ಸಂಭ್ರಮಿಸುವ ಭರದಲ್ಲಿ ಫ್ಯಾನ್ಸ್​ ಎಡವಟ್ಟು- ಜ್ಯೂ.ಎನ್​ಟಿಆರ್​ ಕಟೌಟ್​ಗೆ ಬೆಂಕಿ: ಶಾಕಿಂಗ್​ ವಿಡಿಯೋ ವೈರಲ್​

By Suchethana D  |  First Published Sep 27, 2024, 5:37 PM IST

ಜ್ಯೂನಿಯರ್​ ಎನ್​ಟಿಆರ್​- ಜಾಹ್ನವಿ ಕಪೂರ್ ಅಭಿನಯದ ದೇವರ ಪಾರ್ಟ್​-1 ಚಿತ್ರ ಇಂದು ಬಿಡುಗಡೆಯಾಗಿದೆ.  ನಟನ ಕಟೌಟ್​ಗೆ ಬೆಂಕಿ ಬಿದ್ದಿದೆ. ಶಾಕಿಂಗ್​ ವಿಡಿಯೋ ವೈರಲ್​ ಆಗಿದೆ. 
 


ಜೂನಿಯರ್ ಎನ್​ಟಿಆರ್ ಹಾಗೂ ಜಾಹ್ನವಿ ಕಪೂರ್​ ನಟನೆಯ ‘ದೇವರ’ ಸಿನಿಮಾ ಇಂದು   ವಿಶ್ವದಾದ್ಯಂತ ಬಿಡುಗಡೆಯಾಗಿದೆ. ತಮ್ಮ ನೆಚ್ಚಿನ ನಟರ ಸಿನಿಮಾ ಬಿಡುಗಡೆಯಾದಾಗ ಕಟೌಟ್​ಗೆ ಕ್ಷೀರಾಭಿಷೇಕ, ಹೂವಿನ ಹಾರ ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸುವುದು ಮಾಮೂಲು. ಇದಾಗಲೇ ಕೆಲವು ಅಭಿಮಾನಿಗಳು ಕಟೌಟ್​ ಹಾಕುವ ಸಂದರ್ಭದಲ್ಲಿ ಬಿದ್ದು ಸಾವನ್ನಪ್ಪಿರುವ, ಮೈ-ಕೈಗಳಿಗೆ ಆಘಾತಕಾರಿ ರೀತಿಯಲ್ಲಿ ಗಾಯ ಮಾಡಿಕೊಂಡಿರುವ ಘಟನೆಗಳು ಸಾಕಷ್ಟು ನಡೆದಿವೆ. ಇವುಗಳ ಹೊರತಾಗಿಯೂ ಚಿತ್ರ ನಟರು ಎಂದರೆ ಹಲವರಿಗೆ ದೇವರ ಸಮಾನ. ಅದಕ್ಕಾಗಿಯೇ ಜೀವದ ಹಂಗು ತೊರೆದು ಕಟೌಟ್​ ಹಾಕುವುದು ನಿಂತಿಲ್ಲ. ಇದೀಗ ದೇವರ ಸಿನಿಮಾದ ಸಂದರ್ಭದಲ್ಲಿಯೂ ಅವಘಡವಾಗಿದೆ. ಅದೃಷ್ಟವಶಾತ್​ ಯಾರ ಪ್ರಾಣಕ್ಕೂ ಹಾನಿಯಾಗಿಲ್ಲ. 

ಹಲವು ಕಡೆ ಮಧ್ಯ ರಾತ್ರಿಯೇ ಷೋಗಳನ್ನು ಪ್ರದರ್ಶಿಸಲಾಗಿದ್ದು, ಆಂಧ್ರ-ತೆಲಂಗಾಣದ ಹಲವು ಚಿತ್ರಮಂದಿರಗಳಲ್ಲಿ ಗಲಾಟೆಗಳು ಸಹ ನಡೆದಿರುವುದು ವರದಿಯಾಗಿದೆ. ಅದೇ ಇನ್ನೊಂದೆಡೆ,  ಹೈದರಾಬಾದಿನ ಸುದರ್ಶನ್ ಚಿತ್ರ ಮಂದಿರದಲ್ಲಿ ನಿರ್ಮಿಸಲಾಗಿದ್ದ ಜೂ.ಎನ್ ಟಿಆರ್ ಕಟೌಟ್ ಬೆಂಕಿಗಾಹುತಿಯಾಗಿದೆ. ಇದಕ್ಕೆ ಕಾರಣ ಅಭಿಮಾನಿಗಳು ಸಿಡಿಸಿದ ಪಟಾಕಿ.  ಪಟಾಕಿ ಸಿಡಿಸಿ ಸಂಭ್ರಮ ಆಚರಿಸುತ್ತಿದ್ದ ಸಂದರ್ಭದಲ್ಲಿ ಕಟೌಟ್​ಗೆ ಪಟಾಕಿಯ ಬೆಂಕಿ ತಗುಲಿದೆ. ಕೂಡಲೇ ಕಾರ್ಯಪ್ರವೃತ್ತರಾದ ಚಿತ್ರಮಂದಿರದ ಸಿಬ್ಬಂದಿ ಮತ್ತು ನೆರೆದಿದ್ದ ಅಭಿಮಾನಿಗಳು ಬೆಂಕಿಯನ್ನು ನಂದಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಹಿನ್ನೆಲೆಯಲ್ಲಿ ಪ್ರಾಣಕ್ಕೆ ಹಾನಿಯಾಗಿಲ್ಲ ಎಂದು ವರದಿಯಾಗಿದೆ.

