ಪ್ರಿಯಾಂಕ- ನಿಕ್ ಡಿವೋರ್ಸ್; ಏನಿದು ಸುದ್ದಿ?

By Web Desk  |  First Published Mar 30, 2019, 12:59 PM IST

ಇತ್ತೀಚಿಗಷ್ಟೇ ಮದುವೆಯಾಗಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟಿರುವ ಪ್ರಿಯಾಂಕ- ನಿಕ್ ನಡುವೆ ಭಿನ್ನಾಭಿಪ್ರಾಯ ಬಂದಿದೆ. ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ನಿಜನಾ ಈ ಸುದ್ಧಿ? ಏನಿದರ ಸತ್ಯಾಸತ್ಯತೆ? 


ಬೆಂಗಳೂರು (ಮಾ. 30): ಪ್ರಿಯಾಂಕ ಚೋಪ್ರಾ- ನಿಕ್ ಜೋನಸ್ ದಾಂಪತ್ಯದಲ್ಲಿ ಬಿರುಕು ಮೂಡಿದೆ! ಇಬ್ಬರೂ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನುವ ಸುದ್ಧಿ ಹರಿದಾಡುತ್ತಿದೆ.  

ಪ್ರಿಯಾಂಕ ಮನೆಯಲ್ಲಿ ದಿನನಿತ್ಯ ಜಗಳ ಸಾಮಾನ್ಯವಾಗಿ ಬಿಟ್ಟಿದೆ. ಚಿಕ್ಕಪುಟ್ಟ ವಿಚಾರಕ್ಕೂ ಕಿತ್ತಾಡಿಕೊಳ್ಳುವುದು ಹೆಚ್ಚಾಗಿದೆ. ಇಬ್ಬರೂ ಜೊತೆಯಲ್ಲಿ ಹೆಚ್ಚಿನ ಸಮಯ ಕಳೆಯಲಾಗುತ್ತಿಲ್ಲ. ಪ್ರಿಯಾಂಕ ತಾಳ್ಮೆ ಕಳೆದುಕೊಂಡು ವರ್ತಿಸುವುದು, ಎಲ್ಲವೂ ತನ್ನ ಮೂಗಿನ ನೇರಕ್ಕೆ ಆಗಬೇಕೆನ್ನುವ ಹಠ ಇಬ್ಬರ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. 

Tap to resize

Latest Videos

undefined

 

 
 
 
 
 
 
 
 
 
 
 
 
 

To live for days like this. ❤️ @nickjonas #boatlife

A post shared by Priyanka Chopra Jonas (@priyankachopra) on Mar 27, 2019 at 4:38pm PDT

ಪ್ರಿಯಾಂಕ ತುಂಬಾ ಕೂಲಾಗಿರೋ ಹುಡುಗಿ. ಮದುವೆಯ ನಂತರ ಮನೆಯನ್ನು ಸಂಭಾಳಿಸಿಕೊಂಡು ಹೋಗುತ್ತಾಳೆ ಎಂದು ನಿಕ್ ಭಾವಿಸಿದ್ದರು. ಆದರೆ ಇದು ಸುಳ್ಳಾಗಿದೆ. ಪ್ರಿಯಾಂಕ ಎಲ್ಲವೂ ತಾನು ಹೇಳಿದಂತೆ ಆಗಬೇಕೆಂದು ಹಠ ಹಿಡಿಯುವುದು ಜಾಸ್ತಿಯಾಗಿರುವುದರಿಂದ ಮನೆಯಲ್ಲಿ ಕಿರಿಕಿರಿ ಶುರುವಾಗಿದೆ ಎಂದು ಹೇಳಲಾಗಿದೆ. 

ಆದರೆ ಈ ಸುದ್ಧಿಯನ್ನು ಪ್ರಿಯಾಂಕ ಆಪ್ತರು ತಳ್ಳಿ ಹಾಕಿದ್ದಾರೆ. ಇಬ್ಬರ ನಡುವೆ ಯಾವ ಭಿನ್ನಾಭಿಪ್ರಾಯವೂ ಇಲ್ಲ. ಅವರು ಚೆನ್ನಾಗಿದ್ದಾರೆ. ಈ ರೀತಿ ಸುದ್ಧಿ ಹರಿದಾಡುತ್ತಿರುವುದು ಇದೇ ಮೊದಲಲ್ಲ ಎಂದಿದ್ದಾರೆ. 

ಸದ್ಯ ನಿಕ್-ಪ್ರಿಯಾಂಕ ಲಾಸ್ ಏಂಜಲೀಸ್ ನಲ್ಲಿದ್ದಾರೆ. ನಿಕ್ ಜುಮಂಜಿ ಎನ್ನುವ ಫಿಲ್ಮ್ ನಲ್ಲಿ ಬ್ಯುಸಿಯಾಗಿದ್ದರೆ, ಪ್ರಿಯಾಂಕ ನಿಕ್ ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿದ್ದಾರೆ.

 

click me!