
ಮುಂಬೈ (ಫೆ.04): ಭಾರತದ ಮೋಸ್ಟ್ ವಾಂಟೆಡ್ ಬ್ಯಾಚುಲರ್ ಎಂದರೆ ಬಾಲಿವುಡ್ ನಟ ಸಲ್ಮಾನ್ ಖಾನ್ ಎಂದು ಯಾರು ಬೇಕಾದರೂ ಹೇಳುತ್ತಾರೆ. ಆದರೆ, ಸಲ್ಮಾನ್ ಖಾನ್‌ಗೆ ಮದುವೆಯಾಗಲು ಭಾರತದಲ್ಲಿ ಒಂದೇ ಒಂದು ಹುಡುಗಿ ಸಿಗಲಿಲ್ಲವಾ? ತನಗಿಂತ 31 ವರ್ಷ ಚಿಕ್ಕವಳಾದ ಪಾಕಿಸ್ತಾನದ ನಟಿಯನ್ನು ಮದುವೆಯಾಗಲು ಹೇಗೆ ಒಪ್ಪಿಕೊಂಡರು ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.
ಹೌದು, ನಟ ಸಲ್ಮಾನ್ ಖಾನ್‌ಗೆ ಬಾಲಿವುಡ್‌ನಲ್ಲಿ ಫಿದಾ ಆಗದ ನಾಯಕಿಯರೇ ಇರಲಿಲ್ಲ. ಸುಮಾರು 50 ವರ್ಷವಾಗಿದ್ದರೂ ಸಲ್ಮಾನ್ ಖಾನ್ ಮದುವೆಯಾಗಲು ಹುಡುಗಿಯರು ಕ್ಯೂ ನಿಲ್ಲುತ್ತಿದ್ದರು. ಇದೀಗ ಸಲ್ಮಾನ್ ಖಾನ್‌ಗೆ 59 ವರ್ಷ ವಯಸ್ಸಾಗಿದ್ದು, ಈಗಲೂ ಭಾರತದ ಸಾವಿರಾರು ಸುಂದರಿಯರು ಸಲ್ಮಾನ್ ಖಾನ್ ಮದುವೆಯಾಗಲು ಕ್ಯೂ ನಿಲ್ಲುತ್ತಾರೆ. ಆದರೆ, ಇದೀಗ ಭಾರತದ ಎಲ್ಲ ಹುಡುಗಿಯರನ್ನು ಬಿಟ್ಟು ಸಲ್ಮಾನ್ ಖಾನ್ ತನಗಿಂತ 31 ವರ್ಷ ಚಿಕ್ಕ ವಯಸ್ಸಿನ ಪಾಕಿಸ್ತಾನದ ನಟಿಯನ್ನು ಮದುವೆಯಾಗಲು ಮುಂದಾಗಿದ್ದಾರಂತೆ. ಈ ಬಗ್ಗೆ ಸ್ವತಃ ಬಾಲಿವುಡ್ ನಟಿ ರಾಖಿ ಸಾವಂತ್ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ, ಪಾಕಿಸ್ತಾನದ 28 ವರ್ಷದ ನಟಿ ಯಾರೆಂದು ಫೋಟೋ ಹಾಗೂ ವಿಡಿಯೋ ಸಮೇತ ನಟಿಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ.
