
ನವದೆಹಲಿ: ಜುರಾಸಿಕ್ ವರ್ಲ್ಡ್ ಫ್ರಾಂಚೈಸಿ ಮತ್ತು ಯುನಿವರ್ಸಲ್ ಪಿಕ್ಚರ್ಸ್ ಇಂಡಿಯಾದ ಲೇಟೆಸ್ಟ್ ಫಿಲಂ 'ಜುರಾಸಿಕ್ ವರ್ಲ್ಡ್: ರೀಬರ್ತ್' ವಿಶ್ವದಾದ್ಯಂತ ಧೂಳೆಬ್ಬಿಸುತ್ತಿದೆ. ಡೈನೋಸಾರ್ ಕಥೆಯುಳ್ಳ ಸಿನಿಮಾ ಮತ್ತೊಮ್ಮೆ ಜನರನ್ನು ಚಿತ್ರಮಂದಿರದತ್ತ ಕರೆದುಕೊಂಡು ಬರುತ್ತಿದೆ. ಜುರಾಸಿಕ್ ವರ್ಲ್ಡ್: ರೀಬರ್ತ್ ಸಿನಿಮಾ ಬಿಡುಗಡೆಯಾದ 8 ದಿನಗಳ ನಂತರ ಬಾಕ್ಸ್ ಆಫಿಸ್‌ನಲ್ಲಿ 349 ಮಿಲಿಯನ್ ಡಾಲರ್ (2989 ಕೋಟಿ ರೂ) ಕಲೆಕ್ಷನ್ ಮಾಡಿದೆ. ಈ ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸಿರುವ ನಟಿ ಸ್ಕಾರ್ಲೆಟ್ ಜೋಹಾನ್ಸನ್ ಅತಿ ಹೆಚ್ಚು ಸಂಭಾವನೆ ಪಡೆಯುವ ಕಲಾವಿದೆ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಇದುವರೆಗೂ ನಟಿ ಸ್ಕಾರ್ಲೆಟ್ ಜೋಹಾನ್ಸನ್ ಅಭಿನಯದ ಸಿನಿಮಾ ವಿಶ್ವದಾದ್ಯಂತ 14.8 ಬಿಲಿಯನ್ ಡಾಲರ್ ಕಲೆಕ್ಷನ್ ಮಾಡಿವೆ. ಈ ಮೂಲಕ ಜೊ ಸ್ಯಾಮುಯೆಲ್ ಎಲ್. ಜಾಕ್ಸನ್ ಮತ್ತು ರಾಬರ್ಟ್ ಡೌನಿ ಅಂತಹ ಸ್ಟಾರ್ ನಟರನ್ನು ಸ್ಕಾರ್ಲೆಟ್ ಜೋಹಾನ್ಸನ್ ಹಿಂದಿಕ್ಕಿದ್ದಾರೆ.
ಭಾರತದಲ್ಲಿಯೂ ಭರ್ಜರಿ ಗಳಿಕೆ
ಜುರಾಸಿಕ್ ವರ್ಲ್ಡ್: ರೀಬರ್ತ್ ಸಿನಿಮಾ ಭಾರತದ ಬಾಕ್ಸ್ ಆಫಿಸ್‌ನಲ್ಲಿ ಒಳ್ಳೆಯ ಗಳಿಕೆಯನ್ನು ಮಾಡಿದೆ. ಇದರ ಜೊತೆಯಲ್ಲಿಯೇ ಬಿಡಗಡೆಯಾದ ಬಾಲಿವುಡ್‌ನ ಮಲ್ಟಿ ಸ್ಟಾರ್ ಸಿನಿಮಾ 'ಮೆಟ್ರೋ ಇನ್ ದಿನೋ' ನೀರಸ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಜುರಾಸಿಕ್ ವರ್ಲ್ಡ್: ರೀಬರ್ತ್ ಬಿಡುಗಡೆಯಾದ ಕೇವಲ 6 ದಿನದಲ್ಲಿಯೇ ಅಂದಾಜು 57.25 ಕೋಟಿ ರೂ. ಕಲೆಕ್ಷನ್ ಮಾಡಿದೆ. ನಿಧಾನಗತಿಯಲ್ಲಿ ಕಲೆಕ್ಷನ್ ಮಾಡುತ್ತಿರುವ ಜುರಾಸಿಕ್ ವರ್ಲ್ಡ್: ರೀಬರ್ತ್ ಭಾರತದಲ್ಲಿಯೇ 100 ಕೋಟಿ ರೂ. ಜೇಬು ತುಂಬಿಸಿಕೊಳ್ಳಲಿದೆ ಎಂದು ಸಿನಿಮಾ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ.
ವಿಶ್ವದಾದ್ಯಂತ ಎಷ್ಟು ಕಲೆಕ್ಷನ್?
