7 ಸಿನಿಮಾಗಳು ನೇರವಾಗಿ ಡಿಜಿಟಲ್‌ಗೆ; ಪ್ರೀಮಿಯರ್ ಮಾಡಲಿದೆ ಅಮೆಜಾನ್ ಪ್ರೈಮ್

By Suvarna NewsFirst Published May 17, 2020, 10:04 PM IST
Highlights

ಏಳು ಅತ್ಯಂತ ನಿರೀಕ್ಷಿತ  ಭಾರತೀಯ ಚಲನಚಿತ್ರಗಳನ್ನು ನೇರವಾಗಿ ಡಿಜಿಟಲ್‌ಗೆ ಲಗ್ಗೆ ಇಡುತ್ತಿದೆ.  ಜಾಗತಿಕವಾಗಿ ಅಮೆಜಾನ್ ಪ್ರೈಮ್ ವೀಡಿಯೋ ಪ್ರೀಮಿಯರ್ ಮಾಡಲಿದೆ. ಈ ಕುರಿತು ವಿವರ ಇಲ್ಲಿದೆ. 

ನವದೆಹಲಿ(ಮೇ.17):  ಅಮಿತಾಭ್ ಬಚ್ಚನ್  ಮತ್ತು ಆಯುಷ್ಮಾನ್ ಖುರಾನಾ ನಟನೆಯ ಶೂಜಿತ್ ಸಿರ್ಕಾರ್ ಅವರ ಗುಲಾಬೊ ಸಿತಾಬೊ; ವಿದ್ಯಾಬಾಲನ್ ನಾಯಕಿಯಾಗಿ ನಟಿಸಿರುವ ಶಕುಂತಲಾ ದೇವಿ, ಆರ್. ಜ್ಯೋತಿಕಾ ನಟನೆಯ ಪೆನ್‍ಮಗಳ್ ವಂದಾಳ್‍ನಂತಹ ಶೀರ್ಷಿಕೆಗಳೊಂದಿಗೆ 5 ಭಾರತೀಯ ಭಾಷೆಗಳಲ್ಲಿ ಅನೇಕ ಚಲನಚಿತ್ರಗಳನ್ನು ಅಮೆಜಾನ್ ಪ್ರೈಮ್ ವೀಡಿಯೋ ಮೇ ಹಾಗು ಆಗಸ್ಟ್ ತಿಂಗಳ ನಡುವೆ ಪ್ರೀಮಿಯರ್ ಮಾಡಲಿದೆ.

ಪ್ರೈಂ ನೀಡುತ್ತದೆ ಅದ್ಭುತ ಮೌಲ್ಯ, ಇತ್ತೀಚಿನ ಮತ್ತು ಪ್ರತ್ಯೇಕ ಚಲನಚಿತ್ರ, ಟಿವಿ ಕಾರ್ಯಕ್ರಮ, ಸ್ಟಾಂಡಪ್ ಹಾಸ್ಯ, ಅಮೆಜಾನ್ ಒರಿಜಿನಲ್ಸ್, ಜಾಹೀರಾತು ರಹಿತ ಸಂಗೀತ ಪ್ರೈಂ ಮ್ಯೂಸಿಕ್ ಮೂಲಕ, ಗಳ ಅನಿಯಮಿತ ಸ್ಟ್ರೀಮಿಂಗ್, ಭಾರತದ ಅತಿದೊಡ್ಡ ಪ್ರಮಾಣದ ವಸ್ತುಗಳ ಉಚಿತ ಕ್ಷಿಪ್ರ ಬಟವಾಡೆ, ಉನ್ನತ ಡೀಲ್ ಗಳಿಗೆ ಪ್ರವೇಶ, ಪ್ರೈಂ ರೀಡಿಂಗ್ ನೊಂದಿಗೆ ಅನಿಯಮಿತ ಪುಸ್ತಕಗಳು, ಎಲ್ಲಾ ರೂ. 129 ಪ್ರತಿ ತಿಂಗಳಿಗೆ

