
ನಟ ಜೂನಿಯರ್ ಎನ್‌ಟಿಆರ್ ಅವರನ್ನು ಲಕ್ಷಾಂತರ ಅಭಿಮಾನಿಗಳು ಪ್ರೀತಿಯಿಂದ ಮಾಸ್ ಆಫ್ ಮಾಸ್ ಎಂದು ಕರೆಯುತ್ತಾರೆ. ಸದ್ಯ ಜೂನಿಯರ್ ಎನ್‌ಟಿಆರ್ ತಮ್ಮ ಬಹುನಿರೀಕ್ಷಿತ ಮುಂಬರುವ ಮ್ಯಾಗ್ನಮ್ ಆಪಸ್ 'ದೇವರ: ಭಾಗ 1' ನಲ್ಲಿ ನಿರತರಾಗಿದ್ದಾರೆ. ನಿಜ ಜೀವನದಲ್ಲಿಯೂ ನಟ, ಅತ್ಯಂತ ವಿನಮ್ರ ಗುಣಗಳನ್ನು ಬೆಳೆಸಿಕೊಂಡಿದ್ದಾರೆ. ಇದೀಗ ನಟ ಆಂಧ್ರಪ್ರದೇಶದ ಚೆಯ್ಯೆರುವಿನಲ್ಲಿರುವ ಪ್ರಸಿದ್ಧ 'ಶ್ರೀ ಭದ್ರಕಾಳಿ ಸಮೇತ ವೀರಭದ್ರ ಸ್ವಾಮಿ ದೇವಾಲಯ'ಕ್ಕೆ 12.5 ಲಕ್ಷ ರೂಪಾಯಿಗಳನ್ನು ದೇಣಿಗೆ ನೀಡುವ ಮೂಲಕ ಸದ್ದು ಮಾಡುತ್ತಿದ್ದಾರೆ. ಅಷ್ಟಕ್ಕೂ ಜೂನಿಯರ್ ಎನ್‌ಟಿಆರ್, ಸಾಮಾಜಿಕ ಕಾರ್ಯಗಳಲ್ಲೂ ನಿರಂತರವಾಗಿ ತೊಡಗಿಸಿಕೊಂಡವರು. ಇದಾಗಲೇ ದಾನ, ಧರ್ಮ, ಅಭಿವೃದ್ಧಿ ಕಾರ್ಯಗಳಿಗೆ ಸಹಾಯಹಸ್ತ ಚಾಚಿದ್ದಾರೆ. ಈಗ ಆಂಧ್ರದ ದೇವಾಲಯವೊಂದಕ್ಕೆ ದೇಣಿಗೆ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಇವರ ನಟನೆಯ 'ಆರ್ಆರ್ಆರ್' ಸಿನಿಮಾ ವಿಶ್ವಮಟ್ಟದಲ್ಲಿ ಸದ್ದು ಮಾಡಿತ್ತು. 'ಮ್ಯಾನ್ ಆಫ್ ಮಾಸ್' ಎಂಬುದು ಅಭಿಮಾನಿಗಳು ಕೊಟ್ಟ ಬಿರುದು.
ಇದೇ 20ರಂದು ನಟನ ಹುಟ್ಟುಹಬ್ಬ. ಇದಕ್ಕೂ ಮುನ್ನ ದೇವಸ್ಥಾನಕ್ಕೆ ಅವರು ದೇಣಿಗೆ ನೀಡಿದ್ದಾರೆ. ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಪ್ರಸಿದ್ಧ ಶ್ರೀ ಭದ್ರಕಾಳಿ ಸಮೇತ ವೀರಭದ್ರ ಸ್ವಾಮಿ ದೇವಾಲಯಕ್ಕೆ 12.5 ಲಕ್ಷ ರೂ. ಹಸ್ತಾಂತರಿಸಿದ್ದಾರೆ. ದೇವಸ್ಥಾನದ ಚಿತ್ರ ಶೇರ್ ಮಾಡಿರುವ ಕೆಲವು ಫ್ಯಾನ್ಸ್ ಪೇಜ್‌ಗಳು, 'ಪೂರ್ವ ಗೋದಾವರಿಯ ಜಗ್ಗಣ್ಣಪೇಟಾದ ಶ್ರೀ ಭದ್ರಕಾಳಿ ಸಮೇತ ವೀರಭದ್ರ ಸ್ವಾಮಿ ದೇವಸ್ಥಾನಕ್ಕೆ ಎನ್‌ಟಿಆರ್ ಅಣ್ಣ 12.5 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಈ ವಿಷಯ ಯಾರಿಗೂ ತಿಳಿದಿಲ್ಲ. ದೈವಂ ಮನುಷ್ಯ ರೂಪೇನ' ಎಂದು ಬರೆದು ಕೊಂಡಾಡುತ್ತಿದ್ದಾರೆ.
