ಅಕ್ರಮವನ್ನು ಸಕ್ರಮವಾಗಿಸಿದ ಪವಿತ್ರ-ನರೇಶ್‌: ಸಂಬಂಧಕ್ಕೆ ಮದುವೆಯ ಮುದ್ರೆ ಒತ್ತಿದ್ರಾ?

Published : Mar 10, 2023, 01:01 PM ISTUpdated : Mar 10, 2023, 04:13 PM IST
ಅಕ್ರಮವನ್ನು ಸಕ್ರಮವಾಗಿಸಿದ ಪವಿತ್ರ-ನರೇಶ್‌: ಸಂಬಂಧಕ್ಕೆ ಮದುವೆಯ ಮುದ್ರೆ ಒತ್ತಿದ್ರಾ?

ಸಾರಾಂಶ

ತಮ್ಮ ಸಂಬಂಧದಿಂದಲೇ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರ ಲೋಕೇಶ್‌ ಮದುವೆಯಾಗುವ ಮೂಲಕ ತಮ್ಮ ವಿರುದ್ಧದ ಎಲ್ಲಾ ಗಾಸಿಪ್‌ಗಳಿಗೆ ದಾಂಪತ್ಯದ ಮುದ್ರೆಯೊತ್ತುವ ಮೂಲಕ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ. ಆದರೆ, ಈ ವೀಡಿಯೋ ಬಗ್ಗೆ ಇನ್ನೂ ಇದೆ ಗೊಂದಲ. 

ಹೈದರಾಬಾದ್‌: ತಮ್ಮ ಸಂಬಂಧದಿಂದಲೇ ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ತೆಲುಗು ನಟ ನರೇಶ್ ಹಾಗೂ ನಟಿ ಪವಿತ್ರ ಲೋಕೇಶ್‌ ಕೊನೆಗೂ ಮದುವೆಯಾಗಿದ್ದು, ತಮ್ಮ ವಿರುದ್ಧದ ಎಲ್ಲಾ ಗಾಸಿಪ್‌ಗಳಿಗೆ ದಾಂಪತ್ಯದ ಮುದ್ರೆಯೊತ್ತುವ ಮೂಲಕ ವಿರೋಧಿಗಳ ಬಾಯಿ ಮುಚ್ಚಿಸಿದ್ದಾರೆ.  2022ರಲ್ಲಿ ಸಿಕ್ಕಾಪಟ್ಟೆ ಸುದ್ದಿಯಾದವರಲ್ಲಿ ಕನ್ನಡದ ನಟಿ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಜೋಡಿ ಪ್ರಮುಖರು. 

ಒಂದು ನಿಮಿಷ. ಇಂಥದ್ದೊಂದು ಮದುವೆ ವೀಡಿಯೋವನ್ನು ತಮ್ಮ ಟ್ವೀಟರ್ ಖಾತೆಯಿಂದ ಶೇರ್ ಮಾಡಿಕೊಂಡ ನರೇಶ್ ತಮ್ಮ ಅಭಿಮಾನಿಗಳನ್ನು ಮತ್ತೆ ಫೂಲ್ ಮಾಡಿದ್ದಾರೆನ್ನಲಾಗುತ್ತಿದೆ. ಇದು ಮುಂಬರುವ ತಮ್ಮ ಚಿತ್ರವೊಂದರ ಸೀನ್ ಆಗಿದ್ದು, ಅದನ್ನು ಶೇರ್ ಮಾಡಿಕೊಂಡು ಅಭಿಮಾನಿಗಳನ್ನು ದಾರಿ ತಪ್ಪಿಸುತ್ತಿದ್ದಾರೆ ಎನ್ನುತ್ತಿದ್ದು, ಇನ್ನೂ ಈ ಜೋಡಿ ಮದ್ವೆಯಾದ ಸಂಬಂಧ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. 

