'ಜೈಲರ್'​ ಕಾವಾಲಾ ಹಾಡಿಗೆ ಜಪಾನಿನ ರಾಯಭಾರಿಯಿಂದ ಭರ್ಜರಿ ಡ್ಯಾನ್ಸ್​

Published : Aug 17, 2023, 01:00 PM IST
'ಜೈಲರ್'​ ಕಾವಾಲಾ ಹಾಡಿಗೆ ಜಪಾನಿನ ರಾಯಭಾರಿಯಿಂದ ಭರ್ಜರಿ ಡ್ಯಾನ್ಸ್​

ಸಾರಾಂಶ

ಜೈಲರ್​ ಚಿತ್ರದ ಕಾವಾಲಾ ಹಾಡು ಸಕತ್​ ಹಂಗಾಮಾ ಸೃಷ್ಟಿಸುತ್ತಿದ್ದು ಇದೀಗ  ಭಾರತದಲ್ಲಿ ಜಪಾನ್‌ನ ರಾಯಭಾರಿಯಾಗಿರುವ ಹಿರೋಶಿ ಸುಜುಕಿ ಸ್ಟೆಪ್​ ಹಾಕಿದ್ದಾರೆ. ಅದರ ವಿಡಿಯೋ ವೈರಲ್​ ಆಗಿದೆ.   

ಟಾಲಿವುಡ್​​ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ಜೈಲರ್’ (Jailer) ಚಿತ್ರ ಬಹುತೇಕ ಎಲ್ಲಾ ಚಿತ್ರಗಳ ದಾಖಲೆಗಳನ್ನು ಹಿಂದಿಕ್ಕಿ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆಯುತ್ತಿದೆ. ಟ್ರೇಡ್ ವರದಿಗಳ ಪ್ರಕಾರ, ಈ  ಚಿತ್ರವು ವಿಶ್ವದಾದ್ಯಂತ ಇಲ್ಲಿಯವರೆಗೆ ಬಾಕ್ಸ್ ಆಫೀಸ್‌ನಲ್ಲಿ 400 ಕೋಟಿ ರೂಪಾಯಿ ಮೀರಿದ್ದರೆ, ಭಾರತದಲ್ಲಿ,  ಇವತ್ತು ಬೆಳಗ್ಗೆಯವರೆಗೆ  226 ಕೋಟಿ ರೂಪಾಯಿಗಳನ್ನು ಗಳಿಸಿದೆ.  ಜೈಲರ್​ ಚಿತ್ರ ಬಿಡುಗಡೆಯಾಗುವ ಮುನ್ನವೇ ಹವಾ ಸೃಷ್ಟಿಸಿದ್ದು ಅದರ ಕಾವಲಾಯ್ಯ ಹಾಡು. ಒಂದೆಡೆ (Rajinikanth) ಅವರ ಅಭಿನಯಕ್ಕೆ ಜನ ಸೋತಿದ್ದರೆ, ಇನ್ನೊಂದೆಡೆ ಕಾವಾಲ ಹಾಡು ಸಿನಿ ಪ್ರಿಯರಿಗೆ ಅಚ್ಚುಮೆಚ್ಚಾಗಿದೆ ಜುಲೈ 6ರಂದು ಈ ಬಿಡುಗಡೆಯಾಗಿತ್ತು.  ಆನ್‌ಲೈನ್‌ನಲ್ಲಿ ಹೊಸ ಪುಳಕ ಉಂಟು ಮಾಡಿದ್ದ ಈ ಹಾಡು ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದ ದಿನವೇ 80 ದಶಲಕ್ಷ ವೀಕ್ಷಣೆ ಗಳಿಸಿರುವುದು ಇತಿಹಾಸ. ಈಗಲೂ ಈ ಹಾಡಿನ ಹವಾ ನಿಂತಿಲ್ಲ.  ಸೋಷಿಯಲ್​ ಮೀಡಿಯಾದಲ್ಲಿ ಹಂಗಾಮ ಸೃಷ್ಟಿಸುತ್ತಲೇ ಸಾಗಿದೆ. ಫೇಸ್​ಬುಕ್, ಇನ್‌ಸ್ಟಾಗ್ರಾಮ್​, ವಾಟ್ಸಪ್‌ ಸ್ಟೇಟಸ್‌ನಲ್ಲೂ ಇದೇ ಈಗ ಟ್ರೆಂಡಿಂಗ್‌ನಲ್ಲಿದೆ. ಮಕ್ಕಳಿಂದ ಹಿಡಿದು ಅಜ್ಜಿಯರವರೆಗೆ, ಕಿರುತೆರೆ ಕಲಾವಿದರಿಂದ ಹಿಡಿದು ಬೇರೆ ಬೇರೆ ನಟಿಯರೂ ಈ ಹಾಡಿಗೆ ಡಾನ್ಸ್​ ಮಾಡಿ ಮೋಡಿ ಮಾಡುತ್ತಿದ್ದಾರೆ. ಈಚೆಗೆ ಕಿರುತೆರೆ ನಟಿ, ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ, ಪುಟ್ಟಕ್ಕನ ಮಕ್ಕಳು ನಾಯಕಿ ಸ್ನೇಹಾ ಮಿನಿ ಸ್ಕರ್ಟ್​ನಲ್ಲಿ ಭರ್ಜರಿ ಸ್ಟೆಪ್ ಹಾಕಿದ್ದರು. 

