ಬಾಯ್‌ಫ್ರೆಂಡ್ ಹೆಸರು ರಿವೀಲ್ ಮಾಡಿದ ಇಲಿಯಾನಾ

By Suvarna News  |  First Published Mar 4, 2021, 11:23 AM IST

ಬಹುಭಾಷಾ ನಟಿ ಇಲಿಯಾನ ತಮ್ಮ ಬಾಯ್‌ಫ್ರೆಂಡ್ ಹೆಸರನ್ನು ರಿವೀಲ್ ಮಾಡಿದ್ದಾರೆ. ಯಾರದು..?


ಬಹುಭಾಷಾ ನಟಿ ಇಲಿಯಾನ ಡಿಕ್ರೂಸ್ ತಮ್ಮ ಬಾಯ್‌ಫ್ರೆಂಡ್ ಬಗ್ಗೆ ರಿವೀಲ್ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಆಸ್ಕ್ ಮಿ ಎನಿಥಿಂಗ್ ಸೆಷನ್ ಮಾಡಿದ ನಟಿ ಫ್ಯಾನ್ಸ್ ಜೊತೆ ಸಮಯ ಕಳೆದಿದ್ದಾರೆ.

ಬರ್ಫಿ ನಟಿ ಇಲಿಯಾನಾ ಡಿಕ್ರೂಸ್ ಆಸ್ಕ್ ಮಿ ಎನಿಥಿಂಗ್ ಮಾಡಿ ಅಭಿಮಾನಿಗಳ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು. ಅವರ ಅಭಿಮಾನಿಗಳು ಮತ್ತು ಫಾಲೋವರ್ಸ್ ಅವರ ಕೆಲಸ ಮತ್ತು ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆಗಳನ್ನು ಕೇಳಿದರು.

Tap to resize

Latest Videos

undefined

ಕಾಡನ್ ಟ್ರೈಲರ್ ಬಿಡುಗಡೆ: ಹೊಸ ಅವತಾರದಲ್ಲಿ ರಾಣಾ ದಗ್ಗುಬಾಟಿ

ಫಾಲೋವರ್ಸ್‌ಗಳಲ್ಲಿ ಒಬ್ಬರು ಇಲಿಯಾನಾಗೆ ಪ್ರೀತಿಯ ವ್ಯಾಖ್ಯಾನ ಏನು ಎಂದು ಕೇಳಿದ್ದಾರೆ. ಅದಕ್ಕೆ ಅವಳು ತನ್ನ ಪೆಟ್‌ನೊಂದಿಗೆ ಫೋಟೋ ಹಾಕಿ ಅನ್‌ಕಂಡೀಷನಲ್ ಎಂದು ಉತ್ತರಿಸಿದ್ದಾರೆ.

ಅದಕ್ಕೆ ಇಲಿಯಾನ ಉತ್ತರಗಳನ್ನು ನೀಡಿದರು. ಇದೇ ಸಂದರ್ಭ ನಿಮ್ಮ ಬಾಯ್‌ಫ್ರೆಂಡ್ ಹೆಸರೇನು ಎಂಬ ಪ್ರಶ್ನೆ ಬಂದಿದೆ. ಅದಕ್ಕೆ ನಾಯಿಯ ಜೊತೆಗಿನ ಫೋಟೋ ಹಾಕಿ ಚಾರ್ಲಿ ಎಂದು ಉತ್ತರಿಸಿದ್ದಾರೆ ಇಲಿಯಾನಾ

click me!