RRR ಸ್ಟಾರ್‌ಗಳ ನಡುವೆ ವೈಮನಸ್ಸು: ರಾಮ್ ಚರಣ್ ಬರ್ತಡೇ ಪಾರ್ಟಿಗೆ ಗೈರಾದ ಜೂ.ಎನ್‌ಟಿಆರ್

Published : Mar 29, 2023, 03:08 PM IST
RRR ಸ್ಟಾರ್‌ಗಳ ನಡುವೆ ವೈಮನಸ್ಸು:  ರಾಮ್ ಚರಣ್ ಬರ್ತಡೇ ಪಾರ್ಟಿಗೆ ಗೈರಾದ ಜೂ.ಎನ್‌ಟಿಆರ್

ಸಾರಾಂಶ

RRR ಸ್ಟಾರ್‌ಗಳ ನಡುವೆ ವೈಮನಸ್ಸು ಮೂಡಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ರಾಮ್ ಚರಣ್ ಬರ್ತಡೇ ಪಾರ್ಟಿಗೆ ಜೂ.ಎನ್‌ಟಿಆರ್ ಗೈರಾಗುವ ಮೂಲಕ ಈ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡುವಂತೆ ಮಾಡಿದೆ. 

RRR ಸಿನಿಮಾ ಮೂಲಕ ತೆಲುಗು ಸ್ಟಾರ್‌ಗಳಾದ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ಇಬ್ಬರೂ ಗ್ಲೋಬಲ್ ಸ್ಟಾರ್ ಆಗಿದ್ದಾರೆ. ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡ ಬಳಿಕ ಆರ್ ಆರ್ ಆರ್ ತಂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಆದರೆ ಆರ್ ಆರ್ ಆರ್‌ನ ಇಬ್ಬರೂ ಸ್ಟಾರ್‌ಗಳಾದ ರಾಮ್ ಚರಣ್ ಮತ್ತು ಜೂ.ಎನ್ ಟಿ ಆರ್ ನಡುವೆ ವೈಮನಸ್ಸು ಮೂಡಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಆಸ್ಕರ್ ಪ್ರಶಸ್ತಿ ಸಮಾರಂಭಕ್ಕೆ ಎಂಟ್ರಿ ಕೊಟ್ಟಾಗಲೇ ಇಬ್ಬರ ನಡುವೆ ಯಾವುದು ಸರಿ ಇಲ್ಲ ಎನ್ನುವ ಮಾತುಗಳು ಕೇಳಿಬರುತ್ತಿತ್ತು. ಆದರೀಗ ರಾಮ್ ಚರಣ್ ಬರ್ತಡೇ ಪಾರ್ಟಿಗೆ ಜೂ.ಎನ್ ಟಿ ಆರ್ ಗೈರಾಗುವ ಮೂಲಕ ವದಂತಿಗೆ ಮತ್ತಷ್ಟು ಪುಷ್ಠಿ ನೀಡುವಂತೆ ಮಾಡಿದ್ದಾರೆ. 

ರಾಮ್ ಚರಣ್ ಇತ್ತೀಚಿಗಷ್ಟೆ ಹುಟ್ಟುಹಬ್ಬ ಆಚರಿಸಿಕೊಂಡರು. ಅದ್ದೂರಿ ಪಾರ್ಟಿ ಕೂಡ ಆಯೋಜಿಸಿದ್ದರು. ಆರ್ ಆರ್ ಆರ್ ತಂಡ ಕೂಡ ಪಾರ್ಟಿಯಲ್ಲಿ ಭಾಗಿಯಾಗಿತ್ತು. ಆದರೆ ಜೂ.ಎನ್ ಟಿ ಆರ್ ಗೈರಾಗಿದ್ದು ಅಚ್ಚರಿ ಮೂಡಿಸುವ ಜೊತೆಗೆ ಅನುಮಾನ ಮತ್ತಷ್ಟು ಬಲವಾಗುವಂತೆ ಮಾಡಿದೆ. ರಾಜಮೌಳಿ ದಂಪತಿ ಕೂಡ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಆದರೆ Jr.NTR ಅನುಪಸ್ಥಿತಿ ಎದ್ದು ಕಾಣುತ್ತಿತ್ತು. ಆಸ್ಕರ್ ಪ್ರಚಾರದ ವೇಳೆ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು ಎನ್ನಲಾಗಿದೆ.  

