ಉದ್ಯಮಿಯ ಕೈ ಹಿಡಿತಿದ್ದಾರೆ ನಟಿ ಕಾಜಲ್ | ಮಗಧೀರ ಚೆಲುವೆಗೆ ಕಂಕಣ ಭಾಗ್ಯ | ಮುಂಬೈನಲ್ಲಿ ವಿವಾಹ
ಸೌತ್ ನಟಿ ಕಾಜಲ್ ವಿವಾಹಿತರಾಗಲಿದ್ದಾರೆ. ಮದುವೆಯ ದಿನವೂ ಫಿಕ್ಸ್ ಆಗಿದೆ. ಉದ್ಯಮಿ ಗೌತಮ್ ಕಿಚ್ಲು ಅವರನ್ನು ವರಿಸಲಿದ್ದಾರೆ ಮಗಧೀರ ನಟಿ. ಕಾಜಲ್ ನಟನೆಯಲ್ಲಿ ತೊಡಗಿಸಿಕೊಂಡು 16ವರ್ಷಗಳೇ ಆಯ್ತು. ಕಾಲಿವುಡ್ ಮತ್ತು ಟಾಲಿವುಡ್‌ನಲ್ಲೂ ಕಾಜಲ್ ಬ್ಯುಸಿ ನಟಿ. ಹಿಂದಿ ಸಿನಿಮಾಗಳಲ್ಲಿಯೂ ನಟಿ ಫೋಕಸ್ ಮಾಡುತ್ತಿದ್ದಾರೆ.
ನಟಿಯ ವಿವಾಹ ನಡೆಯಬೇಕೆಂದು ಪೋಷಕರು ಬಹಳ ಹಿಂದಿನಿಂದಲೇ ಪ್ರಯತ್ನಿಸುತ್ತಿದ್ದರು. ಕಾಜಲ್‌ಗೆ 35 ವರ್ಷವಾಗಿದ್ದು, ಪೋಷಕರು ಉದ್ಯಮಿ ವರನನ್ನು ಮಗಳಿಗಾಗಿ ಹುಡುಕಿದ್ದಾರೆ.
8 ಕೋಟಿ ಕಟ್; ಹಾಗಿದ್ದರೆ ಶಾಹಿದ್ ಕಪೂರ್ ಸಂಭಾವನೆ ಎಷ್ಟು? ಶಾಕ್ ಆಗಬೇಡಿ
ನಟಿ ಕಾಜಲ್ ಈ ಬಗ್ಗೆ ಟ್ವೀಟ್ ಮಾಡಿ ವಿವಾಹದ ಮಾಹಿತಿ ನೀಡಿದ್ದಾರೆ. ಇಂಟೀರಿಯರ್ ಡಿಸೈನರ್ ಕೂಡಾ ಆಗಿರುವ ಗೌತಮ್ ಅವರನ್ನು ನಟಿ ಇದೇ ತಿಂಗಳ 30ರಂದು ಮುಂಬೈನಲ್ಲಿ ವಿವಾಹವಾಗಲಿದ್ದಾರೆ.
ಕೆಲವು ಸಮಯದ ಹಿಂದೆ ಪೋಷಕರ ಜೊತೆ ಪ್ರಮುಖ ದೇವಾಲಯಗಳಿಗೆ ಭೇಟಿ ಕೊಟ್ಟಿದ್ದ ನಟಿ ವಿವಾಹ ಸಂಬಂಧ ಪೂಜೆ, ಪ್ರಾರ್ಥನೆಗಳನ್ನೂ ಮಾಡಿದ್ದರು. ಇದೀಗ ನಟಿಯೇ ಟ್ವೀಟ್ ಮೂಲಕ ಮದುವೆ ವಿಚಾರ ಫ್ಯಾನ್ಸ್‌ಗೆ ತಿಳಿಸಿದ್ದಾರೆ.
ವೈಟ್ ಫೋಟೋ ಜೊತೆ ಪತಿಗೆ ಸಮಂತಾ ಸ್ಪೆಷಲ್ ವಿಶ್
ಮುಂಬೈನಲ್ಲಿ ಆಪ್ತರು, ಹತ್ತಿರದ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ. ಕಾಜಲ್ ಇಂಡಿಯನ್ 2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ದುಲ್ಖರ್ ಸಲ್ಮಾನ್ ಜೊತೆಗೆ ಹೇ ಸಿನಮಿಕಾ ಸಿನಿಮಾವನ್ನು ಮಾಡ್ತಿದ್ದಾರೆ.