ಎಸಿ ರೂಂನಲ್ಲಿ ಕುಳಿತು ಕಾರ್ಮಿಕರ ಬಗ್ಗೆ ಕಳವಳ ವ್ಯಕ್ತಪಡಿಸುವುದು ಸರಿಯಲ್ಲ: ಸೋನು ಸೂದ್!

By Suvarna News  |  First Published May 16, 2020, 5:56 PM IST

ಮಹಾರಾಷ್ಟ್ರದಲ್ಲಿ ಸಿಲುಕಿದ್ದ ಕನ್ನಡಿಗರನ್ನು ಕರ್ನಾಟಕಕ್ಕೆ ಕಳುಹಿಸಿಕೊಟ್ಟಿದ್ದ ಬಾಲಿವುಡ್ ನಟ ಸೋನು ಸೂದ್| ಕೊರೋನಾ ವಾರಿಯರ್ಸ್‌ಗೂ ಸಹಾಯ ಹಸ್ತ| ಕಾರ್ಮಿಕರನ್ನು ಮನುಷ್ರಂತೆ ಕಾಣಿ, ಅವರಿಗೂ ಗೌರವ ಕೊಡಿ ಎಂದ ಸೋನು| ಕಾರ್ಮಿಕರನ್ನು ಗೌರವಿಸದವರಿಗೆ ಮನುಷ್ಯರೆಂದು ಕರೆಸಿಕೊಳ್ಳುವ ಹಕ್ಕಿಲ್ಲ


ಕಾರ್ಮಿಕರ ಬಳಿ ಹೋಗಿ ಚಿಂತೆ ಮಾಡ್ಬೇಡಿ, ಯಾಕಂದ್ರೆ ಸೋನು ಸೂದ್ ನಿಮಗಾಗಿ ಇದ್ದಾರೆ ಎಂದು ಹೇಳಿ. ಇವರು ತೆರೆ ಮೇಲೆ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದು ಆದ್ರೆ ರಿಯಲ್ ಲೈಫ್‌ನಲ್ಲಿ ಇವರೊಬ್ಬ ಹೀರೋ' ಕೊಲ್ಕತ್ತಾದ ವಿದ್ಯಾರ್ಥಿಯೊಬ್ಬ ಹೀಗೆಂದು ಬರೆದ ಪೋಸ್ಟ್ ಸದ್ಯ ಎಲ್ಲೆಡೆ ವೈರಲ್ ಆಗುತ್ತಿದೆ.

ಮುಂಬೈ(ಮೇ.16): ಕಳೆದೊಂದು ತಿಂಗಳಲ್ಲಿ ಸೋನು ಸೂದ್ ಜುಹುನಲ್ಲಿರುವ ತಮ್ಮ ಹೋಟೆಲ್‌ಗಳನ್ನು ಕೊರೋನಾ ವಾರಿಯರ್ಸ್‌ಗೆ ನೀಡಿದ್ದಾರೆ, ಬಡವರಿಗೆ, ನಿರ್ಗತಿಕರಿಗೆ ಆಹಾರ ಹಂಚಿದ್ದಾರೆ, ರಂಜಾನ್‌ ಸಮಯದಲ್ಲಿ ಇಪ್ಪತ್ತೈದು ಸಾವಿರಕ್ಕೂ ಅಧಿಕ ಮಂದಿಗೆ ಊಟದ ವ್ಯವಸ್ಥೆ ಮಾಡಿದ್ದಾರೆಂಬ ಹೆಡ್ಲೈನ್‌ ಎಲ್ಲರ ಗಮನ ಸೆಳೆದಿವೆ. ಹೀಗಿರುವಾಗಲೇ ಇತ್ತೀಚೆಗಷ್ಟೇ ಅವರು ಮಹಾರಾಷ್ಟ್ರದಲ್ಲಿ ಸಿಲುಕಿಕೊಂಡಿದ್ದ ಕನ್ನಡಿಗರನ್ನು ಕರ್ನಾಟಕಕ್ಕೆ ಮರಳಿ ಬರಲು ಮಾಡಿದ್ದ ಬಸ್ ವ್ಯವಸ್ಥೆ ಇಡೀ ದೇಶದ ಚಿತ್ತ ಸೆಳೆದಿತ್ತು. ಇದಕ್ಕಾಗಿ ಬರೋಬ್ಬರಿ ಹತ್ತು ಬಸ್ ವ್ಯವಸ್ಥೆ ಮಾಡಿದ್ದಲ್ಲದೇ, ಮಹಾರಾಷ್ಟ್ರ ಹಾಗೂ ಕರ್ನಾಟಕ ಸರ್ಕಾರದಿಂದ ಬೇಕಾದ ಅನುಮತಿ ಕೂಡಾ ಪಡೆದಿದ್ದರು. ಇಷ್ಟೇ ಅಲ್ಲದೇ ಕಾರ್ಮಿಕರು ಬಸ್‌ ಹತ್ತಿ, ಬಸ್‌ಗಳು ಕರ್ನಾಟಕಕ್ಕೆ ಪ್ರಯಾಣ ಆರಂಭಿಸುವವರೆಗೂ ಅಲ್ಲೇ ಇದ್ದು ಎಲ್ಲಾ ಜವಾಬ್ದಾರಿಗಳನ್ನೂ ನೋಡಿಕೊಂಡಿದ್ದರು. ಅವರ ಈ ನಡೆ ಅಪಾರ ಪ್ರಶಂಸೆಗೆ ಪಾತ್ರವಾಗಿತ್ತು. 

