ಬಾಂಗ್ಲಾದೇಶದ ನೀಲಿ ಚಿತ್ರಗಳ ತಾರೆ ರಿಯಾ ಬರ್ಡೆ ಉರ್ಫ್ ಬನ್ನಾ ಶೇಖ್ ಮುಂಬೈನಲ್ಲಿ ಅಕ್ರಮವಾಗಿ ವಾಸವಾಗಿದ್ದ ಹಿನ್ನೆಲೆಯಲ್ಲಿ ಅರೆಸ್ಟ್ ಮಾಡಲಾಗಿದೆ. ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೂ ಸಂಕಷ್ಟ ಎದುರಾಗಿದೆ!
ನೀಲಿ ಚಿತ್ರ ತಾರೆ, ಬಾಂಗ್ಲಾದೇಶದ ರಿಯಾ ಬಾರ್ಡೆ ಅಲಿಯಾಸ್ ಬನ್ನಾ ಶೇಖ್ಳನ್ನು ಮುಂಬೈನಲ್ಲಿ ಇಂದು ಬಂಧಿಸಲಾಗಿದೆ. ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಬನ್ನಾ ಶೇಖಳ ಹಿಸ್ಟ್ರಿಯೇ ಭಯಾನಕವಾಗಿದೆ. ಪೋರ್ನ್ ಸ್ಟಾರ್ ಕೇಸ್ನಲ್ಲಿ ಸಿಕ್ಕಿಬಿದ್ದಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಜೊತೆಗೂ ಈಕೆಯ ಹೆಸರು ಥಳಕು ಹಾಕಿಕೊಂಡಿದ್ದು, ಅಲ್ಲಿಯೂ ಇವಳು ಅಕ್ರಮವಾಗಿಯೇ ಕೆಲಸ ಮಾಡಿದ್ದಾಳೆ ಎಂದು ತನಿಖೆಗಳಿಂದ ತಿಳಿದುಬಂದಿದೆ. ತಾನು ಪೋರ್ನ್ ವಿಡಿಯೋ ಮಾಡಿಯೇ ಇಲ್ಲ ಎಂದು ಹೇಳುತ್ತಲೇ ಬಂದಿರುವ ರಾಜ್ ಕುಂದ್ರಾಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಅಷ್ಟಕ್ಕೂ ಅಶ್ಲೀಲ ಸಿನಿಮಾ ಉದ್ಯಮದಲ್ಲಿ ಆರೋಹಿ ಬರ್ಡೆ ಎಂದೇ 'ಖ್ಯಾತಿ' ಪಡೆದಿರುವ ಈಕೆಯ ಹೆಸರು ಬನ್ನಾ ಶೇಖ್. ಭಾರತದಲ್ಲಿ ಅಕ್ರಮವಾಗಿ ವಾಸಿಸ್ತಿರೋ ಈಕೆ ಸದ್ಯ ಮುಂಬೈ ಪೊಲೀಸರ ಅತಿಥಿಯಾಗಿದ್ದಾಳೆ.
ಈಕೆ ನಕಲಿ ದಾಖಲೆ ಸೃಷ್ಟಿಸಿ ಭಾರತದಲ್ಲಿ ನೆಲೆಸಿದ್ದಾಳೆ ಎನ್ನುವುದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಆಕೆಯ ತಾಯಿ, ತಂದೆ, ಅಣ್ಣ-ತಂಗಿ ಎಲ್ಲರೂ ಅಕ್ರಮವಾಗಿ ವಾಸವಾಗಿರುವ ಸಂದೇಹ ವ್ಯಕ್ತವಾಗಿದ್ದು, ಪೊಲೀಸರು ಇವರ ಹಿಂದೆ ಬಿದ್ದಿದ್ದಾರೆ. ಇದಾಗಲೇ ರಾಜ್ ಕುಂದ್ರಾ ನಿರ್ಮಾಣದಲ್ಲಿ ಕೆಲಸ ಮಾಡಿರುವ ಈಕೆ, ಹಲವು ಪೋರ್ನ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾಳೆ. ಸದ್ಯ ಬಾಲಿವುಡ್ ನಟಿ ಗೆಹಾನಾ ವಸಿಸ್ಟ್ ಜೊತೆ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಹೆಚ್ಚುತ್ತಿದೆ ಪತಿ-ಪತ್ನಿಯನ್ನು ಮತ್ತೊಬ್ಬರ ಜೊತೆ ಹಂಚಿಕೊಳ್ಳುವ ಟ್ರೆಂಡ್! ನಟಿ ವಿದ್ಯಾ ಬಾಲನ್ ಹೇಳಿದ್ದೇನು?