Tap to resize

Latest Videos

ಹೆಚ್ಚುತ್ತಿದೆ ಪತಿ-ಪತ್ನಿಯನ್ನು ಮತ್ತೊಬ್ಬರ ಜೊತೆ ಹಂಚಿಕೊಳ್ಳುವ ಟ್ರೆಂಡ್​! ನಟಿ ವಿದ್ಯಾ ಬಾಲನ್​ ಹೇಳಿದ್ದೇನು?
 
ಇದರ ವಿಡಿಯೋ ವೈರಲ್​ ಆಗಿದ್ದು, ಜನರು ಅತಿರೇಕದ ಅಭಿಮಾನದ ಬಗ್ಗೆ ಥಹರೇವಾರಿ ಕಮೆಂಟ್ಸ್​  ಮಾಡುತ್ತಿದ್ದಾರೆ. ಇನ್ನು ಈ ಚಿತ್ರದ ಕುರಿತು ಹೇಳುವುದಾದರೆ, ಜಾಹ್ನವಿ ಕಪೂರ್​ 2-3 ದೃಶ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಬೇಸರ ತಂದಿದೆ. ಇದು ಈಕೆಯ ಮೊದಲ ತೆಲಗು ಚಿತ್ರ. ಭಾರಿ ನಿರೀಕ್ಷೆ ಇತ್ತು. ಆದರೆ ಜ್ಯೂನಿಯರ್​ ಎನ್​ಟಿಆರ್​ ಜೊತೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ಬಿಟ್ಟರೆ ಇಡೀ ಚಿತ್ರದಲ್ಲಿ 2-3 ಬಾರಿ ಮಾತ್ರ ಇವರು ಕಾಣಿಸಿಕೊಳ್ಳುತ್ತಾರೆ ಎನ್ನಲಾಗಿದೆ. ಹಾಗೆಯೇ, ಸಿನಿಮಾ  ಮೊದಲ ದಿನವೇ 100 ಕೋಟಿ ಕಲೆಕ್ಷನ್‌ ಮಾಡಲಿದೆ ಎಂದು ಅಂದಾಜಿಸಲಾಗುತ್ತಿದ್ದು, ಇನ್ನಷ್ಟೇ ಅದರ ಲೆಕ್ಕಾಚಾರ ತಿಳಿಯಬೇಕಿದೆ.  
  
ಈಗ ವೈರಲ್​ ಆಗಿರುವ ವಿಡಿಯೋದಲ್ಲಿ, ಜ್ಯೂನಿಯರ್​ ಎನ್‌ಟಿಆರ್‌ ಕಟೌಟ್‌ ಏಕಾಏಕಿ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ನೋಡಬಹುದು. ಆರಂಭದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ  ಬೆಂಕಿ ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಕಕ್ಕಾಬಿಕ್ಕಿಯಾಗಿ ಚೆಲ್ಲಾಪಿಲ್ಲಿಯಾದರು. ಬಳಿಕ ಚಿತ್ರಮಂದಿರದ  ಸಿಬ್ಬಂದಿ ಹಾಗೂ ಸ್ಥಳೀಯರು   ಬಂದು ನೀರು ಹಾಕಿ ಬೆಂಕಿಯನ್ನು ನಂದಿಸಿದ್ದಾರೆ ಎನ್ನಲಾಗಿದೆ.  ಇನ್ನು ಈ ಚಿತ್ರವನ್ನು ಹಲವಾರು ರೀತಿಯಲ್ಲಿ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ಸಿಹಿ ಹಂಚಿದ್ದಾರೆ, ಊಟದ ವ್ಯವಸ್ಥೆ ಮಾಡಿದ್ದಾರೆ.  ಅನಂತಪುರ ಥಿಯೇಟರ್ ಒಂದರಲ್ಲಿ 50 ಅಡಿ ಎತ್ತರದ  ಲುಕ್ ಕಟ್ ಔಟ್ ಅಳವಡಿಕೆ ಮಾಡಿದ್ದಾರೆ. ಸಾಲದು ಎನ್ನುವುದಕ್ಕೆ  ಹಾಲಿನ ಅಭಿಷೇಕ ಮಾತ್ರವಲ್ಲದೆ ಅಭಿಮಾನಿಗಳು ರಕ್ತಾಭಿಷೇಕ ಕೂಡ ಮಾಡಿದ್ದಾರೆ ಎನ್ನಲಾಗಿದೆ. ಚಿತ್ರ ಹಿಟ್​ ಆಗಲಿ ಎಂದು ದೇವಾಲಯಗಳಲ್ಲಿ ಪೂಜೆ ಕೂಡ ಸಲ್ಲಿಸುತ್ತಿದ್ದಾರೆ! 

ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ನೀಲಿ ಚಿತ್ರ ತಾರೆ ಬನ್ನಾ ಶೇಖ್ ಅರೆಸ್ಟ್​! ಶಿಲ್ಪಾ ಶೆಟ್ಟಿ ಪತಿಗೂ ಸಂಕಷ್ಟ...

Here the video due fire crackers cutout has burnt
Don't post fake newspic.twitter.com/RqOuvqCWze

— Prudhvi (@Itz_prudhvi)
click me!