Latest Videos

undefined

ಕರ್ನಾಟಕದ ವಲಸಿಗರಿಗೆ ಆಪ್ತರಕ್ಷಕನಾಗಿ ಬಂದ ನಿಜನಾಯಕ ಸೋನು ಸೂದ್

ಈ ಸಂಬಂದ ನಟ ಸೋನು ಸೂದ್ ಪ್ರತಿಕ್ರಿಯಿಸಿದ್ದು, 'ಕಾರ್ಮಿಕರಿಗೆ ನೆವಿನ ಹಸ್ತ ಚಾಚುವುದು ನಮ್ಮ ಕರ್ತವ್ಯ. ಇವರು ನಮ್ಮ ದೇಶದ ಹೃದಯ ಬಡಿತದಂತಿದ್ದಾರೆ. ಕಾರ್ಮಿಕರು ತಮ್ಮ ಮನೆ ಸೇರಲು ತಮ್ಮ ಹೆಂಡತಿ ಮಕ್ಕಳೊಂದಿಗೆ ಹೆದ್ದಾರಿಯಲ್ಲಿ ಬರಿಗಾಲಲ್ಲಿ ನಡೆದುಕೊಂಡು ಹೋಗುವುದನ್ನು ನೊಡಿದ್ದೇವೆ. ಹೀಗಿರುವಾಗ ಎಸಿ ಕೋಣೆಯಲ್ಲಿ ಕುಳಿತು ಟ್ವೀಟ್ ಮಾಡಿ ಅವರ ಪರ ವ್ಯಕ್ತಪಡಿಸುವುದು ಸರಿಯಲ್ಲ. ನಾವು ಕೂಡಾ ರಸ್ತೆಗಿಳಿದು ಅವರಲ್ಲೊಬ್ಬರಾಗಿ ಅವರ ನೆರವು ಮಾಡಬೇಕು. ಇಲ್ಲದಿದ್ದರೆ, ಅವರು ನಮ್ಮ ಮೇಲಿನ ವಿಶ್ವಾಸ ಕಳೆದುಕೊಳ್ಳುತ್ತಾರೆ. ನಮಗಾಗಿ ಒಬ್ಬರ ಇದ್ದಾರೆಂಬುವುದನ್ನು ಅವರು ನಂಬುವುದಿಲ್ಲ. ಹೀಗಾಗೇ ನಾನು ಅವರ ಪ್ರಯಾಣಕ್ಕೆ ಬೇಕಾದ ವ್ಯವಸ್ಥೆ ಮಾಡುತ್ತಿದ್ದೇನೆ. ಇದಕ್ಕೆ ಬೇಕಾದ ಅನುಮತಿ ಪಡೆಯಲು ಬೇರೆ ಬೇರೆ ರಾಜ್ಯದ ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದೇನೆ' ಎಂದಿದ್ದಾರೆ.

