ನಟಿ ದುರ್ಗಾ ಪೂಜೆಗೆ ಬ್ರಾ ಧರಿಸಿ ಬಂದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ನಟಿ ಬ್ರಾ ಧರಿಸಿ ಬಂದಿದ್ದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಪವಿತ್ರ ಸ್ಥಳದಲ್ಲಿ ಇಂತಹ ಉಡುಗೆ ತರವಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂಬೈ: ಇಡೀ ದೇಶದ ತುಂಬೆಲ್ಲಾ ನವರಾತ್ರಿಯ ಸಂಭ್ರಮ ಮನೆ ಮಾಡಿದೆ. ಕರ್ನಾಟಕದಲ್ಲಿ ಮೈಸೂರು ದಸರೆಯ ಸಂಭ್ರಮವಿದ್ರೆ, ಭಾರತದ ಉತ್ತರ ಭಾಗದಲ್ಲಿ ದುರ್ಗೆಯನ್ನು ಪೂಜಿಸಲಾಗುತ್ತದೆ. ನಗರದ ಪ್ರಮುಖ ಬೀದಿಗಳಲ್ಲಿ ದುರ್ಗಾದೇವಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿರುತ್ತದೆ. ಮುಂಬೈನಲ್ಲಿಯೂ ನವರಾತ್ರಿಯನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ದುರ್ಗಾದೇವಿಯ ದರ್ಶನ ಪಡೆಯಲು ಬಾಲಿವುಡ್ ತಾರೆಯರು ಆಗಮಿಸುತ್ತಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬಹುತೇಕ ಎಲ್ಲಾ ನಟಿಯರು ಸಾಂಪ್ರದಾಯಿಕ ಉಡುಗೆಯಲ್ಲಿ ಬಂದ್ರೆ ಪೂನಂ ಪಾಂಡೆ ಮಾತ್ರ ತಮ್ಮದೇ ಸ್ಟೈಲ್‌ನಲ್ಲಿ ಬಂದಿದ್ದರೆ.
ದೇವಿಯ ದರ್ಶನ ಪಡೆಯಲು ಪೂನಂ ಪಾಂಡೆ ಬಂದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇಲ್ಲಾದ್ರೂ ಮೈತುಂಬಾ ಬಟ್ಟೆ ಹಾಕಿಕೊಂಡು ಬರಬೇಕಿತ್ತು ಅಲ್ಲವಾ ಎಂದು ನೆಟ್ಟಿಗರು ಅಸಮಾಧಾನ ಹೊರ ಹಾಕಿದ್ದಾರೆ. ಕೆಂಪು ಲೆಹೆಂದ ಧರಿಸಿ, ಮೇಲುಡಗೆಯಲ್ಲಿ ಕೇವಲ ಬ್ರಾ ಧರಿಸಿದ್ದು, ಸೈಡ್‌ನಲ್ಲಿ ದುಪ್ಪಟ್ಟಾ ಹಾಕಿಕೊಂಡಿದ್ದಾರೆ. ಈ ರೀತಿ ಬಟ್ಟೆ ಧರಿಸೋ ಬಂದೋರಿಗೆ ದೇವಿಯ ಪ್ರತಿಮೆ ಬಳಿ ಬಿಡುತ್ತಾರೆ. ಸಾಮಾನ್ಯ ಜನರಿಗೆ ದೂರದಿಂದಲೇ ಕಳುಹಿಸುತ್ತಾರೆ ಎಂದು ಕಿಡಿಕಾರಿದ್ದಾರೆ.
ಪೂನಂ ಪಾಂಡೆ ತಮ್ಮ ಮಾದಕತೆಯಿಂದಲೇ ಜನಪ್ರಿಯತೆ ಪಡೆದುಕೊಂಡಿರುವ ನಟಿ. ಇತ್ತೀಚೆಗೆ ತಾನು ಸತ್ತಿದ್ದೇನೆ ಎಂಬ ಸುಳ್ಳು ಸುದ್ದಿಯನ್ನು ಹರಡಿ ಭಾರೀ ಟೀಕೆಗೆ ಒಳಗಾಗಿದ್ದರು. ಇಷ್ಟು ಮಾತ್ರವಲ್ಲದೇ ತಮ್ಮ ಬೋಲ್ಡ್ ಸ್ಟೇಟ್‌ಮೆಂಟ್‌ಗಳಿಂದಲೂ ಪೂನಂ ಪಾಂಡೆ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಮಾತಾರಾಣಿ ದರ್ಶನಕ್ಕೆ ಇಡೀ ಬೆನ್ನು ಕಾಣುವಂತಹ ಡ್ರೆಸ್ ಧರಿಸಿ ಬಂದು ಟ್ರೋಲ್ ಆಗುತ್ತಿದ್ದಾರೆ.
