ಮದುವೆಯಾಗಲು ಸಜ್ಜಾದ 'ಜೋಶ್' ನಟಿ; ಭಾವಿ ಪತಿಯನ್ನು ಪರಿಚಯಿಸಿದ ಪೂರ್ಣ

Published : Jun 01, 2022, 01:13 PM ISTUpdated : Jun 01, 2022, 01:20 PM IST
ಮದುವೆಯಾಗಲು ಸಜ್ಜಾದ 'ಜೋಶ್' ನಟಿ; ಭಾವಿ ಪತಿಯನ್ನು ಪರಿಚಯಿಸಿದ ಪೂರ್ಣ

ಸಾರಾಂಶ

ದಕ್ಷಿಣ ಭಾರತದ ಖ್ಯಾತ ನಟಿ, ಜೋಶ್ ಸಿನಿಮಾ ಮೂಲಕ ಕನ್ನಡ ಅಭಿಮಾನಿಗಳ ಹೃದಯ ಗೆದ್ದಿದ್ದ ಪೂರ್ಣ(Poorna) ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ನಟಿ ಪೂರ್ಣ ಅವರ ನಿಜವಾದ ಹೆಸರು ಶಮ್ನಾ ಕಾಸಿಮ್. 

ದಕ್ಷಿಣ ಭಾರತದ ಖ್ಯಾತ ನಟಿ, ಜೋಶ್ ಸಿನಿಮಾ(Josh movie) ಮೂಲಕ ಕನ್ನಡ ಅಭಿಮಾನಿಗಳ ಹೃದಯ ಗೆದ್ದಿದ್ದ ಪೂರ್ಣ(Poorna) ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ನಟಿ ಪೂರ್ಣ ಅವರ ನಿಜವಾದ ಹೆಸರು ಶಮ್ನಾ ಕಾಸಿಮ್. ಬಹುಭಾಷೆಯಲ್ಲಿ ಮಿಂಚಿರುವ ನಟಿ ಪೂರ್ಣ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕಳೆದ ವರ್ಷ ಮದುವೆ ವಿಚಾರವಾಗಿ ಪೂರ್ಣಗೆ ವಂಚಿಸಿದ್ದರು. ಈ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತು. ಇದೀಗ ಶಾಮ್ನಾ ನಿಜವಾಗಿಯೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

ನನ್ನ ಜೀವನದ ಮುಂದಿನ ಹಂತಕ್ಕೆ ಕಾಲಿಡುತ್ತಿದ್ದೇನೆ ಎಂದು ನಟಿ ಪೂರ್ಣ ಬಹಿರಂಗ ಪಡಿಸಿದ್ದಾರೆಯ ಜೊತೆಗೆ ಭಾವಿ ಪತಿಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಅಂದಹಾಗೆ ಪೂರ್ಣ ಮದುವೆಯಾಗುತ್ತಿರುವ ಹುಡುಗ ಶಾನಿದ್ ಆಸಿಫ್ ಅಲಿ. ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡಿರುವ ನಟಿ ಪೂರ್ಣ 'ನನ್ನ ಕುಟುಂಬದ ಆಶೀರ್ವಾದದ ಜೊತೆಗೆ ನಾನು ನನ್ನ ಜೀವನದ ಮುಂದಿನ ಹಂತಕ್ಕೆ ಹೆಜ್ಜೆ ಇಡುತ್ತಿದ್ದೇನೆ. ಇದು ಅಧಿಕೃತ' ಎಂದು ಹೇಳಿದ್ದಾರೆ.

ಪೂರ್ಣ ಈ ಪೋಸ್ಟ್ ಶೇರ್ ಮಾಡುತ್ತಿದ್ದಂತೆ ಅನೇಕರು ವಿಶ್ ಮಾಡುತ್ತಿದ್ದಾರೆ. ಅಭಿಮಾನಿಗಳು ಮತ್ತು ಚಿತ್ರರಂಗದ ಗಣ್ಯರು ಸಹ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಪೂರ್ಣರನ್ನು ಕೈಹಿಡುಯುತ್ತಿರುವ ಹುಡುಗ ಆಸಿಫ್ ಅಲಿ ಕೇರಳ ಮೂಲದ ಉದ್ಯಮಿ ಎನ್ನುವ ಮಾಹಿತಿ ತಿಳಿದುಬಂದಿದೆ.


'ಜೋಶ್‌' ಚಿತ್ರದ ನಟಿಗೆ ವಂಚನೆ; ಮದುವೆಯಾಗುವುದಾಗಿ ನಂಬಿಸಿ ಪರಾರಿಯಾದ ಪುಂಡರು!