ರಾಖಿ ಸಾವಂತ್ ಸಲ್ಮಾನ್ ಖಾನ್‌ಗೆ ಮದುವೆ ಮಾಡಿಸಲು ಮುಂದಾಗಿರುವ ಪಾಕಿಸ್ತಾನಿ ನಟಿಯ ಹೆಸರು ಹಾನಿಯಾ ಅಮೀರ್. ಈ ನಟಿ ಹಾನಿಯಾ ಸಲ್ಮಾನ್ ಖಾನ್‌ಗಿಂತ 31 ವರ್ಷ ಚಿಕ್ಕವರು. ಆದರೂ ರಾಖಿ ವೈರಲ್ ವಿಡಿಯೋದಲ್ಲಿ 28 ವರ್ಷದ ಈ ನಟಿಯನ್ನು ತನ್ನ ಭಾಬಿ (ಅತ್ತಿಗೆ) ಎಂದು ಹೇಳುತ್ತಿದ್ದಾರೆ. ರಾಖಿ ವೈರಲ್ ವಿಡಿಯೋದಲ್ಲಿ ಪಾಕಿಸ್ತಾನದ ಜರ್ಸಿ ಧರಿಸಿ, 'ಸಲ್ಮಾನ್ ಭಾಯಿ, ನಾನು ನಿಮಗಾಗಿ ಅತ್ತಿಗೆಯನ್ನು ಆಯ್ಕೆ ಮಾಡಿದ್ದೇನೆ. ಇವಳೇ ನೋಡಿ ಹಾನಿಯಾ. ಈಗ ನೀವು ಹಾನಿಯಾರನ್ನೇ ಮದುವೆ ಆಗುತ್ತೀರಿ. ನಿಮಗೆ ಎಷ್ಟು ಗೆಳತಿಯರು ಇರಬಹುದು, ಆದರೆ ಹಾನಿಯಾ ಹೆಂಡತಿಯಾಗಲು ಸಾಧ್ಯವಿಲ್ಲವೇ? ಸಲ್ಮಾನ್ ನನ್ನ ಸಹೋದರ ಮತ್ತು ಹಾನಿಯಾ ಪಾಕಿಸ್ತಾನದಿಂದ ನನ್ನ ಅತ್ತಿಗೆ' ಎಂದು ತೋರಿಸಿದ್ದಾರೆ.
ಇದನ್ನೂ ಓದಿ: ವಿಷ್ಣು ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದು ಅಂಬಿ ಹೇಳಿದ್ದು ಒಂದೇ ಒಂದು ಮಾತು!
ರಾಖಿ ಸಾವಂತ್ ಅವರ ವಿಡಿಯೋಗೆ ತರಹೇವಾರಿ ಕಾಮೆಂಟ್‌ಗಳು ಬಂದಿವೆ. 'ರಾಖಿಯ ವೈರಲ್ ವಿಡಿಯೋ ನೋಡಿದ ನಂತರ ಓರ್ವ ನೆಟ್ಟಿಗ 'ಇವಳು ಮೆಂಟಲ್' ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, 'ಇವಳು ಯಾವ ರೀತಿಯ ಮಾದಕ ವಸ್ತು ಸೇವಿಸುತ್ತಾಳೋ ಗೊತ್ತಿಲ್ಲ' ಎಂದಿದ್ದಾರೆ. ಮತ್ತೊಬ್ಬ ಬಳಕೆದಾರ, 'ಆಂಟಿ ಏನು ಮಾತನಾಡುತ್ತಿದ್ದಾಳೆ' ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರ, 'ಇವಳನ್ನು ಯಾರಾದರೂ ಮಾನಸಿಕ ಆಸ್ಪತ್ರೆಗೆ ತೋರಿಸಿ' ಎಂದು ಕಾಮೆಂಟ್ ಮಾಡಿದ್ದಾರೆ.
ಪಾಕಿಸ್ತಾನಿ ನಟಿ ಹಾನಿಯಾ ಅಮೀರ್ ಯಾರು?
ಹಾನಿಯಾ ಅಮೀರ್ ಪಾಕಿಸ್ತಾನದ ಕಿರುತೆರೆ ಮತ್ತು ಚಲನಚಿತ್ರ ನಟಿ. ಅವರು 2017ರಲ್ಲಿ 'ತಿತ್ಲಿ' ಕಾರ್ಯಕ್ರಮದ ಮೂಲಕ ಟಿವಿ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅವರು ಪಾಕಿಸ್ತಾನದಲ್ಲಿ 'ಅನಾ', 'ನಾ ಮಾಲೂಮ್ ಅಫ್ರಾಡ್ 2', 'ಪರ್ವೇಜ್ ಹೇ ಜುನೂನ್', 'ಮೇರೆ ಹಮ್ಸಫರ್' ಮತ್ತು 'ಕಭಿ ಮೈ ಕಭಿ ತುಮ್' ಮುಂತಾದ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಮಧ್ಯರಾತ್ರಿ ಪಾರ್ಟಿ ಮಾಡೋಕೆ ಗ್ಲಾಸ್ ಇಲ್ಲ ಅಂತ ಬಾತ್‌ರೂಮ್‌ನಲ್ಲಿದ್ದ ಬಕೆಟ್ ಚೊಂಬು ಬಳಸಿದ ಸ್ಟಾರ್ ನಟರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.