90 ಕೋಟಿ ರೂ. ಸಂಭಾವನೆ ಕೇಳಿ ಸಿನಿಮಾದಿಂದ ಕಿಕ್ ಔಟ್ ಆದ್ರಾ ಅಕ್ಷಯ್ ಕುಮಾರ್? ಇಲ್ಲಿದೆ ಮಾಹಿತಿ

Published : Nov 14, 2022, 11:41 AM IST
90 ಕೋಟಿ ರೂ. ಸಂಭಾವನೆ ಕೇಳಿ ಸಿನಿಮಾದಿಂದ ಕಿಕ್ ಔಟ್ ಆದ್ರಾ ಅಕ್ಷಯ್ ಕುಮಾರ್? ಇಲ್ಲಿದೆ ಮಾಹಿತಿ

ಸಾರಾಂಶ

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಬಹುನಿರೀಕ್ಷೆಯ ಹೆರಾ ಫೇರಿ-3 ಸಿನಿಮಾದಿಂದ ಕಿಕ್ ಔಟ್ ಆಗಿದ್ದಾರೆ. ಅಕ್ಷಯ್ ಅತೀ ಹೆಚ್ಚು ಸಂಭಾವನೆ  ಕೇಳಿದ್ದಕ್ಕೆ ಸಿನಿಮಾದಿಂದ ಹೊರಗಿಡಲಾಗಿದೆ ಎನ್ನಲಾಗಿದೆ.  

ಬಾಲಿವುಡ್‌ನಲ್ಲಿ ಸಿನಿಮಾಗಳು ಸಕ್ಸಸ್ ಕಾಣುತ್ತಿಲ್ಲ. ಸೌತ್ ಸಿನಿಮಾಗಳು ಹಿಂದಿ ಸಿನಿಮಾರಂಗವನ್ನು ಆಳುತ್ತಿವೆ. ಬಾಲಿವುಡ್ ನಲ್ಲಿ ಸ್ಟಾರ್ ನಟರ ಸಿನಿಮಾಗಳು ಸಹ ನೆಲಕಚ್ಚಿತ್ತಿವೆ. ಗೆಲುವಿನ ಹಾದಿಯಲ್ಲಿದ್ದ ಅಕ್ಷಯ್ ಕುಮಾರ್ ಸಿನಿಮಾಗಳು ಸಹ ಮುಗ್ಗರಿಸಿವೆ. 2022 ಅಕ್ಷಯ್ ಕುಮಾರ್ ಪಾಲಿಗೆ ತುಂಬಾ ನಿರಾಶಾದಾಯಕ ವರ್ಷವಾಗಿದೆ. ಈ ವರ್ಷ ರಿಲೀಸ್ ಆದ ಅಕ್ಷಯ್ ಕುಮಾರ್ ಯಾವ ಸಿನಿಮಾಗಳೂ ಸಕ್ಸಸ್ ಕಂಡಿಲ್ಲ. ಈ ನಡುವೆ ಅಕ್ಷಯ್ ಕುಮಾರ್ ಬಹುನಿರೀಕ್ಷೆಯ ಹೆರಾ ಫೇರಿ-3 ಸಿನಿಮಾದಿಂದ ಔಟ್ ಆಗಿದ್ದಾರೆ. ಮೊದಲೆರಡು ಸರಣಿಯಲ್ಲಿ ರಂಜಿಸಿದ್ದ ಅಕ್ಷಯ್ ಕುಮಾರ್ 3ನೇ ಸರಣಿಯಿಂದ ಹೊರನಡೆದಿರುವುದು ಅಚ್ಚರಿ ಮೂಡಿಸಿದೆ. ಅಕ್ಷಯ್ ಜಾಗಕ್ಕೆ ಕಾರ್ತಿಕ್ ಆರ್ಯನ್ ಎಂಟ್ರಿ ಕೊಟ್ಟಿದ್ದಾರೆ. ಅಕ್ಷಯ್ ಕುಮಾರ್ ಅವರ ನಿರ್ಧಾರ ಸಹ ಅಭಿಮಾನಿಗಳಲ್ಲಿ ಬೇಸರ ಮಾಡಿಸಿದೆ. ಅಂದಹಾಗೆ ಅಕ್ಷಯ್ ಕುಮಾರ್ ಈ ಸಿನಿಮಾದಿಂದ ಹೊರ ನಡೆಯಲು ಸಂಭಾವನ ಕಾರಣ ಎನ್ನಲಾಗಿದೆ. 