ತೆಲುಗು ನಟ ನರೇಶ್ ಜೊತೆ ಕನ್ನಡ ನಟಿ ಪವಿತ್ರಾ ಲೋಕೇಶ್ ಮದುವೆಯಾಗಿದ್ದಾರೆ ಎನ್ನುವ ಸುದ್ದಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಇಬ್ಬರ ಮದುವೆ ಸುದ್ದಿ ಅಂದು ವೈರಲ್ ಆದ ಬೆನ್ನಲ್ಲೇ ನರೇಶ್ ಅವರ ಪತ್ನಿ ರಮ್ಯಾ ರಘುಪತಿ ರೊಚ್ಚಿಗೆದ್ದಿದ್ದರು. ಪವಿತ್ರಾ ಲೋಕೇಶ್ ವಿರುದ್ಧ ಕಿಡಿ ಕಾರಿದ್ದರು.  ರಮ್ಯಾ, ನರೇಶ್ ಮತ್ತು ಪವಿತ್ರಾ ಲೋಕೇಶ್ ನಡುವಿನ ಕಿತ್ತಾಟ ಚಪ್ಪಲಿಯಲ್ಲಿ ಹೊಡೆಯುವ ಮಟ್ಟಕ್ಕೆ ಹೋಗಿತ್ತು. ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದ ಪವಿತ್ರಾ ಮತ್ತು ನರೇಶ್ ಇದೀಗ ಮದುವೆಯಾಗುವ ಮೂಲಕ ತಮ್ಮ ವಿರುದ್ಧದ ಗಾಸಿಪ್‌ಗಳಿಗೆ ತೆರೆ ಎಳೆದಿದ್ದಾರೆ, ಎನಿಸಿತ್ತು. 

ಸಾವಿನ ಮನೆಯಲ್ಲೂ ಅಸಹ್ಯ ನಡೆ ತೋರಿದ ನರೇಶ್-ಪವಿತ್ರಾ ಲೋಕೇಶ್ ಈಗ್ಯಾಕೆ ಮುತ್ತಿನ ಫೋಟೋ ಹಾಕಿದ್ದು?

ಸ್ವತ: ನಟ ನರೇಶ್ ಈ ವಿಚಾರಕ್ಕೆ ಸಂಬಂಧಿಸಿಂತೆ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಮದುವೆ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಜೊತೆಗೆ ತಮ್ಮಿಬ್ಬರನ್ನು ಆಶೀರ್ವದಿಸುವಂತೆ ಅಭಿಮಾನಿಗಳನ್ನು ಕೇಳಿದ್ದಾರೆ.   ಎರಡು ಮನಸ್ಸು, ಮೂರು ಗಂಟು, ಏಳು ಹೆಜ್ಜೆ ಹೊಸ ಬಂಧ ಎಂದು ಬರೆದು ವಿಡಿಯೋ ಶೇರ್ ಮಾಡಿದ ನರೇಶ್ ತಮಗಿಬ್ಬರಿಗೆ ಎಲ್ಲರ ಆಶೀರ್ವಾದ ಬೇಕು ಎಂದು ಕೋರಿದ್ದಾರೆ. ಆದರೆ, ಈ ಬಗ್ಗೆ ಸ್ಪಷ್ಟನೆ ಕೇಳಿದಾ ಮುಂಬರುವ ಚಿತ್ರದ ಸೀನ್ ಎಂದು ಮುದವೆ ಆದ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. 

ಪವಿತ್ರಾ ಲೋಕೇಶ್- ನರೇಶ್ ಬಾಬು ಪರಿಚಯವಾಗಿದ್ಹೇಗೆ.?

 