ಅಲ್ಲದೇ ಈಗ ನನಗೆ ಅನೇಕ ಮಂದಿ ತಮಗೂ ಊರಿಗೆ ಹೋಗಬೇಕು ಎಂಬ ನೂರಾರು ಸಂದೇಶ ಹಾಗೂ ಇಮೇಲ್‌ಗಳು ಬರಲಾರಂಭಿಸಿವೆ. ಹೀಗಿರುವಾಗ ಅವರನ್ನು ಅವರ ಊರಿಗೆ ತಲುಪಿಸಲು ಅಗತ್ಯವಾದ ಅನುಮತಿ ಪಡೆಯಲು ಬೆಳಗ್ಗಿನಿಂದ ಸಂಜೆವರೆಗೆ ಶ್ರಮಿಸುತ್ತಿದ್ದೇನೆ. ಲಾಕ್‌ಡೌನ್ ವೇಳೆ ಇದೊಂದೇ ನನ್ನ ಕೆಲಸವಾಗಿದೆ. ಇದು ನನಗೆ ಪದಗಳಲ್ಲಿ ವರ್ಣಿಸಲಾಗದಷ್ಟು ಸಂತೃಪ್ತಿ ನೀಡುತ್ತಿದೆ ಎಂದಿದ್ದಾರೆ .

ಸದ್ಯ ಕಷ್ಟಪಡುತ್ತಿರುವ ಕಾರ್ಮಿಕರನ್ನು ನೊಡುವಾಗ ಮನುಷ್ಯರಾಗಿ ನಾವು ಗೌರವ ಕಳೆದುಕೊಂಡಿದ್ದೇವೆಂಬ ಭಾವನೆ ನನಗೆ ಬರಲಾರಂಭಿಸಿದೆ. ಈ ಆಲೋಚನೆ ನನ್ನನ್ನು ಪದೇ ಪದೇ ಸತಾಯಿಸುತ್ತಿದೆ. ಹೀಗಾಗೇ ರಾತ್ರಿ ನನಗೆ ಸರಿಯಾಗಿ ನಿದ್ದೆಯೂ ಬರುತ್ತಿಲ್ಲ. ಇಮೇಲ್‌ಗಳನ್ನು ನೋಡಿ, ಅವರ ಮಾಹಿತಿ ಸಂಗ್ರಹಿಸಿ, ಅವರಿಗೆ ಕರೆ ಮಾಡುತ್ತಿದ್ದೇನೆ. ಅವರನ್ನು ನಾನೇ ಖುಉದ್ದು ಡ್ರೈವ್ ಮಾಡಿ ಅವರ ಮನೆಗೆ ಬಿಡಬೇಕೆಂಬಬ ಆಸೆ ಇದೆ. ಈ ಮೂಲಕ ಅವರನ್ನು ಕುಟೂಮಬದ ಜೊತೆ ಸೇರಿಸಬಹುದಿತ್ತು ಎಂದಿದ್ದಾರೆ.

ಕೋವಿಡ್‌19: ವೈದ್ಯರಿಗೆ ಐಷಾರಾಮಿ ಹೋಟೆಲ್‌ ಬಿಟ್ಟುಕೊಟ್ಟ ನಟ!

ನಮ್ಮ ಮನೆಗಳನ್ನು ಕಟ್ಟಿದ ಅವರೇ ಭಾರತದ ನಿಜವಾದ ಶ್ರಮಿಕರು. ಅವರೆಲ್ಲಾ ತಮ್ಮ ಕುಟುಂಬ, ಹೆತ್ತವರು ಹಾಗೂ ಪ್ರೀತಿ ಪಾತ್ರರನ್ನು ಬಿಟ್ಟು ಕೇವಲ ನಮಗಾಗಿ ಶ್ರಮಿಸುತ್ತಿದ್ದಾರೆ. ಹೀಗಿರುವಾಗ ಅವರ ನೆರವಿಗೆ ನಾವು ಧಾವಿಸದಿದ್ದರೆ, ನಮ್ಮನ್ನು ನಾವು ಮನುಷ್ಯರೆಂದು ಕರೆಸಿಕೊಳ್ಳಲು ಯಾವುದೇ ಹಕ್ಕಿಲ್ಲ. ಅವರ ಸಹಾಯ ಮಾಡಬೇಕು, ನಮ್ಮ ಕೈಲಾದಷ್ಟು ಸಹಾಯ ಮಾಡಿ ಅವರ ಕಷ್ಟಕ್ಕೆ ಸ್ಪಂದಿಸಬೇಕು. ರಸ್ತೆಗಳಲ್ಲಿ ಅವರನ್ನು ನೋಡಲಾಗುತ್ತಿಲ್ಲ, ಅವರನ್ನು ಹೆದ್ದಾರಿಗಳಲ್ಲಿ ಸಾಯಲು ಬಿಡುವುದು ಸರಿಯಲ್ಲ. ಪುಟ್ಟ ಪುಟ್ಟ ಮಕ್ಕಳು ತಮ್ಮ ಹೆತ್ತವರಿಗೆ ಯಾರೂ ಇಲ್ಲ ಎನ್ನುವ ಭಾವನೆಯೊಂದಿಗೆ ಬಿಸಿಲ ಬೇಗೆಯಲ್ಲಿ ನಡೆದುಕೊಂಡು ಹೋಗುವುದನ್ನು ನೋಡಲು ಸಾಧ್ಯವಿಲ್ಲ ಎಂದಿದ್ದಾರೆ.