 

ನಟಿ ಪೂರ್ಣ ಸಿನಿಮಾ ಜರ್ನಿ

ಇನ್ನು ಪೂರ್ಣ ಬಗ್ಗೆ ಹೇಳುವುದಾದರೆ, ಕೇರಳದ ಕಣ್ಣೂರಿನಲ್ಲಿ ಹುಟ್ಟಿಬೆಳೆದ ನಟಿ ವಿದ್ಯಾಭ್ಯಾಸವನ್ನು ಕಣ್ಣೂರಿನಲ್ಲೇ ಮುಗಿಸಿದ್ದರು. ಡ್ಯಾನ್ಸರ್ ಆಗಿದ್ದ ಪೂರ್ಣ ಅನೇಕ ಸ್ಟೇಜ್ ಶೋಗಳನ್ನು ನೀಡುತ್ತಿದ್ದರು. ಬಳಿಕ ಪೂರ್ಣ 2004ರಲ್ಲಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ಮಲಯಾಳಂನ ಮಂಜು ಪೋಲೂರು ಪೆಂಕುಟ್ಟಿ ಸಿನಿಮಾ ಮೂಲಕ ಮೊದಲ ಬಾರಿಗೆ ದೊಡ್ಡ ಪರದೆ ಮೇಲೆ ಮಿಂಚಿದರು. ಈ ಸಿನಿಮಾದಲ್ಲಿ ಧನ್ಯಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಳಿಕ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗಿನ ಶ್ರೀಮಹಾಲಕ್ಷ್ಮಿ, ತಮಿಳಿನ ಕೊಡೈಕನಾಲ್ ಕನ್ನಡದ ಜೋಶ್ ಸೇರಿದಂತೆ ಬೇರೆ ಬೇರೆ ಭಾಷೆಯಲ್ಲಿ ಮಿಂಚಿದರು. ಕನ್ನಡದ ಜೋಶ್ ಸಿನಿಮಾ ದೊಡ್ಡ ಮಟ್ಟದ ಸಕ್ಸಸ್ ತಂದು ಕೊಟ್ಟಿತು. ಈ ಸಿನಿಮಾ ಬಳಿಕ ದೊಡ್ಡ ಸ್ಟಾರ್ ಆದರು.

ಜೋಶ್ ಸಿನಿಮಾ ಬಳಿಕ ಪೂರ್ಣ ರಾಧನ ಗಂಡ ಸಿನಿಮಾದಲ್ಲಿ ಕಾಣಿಸಿಕೊಂಡಿರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ತಂದುಕೊಟ್ಟಿಲ್ಲ. ಅನೇಕ ವರ್ಷಗಳ ಅಂದರೆ ದಶಕದ ನಂತರ ಪೂರ್ಣ ಮತ್ತೆ ಕನ್ನಡ ಪ್ರೇಕ್ಷಕರು ಮುಂದೆ ಬಂದರು. ರಮೇಶ್ ಅರವಿಂದ್ ನಟನೆಯ 100 ಸಿನಿಮಾದಲ್ಲಿ ಪೂರ್ಣ ನಟಿಸಿದ್ದರು. ಈ ಸಿನಿಮಾ ಮೂಲಕ ಪೂರ್ಣ ಮತ್ತೆ ಖ್ಯಾತಿಗಳಿಸಿದರು. ಸದ್ಯ ಪೂರ್ಣ ಬಳಿ ಸಾಲು ಸಾಲು ಸಿನಿಮಾಗಳಿವೆ. ಸಿನಿಮಾಗಳ ಬ್ಯುಸಿಯ ನಡುವೆಯೂ ಪೂರ್ಣ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ನಟಿ ಪೂರ್ಣ ಮದುವೆ ವಿವಾದ

ನಟಿ ಪೂರ್ಣ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನುವ ಸುದ್ದಿ ಗೊತ್ತಾದ ಬಳಿಕ ಕತರ್ನಾಕ್ ಗ್ಯಾಂಗ್ ಒಂದು ಪೂರ್ಣರಿಗೆ ವಂಚನೆ ಮಾಡಲು ಯತ್ನಿಸಿತ್ತು. ತಕ್ಷಣ ಎಚ್ಚೆತ್ತುಕೊಂಡ ಪೂರ್ಣ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ಪೂಲೀಸರು ನಾಲ್ಕು ಮಂದಿನ್ನು ಅರೆಸಟ್ ಮಾಡಿದ್ದರು.