ಬನ್ನಾ ಶೇಖ್ ಇತಿಹಾಸ ಹೇಳುವುದಾದರೆ, ಬನ್ನಾ ಶೇಖ್ ತಾಯಿ ಬಾಂಗ್ಲಾದೇಶದವರು, ಆದರೆ ಮಹಾರಾಷ್ಟ್ರದ ಅಮರಾವತಿಗೆ ಸೇರಿದ ಅರವಿಂದ ಬಾರ್ಡೆ ಅವರನ್ನು ಮದುವೆಯಾಗಿದ್ದಾರೆ. ಬನ್ನಾ ಶೇಖ್ ಎಂದೇ ಗುರುತಿಸಿಕೊಂಡಿದ್ದ ಈಕೆ ನಂತರ ರಿಯಾ ಬಾರ್ಡೆಯಾಗಿ ಪರಿವರ್ತನೆಯಾಗಿದ್ದಾಳೆ. ನಂತರ ಭಾರತದಲ್ಲಿ ನೆಲೆಸುವ ಸಲುವಾಗಿ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದಾಳೆ. ಇವಳ ಅಸಲಿ ದಾಖಲೆಗಳನ್ನು ನೋಡಿದರೆ ಕುಟುಂಬದ ಸದಸ್ಯರ ಹೆಸರು ರಿವೀಲ್ ಆಗಿದೆ. ತಾಯಿ ರೂಬಿ ಶೇಖ್ (ನಂತರ ಅಂಜಲಿ ಎಂಬ ಹೆಸರಿನಲ್ಲಿ ದಾಖಲೆ ಮಾಡಿಕೊಂಡಿದ್ದಾಳೆ) ಸಹೋದರ ರಿಯಾಜ್ ಶೇಖ್ (ರವೀಂದ್ರ ಎಂದು ಹೆಸರು ಬದಲಾಗಿದೆ), ಮತ್ತು ಸಹೋದರಿ ಮೋನಿ ಶೇಖ್ (ರಿತು ಎಂದು ಹೆಸರು ಬದಲಾಯಿಸಿಕೊಳ್ಳಲಾಗಿದೆ) ಎಂದು ಗುರುತಿಸಲಾಗಿದೆ. ಸದ್ಯ ಇವರೆಲ್ಲರೂ ಕತಾರ್‌ನಲ್ಲಿದ್ದಾರೆ ಎಂದು ವರದಿಯಾಗಿದೆ. ವೇಶ್ಯಾವಾಟಿಕೆಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಯಾ ಬರ್ಡೆ ಅವರನ್ನು ಈ ಹಿಂದೆಯೂ ಬಂಧಿಸಲಾಗಿತ್ತು. ಈಗ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವುದು ತಿಳಿದುಬಂದಿದೆ. ಅವರ ಕುಟುಂಬ ಸದಸ್ಯರಿಗೂ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ. ಅಷ್ಟಕ್ಕೂ ಈ ಘಟನೆ ಬೆಳಕಿಗೆ ಬರಲು ಕಾರಣ ಅವಳನ್ನು ರಿಯಾ ಎಂದು ನಂಬಿ ಮೋಸ ಹೋದ ಸ್ನೇಹಿತ ಪ್ರಶಾಂತ್ ಮಿಶ್ರಾ. ಅವರೇ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ತನಿಖೆ ಬಳಿಕ ಸಂಪೂರ್ಣ ಘಟನೆ ಬೆಳಕಿಗೆ ಬಂದಿದೆ.
ಪತ್ನಿಯ ಬಿಕಿನಿ ಆಸೆ ಈಡೇರಿಸಲು 418 ಕೋಟಿ ರೂ. ದ್ವೀಪ ಖರೀದಿಸಿದ ಪತಿ! ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು