ಓಂಗೆ ಮೊದಲ ಆಯ್ಕೆಯಾಗಿರಲಿಲ್ಲ ಪ್ರೇಮಾ? ಉಪೇಂದ್ರ ಆಯ್ಕೆ ಯಾರಾಗಿದ್ರು? ಮೂವರು ನಟಿಯರು ಬಿಟ್ಟಿದ್ಯಾಕೆ ಸಿನಿಮಾ?

Published : Mar 04, 2025, 01:08 PM ISTUpdated : Mar 04, 2025, 01:13 PM IST
ಓಂಗೆ ಮೊದಲ ಆಯ್ಕೆಯಾಗಿರಲಿಲ್ಲ ಪ್ರೇಮಾ? ಉಪೇಂದ್ರ ಆಯ್ಕೆ ಯಾರಾಗಿದ್ರು? ಮೂವರು ನಟಿಯರು ಬಿಟ್ಟಿದ್ಯಾಕೆ ಸಿನಿಮಾ?

ಸಾರಾಂಶ

Kannada Cinema OM: 1995ರ ಸೂಪರ್ ಹಿಟ್ ಸಿನಿಮಾ ಓಂಗೆ ಪ್ರೇಮಾ ಮೊದಲ ಆಯ್ಕೆಯಾಗಿರಲಿಲ್ಲ. ಉಪೇಂದ್ರ ಬೇರೆ ನಟಿಯನ್ನು ಆಯ್ಕೆ ಮಾಡಲು ಯೋಜಿಸಿದ್ದರು, ಆದರೆ ಕೊನೆಗೆ ಪ್ರೇಮಾ ಆಯ್ಕೆಯಾದರು.

Actress Prema: 1995ರ ಸೂಪರ್ ಹಿಟ್ ಸಿನಿಮಾ ಓಂ ಇಂದಿಗೂ ಚಿತ್ರಮಂದಿರಗಳಿಗೆ ಬಂದ್ರೆ ಹೌಸ್‌ಫುಲ್ ಪ್ರದರ್ಶನ ಕಾಣುವ ಸಾಮಾರ್ಥ್ಯವನ್ನು ಹೊಂದಿದೆ. ಶಿವರಾಜ್‌ಕುಮಾರ್ ಮತ್ತು ಪ್ರೇಮಾ ಜೋಡಿ, ಉಪೇಂದ್ರ ಅವರ ನಿರ್ದೇಶನ ಓಂ ಸಿನಿಮಾವನ್ನು ಸೂಪರ್ ಹಿಟ್ ಆಗಿತ್ತು. ಆಕ್ಷನ್ ಆಧಾರಿತ ಚಿತ್ರ ಶಿವರಾಜ್‌ಕುಮಾರ್‌ ಅವರಿಗೆ ಹೊಸ ಇಮೇಜ್ ನೀಡಿತ್ತು. ಇನ್ನು ಎರಡನೇ ಸಿನಿಮಾದಲ್ಲಿಯೇ ಪ್ರೇಮಾ ಅವರಿಗೆ ಸ್ಟಾರ್ ಪಟ್ಟವನ್ನು ಓಂ ನೀಡಿತ್ತು. ಚಿತ್ರ ಬಿಡುಗಡೆಯಾಗಿ 30 ವರ್ಷ ಕಳೆದರೂ ಇಂದಿಗೂ ಸಿನಿಮಾದ ತಾಜಾತಾನ ಮಾತ್ರ ಹಾಗೆಯೇ ಉಳಿದುಕೊಂಡಿದೆ. ಆದ್ರೆ ಓಂ ಚಿತ್ರಕ್ಕೆ ಮೊದಲ ಆಯ್ಕೆ ಪ್ರೇಮಾ ಆಗಿರಲಿಲ್ಲ.  ಉಪೇಂದ್ರ ಈ ಸಿನಿಮಾಗೆ ಬೇರೆ ನಟಿಯನ್ನು ಆಯ್ಕೆ ಮಾಡುವ ಬಗ್ಗೆ ಪ್ಲಾನ್ ಮಾಡಿಕೊಂಡಿದ್ದರಂತೆ. ಆದ್ರೆ ಅಂತಿಮವಾಗಿ ಪ್ರೇಮಾ ಸಿನಿಮಾಗೆ ಆಯ್ಕೆಯಾಗಿದ್ದರು. ತಾನು ಓಂ ಚಿತ್ರಕ್ಕೆ ಮೊದಲ ಆಯ್ಕೆಯಾಗಿರಲಿಲ್ಲ ಎಂದು ಸ್ವತಃ ನಟಿ ಪ್ರೇಮಾ ಅವರೇ ಹೇಳಿಕೊಂಡಿದ್ದಾರೆ. 

