
ಬಾಲಿವುಡ್ ನಟಿ (Bollywood actress), ಕಪೂರ್ ಕುಟುಂಬದ ಸೊಸೆ ಆಲಿಯಾ ಭಟ್ (Alia Bhatt) ನವರಾತ್ರಿ ಸಂದರ್ಭದಲ್ಲಿ ದುರ್ಗಾ ಪೆಂಡಾಲ್ (Durga Pandal) ಗೆ ಭೇಟಿ ನೀಡಿ, ತಾಯಿಯ ದರ್ಶನ ಪಡೆದಿದ್ದಾರೆ. ಉತ್ತರ ಬಾಂಬೆ ಸರ್ಬೋಜನಿನ್ ದುರ್ಗಾ ಪೆಂಡಾಲ್ ಗೆ ತಮ್ಮ ಸಹೋದರಿ ಜೊತೆ ಬಂದ ಆಲಿಯಾ, ತಾಯಿಯ ಆಶೀರ್ವಾದ ಪಡೆದಿದ್ದಾರೆ. ಆಲಿಯಾ ಭಟ್ ಅಭಿನಯದ ಜಿಗ್ರಾ (Jigra) ಇಂದು ತೆರೆಗೆ ಬಂದಿದೆ. ಚಿತ್ರ ಬಿಡುಗಡೆಗೂ ಮುನ್ನ ದುರ್ಗಾ ದೇವಿಯ ದರ್ಶನವನ್ನು ಪಡೆದು, ಚಿತ್ರದ ಯಶಸ್ಸಿಗೆ ಪ್ರಾರ್ಥಿಸಿದ್ದಾರೆ ಆಲಿಯಾ ಭಟ್.
ಕೆಂಪು ಸೀರೆಯುಟ್ಟು, ಸ್ಲೀವ್ ಲೆಸ್ ಬ್ಲೌಸ್ ಧರಿಸಿ ಬಂದಿದ್ದ ರಣಬೀರ್ ಕಪೂರ್ ಮುದ್ದಿನ ಮಡದಿಯ ಸಾಕಷ್ಟು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಒಂದು ವಿಡಿಯೋದಲ್ಲಿ ಕಾಜೋಲ್ ಪಕ್ಕದಲ್ಲಿ ಆಲಿಯಾ ನಿಂತಿದ್ರೆ ಇನ್ನೊಂದು ವಿಡಿಯೋದಲ್ಲಿ, ದುರ್ಗೆ ದರ್ಶನಕ್ಕೆ ಮುನ್ನ ಆಲಿಯಾ ಚಪ್ಪಲಿ ಬಿಡೋದನ್ನು ನೋಡ್ಬಹುದು. ಮತ್ತೊಂದು ವಿಡಿಯೋದಲ್ಲಿ ಪೆಂಡಾಲ್ ಗೆ ಬಂದ ಆಲಿಯಾ, ಪಾಪರಾಜಿಗಳಿಗೆ ಫೋಸ್ ನೀಡಿದ್ದಾರೆ. ಈ ಎಲ್ಲ ವಿಡಿಯೋ ನೋಡಿದ ನೆಟ್ಟಿಗರು ಆಲಿಯಾ ಡ್ರೆಸ್ ಟ್ರೋಲ್ ಮಾಡಿದ್ದಾರೆ. ಚೆಂದದ ಸೀರೆಯುಟ್ಟು ಬಂದಿರುವ ಆಲಿಯಾಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅದಕ್ಕೆ ಕಾರಣವಾಗಿದ್ದು ಆಲಿಯಾ ಸ್ಲೀವ್ ಲೆಸ್ ಬ್ಲೌಸ್.
ನುಗ್ಗೆಕಾಯಿ ನೋಡಿ ವರ್ತೂರು ಹೇಳಿದ್ದೇನು? ವೇದಿಕೆ ಮೇಲೆ ಮಿಂಚಿದ ತನಿಷಾ
ನವರಾತ್ರಿ ಸಂದರ್ಭದಲ್ಲಿ ಇಂಥ ಬ್ಲೌಸ್ ಧರಿಸಿ ಬರುವ ಅವಶ್ಯಕತೆ ಏನಿತ್ತು ಎಂದು ಜನರು ಪ್ರಶ್ನೆ ಮಾಡಿದ್ದಾರೆ. ಎಲ್ಲಿ, ಯಾವ ಸಂದರ್ಭದಲ್ಲಿ ಹೇಗೆ ಡ್ರೆಸ್ ಮಾಡ್ಕೊಂಡು ಬರ್ಬೇಕು ಎನ್ನುವ ಸೆನ್ಸ್ ಇರಬೇಕೆಂದು ಕೆಲವರು ಆಲಿಯಾಗೆ ಬುದ್ದಿ ಹೇಳಿದ್ದಾರೆ. ದುರ್ಗಾ ಪೂಜೆಗೆ ಈ ಬ್ಲೌಸ್ ಅವಶ್ಯಕತೆ ಇರಲಿಲ್ಲ, ಪ್ರತಿ ಬಾರಿ ಸೆಕ್ಸಿಯಾಗಿ ಕಾಣಿಸಿಕೊಳ್ಳುವ ಅಗತ್ಯವಿಲ್ಲ. ನಾರ್ಮಲ್ ಬ್ಲೌಸ್ ಧರಿಸಿದ್ರೆ ಏನಾಗ್ತಿತ್ತು, ದೇಹ ತೋರಿಸುವ ಅನಿವಾರ್ಯತೆ ಏನಿದೆ ಎಂದು ಜನರು ಪ್ರಶ್ನೆ ಕೇಳಿದ್ದಾರೆ. ಈಗಿನ ದಿನಗಳಲ್ಲಿ ಪೂಜೆಗಿಂತ ಫ್ಯಾಷನ್ ಮುಖ್ಯವಾಗಿದೆ, ಎಲ್ಲರೂ ಪ್ರದರ್ಶನಕ್ಕೆ ಮೊದಲ ಆದ್ಯತೆ ನೀಡ್ತಿದ್ದಾರೆ ಎಂಬ ಆರೋಪವನ್ನೂ ನೆಟ್ಟಿಗರು ಮಾಡಿದ್ದಾರೆ.