ರಾಮ್ ಚರಣ್ ಹುಟ್ಟುಹಬ್ಬದ ದಿನವೇ ಜೂ.ಎನ್ ಟಿ ಆರ್ ಪತ್ನಿ ಪ್ರಣತಿ ಅವರ ಹುಟ್ಟುಹಬ್ಬ. ಜೂ.ಎನ್ ಟಿ ಆರ್ ಪತ್ನಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಟಾಲಿವುಡ್‌ನ ಕೆಲವು ಗಣ್ಯರು ಭಾಗಿಯಾಗಿದ್ದರು. ಪತ್ನಿ ಹುಟ್ಟುಹಬ್ಬ ಮುಗಿಸಿ ಜೂ.ಎನ್ ಟಿ ಆರ್ ಚಿತ್ರೀಕರಣದಲ್ಲಿ ಬ್ಯುಸಿಯಾದರು ಎಂದು ಹೇಳಲಾಗುತ್ತಿದೆ. ಜೂ.ಎನ್ ಟಿ ಆರ್ ಚಿತ್ರೀಕರಣದಲ್ಲಿ ಬ್ಯುಸಿಯಾದ ಕಾರಣ ಪಾರ್ಟಿಯಲ್ಲಿ ಭಾಗಿಯಾಗಿಲ್ಲ, ಇಬ್ಬರ ನಡುವೆ ಯಾವುದೇ ವೈಮನಸ್ಸಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ. ನಿಜಕ್ಕೂ ಇಬ್ಬರ ನಡುವೆ ಏನಾಗಿದೆ, ವೈಮನಸ್ಸು ಮೂಡಲು ಕಾರಣವೇನು? ಎನ್ನುವ ಹೆಚ್ಚಿನ ಮಾಹಿತಿ ಬಹಿರಂಗವಾಗಿಲ್ಲ. 

ರಾಮ್‌ ಚರಣ್‌ ಹುಟ್ಟುಹಬ್ಬ; ಬಾಡಿಫಿಟ್ ಬಟ್ಟೆಯಲ್ಲಿ ಹೊಟ್ಟೆ ತೋರಿಸಿದ ಉಪಾಸನಾ

ರಾಮ್ ಚರಣ್ ಸದ್ಯ ಗೇಮ್ ಚೇಂಜರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಶಂಕರ್ ಸಾರಥ್ಯದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಈ ಚಿತ್ರದಲ್ಲಿ ರಾಮ್ ಚರಣ್‌ಗೆ ನಾಯಕಿಯಾಗಿ ಕಿಯಾರಾ ಅಡ್ವಾಣಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಪ್ರಾರಂಭವಾಗಿದ್ದು ಭರ್ಜರಿಯಾಗಿ ಶೂಟಿಂಗ್ ನಡೆಯುತ್ತಿದೆ. ಸಿನಿಮಾ ಸೆಟ್‌ನಲ್ಲೂ ರಾಮ್ ಚರಣ್ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗಿತ್ತು. 

RRR ಸ್ಟಾರ್ ಈಗ 'ಗೇಮ್ ಚೇಂಜರ್'; ರಾಮ್ ಚರಣ್ ಮುಂದಿನ ಸಿನಿಮಾದ ಟೈಟಲ್ ಬಹಿರಂಗ

ನಟ ಜೂ.ಎನ್ ಟಿ ಆರ್ ಸದ್ಯ 30ನೇ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಮುಹೂರ್ತ ಸಮಾರಂಭ ನೆರವೇರಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಜಾನ್ವಿ ಕಪೂರ್ ನಟಿಸುತ್ತಿದ್ದಾರೆ. ರಾಜಮೌಳಿ ಸಿನಿಮಾಗೆ ಕ್ಲಾಪ್ ಮಾಡಿ ಶುಭಹಾರೈಸಿದ್ದರು.   

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?