ದುರ್ಗಾ ಪೂಜಾ ಮಂಟಪದಲ್ಲಿ ಬೆದರಿಕೆ ಹಾಕಿ ಇಸ್ಲಾಮಿಕ್ ಹಾಡು, ವಿವಾದದ ವಿಡಿಯೋ ವೈರಲ್
ಸ್ವಲ್ಪ ಬಟ್ಟೆಯನ್ನು ಬೆನ್ನ ಹಿಂದೆಯೂ ಹಾಕಿಕೊಂಡಿದ್ದರೆ ತುಂಬಾ ಚೆನ್ನಾಗಿ ಕಾಣಿಸುತ್ತಿತ್ತು. ಈ ರೀತಿಯ ಬಟ್ಟೆ ಧರಿಸಿ ಇಂತಹ ಸ್ಥಳಗಳಿಗೆ ಬರಬಾರದು. ಎಲ್ಲಿ ಏನು ಧರಿಸಬೇಕು ಎಂಬ ಜ್ಞಾನ ಇರಬೇಕು. ಆ ಜ್ಞಾನ ಇಲ್ಲದಿದ್ದರೆ ಇದೇ ರೀತಿ ಆಗೋದು. ಇಂತಹ ಪವಿತ್ರ ಸ್ಥಳದಲ್ಲಿ ಬ್ರಾ ಧರಿಸಿ ಬಂದ ಪೂನಂ ಪಾಂಡೆಯನ್ನು ಒಳಗೆ ಬಿಟ್ಟಿದ್ದು ದೊಡ್ಡ ತಪ್ಪೆಂದು ಕೆಲವರು ಕಮೆಂಟ್ ಮಾಡಿದ್ದಾರೆ. ಒಂದಿಷ್ಟು ಮಂದಿ ಮೊದಲ ಬಾರಿಗೆ ಪೂನಂ ಪಾಂಡೆ ಇಷ್ಟೊಂದು ಬಟ್ಟೆಯಲ್ಲಿ ಬಂದಿರೋದು ಅಂತ ಕಮೆಂಟ್ ಮಾಡಿದ್ದಾರೆ.
ನಟಿ ಕಾಜೋಲ್ ಸಹ ಟ್ರೋಲ್
ಈ ಬಾರಿ ದುರ್ಗಾ ಪೂಜೆಯಲ್ಲಿ ಭಾಗಿಯಾಗಿದ್ದ ನಟಿ ಕಾಜೋಲ್ ಸಹ ಟ್ರೋಲ್ ಆಗಿದ್ದಾರೆ. ಭಕ್ತಾದಿಗಳಿಗೆ ಆಹಾರ ಬಡಿಸುವಾಗ ಕಾಜೋಲ್ ಸಹ ಸ್ವೀಟ್ ತಿನ್ನುತ್ತಿದ್ದರು. ಈ ರೀತಿ ತಿನ್ನುತ್ತಾ ಆಹಾರ ವಿತರಣೆ ಮಾಡೋದು ತಪ್ಪು. ಇವರು ಕೇವಲ ಪೋಟೋ ಮತ್ತು ವಿಡಿಯೋಗಾಗಿ ಒಂದೆರಡು ನಿಮಿಷ ಕೆಲಸ ಮಾಡುತ್ತಾರೆ ಎಂದು ಟೀಕಿಸಲಾಗಿದೆ.
ದುರ್ಗಾ ಪೆಂಡಾಲ್‌ಗೆ ಅರೆಬರೆ ಬಟ್ಟೆ ತೊಟ್ಟು ಬಂದ ಮಾಡೆಲ್‌ಗಳ ಧರ್ಮಾತೀತವಾಗಿ ವಿರೋಧಿಸಿದ ಜನ