ರಣಬೀರ್ ಕಪೂರ್ ಬಿಟ್ಟು ದುರ್ಗಾ ಪೆಂಡಾಲ್ ಗೆ ಒಬ್ಬರೇ ಬಂದಿರೋದು ಫ್ಯಾನ್ಸ್ ಗೆ ಇಷ್ಟವಾಗಿಲ್ಲ. ಪ್ರತಿ ಸಮಾರಂಭದಲ್ಲೂ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಬೇರೆಯಾಗಿ ಕಾಣಿಸಿಕೊಳ್ಳೋದು ಏಕೆ ಎಂದು ನೆಟ್ಟಿಗರು ಕೇಳಿದ್ದಾರೆ. ರಣಬೀರ್ ಎರಡು ದಿನಗಳ ಮೊದಲೇ ದುರ್ಗಾ ಪೆಂಡಾಲ್ ಗೆ ಭೇಟಿ ನೀಡಿ ತಾಯಿಯ ದರ್ಶನ ಪಡೆದಿದ್ದರು. ಅವರು ಮತ್ತು ರಾಣಿ ಮುಖರ್ಜಿ (Rani Mukerji) ಜೊತೆಗಿರುವ ವಿಡಿಯೋ ವೈರಲ್ ಆಗಿತ್ತು. ಇಡೀ ದೇಶ ನವರಾತ್ರಿ ಸಂಭ್ರಮದಲ್ಲಿ ಮಿಂದೇಳುತ್ತಿದ್ದು, ಮುಂಬೈನಲ್ಲೂ ದುರ್ಗಾ ಪೂಜೆ ರಂಗುಪಡೆದಿದೆ. ದುರ್ಗಾ ಪೆಂಡಾಲ್ ಗೆ ಅನೇಕ ಸೆಲೆಬ್ರಿಟಿಗಳು ಭೇಟಿ ನೀಡ್ತಿದ್ದಾರೆ. ಅದ್ರಲ್ಲಿ ಆಲಿಯಾ ಭಟ್ ಕೂಡ ಒಬ್ಬರು.
ದುರ್ಗಾ ಪೆಂಡಾಲ್ ನಲ್ಲಿ ಕಾಜೋಲ್ ದರ್ಬಾರ್!
ಆಲಿಯಾ ಭಟ್ ಫ್ಯಾನ್ಸ್ (Fans) ಇಂದು ಖುಷಿಯಲ್ಲಿದ್ದಾರೆ. ಆಲಿಯಾ ಅಭಿನಯದ ಜಿಗ್ರಾ ಸಿನಿಮಾ ತೆರೆಗೆ ಬಂದಿದೆ. ವಾಸನ್ ಬಾಲಾ ನಿರ್ದೇಶನದ ಜಿಗ್ರಾ ಇಂದು ಬಿಡುಗಡೆಯಾಗಿದೆ. ಆಲಿಯಾ ಭಟ್ ಮತ್ತು ವೇದಾಂಗ್ ರೈನಾ ಅಭಿನಯದ ಈ ಚಿತ್ರ ಬಹಳ ದಿನಗಳಿಂದ ಸುದ್ದಿಯಲ್ಲಿತ್ತು. ಚಿತ್ರ ಸೂಪರ್ ಹಿಟ್ ಆಗುತ್ತೆ ಎನ್ನುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಆದ್ರೆ ಮೊದಲ ದಿನವೇ ನಿರಾಸೆಯಾದಂತಿದೆ. ಜಿಗ್ರಾಗೆ ಫುಲ್ ಮಾರ್ಕ್ಸ್ ನೀಡಲು ವೀಕ್ಷಕರು ಸಿದ್ಧರಿಲ್ಲ. ಎಕ್ಸ್ ಖಾತೆಯಲ್ಲಿ ನೆಗೆಟಿವ್ ಕಮೆಂಟ್ ಹೆಚ್ಚಿದೆ. ಆಲಿಯಾ ಕೈನಲ್ಲಿ ಸದ್ಯ ಇನ್ನೊಂದು ಚಿತ್ರವಿದ್ದು, ಆಲ್ಫಾ ಶೂಟಿಂಗ್ ನಡೆಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.