ಅಮಿತಾಭ್ ಬಚ್ಚನ್(ಬ್ಲ್ಯಾಕ್, ಪೀಕು) ಮತ್ತು ಆಯುಷ್ಮಾನ್ ಖುರಾನಾ(ಶುಭ್‍ಮಂಗಲ್ ಜ್ಯಾದಾ ಸಾವ್‍ಧಾನ್, ಅಂಧಾಧುನ್) ನಟನೆಯ ಶೂಜಿತ್ ಸಿರ್ಕಾರ್ ಅವರ ಗುಲಾಬೋ ಸಿತಾಬೊದ ಮುಂಬರುತ್ತಿರುವ ಪ್ರೀಮಿಯರ್‍ನ ಘೋಷಣೆಯ ಅನುಸರಣೆಯಲ್ಲಿ, ಅಮೆಜಾನ್ ಪ್ರೈಮ್ ವೀಡಿಯೋ ಇಂದು ಸ್ಟ್ರೀಮಿಂಗ್ ಸೇವೆಯಲ್ಲಿ ನೇರವಾಗಿ ಪ್ರೀಮಿಯರ್ ಮಾಡಲಾಗುವ ಇನ್ನೂ ಆರು ಅತ್ಯಂತ ನಿರೀಕ್ಷಿತ ಭಾರತೀಯ ಚಲನಚಿತ್ರಗಳ ಪ್ರೀಮಿಯರ್‍ಅನ್ನು ಘೋಷಿಸಿತು. ಐದು ಭಾರತೀಯ ಭಾಷೆಗಳಾದ್ಯಂತ ಇರುವ ಸೇವೆಗೆ ನೇರವಾದ ಲೈನ್ ಅಪ್ ಅಂಶಗಳಿರುವ ಈ ಹೆಚ್ಚುವರಿ ಬಿಡುಗಡೆಗಳು, ಅನು ಮೆನನ್ ಅವರ ವಿದ್ಯಾಬಾಲನ್(ಡರ್ಟಿ  ಪಿಕ್ಚರ್, ಕಹಾನಿ) ನಟಿಸಿರುವ ಶಕುಂತಲಾ ದೇವಿ; ಜ್ಯೋತಿಕಾ ನಟನೆಯ ಪೆÇನ್‍ಮಗಳ್ ವಂದಾಳ್(ಚಂದ್ರಮುಖಿ) ಚಿತ್ರಗಳ ಜೊತೆಗೆ, ಕೀರ್ತಿ ಸುರೇಶ್ (ಮಹಾನಟಿ) ನಟನೆಯ ಪೆಂಗ್ವಿನ್(ತಮಿಳು ಹಾಗು ತೆಲುಗು), ಸೂಫಿಯುಮ್ ಸುಜಾತೆಯುಮ್(ಮಲಯಾಳಮ್), ಲಾ (ಕನ್ನಡ) ಮತ್ತು ಫ್ರೆಂಚ್ ಬಿರಿಯಾನಿ(ಕನ್ನಡ)ಮುಂತಾದವನ್ನು ಒಳಗೊಂಡಿದೆ. ಈ ಚಲನಚಿತ್ರಗಳು ವಿಶೇಷವಾಗಿ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಮಾತ್ರ ಮುಂದಿನ ಮೂರು ತಿಂಗಳವರೆಗೆ ಪ್ರೀಮಿಯರ್ ಪ್ರದರ್ಶನ ಕಾಣಲಿದ್ದು, ವಿಶ್ವವ್ಯಾಪಿಯಾಗಿ 200 ದೇಶಗಳು ಹಾಗು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಲಭ್ಯವಾಗಲಿವೆ.

