ಗರ್ಭಿಣಿಯಾದ ಬಳಿಕ ಮೊದಲ ಬಾರಿಗೆ ನಟಿ ಇಲಿಯಾನಾ ಬಾಯ್‌ಫ್ರೆಂಡ್ ಫೋಟೋ ಹಂಚಿಕೊಂಡಿದ್ದಾರೆ. ಯಾರಾತ ಎಂದು ಅಭಿಮಾನಿಗಳು ತಲೆಕೆಡಿಸಿಕೊಂಡಿದ್ದಾರೆ.
ನಟಿ ಇಲಿಯಾನಾ ಡಿಕ್ರೂಜ್ ತಾಯಿಯಾಗುತ್ತಿರುವ ಸಂಭ್ರಮವನ್ನು ಎಂಜಾಯ್ ಮಾಡುತ್ತಿದ್ದಾರೆ. ಮದುವೆಯಾಗದೆ, ಮಗುವಿನ ತಂದೆ ಯಾರೆಂದು ರಿವೀಲ್ ಮಾಡದೆ ತಾಯಿ ಆಗುತ್ತಿರುವ ವಿಚಾರ ಬಹಿರಂಗ ಪಡಿಸಿ ಅಚ್ಚರಿ ಮೂಡಿಸಿದ್ದ ನಟಿ ಇತ್ತೀಚೆಗಷ್ಟೆ ಬೇಬಿ ಬಂಪ್ ಫೋಟೋ ಹಂಚಿಕೊಂಡಿದ್ದರು. ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಇಲಿಯಾನಾ ಬೇಬಿ ಬಂಪ್ ತೋರಿಸಿದ್ದರು. ಇದೀಗ ಮೊದಲ ಬಾರಿಗೆ ಇಲಿಯಾನಾ ಬಾಯ್‌ಫ್ರೆಂಡ್ ಜೊತೆ ಫೋಟೋ ಹಂಚಿಕೊಂಡಿದ್ದಾರೆ. ಹಾಗಂತ ಆತ ಯಾರೆಂದು ರಿವೀಲ್ ಮಾಡಿಲ್ಲ. ಸದ್ಯ ಬಾಯ್‌ಫ್ರೆಂಡ್ ಜೊತೆ ಸುತ್ತಾಡುತ್ತಿರುವ ಇಲಿಯಾನಾ ಆತನ ಕೈ ಮೇಲೆ ತನ್ನ ಕೈ ಇಟ್ಟಿರುವ ಫೋಟೋವನ್ನು ಶೇರ್ ಮಾಡಿದ್ದಾರೆ.
ಇಲಿಯಾನಾ ಶೇರ್ ಮಾಡಿರುವ ಫೋಟೋದಲ್ಲಿ ಇಬ್ಬರೂ ಉಂಗುರ ಧರಿಸಿರುವುದನ್ನು ಗಮನಿಸಬಹುದು. ಬ್ಲ್ಯಾಕ್ ಅಂಡ್ ವೈಟ್ ಫೋಟೋ ಇದಾಗಿದ್ದು ಫೋಟೋ ಜೊತೆಗೆ 'ಆತ ನನ್ನನ್ನು ನೆಮ್ಮದಿಯಿಂದ ತಿನ್ನಲು ಬಿಡಲ್ಲ' ಎಂದು ಬರೆದುಕೊಂಡಿದ್ದಾರೆ.
