ಲಾಕ್‌ಡೌನ್ ಟೈಮ್‌ನಲ್ಲೇ ಬಂತು ದೊಡ್ಡ ಸ್ಟಾರ್‌ಗಳ ಕಿರುಚಿತ್ರ | ‘ಫ್ಯಾಮಿಲಿ’ಯಲ್ಲಿ ಅಮಿತಾಬ್, ರಜನಿ, ಪ್ರಿಯಾಂಕಾ ಚೋಪ್ರಾ ಜತೆ ಶಿವಣ್ಣ | ಹೋಂ ಕ್ವಾರಂಟೈನ್ ಮಹತ್ವವನ್ನು ಹೇಳುತ್ತೆ ಈ ಚಿತ್ರ
ಲಾಕ್‌ಡೌನ್ ಪರಿಣಾಮ ಈಗ ಇಡೀ ಚಿತ್ರರಂಗವೇ ಸ್ತಬ್ದವಾಗಿದೆ. ಈ ಹಂತದಲ್ಲಿ ಭಾರತೀಯ ಚಿತ್ರರಂಗದ ದಿಗ್ಗಜ ನಟರಾದ ಬಿಗ್ ಬಿ ಅಮಿತಾಬ್, ರಜನಿಕಾಂತ್, ಶಿವರಾಜ್ ಕುಮಾರ್‌ರಂಥವರಿಂದ ಹಿಡಿದು ಅಲಿಯಾ ಭಟ್‌ವರೆಗೆ ಪ್ರಸಿದ್ಧ ನಟ ನಟಿಯರು ಈ ಕಿರುಚಿತ್ರದಲ್ಲಿ ಅಭಿನಯಿಸಿದ್ದಾರೆ.
ಚಿತ್ರದ ಹೆಸರು ‘ಫ್ಯಾಮಿಲಿ’. ಸೋಮವಾರ ರಾತ್ರಿಯಷ್ಟೇ ಬಿಡುಗಡೆಯಾದ ಈ ಶಾರ್ಟ್‌ಮೂವಿ ಈಗ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಪ್ರಸೂನ್ ಜೋಶಿ ಇದರ ನಿರ್ದೇಶಕರು.
undefined
'ಲವ್ ಮಾಕ್ಟೇಲ್' ಹಿಂದಿದೆ ಈ ಸೋಲಿನ ಕಥೆ; ಡಾರ್ಲಿಂಗ್ ಕೃಷ್ಣ ದಶಕದ ಜರ್ನಿ ಇದು
ಈ ಶಾರ್ಟ್‌ಮೂವಿಯಲ್ಲೊಂದು ಅಚ್ಚರಿ ಇದೆ. ಎಡಿಟಿಂಗ್‌ನಲ್ಲಿ ಮ್ಯಾಜಿಕ್ ಇದೆ. ಏಕೆಂದರೆ ಈ ಕಿರುಚಿತ್ರದ ಶೂಟಿಂಗ್‌ಗಾಗಿ ಯಾರೂ ಮನೆಯಿಂದ ಹೊರಬಂದಿಲ್ಲ. ಮನೆಯಲ್ಲಿದ್ದುಕೊಂಡೇ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಮತ್ತೊಂದು ವಿಶೇಷ ಅಂದರೆ ಇಲ್ಲಿರುವ ಕಲಾವಿದರೆಲ್ಲ ಅವರವರ ಮಾತೃ ಭಾಷೆಯಲ್ಲೇ ಮಾತನಾಡಿದ್ದಾರೆ. ಇದೆಲ್ಲ ಹೇಗೆ ಕನೆಕ್ಟ್ ಆಗುತ್ತೆ ಅಂತ ತಿಳಿಯಲು ನೀವು ಚಿತ್ರ ನೋಡಬೇಕು.
ಫ್ಯಾಮಿಲಿಯ ಕಲಾವಿದರು : ಅಮಿತಾಬ್ ಬಚ್ಚನ್, ರಜನಿಕಾಂತ್, ಶಿವರಾಜ್ ಕುಮಾರ್, ಮೋಹನ್ ಲಾಲ್, ಮಮ್ಮುಟ್ಟಿ, ಚಿರಂಜೀವಿ, ಪ್ರಿಯಾಂಕಾ ಚೋಪ್ರಾ, ಆಲಿಯಾ ಭಟ್, ರಣಬೀರ್ ಕಪೂರ್, ದಿಲ್ಜಿತ್ ದೋಸಾಂಜ್, ಪ್ರೊಸೇನ್‌ಜಿತ್ ಚಟರ್ಜಿ, ಸೊನಾಲಿ ಕುಲಕರ್ಣಿ .
ಫ್ಯಾಮಿಲಿಯ ನಿಜ ಉದ್ದೇಶ
ಕೊರೋನಾ ಸಂದರ್ಭದಲ್ಲಿ ಎಲ್ಲರೂ ಮನೆಯಲ್ಲೇ ಇರಿ ಎನ್ನುವುದರ ಜತೆಗೆ ಇಡೀ ಭಾರತೀಯ ಚಿತ್ರರಂಗವೇ ಒಂದು ಕುಟುಂಬವಿದ್ದಂತೆ ಎನ್ನುವುದನ್ನು ತೋರಿಸುವುದು ಫ್ಯಾಮಿಲಿ ನಿರ್ಮಾಣದ ಮುಖ್ಯ ಉದ್ದೇಶ. ಹಾಗೆಯೇ ಅದರಿಂದ ಬರುವ ಹಣವನ್ನು ಚಿತ್ರರಂಗದ ದಿನಗೂಲಿ ನೌಕರರಿಗೆ ನೀಡುವ ಉದ್ದೇಶ ಕೂಡ ಇದೆ ಎನ್ನುತ್ತಿದೆ ಈ ಸಿನಿಮಾ ನಿರ್ಮಿಸಿದ ‘ಫ್ಯಾಮಿಲಿ’ ಬಳಗ.