“ಪ್ರೈಮ್ ವೀಡಿಯೋದಲ್ಲಿ ನಾವು ಗ್ರಾಹಕರಿಗೆ ಏನು ಬೇಕು ಎಂಬುದನ್ನು ಆಲಿಸುತ್ತಲಿರುತ್ತೇವೆ ಮತ್ತು ಅಲ್ಲಿಂದ ಹಿಂದಕ್ಕೆ ಕಾರ್ಯನಿರ್ವಹಿಸುವುದರ ಮೇಲೆ ನಂಬಿಕೆ ಇರಿಸಿದ್ದೇವೆ. ಈ ನಂಬಿಕೆಯೇ ನಮ್ಮ ಇತ್ತೀಚಿನ ಕೊಡುಗೆಗಳ ಮೂಲವಾಗಿದೆ.” ಎಂದು ಹೇಳಿದರು, ಅಮೆಜಾನ್ ಪ್ರೈಮ್ ವೀಡಿಯೋ ಇಂಡಿಯಾದ ಕಂಟೆಂಟ್ ನಿರ್ದೇಶಕ ಹಾಗು ಮುಖ್ಯಸ್ಥ ವಿಜಯ್ ಸುಬ್ರಮಣ್ಯಮ್. ಕಳೆದ 2 ವರ್ಷಗಳಿಂದ, ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ವಿವಿಧ ಭಾಷೆಯ ಚಲನಚಿತ್ರಗಳನ್ನು ಕೆಲವೇ ವಾರಗಳೊಳಗೆ ನೋಡುವುದಕ್ಕೆ, ನಮ್ಮ ಗ್ರಾಹಕರಿಗೆ ಪ್ರೈಮ್ ವೀಡಿಯೋ ಆಯ್ಕೆಯ ಗಮ್ಯವಾಗಿದೆ. ನಾವು ಈಗ ಇದನ್ನು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಕೊಂಡೊಯ್ಯುತ್ತಿದ್ದೇವೆ. ಭಾರತದ ಏಳು ಅತ್ಯಂತ ನಿರೀಕ್ಷಿತ ಚಲನಚಿತ್ರಗಳು ವಿಶೇಷವಾಗಿ ಪ್ರೈಮ್ ವೀಡಿಯೋದಲ್ಲಿ ಪ್ರೀಮಿಯರ್ ಆಗುತ್ತಲಿದ್ದು ಗ್ರಾಹಕರ ಮನೆಬಾಗಿಲಿಗೆ ಸಿನಿಮೀಯ ಅನುಭವವನ್ನು ತರಲಿದೆ.”

“ಭಾರತೀಯ ಪ್ರೇಕ್ಷಕರು ಈ 7 ಅತ್ಯಂತ ನಿರೀಕ್ಷಿತ ಚಲನಚಿತ್ರಗಳ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದು ನಮ್ಮ ಗ್ರಾಹಕರಿಗಾಗಿ ಈ ಚಲನಚಿತ್ರಗಳನ್ನು ಈಗ ಅಮೆಜಾನ್ ಪ್ರೈಮ್ ವೀಡಿಯೋ ಪ್ರೀಮಿಯರ್ ಮಾಡುತ್ತಿರುವುದಕ್ಕೆ ನಮಗೆ ಅತ್ಯಂತ ಹರ್ಷವಾಗುತ್ತಿದೆ. ಗ್ರಾಹಕರು ಈಗ ತಮ್ಮ ಮನೆಯ ಆರಾಮ ಮತ್ತು ಸುರಕ್ಷತೆಯೊಳಗೆ ಹಾಗು ತಮ್ಮ ಆಯ್ಕೆಯ ಸ್ಕ್ರೀನ್ ಮೇಲೆ ಈ ಸಿನಿಮಾಗಳನ್ನು ನೋಡಿ ಆನಂದಿಸಬಹುದು. ಭಾರತದಲ್ಲಿ ಆಳವಾಗಿ ಹುದುಗಿರುವ ಪ್ರೈಮ್ ವೀಡಿಯೋ, 4000 ಪಟ್ಟಣಗಳು ಮತ್ತು ನಗರಗಳಲ್ಲಿನ ವೀಕ್ಷಕವೃಂದ, ಮತ್ತು 200ಕ್ಕಿಂತ ಹೆಚ್ಚಿನ ದೇಶಗಳು ಹಾಗು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ತನ್ನ ವಿಶ್ವವ್ಯಾಪಿ ತಲುಪುವಿಕೆಯೊಂದಿಗೆ ಈ ಚಲನಚಿತ್ರಗಳಿಗೆ ದೊಡ್ಡದಾದ ಜಾಗತಿಕ ಬಿಡುಗಡೆಯ ಹೆಜ್ಜೆಗುರುತು ನೀಡಲಿದೆ. ಈ ಉಪಕ್ರಮದ ಬಗ್ಗೆ ನಾವು ನಿಜವಾಗಿಯೂ ಕೌತುಕರಾಗಿದ್ದು ಈ ಕೊಡುಗೆಯೊಂದಿಗೆ ನಮ್ಮ ಪ್ರೈಮ್ ಸದಸ್ಯರನ್ನು ಸಂತೋಷಪಡಿಸುತ್ತೇವೆ ಎಂಬ ವಿಶ್ವಾಸ ಹೊಂದಿದ್ದೇವೆ.” ಎಂದು ಹೇಳಿದರು, ಅಮೆಜಾನ್ ಪ್ರೈಮ್ ವೀಡಿಯೋ ಇಂಡಿಯಾದ ನಿರ್ದೇಶಕ ಹಾಗು ಕಂಟ್ರಿ ಜನರಲ್ ಮ್ಯಾನೇಜರ್, ಗೌರವ್ ಗಾಂಧಿ.

