
ಮುಂಬೈ (ಏ. 07): ಕೊರೋನಾ ಸಾಂಕ್ರಾಮಿಕ ರೋಗದಿಂದ ಆತಂಕಗೊಂಡಿದ್ದೇನೆ. ನನ್ನ ತಂದೆ ಸಲೀಮ್ ಖಾನ್ ಅವರನ್ನು ನೋಡದೆ ಮೂರು ವಾರಗಳಾದವು ಎಂದು ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರು ಮಿರ್ಚಿಯಿಂದ ವೃದ್ಧಾಶ್ರಮಗಳಿಗೆ ಆಹಾರ ಪೂರೈಕೆ
ಸದ್ಯ ಪನ್ವೇಲ್ ಫಾಮ್‌ರ್‍ಹೌಸ್‌ನಲ್ಲಿರುವ ಸಲ್ಮಾನ್ ಖಾನ್ ತಮ್ಮ ಸಹೋದರ ಸೊಹೈಲ್ ಖಾನ್ ಮಗ ನಿರ್ವಾಣ್ ಅವರೊಂದಿಗೆ ಇರುವ ವಿಡಿಯೋವನ್ನು ಟ್ವೀಟರ್‌ನಲ್ಲಿ ಶೇರ್ ಮಾಡಿ, ‘ಕೆಲ ದಿನಗಳ ಹಿಂದೆ ಫಾಮ್‌ರ್‍ಹೌಸ್‌ಗೆ ಬಂದಿದ್ದೆವು. ರಾಷ್ಟ್ರದಾದ್ಯಂತ ಲಾಕ್‌ಡೌನ್ ಇರುವುದರಿಂದ ಇಲ್ಲಿಯೇ ಇರಬೇಕಾಯಿತು. ನನ್ನ ತಂದೆಯನ್ನು ನೋಡದೆ ಮೂರು ವಾರಗಳಾಯಿತು. ಸದ್ಯ ನಾವೆಲ್ಲವೂ ಭಯಭೀತರಾಗಿದ್ದೇವೆ’ ಎಂದಿದ್ದಾರೆ.
ಜೊತೆಗೆ ಬಾಲಿವುಡ್‌ನ ಶೋಲೆ ಸಿನಿಮಾದ ‘ಜೋ ಡರ್ ಗಯಾ ಸಮ್ಜೋ ವೋ ಮರ್ ಗಯಾ’ (ಭಯಪಡುವವ ಸಾಯುತ್ತಾನೆ) ಎಂಬ ಮಾತು ಸದ್ಯದ ಸನ್ನಿವೇಶಕ್ಕೆ ಹೊಂದಿಕೆಯಾಗಲ್ಲ. ‘ಜೋ ಡರ್ ಗಯಾ ಸಮ್ಜೋ ವೋ ಬಚಚ್ ಗಯಾ’ (ಭಯ ಪಡುವವರು ಬದುಕುಳಿಯುತ್ತಾರೆ) ಎಂಬುದು ಸರಿ ಹೊಂದುತ್ತದೆ. ಸದ್ಯ ನಾವೆಲ್ಲವೂ ಭಯಭೀತರಾಗಿದ್ದೇವೆ ಎಂದಿದ್ದಾರೆ.
"
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.