ಮೆಯೋಸಿಟಿಸ್ ಬಗ್ಗೆ ನಾನು ಬಹಿರಂಗವಾಗಿ ಹೇಳಿಕೊಳ್ಳುವ ಅನಿವಾರ್ಯತೆ ಇತ್ತು; ನಟಿ ಸಮಂತಾ

By Shriram Bhat  |  First Published Mar 16, 2024, 2:45 PM IST

ನನ್ನದೇ ಮುಖ್ಯ ಭೂಮಿಕೆಯ ಯಶೋದಾ ಚಿತ್ರದ ಪ್ರಮೋಶನ್‌ಗೆ ಹೋಗಲಾಗದ ನಾನು ನನ್ನ ಅನಾರೋಗ್ಯದ ಸಮಸ್ಯೆಯನ್ನು ಸಾರ್ವಜನಿಕವಾಗಿ ಹೇಳಕೊಳ್ಳದಿದ್ದರೆ ನನ್ನ ಬಗ್ಗೆ ಹಬ್ಬಿರುವ ತಪ್ಪು ವದಂತಿ ಇನ್ನಷ್ಟು ಪ್ರಚಾರ ಪಡೆಯುತ್ತಿತ್ತು.


ಖ್ಯಾತ ನಟಿ ಸಮಂತಾ ಮತ್ತೆ ಮಾತನಾಡಿದ್ದಾರೆ. ಈ ಮೊದಲು ಅವರು ಆಗಾಗ ತಮ್ಮ ಕಾಯಿಲೆ, ಅದಕ್ಕೆ ತೆಗೆದುಕೊಳ್ಳುತ್ತಿರುವ ಟ್ರೀಟ್ಮೆಂಟ್ ಬಗ್ಗೆ ಮಾತನಾಡುತ್ತಿದ್ದ ನಟಿ ಸಮಂತಾ ಈಗ ಬೇರೆಯದೇ ಕಾರಣಕ್ಕೆ ಮಾತನಾಡಿದ್ದಾರೆ. ತಾವು ತಮ್ಮ ಮೆಯೋಸಿಟಿಸ್ ಕಾಯಿಲೆ ಬಗ್ಗೆ ಅಂದು, ಅಂದರೆ 2023ರಲ್ಲಿ ಬಹಿರಂಗವಾಗಿ ಮಾತನಾಡಿದ್ದು ಯಾಕೆ ಎಂಬುದನ್ನು ಸಮಂತಾ ಈಗ ಹೇಳಿದ್ದಾರೆ. ತುಂಬಾ ನೋವಿನಿಂದ ಅದನ್ನು ಹೇಳಿಕೊಂಡಿರುವ ಸಮಂತಾ, 'ಆಗ ನನಗೆ ಹೇಳಲೇಬೇಕಾದ ಅಗತ್ಯವಿತ್ತು' ಎಂದಿದ್ದಾರೆ. 

'ನನ್ನ ನಟನೆಯ ಸಿನಿಮಾ 'ಯಶೋದಾ' 2022ರಲ್ಲಿ ಬಿಡುಗಡೆ ಕಾಣಬೇಕಿತ್ತು. ಆದರೆ ನನಗೆ ಅನಾರೋಗ್ಯ ಕಾಣಿಸಿತು. ಅದನ್ನು ಆಟೋ ಇಮ್ಯೂನ್ ಸಿಸ್ಟಮ್‌ಗೆ ಸಂಬಂಧಿಸಿದ ಕಾಯಿಲೆ 'ಮೆಯೋಸಿಟಿಸ್' ಎನ್ನಲಾಗಿದೆ. ಈ ಕಾಯಿಲೆ ಕಾರಣಕ್ಕೆ ನಾನು ತುಂಬಾ ನೋವಿನಿಂದ ಬಳಲಿದೆ. ನಾನು ಯಾವುದೇ ಶೂಟಿಂಗ್‌ನಲ್ಲಿ ಭಾಗವಹಿಸಲು ಸಾಧ್ಯವಿರಲಿಲ್ಲ. ಶೂಟಿಂಗ್ ಹಾಗಿರಲಿ, ಎಲ್ಲರಂತೆ ರೆಗ್ಯುಲರ್ ಲೈಫ್ ಕೂಡ ನಡೆಸಲು ಸಾಧ್ಯವಿರಲಿಲ್ಲ. ನಾನು ಟ್ರೇಟ್ಮೆಂಟ್ ತೆಗೆದುಕೊಳ್ಳಲು ಶುರುಮಾಡಿದ ಮೇಲಂತೂ ನನ್ನ ಮುಖ, ಅಂದ-ಚೆಂದವೆಲ್ಲಾ ಹಾಳಾಗಿ ಹೋಯ್ತು. 