ರಾಜ್‌ಕುಮಾರ್ ಅವರಿಗೆ ಚೆನ್ನ ಅನ್ನೋ ಬಾಡಿಗಾರ್ಡ್ ಇದ್ದರು. ಚೆನ್ ಅವರು ನಮ್ಮ ಚಾಮರಾಜಪೇಟೆಯ ಮನೆಗೆ ಬರುತ್ತಿದ್ದರು. ಆವಾಗ ಓಂ ಸಿನಿಮಾಗೆ ನಾಯಕಿಯಾಗಿ ನಿನ್ನನ್ನೇ ಹಾಕಿಸುವೆ ಎಂದು ಹೇಳುತ್ತಿದ್ದರು. ನನಗೆ ಆಗ ಅಷ್ಟು ಸಿನಿಮಾ ಬಗ್ಗೆ ಗೊತ್ತಿರಲಿಲ್ಲ. ಏನದು ಓಂ ಅಂತ ನಾನು ಸುಮ್ಮನೇ ಇದ್ದೆ. ಡಾ.ರಾಜ್‌ಕುಮಾರ್ ವಾಕಿಂಗ್ ಹೋಗುವಾಗ ಪ್ರೇಮಾ ಅನ್ನೋ ಹುಡುಗಿ ಇದ್ದಾಳೆ. ಸವ್ಯಸಾಚಿ ಸಿನಿಮಾ ಮಾಡಿದ್ದಾಳೆ ಎಂದು ಚೆನ್ನ ಹೇಳುತ್ತಿದ್ದರಂತೆ. ಪ್ರತಿದಿನ ಚೆನ್ನ ಅವರು ನನಗೆ ಬಂದು ಹೇಳುತ್ತಿದ್ದರು. ಒಮ್ಮೆ ಸವ್ಯಸಾಚಿಯ ಹಾಡನ್ನು ಅಪ್ಪಾಜಿ ನೋಡಿದ್ದರು. ಆಗ ರಾಜ್‌ಕುಮಾರ್‌ ಅವರಿಗೆ ನಾನು ಇಷ್ಟವಾಗಿದ್ದೆ ಎಂದು ಪ್ರೇಮಾ ಹೇಳಿದ್ದಾರೆ. 

ಮನೆಯಲ್ಲಿ ಓಂ ಸಿನಿಮಾಗೆ ನಾಯಕಿ ಯಾರು ಅಂತ ಮುರುಳಿ ಸರ್, ಉಪೇಂದ್ರ ಸೇರಿದಂತೆ ಎಲ್ಲರೂ ಡಿಸ್ಕಸ್ ಮಾಡುತ್ತಿದ್ದರಂತೆ. ಆಗ ಪಾರ್ವತಮ್ಮ ಅವರು ಸುಧಾರಾಣಿಯನ್ನು ಹಾಕಿಕೊಳ್ಳಿ ಎಂದು ಸಲಹೆ ನೀಡಿದರಂತೆ. ಆಗ ಮುರುಳಿ ಅವರು ಒಂದು ಕ್ಷಣ ಶಾಕ್ ಆಗಿದ್ದರಂತೆ. ಮುರುಳಿ ಅವರಿಗೆ ಚಾಮರಾಜಪೇಟೆಯ ಹುಡುಗಿಯೇ ಬೇಕಾಗಿದ್ದರು. ಜೂಹಿ ಚಾವ್ಲಾ ಅವರನ್ನು ಓಂ ಸಿನಿಮಾಗೆ ತರಬೇಕು ಅನ್ನೋದು ಉಪೇಂದ್ರ ಆಸೆಯಾಗಿತ್ತು. ಇನ್ನು ಸೌಂದರ್ಯಾ 10 ದಿನಕ್ಕೆ ಒಂದರ ಹಾಗೆ ಡೇಟ್ ಕೊಡ್ತೀನಿ ಅಂತ ಹೇಳಿದ್ದರಂತೆ. ಇನ್ನು ಜೂಹಿ ಚಾವ್ಲಾ ಅವರದ್ದು ಏನು ಅಂತ ಗೊತ್ತಿಲ್ಲ. ಆದ್ರೆ ಓಂ ಸಿನಿಮಾಗೆ ಫ್ರೀಯಾಗಿ ಡೇಟ್ ಕೊಡುವ ನಟಿ ಬೇಕಿತ್ತು. ನಾನು ಸವ್ಯಸಾಚಿ ಸಿನಿಮಾ ಮಾಡಿ ಬೇರಾವ ಆಫರ್ ಇರಲಿಲ್ಲ. ನನ್ನ ಡೇಟ್ ಎಲ್ಲಾ ಫ್ರೀ ಆಗಿತ್ತು. ಯಾವಾಗ ಏನು ಸೀನ್ ಬರುತ್ತೆ ಅಂತ ಗೊತ್ತಿರಲಿಲ್ಲ. ಹಾಗಾಗಿ ಚಿತ್ರತಂಡ ಡೇಟ್ ಫ್ರಿಯಾಗಿರುವ ನಾಯಕಿಯನ್ನ ಹುಡುಕುತ್ತಿತ್ತು. 