ಈ ಹಾಡಿಗೆ ಅರುಣರಾಜ ಕಾಮರಾಜ್ ಸಾಹಿತ್ಯವಿದೆ.  ಅನಿರುದ್ಧ್ ಮ್ಯೂಸಿಕ್, ಶಿಲ್ಪಾ ರಾವ್ ವಾಯ್ಸ್‌ನಲ್ಲಿ ಸಾಂಗ್ ಕೇಳುಗರಿಗೆ ಆಪ್ತವಾಗಿದೆ.  ತಮನ್ನಾ ಭಾಟಿಯಾ ಅವರ ಡ್ಯಾನ್ಸ್​ ಅಂತೂ ಮೋಡಿ ಮಾಡುತ್ತಿದೆ. ಹಲವರಿಗೆ ಈ ಹಾಡು, ನೃತ್ಯ ಎಲ್ಲವೂ ಹುಚ್ಚೇ ಹಿಡಿಸಿದೆ.  ಜಾನಿ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಬಿಂದಾಸ್ ಆಗಿ ಕುಣಿದು ಮಿಲ್ಕಿ ಬ್ಯೂಟಿ ಫ್ಯಾನ್ಸ್​ ಹೃದಯಕ್ಕೆ ಲಗ್ಗೆ ಇಟ್ಟುಬಿಟ್ಟಿದ್ದಾರೆ. ರೀಲ್ಸ್​ನಲ್ಲಿ ಪ್ರವೀಣರಾದವರ ಪೈಕಿ ಬಹುತೇಕ ಯುವತಿಯರಿಗಂತೂ ಈ ಹಾಡು ಅಚ್ಚುಮೆಚ್ಚಾಗಿದ್ದು, ಸಕತ್​ ಲೈಕ್ಸ್​ ಕೂಡ ಬರುತ್ತಿವೆ. ಒಟ್ಟಿನಲ್ಲಿ ಈ ಡಾನ್ಸ್​ (Dacne) ಇಂಟರ್‌ನೆಟ್‌ನಲ್ಲಿ ಹೊಸ ಕ್ರೇಜ್‌ ಹುಟ್ಟುಹಾಕಿದೆ. 

ಕಾವಾಲಯ್ಯ ಹಾಡಿಗೆ 'ಪುಟ್ಟಕ್ಕನ ಮಕ್ಕಳು' ಸ್ನೇಹಾ ಮಿನಿ ಸ್ಕರ್ಟ್​ನಲ್ಲಿ ಭರ್ಜರಿ ಸ್ಟೆಪ್​: ಉಫ್​ ಎಂದ ಫ್ಯಾನ್ಸ್​!