ಅಮೆಜಾನ್ ಪ್ರೈಮ್ ವೀಡಿಯೋದ ಸೇವೆಗೆ ನೇರವಾಗಿ ವೇಳಾಪಟ್ಟಿ

ಪೆನ್‍ಮಗಳ್ ವಂದಾಳ್ (ತಮಿಳು), ಮೇ 29ರಿಂದ, ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ
ಜ್ಯೋತಿಕಾ, ಪಾರ್ಥಿಬನ್, ಭಾಗ್ಯರಾಜ್, ಪ್ರತಾಪ್ ಪೆತೆನ್, ಮತ್ತು ಪಾಂಡಿರಾಜ್ ನಟನೆಯ ಪೆನ್‍ಮಗಳ್ ವಂದಾಳ್, ಕಾನೂನು ವಿಷಯವಿರುವ ಚಿತ್ರ. ಜೆ.ಜೆ. ಫ್ರೆಡರಿಕ್ ಇದನ್ನು ಬರೆದು ನಿರ್ದೇಶಿಸಿದ್ದಾರೆ. ಸೂರ್ಯ ಮತ್ತು ರಾಜಶೇಖರ್ ಕರ್ಪೂರಸುಂದರಪಾಂಡಿಯನ್ ಇದರ ನಿರ್ಮಾಪಕರು.

ಗುಲಾಬೊ ಸಿತಾಬಿ (ಹಿಂದಿ), ಜೂನ್ 12ರಿಂದ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ
ಅಮಿತಾಭ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ನಟನೆಯ ಗುಲಾಬೊ ಸಿತಾಬೊ, ಒಬ್ಬ ಸಾಮಾನ್ಯ ಮನುಷ್ಯನ ದಿನನಿತ್ಯದ ಜಂಜಾಟಗಳನ್ನು ತೋರಿಸುವ ಚಮತ್ಕಾರೀ ಕೌಟುಂಬಿಕ ಹಾಸ್ಯಚಿತ್ರ. ಈ ಚಿತ್ರಕಥೆಯನ್ನು ಜೂಹಿ ಚತುರ್ವೇದಿ ಬರೆದಿದ್ದು, ಶೂಜಿತ್ ಸಿರ್ಕಾರ್ ನಿರ್ದೇಶಿಸಿದ್ದರೆ, ರಾನ್ನೀ ಲಹಿರಿ ಹಾಗು ಶೀಲ್ ಕುಮಾರ್ ನಿರ್ಮಾಣ ಮಾಡಿದ್ದಾರೆ.

ಲಾ (ಕನ್ನಡ), ಜೂನ್ 26ರಿಂದ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ
ರಾಗಿಣಿ ಚಂದ್ರನ್, ಸಿರಿ ಪ್ರಹ್ಲಾದ್, ಮತ್ತು ಹಿರಿಯ ನಟ ಮುಖ್ಯಮಂತ್ರಿ ಚಂದ್ರು ನಟನೆಯ ಲಾ ಚಿತ್ರದ ಕಥೆಯನ್ನು ರಘು ಸಮರ್ಥ್ ಬರೆದು ನಿರ್ದೇಶಿಸಿದ್ದಾರೆ. ಅಶ್ವಿನಿ ಮತ್ತು ಪುನೀತ್ ರಾಜ್‍ಕುಮಾರ್ ಇದರ ನಿರ್ಮಾಪಕರು.

ಪೆಂಗ್ವಿನ್ (ತಮಿಳು ಮತ್ತು ತೆಲುಗು), ಜುಲೈ 17ರಿಂದ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ
ಕೀರ್ತಿ ಸುರೇಶ್ ನಟನೆಯ ಪೆಂಗ್ವಿನ್‍ಅನ್ನು ಈಶ್ವರ್ ಕಾರ್ತಿಕ್ ಬರೆದು ನಿರ್ದೇಶಿಸಿದ್ದಾರೆ. ಸ್ಟೋನ್ ಬೆಂಚ್ ಫಿಲಮ್ಸ್ ಹಾಗು ಕಾರ್ತಿಕ್ ಸುಬ್ಬರಾಜ್ ಇದರ ನಿರ್ಮಾಣ ಮಾಡಿದ್ದಾರೆ.

