4ನೇ ಮದುವೆಯಾದ ಬೆನ್ನಲ್ಲೇ ಬೆಡ್ ರೂಮ್ ಫೋಟೋ ಹಂಚಿಕೊಂಡ ಖ್ಯಾತ ನಟಿ ಜನ್ನಿಫರ್ ಲೊಪೇಜ್

Published : Jul 19, 2022, 02:59 PM ISTUpdated : Jul 19, 2022, 03:19 PM IST
4ನೇ ಮದುವೆಯಾದ ಬೆನ್ನಲ್ಲೇ ಬೆಡ್ ರೂಮ್ ಫೋಟೋ ಹಂಚಿಕೊಂಡ ಖ್ಯಾತ ನಟಿ ಜನ್ನಿಫರ್ ಲೊಪೇಜ್

ಸಾರಾಂಶ

ಹಾಲಿವುಡ್‌ನ ಖ್ಯಾತ ಗಾಯಕಿ, ನಟಿ ಜೆನ್ನಿಫರ್ ಲೊಪೇಜ್ ನಾಲ್ಕನೇ ವಿವಾಹವಾಗಿದ್ದಾರೆ. ಹಾಲಿವುಡ್‌ನ ಖ್ಯಾತ ನಟ ಬೆನ್ ಅಫ್ಲೆಕ್‌ ವಿವಾಹವಾದರು. ವೈವವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಬೆಡ್ ರೂಮ್ ಫೋಟೋವನ್ನು ಶೇರ್ ಮಾಡಿದ್ದಾರೆ.

ಹಾಲಿವುಡ್‌ನ ಖ್ಯಾತ ಗಾಯಕಿ, ನಟಿ ಜೆನ್ನಿಫರ್ ಲೊಪೇಜ್ ನಾಲ್ಕನೇ ವಿವಾಹವಾಗಿದ್ದಾರೆ. ವಿಶ್ವದಾದ್ಯಂತ ಅಪಾರ ಸಂಖ್ಯೆ ಅಭಿಮಾನಿ ಬಗಳಹೊಂದಿರುವ ನಟಿ ಜೆನ್ನಿಫರ್ ಲೊಪೇಜ್ ಇತ್ತೀಚಿಗಷ್ಟೆ ಹಾಲಿವುಡ್‌ನ ಖ್ಯಾತ ನಟ ಬೆನ್ ಅಫ್ಲೆಕ್‌ ವಿವಾಹವಾದರು. ಕಳೆದ ಕೆಲವು ವರ್ಷಗಳಿಂದ ಬೆನ್ ಜೊತೆ ಸುತ್ತಾಡುತ್ತಿದ್ದ ಜನ್ನಿಫರ್ ಜೋಡಿ ಕೊನೆಗೂ ವಿವಾಹ ಬಂಧನಕ್ಕೆ ಒಳಗಾಗಿದೆ. ಮದುವೆಯಾದ ಬಳಿಕ ಜನ್ನಿಫರ್ ಶೇರ್ ಮಾಡಿರುವ ಫೋಟೋ ಇದೀಗ ವೈರಲ್ ಆಗಿದೆ. ಹೌದು ಜನ್ನಿಫರ್ ಪ್ರಿಯತಮ ಬೆನ್ ಜೊತೆ ವೈವವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಬೆಡ್ ರೂಮ್ ಫೋಟೋವನ್ನು ಶೇರ್ ಮಾಡಿದ್ದಾರೆ. ಬೆಡ್ ಮೇಲೆ ಮಲಗಿ ಸ್ಮೈಲ್ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ.  

ಅಂದಹಾಗೆ ಜನ್ನಿಫರ್ ಮತ್ತು ಬೆನ್ ಅಫ್ಲಕ್ ಇದೇ ಶನಿವಾರ ಮತ್ತು ಭಾನುವಾರ ಆಪ್ತೇಷ್ಟರ ಸಮ್ಮುಖದಲ್ಲಿ ಲಾಸ್ ವೆಗಾಸ್‌ನಲ್ಲಿ ವಿವಾಹವಾದರು. ಜೆನ್ನಿಫರ್ ಲೊಪೇಜ್‌ಗೆ ಇದು ನಾಲ್ಕನೇ ಮದುವೆಯಾದರೆ, ಬೆನ್ ಅಫ್ಲಿಕ್‌ಗೆ ಇದು ಎರಡನೇ ಮದುವೆ. ಈ ಮೊದಲು 2002 ರಲ್ಲಿಯೇ ಈ ಜೋಡಿ ವಿವಾಹವಾಗಲು ಬಯಸಿದ್ದರು ಅಲ್ಲದೇ ಘೋಷಣೆ ಸಹ ಮಾಡಿದ್ದರು. ಆದರೆ ಕೆಲವು ಕಾರಣಗಳಿಂದ 2003ರಲ್ಲಿ ತಮ್ಮ ಬ್ರೇಕಪ್ ಮಾಡಿಕೊಂಡು ಅಚರಿ ಮೂಡಿಸಿದ್ದರು. ಇದೀಗ 20 ವರ್ಷಗಳ ಬಳಿಕ ಮತ್ತೆ ಒಂದಾಗಿದ್ದಲ್ಲದೇ ವಿವಾಹ ಸಹ ಆಗಿದ್ದಾರೆ.