ರಾಖಿ ಸಾವಂತ್ ಸ್ಥಿತಿ ಗಂಭೀರ? ಶಾಕಿಂಗ್ ಹೇಳಿಕೆ ಕೊಟ್ಟ ಮಾಜಿ ಪತಿ- ನಟಿಗೆ ಆಗಿದ್ದೇನು?
ಇನ್ನು ಇವರ ''ದೇವರ: ಭಾಗ 1'' 2024ರ ಕುರಿತು ಹೇಳುವುದಾದರೆ, ಜೂನಿಯರ್ ಎನ್‌ಟಿಆರ್ ಮುಖ್ಯಭೂಮಿಕೆಯ ಈ ಚಿತ್ರದಲ್ಲಿ ಬಾಲಿವುಡ್ ಬೆಡಗಿ ಜಾಹ್ನವಿ ಕಪೂರ್, ಸೂಪರ್ ಸ್ಟಾರ್ ಸೈಫ್ ಅಲಿ ಖಾನ್ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಿನಿಮಾ ಬಿಡುಗಡೆಗೆ ಪ್ರೇಕ್ಷಕರು ಎದುರು ನೋಡುತ್ತಿದ್ದು, ಸದ್ಯ ಸಾಂಗ್ ರಿಲೀಸ್ ಡೇಟ್ ಸಖತ್ ಸದ್ದು ಮಾಡುತ್ತಿದೆ. ಹುಟ್ಟುಹಬ್ಬದ ದಿನ 'ದೇವರ' ಚಿತ್ರದ ಮೊದಲ ಗೀತೆ ಅನಾವರಣಗೊಳ್ಳಲಿದೆ ಎಂದು ಪ್ರೇಕ್ಷಕರು ಕಾಯುತ್ತಿದ್ದಾರೆ. ಸಿನಿಮಾವನ್ನು ವಿಭಿನ್ನವಾಗಿ ಪ್ರಚಾರ ಮಾಡುವ ಮೂಲಕ ಚಿತ್ರತಂಡ ಸಿನಿಪ್ರಿಯರ ಕುತೂಹಲ ಹೆಚ್ಚಿಸಿದೆ. ಮ್ಯೂಸಿಕ್ ಸಂಸ್ಥೆಯ ಲೇಟೆಸ್ಟ್ ಸೊಷಿಯಲ್ ಮೀಡಿಯಾ ಪೋಸ್ಟ್ ದೇವರ ಸುತ್ತಲಿನ ಕುತೂಹಲ, ನಿರೀಕ್ಷೆ ಹೆಚ್ಚಿಸಿದೆ.
ಸೈಫ್ ಅಲಿ ಖಾನ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಜಾಹ್ನವಿ ಕಪೂರ್ ಅವರ ತೆಲುಗು ಚೊಚ್ಚಲ ಚಿತ್ರ. ಇದಕ್ಕೆ ಕೊರಟಾಲ ಶಿವ ನಿರ್ದೇಶನವಿದೆ. ಮೊದಲು ಒಂದೇ ಭಾಗದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ನಂತರ ತಯಾರಕರು ಎರಡು ಭಾಗಗಗಳಲ್ಲಿ ಚಿತ್ರ ಮೂಡಿ ಬರಲಿದೆ ಎಂದು ಘೋಷಿಸಿದರು. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಈ ಮೊದಲು ಚಿತ್ರವನ್ನು ಏಪ್ರಿಲ್ 5 ರಂದು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ನಿರ್ಮಾಪಕರು ಬಿಡುಗಡೆ ದಿನಾಂಕವನ್ನು ಅಕ್ಟೋಬರ್ 10ಕ್ಕೆ ಮುಂದೂಡಿದರು. ಇನ್ನೂ, ಜೂನಿಯರ್ ಎನ್‌ಟಿಆರ್ ಕೂಡ 'ವಾರ್ 2' ಚಿತ್ರದೊಂದಿಗೆ ಬಾಲಿವುಡ್ ಪ್ರವೇಶಿಸಲಿದ್ದಾರೆ. ನಟ ಹೃತಿಕ್ ರೋಷನ್ ಜೊತೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಸೀರಿಯಲ್ ವೀಕ್ಷಕರಿಂದ ಸಮಸ್ಯೆಯೊಂದಕ್ಕೆ ಉತ್ತರ ಬಯಸಿದ್ದಾಳೆ ಭಾಗ್ಯ: ನೀವು ಸಹಾಯ ಮಾಡ್ತೀರಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.