ನಟಿ ಪೂರ್ಣ ಮದುವೆಯಾಗಲು ನಿರ್ಧರಿಸಿದ್ದರು. ಮನೆಯವರು ಹುಡುಗನ ಹುಡುಕಾಟದಲ್ಲಿದ್ದರು. ಆ ಸಮಯದಲ್ಲಿ ಒಬ್ಬ ಯುವಕ ಕರೆ ಮಾಡಿ ತನ್ನ ಸ್ನೇಹಿತ ಅನ್ವರ್‌ಗೆ ಪೂರ್ಣ ಎಂದರೆ ತುಂಬಾ ಇಷ್ಟ, ಒಪ್ಪಿಗೆ ಯಾದರೆ ಮನೆಯವರ ಜೊತೆ ಮಾತನಾಡುವುದಾಗಿ ಹೇಳಿದ್ದ. ಬಳಿಕ ಫೋಟೋವನ್ನು ಸಹ ಪೂರ್ಣಗೆ ಕಳುಹಿಸಿದ್ದ. ಫೋಟೋ ನೋಡಿ ಇಷ್ಟಪಟ್ಟಿದ್ದ ನಟಿ ಬಳಿಕ ಮನೆಯವರ ಜೊತೆ ಮಾತನಾಡಿ ಇಬ್ಬರು ಕುಟುಂಬದವರು ಭೇಟಿಯಾಗಲು ನಿರ್ಧರಿಸಿದರು. ಮಾತುಕತೆ ನಡೆಸಲು ಪೂರ್ಣ ಮನೆಗೆ ಬಂದ ಅನ್ವರ್ ಕಡೆಯವರ ಮೇಲೆ ಪೂರ್ಣಗೆ ಸಂದೇಶ ಮೂಡಿದೆ. ಅನ್ವರ್ ಕಡೆಯವರ ವಿಚಿತ್ರ ವರ್ತನೆಯಿಂದ ಎಚ್ಚೆತ್ತುಕೊಂಡ ಪರ್ಣ ಕುಟುಂಬ ಚೆನ್ನಾಗಿ ದಬಾಯಿಸಿ ವಾಪಾಸ್ ಕಳಿಹಿಸಿದ್ದರು.

'ಹಳೆ ವಿಡಿಯೋ ನಮ್ಮತ್ರ ಇದೆ, ಅಪ್‌ಲೋಡ್‌ ಮಾಡುತ್ತೇವೆ' ಖ್ಯಾತ ನಟಿಗೆ  ಬ್ಲ್ಯಾಕ್ ಮೇಲ್!

ಬಳಿಕ ಅನ್ವರ್ ಮೇಲೆ ಅನುಮಾನ ಮೂಡಿ ಸ್ನೇಹಿತರ ಬಳಿ ವಿಚಾರಿಸಿದ್ದಾರೆ. ಆಗ ಅನ್ವರ್ ನಿಜವಾದ ಬಣ್ಣ ಬಯಲಾಗಿದೆ. ಅನ್ವರ್‌ನನ್ನು ದೂರ ಇಡಲು ಪ್ರಯತ್ನ ಪಟ್ಟೆ ನಟಿ ಪೂರ್ಣಗೆ ಬೆದರಿಕೆ ಹಾಕಿ ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದ. ಬಳಿಕ ಪೂರ್ಣ ತಾಯಿ ಪೊಲೀಸರ ಬಳಿ ದೂರು ನೀಡಿರು. ಬಲೆ ಬೀಸಿದ ಪೊಲೀಸರು ನಾಲ್ಕು ಮಂದಿಯನ್ನು ಅರೆಸ್ಟ್ ಮಾಡಿದ್ದರು. ಇವರು ದೊಡ್ಡ ಖದೀಮರು ಎನ್ನುವುದು ಬಹಿರಂಗ ವಾಯಿತು. ಮೋಸಗಾರರ ಜಾಲದಿಂದ ಬಚಾವ್ ಆಗಿದ್ದ ನಟ ಪೂರ್ಣ ನಿಟ್ಟುಸಿರು ಬಿಟ್ಟಿದ್ದರು.

ಈ ಘಟನೆ ಬಳಿಕ ನಟಿ ಪೂರ್ಣ ಇದೀಗ ಮದುವೆಯಾಗುತ್ತಿದೆ. ಈ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ಮದುವೆ ಯಾವಾಗ, ಎಲ್ಲಿ ಎನ್ನುವ ಬಗ್ಗೆ ಹೆಚ್ಚಿನ ಮಾಹಿತಿ ರಿವೀಲ್ ಮಾಡಿಲ್ಲ. ಸದ್ಯದಲ್ಲೇ ಆಸಿಫ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎನ್ನಲಾಗಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?