undefined
ಇಲಿಯಾನಾ ಫೋಟೋ ಶೇರ್ ಮಾಡುವ ಮೂಲಕ ಮಗುವಿನ ತಂದೆ ಇವರೇ ಎಂದು ಹೇಳುತ್ತಿದ್ದಾರಾ ಎನ್ನುವುದು ಇನ್ನೂ ಗೊಂದಲ ಮೂಡಿಸಿದೆ. ಆದರೆ ಆತ ಯಾರೆಂದು ಬಹಿರಂಗ ಪಡಿಸಿಲ್ಲ. ಉಂಗುರ ಧರಿಸಿರುವ ಫೋಟೋ ಶೇರ್ ಮಾಡುವ ಮೂಲಕ ಇಬ್ಬರೂ ಎಂಗೇಜ್ ಆಗಿರುವ ಬಗ್ಗೆ ಬಹಿರಂಗ ಪಡಿಸಿದ್ದಾರೆ ಎನ್ನುವುದು ಗೊತ್ತಾಗುತ್ತಿದೆ. ಇದುವರೆಗೂ ಮಗುವಿನ ತಂದೆಯ ಬಗ್ಗೆ ಯಾವುದೇ ಸುಳಿವು ನೀಡದ ಇಲಿಯಾನಾ ಇದೇ ಮೊದಲ ಬಾರಿಗೆ ಬಾಯ್‌ಫ್ರೆಂಡ್ ಜೊತೆ ಫೋಟೋ ಶೇರ್ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಆತ ಯಾರೆಂದು ಬಹಿರಂಗ ಪಡಿಸಬಹುದು.
ಗರ್ಭಿಣಿ ಇಲಿಯಾನಾ ಬಯಕೆ ತೀರಿಸಿದ ಸಹೋದರಿ; ಫೋಟೋ ಮೂಲಕ ಸಂತಸ ವ್ಯಕ್ತಪಡಿಸಿದ ನಟಿ
ಇಲಿಯಾನಾ, ಬಾಲಿವುಡ್ ಖ್ಯಾತ ನಟಿ ಕತ್ರಿನಾ ಕೈಫ್ ಅವರ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮೈಕೆಲ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎನ್ನುವ ಸುದ್ದಿ ಕೇಳಿ ಬರುತ್ತಿತ್ತು. ಆಗಾಗ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಅನೇಕ ಬಾರಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಪ್ರವಾಸಕ್ಕೆ ಹೋದ ಸಮಯದಲ್ಲೂ ಕತ್ರಿನಾ ಗ್ಯಾಂಗ್ ಜೊತೆ ಇಲಿಯಾನಾ ಕಾಣಿಸಿಕೊಂಡಿದ್ದರು. ಸದ್ಯ ಶೇರ್ ಮಾಡಿರುವ ಫೋಟೋ ಸೆಬಾಸ್ಟಿಯನ್ ಇರಬಹುದಾ ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.
ಬೇಬಿ ಬಂಪ್ ತೋರಿಸುತ್ತಾ ಡ್ರೈವ್ ಹೊರಟ ನಟಿ ಇಲಿಯಾನಾ; ವಿಡಿಯೋ ಶೇರ್ ಮಾಡಿ ಹೇಳಿದ್ದೇನು?
ಏಪ್ರಿಲ್‌ನಲ್ಲಿ ಗರ್ಭಿಣಿ ವಿಚಾರ ಬಹಿರಂಗ
ತಾಯಿಯಾಗುತ್ತಿರುವ ವಿಚಾರವನ್ನು ಇಲಿಯಾನಾ ಏಪ್ರಿಲ್ ನಲ್ಲಿ ಬಹಿರಂಗ ಪಡಿಸಿದ್ದರು. ಇಲಿಯಾನಾ ಎರಡು ಪೋಟೋ ಶೇರ್ ಮಾಡಿ, ಒಂದು ಫೋಟೋದಲ್ಲಿ ಅಡ್ವೆಂಚರ್ ಆರಂಭವಾಗುತ್ತಿದೆ ಎಂದು ಮಗುವಿನ ಬಟ್ಟೆ ಹಂಚಿಕೊಂಡಿದ್ದರು ಮತ್ತೊಂದು ಫೋಟೋದಲ್ಲಿ ಅಮ್ಮ ಎನ್ನುವ ಪೆಂಡೆಂಟ್ ಧರಿಸಿರುವ ಫೋಟೋ ಹಂಚಿಕೊಂಡಿದ್ದರು. ಜೊತೆಗೆ 'ನನ್ನ ಪುಟ್ಟ ಡಾರ್ಲಿಂಗ್ ಭೇಟಿಯಾಗಲು ಕಾಯಲು ಸಾಧ್ಯವಿಲ್ಲ, ಶೀಘ್ರದಲ್ಲೇ' ಎಂದು ಫೋಟೋಗೆ ಕ್ಯಾಪ್ಷನ್ ನೀಡಿದ್ದರು.