ಜುರಾಸಿಕ್ ವರ್ಲ್ಡ್: ರೀಬರ್ತ್ ವಿಶ್ವದಾದ್ಯಂತ ಒಳ್ಳೆಯ ಮೆಚ್ಚುಗೆಯನ್ನು ಪಡೆದುಕೊಂಡಿದೆ. ದಿನದಿಂದ ದಿನಕ್ಕೆ ಸಿನಿಮಾದ ಕಲೆಕ್ಷನ್ ಏರಿಕೆಯಾಗುತ್ತಲೇ ಇದೆ. ಜುಲೈ 6ರವರೆಗೆ ವಿಶ್ವದಾದ್ಯಂತ ಜುರಾಸಿಕ್ ವರ್ಲ್ಡ್: ರೀಬರ್ತ್ ಸಿನಿಮಾ ಬರೋಬ್ಬರಿ 2,989 ಕೋಟಿ ರು. ಕಲೆಕ್ಷನ್ ಮಾಡಿಕೊಂಡು ಮುನ್ನುಗುತ್ತಿದೆ. ಜುಲೈ 2ರಂದು ಬಿಡುಗಡೆಯಾದ ಈ ಸಿನಿಮಾ ಎಲ್ಲಾ ವರ್ಗದ ಜನರನ್ನು ತನ್ನತ್ತ ಆಕರ್ಷಿಸಿಕೊಳ್ಳುತ್ತಿದೆ.
ಜುರಾಸಿಕ್ ವರ್ಲ್ಡ್: ರೀಬರ್ತ್ ಬಜೆಟ್ ಎಷ್ಟು?
ಈಗಾಗಲೇ ಚಿತ್ರದ ಲಾಭದಲ್ಲಿ ಗಳಿಕೆಯನ್ನು ಮಾಡುತ್ತಿದೆ. ಯುನಿವರ್ಸಲ್ ಪಿಕ್ಚರ್ಸ್ ಇಂಡಿಯಾದ ಈ ಸಿನಿಮಾ 1,541 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣವಾಗಿದೆ. ಬಿಡುಗಡೆಯಾದ ಎರಡು ದಿನಗಳಲ್ಲಿ ಚಿತ್ರಕ್ಕೆ ಹಾಕಿದ ಬಂಡವಾಳ ಹಿಂದಿರುಗಿ ಬಂದಿತ್ತು. ಚಿತ್ರದ ಬಜೆಟ್‌ನ ಎರಡು ಪಟ್ಟು ಕಲೆಕ್ಷನ್ ಆಗಿದ್ದು, ಭವಿಷ್ಯದಲ್ಲಿ 6 ರಿಂದ 8 ಸಾವಿರ ಕೋಟಿ ರೂ. ವರೆಗೆ ಹಣ ಸಂಗ್ರಹ ಮಾಡಲಿದೆ ಎಂದು ಚಿತ್ರದ ಅಭಿಮಾನಿಗಳು ಭವಿಷ್ಯ ನುಡಿದಿದ್ದಾರೆ.
ಗ್ಯಾರೆತ್ ಎಡ್ವರ್ಡ್ಸ್ ನಿರ್ದೇಶನದ ವೈಜ್ಞಾನಿಕ ಕಾದಂಬರಿ ಥ್ರಿಲ್ಲರ್ ಚಿತ್ರವೇ ಜುರಾಸಿಕ್ ವರ್ಲ್ಡ್: ರೀಬರ್ತ್ . ಈ ಚಿತ್ರದಲ್ಲಿ ಮೂರು ದೈತ್ಯ ಡೈನೋಸಾರ್‌ಗಳ ಜೆನಿಟಿಕ್ ಅಂಶವನ್ನು ಪಡೆದುಕೊಳ್ಳಲು ಸ್ಕಾರ್ಲೆಟ್ ಜೋಹಾನ್ಸನ್ ಹೋಗುತ್ತಾಳೆ. ಬೋರಾ ಬೆನೆಟ್ ಪಾತ್ರದಲ್ಲಿ ಸ್ಕಾರ್ಲೆಟ್ ಜೋಹಾನ್ಸನ್ ನಟಿಸಿದ್ದಾರೆ. ಜುರಾಸಿಕ್ ಫ್ರಾಂಚೈಸಿಯಲ್ಲಿ ಈ ಸಿನಿಮಾ ಮೂಡಿಬಂದಿದ್ದು, ಎಲ್ಲಾ ಸಿನಿಮಾಗಳಂತೆ ಇದು ಸಹ ಪ್ರೇಕ್ಷಕರನ್ನು ರಂಜಿಸುವಲ್ಲಿ ಸಕ್ಸಸ್ ಆಗುತ್ತಿದೆ. ಮೊದಲಿಗೆ ಎಲ್ಲವೂ ಚೆನ್ನಾಗಿರುತ್ತದೆ. ನಂತರ ಚಿತ್ರದಲ್ಲಿ ಭಯ, ಕಿರುಚಾಟ ಪ್ರಾರಂಭವಾಗುತ್ತದೆ. ಈ ಬಾರಿಯೂ ಇದೇ ರೀತಿಯದ್ದನ್ನು ಕಾಣಬಹುದು ಎಂಬ ವಿಮರ್ಶೆ ಮಾತುಗಳು ಕೇಳಿ ಬಂದಿವೆ.
ಇದನ್ನೂ ಓದಿ: ಭೂತ-ಪ್ರೇತ ಇಲ್ಲ ಅನ್ನೋ ಸುಂದರ ಹುಡುಗರೇ ಸಸ್ಪೆನ್ಸ್-ಥ್ರಿಲ್ಲರ್ ಕಿರುಚಿತ್ರವನ್ನ ಒಮ್ಮೆ ನೋಡಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.