ಪೀಪಲ್ ಮ್ಯಾಗಜೀನ್ ಪ್ರಕಾರ, ಜೆನ್ನಿಫರ್ ತನ್ನ 4ನೇ ಮದುವೆ ವಿಚಾರವನ್ನು  ನ್ಯೂಸ್ ಲೆಟರ್‌ನಲ್ಲಿ ಬಹಿರಂಗ ಪಡಿಸದರು. ಬಳಿಕ ಈ ಜೋಡಿ ಮದುವೆ ಪರವಾನಗಿ ಪಡೆಯಲು ನೆವಾಡ ನಗರಕ್ಕೆ ಹಾರಿದರು. ಬಳಿಕ ಶನಿವಾರ ತಡವಾಗಿ ಚಾಪೆಲ್‌ ನಗರದಲ್ಲಿ ವಿವಾಹವಾದರು ಎಂದು ಬಹಿರಂಗಪಡಿಸಿದರು. ಲೊಪೇಜ್ ಅವರಿಗೆ 52, ನಟ ಬೆನ್ ಅಫ್ಲೆಕ್ ಗೆ 49. 

ಸೆಕ್ಸ್ ಸಂತೃಪ್ತಿ: ವಿಲ್ ಸ್ಮಿತ್ ಮತ್ತು ಜಡಾ ಸ್ಮಿತ್ ಜೋಡಿ ನೀಡಿದ ಟಿಪ್ಸ್ ನೋಡಿ

 ಅಂದಹಾಗೆ ಬೆನ್ ಅಫ್ಲೆಕ್ ಗೆ ಈ ಮೊದಲು ಅಂದರೆ 2005ರಲ್ಲಿ ಜನ್ನಿಫರ್ ಗಾರ್ನೆರ್ ಜೊತೆ ವಿವಾಹವಾಗಿದ್ದರು. ಈ ಜೋಡಿಗೆ ಮೂವರು ಮಕ್ಕಳಿದ್ದಾರೆ. 2018ರಲ್ಲಿ ಇವರು ವಿಚ್ಛೇದನ ಪಡೆದು ದೂರ ದೂರ ಆದರು. ಇದಕ್ಕೂ ಮೊದಲು ಮತ್ತೋರ್ವ ನಟಿಯ ಜೊತೆ ಡೇಟಿಂಗ್ ನಲ್ಲಿದ್ದರು. ಆದರೆ ಮದುವೆಯಾಗಿರಲಿಲ್ಲ. ಇದೀಗ 2ನೇ ಮದುವೆಯಾಗಿದ್ದಾರೆ.  

ಲೈಂಗಿಕ ದೌರ್ಜನ್ಯ ಆರೋಪ; ಆಸ್ಕರ್ ವಿನ್ನರ್ ನಿರ್ದೇಶಕ ಅರೆಸ್ಟ್

ಇನ್ನು ಜೆನಿಫರ್ ಲೊಪೇಜ್ 1997 ರಲ್ಲಿ ಒಜೈ ನೋವಾ ಹೆಸರಿನ ಕ್ಯೂಬಾದ ವೈಟರ್ ಒಬ್ಬರನ್ನು ವಿವಾಹವಾಗಿದ್ದರು. ಬಳಿಕ ಕ್ರಿಸ್ ಜದ್ ಎಂಬುವರನ್ನು 2001 ರಲ್ಲಿ ವಿವಾಹವಾಗಿ 2002 ರಲ್ಲಿ ವಿಚ್ಛೇದನ ನೀಡಿದರು. ಬಳಿಕ ಕೆಲ ಕಾಲ ಬೆನ್ ಅಫ್ಲಿಕ್‌ ಜೊತೆ ಡೇಟಿಂಗ್‌ ಮಾಡಿದರು. ಬಳಿಕ ಅವರಿಂದ 2003 ರಲ್ಲಿ ದೂರಾಗಿ ಅದೇ ವರ್ಷ ಗಾಯಕ ಮಾರ್ಕ್ ಆಂಥೋನಿ ಅವರನ್ನು ವಿವಾಹವಾದರು. ಇವರಿಬ್ಬರು ಎಂಟು ವರ್ಷ ಜೊತೆಗಿದ್ದರು. ಇವರಿಗೆ ಅವಳಿ ಮಕ್ಕಳು ಸಹ ಇದ್ದಾರೆ. 2014 ರಲ್ಲಿ ಇವರಿಬ್ಬರು ದೂರಾದರು. ಬಳಿಕ 2019 ರಲ್ಲಿ ಜೆನ್ನಿಫರ್ ಬಾಸ್ಕೆಟ್‌ಬಾಲ್ ಆಟಗಾರ ಅಲೆಕ್ಸ್ ರೋಡ್ರಿಗೋಜ್ ಅನ್ನು ವಿವಾಹವಾಗುವುದಾಗಿ ಘೋಷಿಸಿದರು ಆದರೆ ಕೊರೊನಾ ಕಾರಣದಿಂದ ಮದುವೆ ನಡೆಯಲಿಲ್ಲ. ಬಳಿಕ ಅವರಿಂದನೂ ದೂರಾದರೂ. ಇದೀಗ ಬೆನ್ ಅಫ್ಲೆಕ್ ಜೊತೆ ಮತ್ತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?
ಸಾವಿರ ಕೋಟಿ ಕುಬೇರ 'ಮಹಾಪುರುಷ'ನಿಗೆ ಡಿವೋರ್ಸ್ ಕೊಡ್ತಾರಾ ಈ ನಟಿ? ಇದೆಂಥ ಶಾಕಿಂಗ್ ಮ್ಯಾಟರ್!