ಈಗ ಜಪನೀಸ್ ರಾಯಭಾರಿಯೊಬ್ಬರು ಈ ಹಾಡಿಗೆ ಸ್ಟೆಪ್​ ಹಾಕಿ ಸಕತ್​ ಸದ್ದು ಮಾಡುತ್ತಿದ್ದಾರೆ. ಭಾರತದಲ್ಲಿ ಜಪಾನ್‌ನ ರಾಯಭಾರಿಯಾಗಿರುವ ಹಿರೋಶಿ ಸುಜುಕಿ (Hiroshi Suzuki) ಅವರು ಈ ಹಾಡಿಗೆ ಸ್ಟೆಪ್​ ಹಾಕಿದ್ದಾರೆ.  ಸೂಪರ್‌ಸ್ಟಾರ್ ರಜನಿಕಾಂತ್ ಅವರ ಮೇಲಿನ ಪ್ರೀತಿಯನ್ನು ಪ್ರದರ್ಶಿಸಿದ್ದಾರೆ. ಇದು ಎಲ್ಲರನ್ನೂ  ಬೆರಗುಗೊಳಿಸುತ್ತಿದೆ.  ವೈರಲ್ ಆಗಿರುವ ಈ  ವೀಡಿಯೊದಲ್ಲಿ, ರಾಜತಾಂತ್ರಿಕರಾಗಿರುವ ಹಿರೋಶಿಯವರು  "ಕಾವಾಲ" ಹಾಡಿನ ಪೆಪ್ಪಿ ಬೀಟ್‌ಗಳಿಗೆ ಜಪಾನಿನ ಜನಪ್ರಿಯ ಯೂಟ್ಯೂಬರ್ ಮೇಯೊ ಸ್ಯಾನ್ ಜೊತೆಗೆ ಸ್ಟೆಪ್​ ಹಾಕುವುದನ್ನು ಕಾಣಬಹುದು.  ವಿಡಿಯೋ ನೋಡಿದ ನೆಟ್ಟಿಗರು ಇದು ಆರ್ಟಿಫಿಷಿಯಲ್​ ಇಂಟಲಿಜೆನ್ಸ್​ (AI) ಮಾಡಿರುವ ವಿಡಿಯೋದಂತಿದೆ ಎಂದಿದ್ದಾರೆ.   

ಅಂದಹಾಗೆ,  ಕಾವಾಲ ಹಾಡು ಟ್ರೈಬಲ್‌ ಥೀಮ್‌ನಲ್ಲಿ  ತಯಾರಾಗಿದ್ದು ತಮನ್ನಾ ಭಾಟಿಯಾ ಹಾಟ್​ ಲುಕ್​ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.  ರಜನಿಕಾಂತ್‌ ಕೂಡಾ ಈ ಹಾಡಿನಲ್ಲಿ ಸಾಲ್ಟ್‌ ಪೆಪ್ಪರ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಅವರ ಸಿನಿ ಪಯಣದಲ್ಲಿ  ಜೈಲರ್ ಚಿತ್ರ ವಿಶೇಷವಾಗಿದೆ.  ತಮನ್ನಾ ಭಾಟಿಯಾ (Tamanna Bhatia) ಅವರು ಐಟಂ ಸಾಂಗ್​ಗಳಲ್ಲಿ ನಟಿಸಿದ್ದು ಇದೇ ಮೊದಲೇನಲ್ಲ. ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದ ‘ಜೋಕೆ ನಾನು ಬಳ್ಳಿಯ ಮಿಂಚು..’ ಹಾಡಿನಲ್ಲಿ ತಮನ್ನಾ ಸ್ಟೆಪ್​ ಹಾಕಿದ ಪರಿಗೆ ಪಡ್ಡೆ ಹುಡುಗರು ಫಿದಾ ಆಗಿದ್ದರು. ತೆಲುಗು, ತಮಿಳಿನ ಸಿನಿಮಾಗಳಲ್ಲೂ ಅವರು ಐಟಂ ಡ್ಯಾನ್ಸ್​ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರು ‘ಜೈಲರ್​’ ಚಿತ್ರದಲ್ಲಿ ಸ್ಟೆಪ್​  ಹಾಕಿದ್ದಾರೆ.

ಅಮೆರಿಕದಲ್ಲೂ ಧೂಳೆಬ್ಬಿಸಿದ JAILER : ಒಂದು ಮಿಲಿಯನ್​ ಡಾಲರ್​ ಗಳಿಸಿ ದಾಖಲೆ!


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?