ಕೆಲ ದಿನಗಳ ಹಿಂದಷ್ಟೇ ಅಂದರೆ ಹೊಸ ವರ್ಷದ ಆರಂಭದಲ್ಲಿ ಪವಿತ್ರ ಲೋಕೇಶ್ ಹಾಗೂ ನರೇಶ್ ಪರಸ್ಪರ ಲಿಪ್ ಕಿಸ್ ಮಾಡುವ ವಿಡಿಯೋವನ್ನು ನರೇಶ್‌ ತಮ್ಮ ಟ್ವಿಟ್ಟರ್‌ನಲ್ಲಿ ಹರಿಬಿಟ್ಟಿದ್ದರು.  ಇದರಲ್ಲಿ ನರೇಶ್ ಮತ್ತು ಪವಿತ್ರಾ ಕ್ಯಾಂಡಲ್ ಲೈಟ್ ಉರಿಸಿ ಕೇಕ್ ಕತ್ತರಿಸಿದ್ದಾರೆ. ಬಳಿಕ ಇಬ್ಬರೂ ಒಬ್ಬರಿಗೊಬ್ಬರು ಸಿಹಿ ತಿನ್ನಿಸಿ ಹೊಸ ವರ್ಷದ ಶುಭಾಶಯ ತಿಳಿಸಿದ್ದಾರೆ. ಅಷ್ಟೇ ಅಲ್ಲ, ನರೇಶ್, ಪವಿತ್ರಾ ಅವರ ತುಟಿಗೆ ರೊಮ್ಯಾಂಟಿಕ್(Romantic) ಆಗಿ ಮುತ್ತಿಡುತ್ತಿದ್ದಾರೆ. 2023ರ ಹೊಸ ವರ್ಷಕ್ಕೆ ಶುಭಾಶಯ(Wish) ಕೋರುತ್ತಾ ಹೊಸ ವರ್ಷ, ಹೊಸ ಆರಂಭ ನಿಮ್ಮೆಲ್ಲರ ಶುಭಹಾರೈಕೆ ಬೇಕು, ನಾನು ಮತ್ತು ಪವಿತ್ರಾ ನರೇಶ್ ಸದ್ಯದಲ್ಲಿಯೇ ಮದುವೆಯಾಗಲಿದ್ದೇವೆ ಎಂದು ಪ್ರಕಟಿಸಿದ್ದರು ನರೇಶ್.ಈ ಜೋಡಿ ನಿಜ ಜೀವನದಲ್ಲಿ ಹಸೆಮಣೆ ಏರಿದರೆ,ಈ ಜೋಡಿ ನಿಜ ಜೀವನದಲ್ಲಿ ಹಸೆಮಣೆ ಏರೋದು ಯಾವಾಗ ಎನ್ನೋದು ಇನ್ನೂ ಗೊತ್ತಿಲ್ಲ.

ತೆಲುಗಿನ ಖ್ಯಾತ ಹಿರಿಯ ನಟ ದಿವಂಗತ ಕೃಷ್ಣ ಅವರ ಪುತ್ರ, ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಅವರ ಮಲ ಸಹೋದರ ನರೇಶ್ ಅವರಿಗೆ ಇದು ನಾಲ್ಕನೇ ಮದುವೆಯಾದರೆ(Marriage) ಪವಿತ್ರಾ ಲೋಕೇಶ್ ಅವರಿಗೆ ಇದು ಮೂರನೇ ಮದುವೆಯಾಗಿದೆ.

ಈ ಜೋಡಿಯ ಸಂಬಂಧ ಪಾಸಿಟಿವ್‌ ಗಿಂತಲೂ ನೆಗೆಟಿವ್‌ ಕಾರಣಕ್ಕೆ ಕಳೆದ ವರ್ಷ ಸಾಕಷ್ಟು ಸುದ್ದಿಯಾಯ್ತು. ಒಂದು ಕಡೆ ಈ ಜೋಡಿಯ ಪ್ರೇಮ ಕಹಾನಿ ಗಮನ ಸೆಳೆದರೆ ಇನ್ನೊಂದು ಕಡೆ ಇವರಿಬ್ಬರ ಪತ್ನಿ ಹಾಗೂ ಪತಿಯ ಹೇಳಿಕೆಗಳೂ ವೈರಲ್‌ ಆಗಿದ್ದವು. ಅದರಲ್ಲೂ ನರೇಶ್ ಪತ್ನಿ ರಮ್ಯಾ ಈ ಸಂಬಂಧದ ಬಗ್ಗೆ ಸಾರ್ವಜನಿಕವಾಗಿಯೇ ಆವಾಜ್ ಹಾಕಿದರು. ಇತ್ತ ಪವಿತ್ರಾ ಲೋಕೇಶ್ ಮೊದಲ ಪತಿ ಸುಚೇಂದ್ರ ಪ್ರಸಾದ್‌ ಸಹ ಈ ಸಂಬಂಧದ ಬಗ್ಗೆ ಮಾತಾಡಿದ್ದರು. ಅತ್ತ ಟಾಲಿವುಡ್‌ನಲ್ಲಿ ನರೇಶ್‌ ಮನೆತನಕ್ಕೆ ದೊಡ್ಡ ಹೆಸರಿದೆ. ತೆಲುಗಿನ ಸೂಪರ್‌ ಸ್ಟಾರ್ ಮಹೇಶ್‌ ಬಾಬು ಅವರಿಗೆ ವರಸೆಯಲ್ಲಿ ಈ ನರೇಶ್‌ ಅಣ್ಣನಾಗಬೇಕು. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?