ಇದನ್ನೂ ಓದಿ: ಸಿನಿಮಾದಿಂದ ಸೀರಿಯಲ್​ಗೆ ಬಂದ್ರೂ 45 ವರ್ಷದಿಂದ ಸುಧಾರಾಣಿ ಬೆನ್ನು ಬಿಡದ 'ಮಾವ': ವಿಡಿಯೋ ವೈರಲ್

ಈ ಸಿನಿಮಾದ ಚರ್ಚೆ ವೇಳೆ ಆಗಮಿಸಿದ ಡಾ.ರಾಜ್‌ಕುಮಾರ್ ಓಂ ಚಿತ್ರಕ್ಕೆ ಪ್ರೇಮಾಳನ್ನು ಹಾಕಿಕೊಳ್ಳುವಂತೆ ಹೇಳಿದರಂತೆ. ಹಾಗಾಗಿ ಅಂತಿಮವಾಗಿ ಓಂ ಸಿನಿಮಾಗೆ ಪ್ರೇಮಾ ನಾಯಕಿಯಾದರು. ಇಂದು ಓಂ ಸಿನಿಮಾ ಚಂದವನದಲ್ಲಿ ಇತಿಹಾಸ ಬರೆದಿದೆ. ಸವ್ಯಸಾಚಿ ಸಿನಿಮಾ ನೋಡಿದ ಬಳಿಕ 10 ವರ್ಷದ ಹಿಂದೆ ಆಗಿದ್ರೆ ಪ್ರೇಮಾ ತಮ್ಮ ಸಿನಿಮಾಗೆ ನಾಯಕಿಯಾಗಿರುತ್ತಿದ್ದರು ಎಂದು ಮೆಚ್ಚುಗೆ ಸೂಚಿಸಿದ್ದರಂತೆ ಎಂದು ಪ್ರೇಮಾ ಸಂದರ್ಶನದಲ್ಲಿ ಹೇಳಿದ್ದಾರೆ. 

ಇನ್ನು ಸುಧಾರಾಣಿ ಅವರು ಓಂ ಸಿನಿಮಾ ತಪ್ಪಿದ್ದರ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಅಂದು ನಾನು ತಮಿಳು ಸೇರಿದಂತೆ ಮೂರ್ನಾಲ್ಕು ಸಿನಿಮಾಗಳಲ್ಲಿ ಆಕ್ಟ್ ಮಾಡುತ್ತಿದ್ದೆ. ಹಾಗಾಗಿ ಏನೇ ಮಾಡಿದ್ರೂ ಡೇಟ್ ಹೊಂದಾಣಿಕೆಯಾಗದ ಕಾರಣ ಓಂ ಸಿನಿಮಾ ಮಾಡಲು ಆಗಲಿಲ್ಲ.  ಒಮ್ಮೆ ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ವಿಷ್ಣುವರ್ಧನ್ ಅವರ ಜೊತೆಗಿನ ಹಾಲುಂಡ ತವರು ಸಿನಿಮಾ ತಪ್ಪಿತ್ತು ಎಂದು ಸುಧಾರಾಣಿ ಹೇಳಿದ್ದರು.

ಇದನ್ನೂ ಓದಿ: ಪಾರ್ವತಮ್ಮ ಎಷ್ಟೇ ಪ್ರಯತ್ನಿಸಿದ್ರೂ ಮಗ ಶಿವರಾಜ್‌ಕುಮಾರ್ ಸಿನಿಮಾಗೆ ಈ ನಟಿಯ ಡೇಟ್ ಸಿಗಲಿಲ್ಲ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
ಶಾರುಖ್ ಜೊತೆ ಡಾನ್ಸ್ ನಿರಾಕರಿಸಿದ ವಧು, ಅಸಮಾಧಾನಗೊಂಡ ಫ್ಯಾನ್ಸ್