
ಹಿರಿಯ ನಟ, ಮಹಾಭಾರತ್ ಖ್ಯಾತಿ ಮುಖೇಶ್ ಖನ್ನ ಬಾಲಿವುಡ್‌ನ ಫೇಮಸ್ ಕಪಿಲ್ ಶರ್ಮಾ ಶೋ ಬಗ್ಗೆ ಕಿಡಿ ಕಾರಿದ್ದಾರೆ. ಕಪಿಲ್ ಶರ್ಮಾ ಶೋನಲ್ಲಿ ಬರೋ ಕಂಟೆಂಟ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ವಿಸ್ತಾರವಾದ ಇನ್‌ಸ್ಟಾಗ್ರಾಂ ಪೋಸ್ಟ್ ಹಾಕಿದ್ದಾರೆ ನಟ. ಮಹಾಭಾರತ ಎಪಿಸೋಡ್‌ನಲ್ಲಿ ತಾನು ಬರದೇ ಇರುವುದಕ್ಕೂ ಕಾರಣ ತಿಳಿಸಿದ್ದಾರೆ. ಮಹಾಭಾರತ್ ಎಪಿಸೋಡ್‌ನಲ್ಲಿ ಭೀಷ್ಮ ಪಿತಾಮಹ ಯಾಕಿರಲಿಲ್ಲ ಎಂಬ ಕ್ವಶ್ಚನ್ ವೈರಲ್ ಆಗಿದೆ.
ಗೂಢಾಚಾರಿ ಪಾತ್ರದಲ್ಲಿ ಅಕ್ಷಯ್ ಕುಮಾರ್: ಬೆಲ್‌ಬಾಟಂ ಟೀಸರ್ ರಿಲೀಸ್
ಕೆಲವರು ನನಗೆ ಆಹ್ವಾನ ಇರಲಿಲ್ಲ, ಇನ್ನು ಕೆಲವರು ನಾನು ರಿಜೆಕ್ಟ್ ಮಾಡಿದೆ ಎನ್ನುತ್ತಿದ್ದಾರೆ. ಭೀಷ್ಮ ಪಿತಾಮಹನಿಲ್ಲದೆ ಮಹಾಭಾರತ ಪೂರ್ಣವಾಗಲ್ಲ. ಆದರೆ ನಾನು ಈ ಆಹ್ವಾನ ತಿರಸ್ಕರಿಸಿದ್ದೆ ಎಂದಿದ್ದಾರೆ. ಕಪಿಲ್ ಶರ್ಮಾ ಶೋಗೆ ಬಹಳಷ್ಟು ದೊಡ್ಡ ಸ್ಟಾರ್ ನಟರು ಹೋಗ್ತಾರೆ ಎಂದು ನೀವು ಹೇಳಬಹುದು. ಅವರು ಹೋಗಲಿ, ನಾನು ಹೋಗಲ್ಲ ಎಂದಿದ್ದಾರೆ.
ಇದಕ್ಕೆ ಕಾರಣ ತಿಳಿಸಿದ ಹಿರಿಯ ನಟ, ಅದು ಅತ್ಯಂತ ಕೆಟ್ಟ ಶೋ, ಅಲ್ಲಿ ಬರೀ ಅಶ್ಲೀಲ ಮತ್ತು ಡಬಲ್ ಮೀನಿಂಗ್ ತುಂಬಿದೆ ಎಂದಿದ್ದಾರೆ. ಕಪಿಲ್ ಶರ್ಮಾ ಶೋ ಫೇಮಸ್ ಇರಬಹುದು. ಆದರೆ ನನಗದು ಅತ್ಯಂತ ಕೆಟ್ಟ ಶೋ, ಅಲ್ಲಿ ಬರೀ ಡಬಲ್ ಮೀನಿಂಗ್ ಮಾತುಗಳೇ ತುಂಬಿರುತ್ತದೆ. ಪುರುಷರು ಮಹಿಳೆಯ ಬಟ್ಟೆ ಧರಿಸಿ ಚೀಪ್ ಕೆಲಸ ಮಾಡಿ ಜನರನ್ನ ನಗಿಸ್ತಾರೆ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.