ಫ್ರೆಂಚ್ ಬಿರಿಯಾನಿ (ಕನ್ನಡ), ಜುಲೈ 24ರಿಂದ ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ
ಫ್ರೆಂಚ್ ಬಿರಿಯಾನಿ ಡ್ಯಾನಿಶ್ ಸೇಟ್, ಸಾಲ್ ಯೂಸುಫ್ ಹಾಗು ಪಿತೋಬಶ್ ಮುಖ್ಯ ನಟನೆಯನ್ನು ಹೊಂದಿದೆ. ಅವಿನಾಶ್ ಬಳೇಕ್ಕಳ ಚಿತ್ರಕಥೆಯನ್ನು ಬರೆದಿದ್ದರೆ, ಪನ್ನಗ ಭರಣ ನಿರ್ದೇಶಿಸಿ, ಅಶ್ವಿನಿ ಮತ್ತು ಪುನೀತ್ ರಾಜ್‍ಕುಮಾರ್ ನಿರ್ಮಿಸಿದ್ದಾರೆ.

ಶಕುಂತಲಾದೇವಿ (ಹಿಂದಿ), ಬಿಡುಗಡೆ ದಿನಾಂಕ ಘೋಷಿಸಬೇಕಾಗಿದೆ
ಮುಖ್ಯಪಾತ್ರದಲ್ಲಿ ವಿದ್ಯಾಬಾಲನ್ ನಟಿಸಿರುವ ಶಕುಂತಲಾದೇವಿ, ಮಾನವ ಕಂಪ್ಯೂಟರ್ ಎಂದೇ ಸುಪ್ರಸಿದ್ಧವಾದ ಲೇಖಕಿ, ಗಣಿತಜ್ಞೆಯಾದ ಶಕುಂತಲಾದೇವಿಯವರ ಜೀವನ ಕುರಿತಾದ ಕಥೆಯಾಗಿದೆ. ನಯನಿಕಾ ಮೆಹ್ತಾನಿ ಮತ್ತು ಅನು ಮೆನನ್ ಬರೆದಿರುವ ಚಿತ್ರವನ್ನು ಅನುಮೆನನ್ ನಿರ್ದೇಶನ ಕೂಡ ಮಾಡಿದ್ದಾರೆ. ಅಬಂಡನ್ಶಿಯಾ ಎಂಟರ್‍ಟೇನ್ಮೆಂಟ್ ಪ್ರೈ ಲಿ., ಮತ್ತು ಸೋನಿ ಪಿಕ್ಚರ್ಸ್ ನೆಟ್‍ವರ್ಕ್ಸ್ ಇಂಡಿಯಾ ಇದರ ನಿರ್ಮಾತೃಗಳು.

ಸೂಫಿಯುಮ್ ಸುಜಾತೆಯುಮ್( ಮಲಯಾಳಮ್) ಬಿಡುಗಡೆ ದಿನಾಂಕ ಘೋಷಿಸಬೇಕಾಗಿದೆಅದಿತಿ ಹೈದರಿ ರಾವ್ ಮತ್ತು ಜಯಸೂರಿಯ ನಟನೆಯ ಸೂಫಿಯುಮ್ ಸುಜಾತೆಯುಮ್ ಕಥೆಯನ್ನು ನಾರಣಿಪುರ ಶಾನವಾಸ್ ಬರೆದು ನಿರ್ದೇಶಿಸಿದ್ದಾರೆ. ವಿಜಯ್ ಬಾಬು ಅವರ ಫ್ರೈಡೇ ಫಿಲಮ್ ಹೌಸ್ ಇದರ ನಿರ್ಮಾತೃ ಸಂಸ್ಥೆ.

