾಗೂ ಪ್ರಕಟಗೊಳ್ಳುತ್ತದೆ. ಏಕೆಂದರೆ ನ್ಯಾಸ ಎನ್ನುವುದು ಜನಪ್ರಿಯ ಹೆಸರು. ಆದರೆ ಕಾಜೋಲ್ ಪುತ್ರಿಯ ಹೆಸರನ್ನು ಹಲವರು ನೈಸಾ, ನಿಶಾ, ನಿಶ್ಸಾ ಎಂದೂ ಕರೆಯುವುದು ಉಂಟು. ಇದೇ ರೀತಿ ಕರೆದಿರುವುದು ನೀಸಾ ಅವರಿಗೆ ಕಿರಿಕಿರಿ ಉಂಟು ಮಾಡಿರುವ ಘಟನೆ ನಡೆದಿದ್ದು, ಅದರ ವಿಡಿಯೋ ಕೆಲ ತಿಂಗಳ ಹಿಂದೆ ವೈರಲ್ ಆಗಿತ್ತು. ಈ ವೈರಲ್ ವಿಡಿಯೋದಲ್ಲಿ ನಟಿ, ತಮ್ಮ ಹೆಸರು ನ್ಯಾಸಾ, ನೈಶಾ, ನೈಸಾ ಅಲ್ಲ ನನ್ನ ಹೆಸರು ನೀಸಾ ಎಂದಿದ್ದರು.
ಇದೀಗ ಮತ್ತೆ ಅದೇ ರೀತಿ ಆಗಿದೆ. ನೈಸಾ, ನೈಶಾ ಮೇಡಂ ಮುಖ ತೋರಿಸಿ ಎಂದು ಪಾಪರಾಜಿಗಳು ಗಂಟುಬಿದ್ದಿದ್ದಾರೆ. ಜಪ್ಪಯ್ಯ ಎಂದರೂ ನೀಸಾ ತಮ್ಮ ಮುಖವನ್ನು ತೋರಿಸಲಿಲ್ಲ. ಕೊನೆಗೆ ದಾರಿ ಕಾಣದ ಪಾಪರಾಜಿಗಳು ಹಿಂದುಗಡೆಯ ವಿಡಿಯೋ ಅಷ್ಟೇ ಮಾಡಿ ತೃಪ್ತಿಪಟ್ಟುಕೊಂಡಿದ್ದಾರೆ! ಇದೀಗ ಇದರ ವಿಡಿಯೋ ವೈರಲ್ ಆಗಿದ್ದು, ಥಹರೇವಾರಿ ಕಮೆಂಟ್ಗಳ ಸುರಿಮಳೆಯಾಗುತ್ತಿದೆ.
ದಯವಿಟ್ಟು ಫೇಕ್ನ್ಯೂಸ್ ಹರಡಬೇಡಿ ಎಂದು 'ಕರಿಮಣಿ ಮಾಲಿಕ' ವಿಕ್ಕಿ ಮನವಿ: ಆದ್ರೆ ಅಲ್ಲಾಗಿದ್ದೇ ಬೇರೆ!