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಈ ಸಿನಿಮಾದಲ್ಲಿ ನಟಿಸಲು ಅದೀ ದೊಡ್ಡ ಮೊತ್ತದ ಸಂಭಾವನೆ ಬೇಡಿಕೆ ಇಟ್ಟಿದ್ದಾರಂತೆ. ಬರೋಬ್ಬರಿ 90 ಕೋಟಿ ಸಂಭಾವನೆ ಡಿಮ್ಯಾಂಡ್ ಮಾಡಿದ್ದರು ಎನ್ನುವ ಸುದ್ದಿ ವೈರಲ್ ಆಗಿದೆ. ಹೌದು ಸಕ್ಸಸ್ ಸರಣಿ ಹೆರಾ ಫೇರ 3ನಲ್ಲಿ ನಟಿಸಲು ಅಕ್ಷಯ್ ಕುಮಾರ್ 90 ಕೋಟಿ ರೂಪಾಯಿ ಸಂಭಾವನೆ ಬೇಡಿಕೆ ಇಟ್ಟಿದ್ದರಂತೆ. ಆದರೆ ಕಾರ್ತಿಕ್ ಆರ್ಯನ್ 30 ಕೋಟಿ ರೂಪಾಯಿಗೆ ಒಪ್ಪಿಕೊಂಡರು ಎನ್ನಲಾಗಿದೆ. ಹಾಗಾಗಿ ಸಿನಿಮಾತಂಡ ಕಾರ್ತಿಕ್ ಆರ್ಯನ್ ಅವರನ್ನು ಲಾಕ್ ಮಾಡಿದೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದ್ದೆ. ಆದರೆ ಈ ಬಗ್ಗೆ ಅಕ್ಷಯ್ ಕುಮಾರ್ ಬೇರೆಯದ್ದೆ ಮಾಹಿತಿ ಹಂಚಿಕೊಂಡಿದ್ದರು. 

ತುಂಬಾ ದುಃಖ ಆಗುತ್ತೆ; 'ಹೆರಾ ಫೇರಿ-3'ಯಿಂದ ಔಟ್ ಆದ ಅಕ್ಷಯ್ ಕುಮಾರ್ ಭಾವುಕ

ಈ ಸಿನಿಮಾದಿಂದ ಹೊರಬಂದಿರುವುದು ತುಂಬಾ ದುಃಖವಾಗಿದೆ ಎಂದಿದ್ದರು ಅಕ್ಷಯ್ ಕುಮಾರ್. 'ನನಗೆ ಈ ಚಿತ್ರದ ಆಫರ್ ಮಾಡಲಾಯಿತು ಮತ್ತು ಈ ಸಿನಿಮಾದ ಬಗ್ಗೆ ತಿಳಿಸಲಾಯಿತು. ಆದರೆ ಚಿತ್ರಕಥೆ, ಸ್ಕ್ರೀನ್ ಪ್ಲೇ,  ನನಗೆ ತೃಪ್ತಿಯಾಗಲಿಲ್ಲ, ಸಂತೋಷವಾಗಲಿಲ್ಲ. ಜನರು ಏನನ್ನು ನೋಡಲು ಬಯಸುತ್ತಾರೋ ಅದನ್ನು ನಾನು ಮಾಡಬೇಕು ಮತ್ತು ಅದಕ್ಕಾಗಿಯೇ ನಾನು ಹಿಂದೆ ಸರಿದಿದ್ದೇನೆ. ನನಗೂ ತುಂಬಾ ಬೇಸರವಾಗಿದೆ' ಎಂದು ಹೇಳಿದ್ದರು. ಅಕ್ಷಯ್ ಕುಮಾರ್ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 

ಸತತ ಸೋಲು 'ಮರಾಠಿ'ಗೆ ಅಕ್ಷಯ್ ಕುಮಾರ್ ಜಂಪ್: ಛತ್ರಪತಿ ಶಿವಾಜಿಯಾಗಿ ಮಿಂಚಲು ಸಜ್ಜು

ಅಕ್ಷಯ್ ಕುಮಾರ್ ಸಿನಿಮಾಗಳ ಬಗ್ಗೆ ಹೇಳುವುದಾದರೆ, ಸದ್ಯ ಕಿಲಾಡಿ ಬಾಲಿವುಡ್ ನಿಂದ ಮರಾಠಿಗೆ ಹಾರಿದ್ದಾರೆ. ಇತ್ತೀಚಿಗಷ್ಟೆ ಮರಾಠಿಯಲ್ಲಿ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಛತ್ರಪತಿ ಶಿವಾಜಿಯಾಗಿ ಅಕ್ಷಯ್ ಕುಮಾರ್ ಮರಾಠಿಗೆ ಎಂಟ್ರಿ ಕೊಟ್ಟಿದ್ದಾರೆ.  ಈ ಬಗ್ಗೆ ಅಕ್ಷಯ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದರು.  'ಕನಸು ನನಸಾದ ಪಾತ್ರವಾಗಿದೆ. ಛತ್ರಪತಿ ಶಿವಾಜಿ ಮಹಾರಾಜರನ್ನು ದೊಡ್ಡ ಪರದೆ ಮೇಲೆ ಚಿತ್ರಿಸುವುದು ದೊಡ್ಡ ಜವಾಬ್ದಾರಿ ಎಂದು ನಾನು ಭಾವಿಸುತ್ತೇನೆ. ಈ ಪಾತ್ರ ಮಾಡುವಂತೆ ಕೇಳಿದಾಗ ನಾನು ದಿಗ್ಭ್ರಮೆಗೊಂಡೆ. ಈ ಪಾತ್ರ ನಿರ್ವಹಿಸುತ್ತಿರುವುದು ತುಂಬಾ ಸಂತೋಷವಾಗಿದೆ. ನಾನು ಮೊದಲ ಬಾರಿಗೆ ಮಹೇಶ್ ಮಂಜ್ರೇಕರ್ ಅವರೊಂದಿಗೆ ಕೆಲಸ ಮಾಡುತ್ತಿದ್ದೇನೆ ಮತ್ತು ಒಂದ ಅನುಭವವಾಗಲಿದೆ' ಎಂದಿದ್ದರು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?