ಈ ಹೊಸ ಬಿಡುಗಡೆಗಳು, ಪ್ರಶಸ್ತಿ ವಿಜೇತ ಅಮೆಜಾನ್ ರಿಜಿನಲ್ ಸರಣಿಯಾದ ದಿ ಫಾಮಿಲಿ ಮ್ಯಾನ್, ಮೋರ್ ಶಾಟ್ಸ್ ಪ್ಲೀಸ್!(ಸೀಸನ್1 ಮತ್ತು 2), ಇನ್ಸೈಡ್ ಎಡ್ಜ್, ಮತ್ತು  ಮೇಡ್ ಇನ್ ಹೆವೆನ್ ಮತ್ತು ಟಾಮ್ ಕ್ಲಾನ್ಸಿ ಅವರ ಜ್ಯಾಕ್ ರಿಯಾನ್, ದಿ ಬಾಯ್ಸ್, ಹಂಟರ್ಸ್, ಫ್ಲೀಬ್ಯಾಗ್, ಮತ್ತು ದಿ ಮಾರ್ವೆಲಸ್ ಮಿಸೆಸ್ ಮೈಸಲ್ ಒಳಗೊಂಡಂತೆ ಜಾಗತಿಕವಾಗಿ ಮೆಚ್ಚುಗೆ ಪಡೆದ ಹಾಗು ಪ್ರಶಸ್ತಿ ವಿಜೇತ ಜಾಗತಿಕ ಅಮೆಜಾನ್ ಒರಿಜಿನಲ್ ಸೀರೀಸ್ ಇರುವ ಪ್ರೈಮ್ ವೀಡಿಯೋ ಕ್ಯಾಟಲಾಗ್‍ನಲ್ಲಿರುವ ಸಾವಿರಾರು ಹಾಲಿವುಡ್ ಹಾಗು ಬಾಲಿವುಡ್ ಟಿವಿ ಶೋಗಳು ಹಾಗು ಚಲನಚಿತ್ರಗಳನ್ನು ಸೇರಿಕೊಳ್ಳಲಿದ್ದು ಇವೆಲ್ಲವೂ ಜಾಹೀರಾತು ರಹಿತ ವಿಶ್ವಮಟ್ಟದ ಗ್ರಾಹಕ ಅನುಭವದೊಂದಿಗೆ ಅಮೆಜಾನ್ ಪ್ರೈಮ್ ಸದಸ್ಯರಿಗೆ ಲಭ್ಯವಿದೆ. ಈ ಸೇವೆಯಲ್ಲಿ ಹಿಂದಿ, ಮರಾಠಿ, ಗುಜರಾತಿ, ತಮಿಳು, ತೆಲುಗು, ಕನ್ನಡ, ಮಲಯಾಳಂ, ಪಂಜಾಬಿ ಮತ್ತು ಬಂಗಾಲಿ ಕಾರ್ಯಕ್ರಮಗಳು ಲಭ್ಯವಿದೆ.

ಪ್ರೈಮ್ ಸದಸ್ಯರು, ಸ್ಮಾರ್ಟ್ ಟಿವಿ, ಮೊಬೈಲ್ ಉಪಕರಣಗಳು, ಫೈರ್ ಟಿವಿ, ಫೈರ್ ಟಿವಿ ಸ್ಟಿಕ್, ಫೈರ್ ಟ್ಯಾಬ್ಲೆಟ್, ಆ್ಯಪಲ್ ಟಿವಿ ಮತ್ತು ಮಲ್ಟಿಪಲ್ ಗೇಮಿಂಗ್ ಉಪಕರಣದಲ್ಲಿ  ಪ್ರೈಮ್ ವೀಡಿಯೋ ಆ್ಯಪ್‍ನಲ್ಲಿ ಯಾವುದೇ ಸಮಯದಲ್ಲಾದರೂ ಎಲ್ಲೇ ಆದರೂ ನೋಡಬಹುದು. ಪ್ರೈಮ್ ವೀಡಿಯೋ ಆ್ಯಪ್‍ನಲ್ಲಿ ಪ್ರೈಮ್ ಸದಸ್ಯರು ಪಾತಾಲ್ ಲೋಕ್‍ನ ಎಲ್ಲಾ ಎಪಿಸೋಡ್‍ಗಳನ್ನು ತಮ್ಮ ಮೊಬೈಲ್ ಉಪಕರಣಗಳು ಅಥವಾ ಟ್ಯಾಬ್ಲೆಟ್‍ಗಳಿಗೆ ಡೌನ್‍ಲೋಡ್ ಮಾಡಿಕೊಂಡು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆಫ್‍ಲೈನ್‍ನಲ್ಲಿ ವೀಕ್ಷಿಸಬಹುದು. ಪ್ರೈಮ್ ವೀಡಿಯೋ, ಭಾರತದಲ್ಲಿ ಪ್ರೈಮ್ ಸದಸ್ಯರಿಗೆ ರೂ.999 ವಾರ್ಷಿಕ ಅಥವಾ ರೂ. 129 ಮಾಸಿಕ ದರದಲ್ಲಿ ಲಭ್ಯವಿದೆ. ಹೊಸ ಗ್ರಾಹಕರು 30-ದಿನಗಳ ಉಚಿತ ಟ್ರಯಲ್‍ಗೆ ಚಂದಾ ಪಡೆದುಕೊಳ್ಳಬಹುದು.

click me!