ಕಾರ್ಮಿಕರಿಗೆ ತಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡುವುದು ಪ್ರಯಿಯೊಬ್ಬ ಭಾರತೀಯನ ಕರ್ತವ್ಯ ಎಂಬುವುದು ನನ್ನ ಅಭಿಪ್ರಾಯ. ಎಲ್ಲವನ್ನೂ ಬದಿಗಿಟ್ಟು, ಒಂದೇ ಕುಟುಂಬ ಎಂಬಂತೆ ಮುಂದೆ ಬರಬೇಕು. ಈ ಮೂಲಕ ಭಯಭೀತರಾಗಬೇಡಿ ಈ ಸಮಯ ಕೂಡಾ ಕಳೆದು ಹೀಗುತ್ತದೆ ಎಂಬ ಸಂದೇಶ ಹಾಗೂ ಧೈರ್ಯ ತುಂಬಬೇಕು.  ಯಾಕೆಂದರೆ ನಾವು ಈಗ ಒಗ್ಗಟ್ಟಿನಿಂದಿದ್ದು, ದೇಶದಲ್ಲಿ ಯಾರೊಬ್ಬರೂ ಹಸಿವಿನಿಂದ ಮಲಗದಂತೆ ನಿಗಾ ವಹಿಸಬೇಕು ಎಂದಿದ್ದಾರೆ.

ಕಾರ್ಮಿಕರು ಮಾತ್ರವಲ್ಲದೇ ಸೋನು ಸೂದ್ ಕೊರೋನಾ ವಾರಿಯರ್ಸ್ ಹಾಗೂ ಬಡವರ ನೆರವಿಗೂ ಧಾವಿಸಿದ್ದಾರೆ. ಅಅವರ ಈ ನಡೆ ಎಲ್ಲರ ಮನ ಗೆದ್ದಿದೆ. ಸದ್ಯ ಜನರೆಲ್ಲಾ ಅವರನ್ನು ರಿಯಲ್ ಲೈಫ್ ಹೀರೋ ಎನ್ನಲಾರಂಭಿಸಿದ್ದಾರೆ.

ಈ ಒಂದು ವಿಚಾರಕ್ಕೆ ಸೂದ್ ಬೇಸರ

ಒಂದು ವಿಚಾರ ನನಗೆ ಬಹಳ ಬೇಸರ ಮೂಡಿಸುತ್ತದೆ. ಪತ್ರಿಕೆಗಳಲ್ಲಿ ಕಾರ್ಮಿಕರು ಮೃತಪಟ್ಟಾಗ ಎಂಡು, ಹತ್ತು, ಅಥವಾಗ ಹದಿನಾರು ಕಾರ್ಮಿಕರು ಮೃತಪಟ್ಟಿದ್ದಾರೆಂದು ವರದಿ ಮಾಲಾಗುತ್ತದೆ. ಆದರೆ ನಾವ್ಯಾಕೆ ಆ ಕಾರ್ಮಿಕರ ಹೆಸರನ್ನು ಪಗ್ರಕಟಿಸುವುದಿಲ್ಲ? ಕಾರ್ಮಿಕರನ್ನು ನಾವು ಮನುಷ್ಯರಂತೆ ಕಾಣಬೇಕು ಎಂದಿದ್ದಾರೆ. ವಿಮಾನ ದುರಂದಲ್ಲಿ ಮೃತಪಟ್ಟವರುಗೆ ಕೊಟ್ಟಷ್ಟೇ ಮಹತ್ವ ಕಾರ್ಮಿಕರಿಗೂ ನಿಡನೇಕು. ಇವರು ಯಾರು? ಪ್ರಾಣ ಕಳೆದುಕೊಂಡವರು ಯಾರು ಎಂದು ಎಲ್ಲರಿಗೂ ತಿಳಿಯಬಬೇಕು ಹಾಗೂ ಗೌರವಿಸಬೇಕು ಎಂದಿದ್ದಾರೆ.

click me!