Tap to resize

Latest Videos

ಅಮ್ಮನ ವಿರುದ್ಧವೇ ಹೋಗಿದ್ದೇಕೆ ಪ್ರಭಾಸ್; ಅತಿರೇಕಕ್ಕೆ ಹೋಗುವುದು ನನಗಿಷ್ಟ ಅಂದ್ಬಿಟ್ರು ಯಾಕೋ!

ಅದೆಲ್ಲಕ್ಕಿಂತ ಮುಖ್ಯವಾಗಿ, ನನ್ನ ನಟನೆಯ ಯಶೋಧಾ ಚಿತ್ರಕ್ಕೆ ಅನ್ಯಾಯವಾಗದಂತೆ ನಾನು ನೋಡಿಕೊಳ್ಳಬೇಕಿತ್ತು. ಒಂದು, ನಾನು ಯಶೋದಾ ಚಿತ್ರದ ಪ್ರಮೋಶನ್‌ಗೆ ಹೋಗಬೇಕಿತ್ತು. ಎರಡು, ನಾನು ಪ್ರಮೋಶನ್‌ಗೆ ಹೋಗದೇ ನನ್ನಯಶೋದಾ ಚಿತ್ರವನ್ನು ಸಾಯಿಸಬೇಕಿತ್ತು. ಅಂಥ ಕ್ರಿಟಿಕಲ್ ಸಮಯದಲ್ಲಿ ನಾನು ಎರಡನೆಯದನ್ನೇ ಆಯ್ಕೆ ಮಾಡಿಕೊಂಡೆ. ನನ್ನ ಅನಾರೋಗ್ಯದ ಕುರಿತು ಬಹಿರಂಗವಾಗಿ ಹೇಳಿಕೊಂಡೆ. ಆದರೆ ಅದನ್ನು ಅಪಾರ್ಥ ಮಾಡಿಕೊಂಡು 'ಸಿಂಪಥಿ' ಗಿಟ್ಟಿಸಿಕೊಳ್ಳಲು ಯತ್ನಿಸುತ್ತಿದ್ದಾಳೆ ಎಂದು ಆರೋಪ ಮಾಡಲಾಯ್ತು. ನನ್ನನ್ನು 'ಸಿಂಪಥಿ ಕ್ವೀನ್' ಎಂದೂ ಕರೆಯಲಾಯ್ತು. 

ಕೆಜಿಎಫ್‌ ನಿರ್ದೇಶಕರಿಗೆ ಗನ್ ಬಗ್ಗೆ ಶಾಕಿಂಗ್ ಪ್ರಶ್ನೆ ಕೇಳಿದ ರಾಜಮೌಳಿ; ಏನಂದ್ರು ಪ್ರಶಾಂತ್ ನೀಲ್?

ಆದರೆ, ನನ್ನದೇ ಮುಖ್ಯ ಭೂಮಿಕೆಯ ಯಶೋದಾ ಚಿತ್ರದ ಪ್ರಮೋಶನ್‌ಗೆ ಹೋಗಲಾಗದ ನಾನು ನನ್ನ ಅನಾರೋಗ್ಯದ ಸಮಸ್ಯೆಯನ್ನು ಸಾರ್ವಜನಿಕವಾಗಿ ಹೇಳಕೊಳ್ಳದಿದ್ದರೆ ನನ್ನ ಬಗ್ಗೆ ಹಬ್ಬಿರುವ ತಪ್ಪು ವದಂತಿ ಇನ್ನಷ್ಟು ಪ್ರಚಾರ ಪಡೆಯುತ್ತಿತ್ತು. ಅದಕ್ಕಾಗಿ ನಾನು ನನ್ನ ಮೆಯೋಸಿಟಿಸ್ ಕಾಯಿಲೆ ಬಗ್ಗೆ ಬಹಿರಂಗವಾಗಿ ಹೇಳಿಕೊಂಡೆ. ಆದರೂ ಅದು ನನ್ನ ಚಿತ್ರದ ಯಶಸ್ಸಿನ ಬಗ್ಗೆ ಪರಿಣಾಮ ಬೀರಿದೆ. ಅನಿವಾರ್ಯವಾಗಿ ಅದನ್ನು ಸ್ವೀಕರಿಸಬೇಕಾಯ್ತು. ಅಂದು ನನ್ನ ಬಗ್ಗೆ ಕೆಟ್ಟದಾಗಿ ಪ್ರಚಾರ ಮಾಡಲಾಯ್ತು. ನಾನು ಮಾನಸಿಕವಾಗಿ ತುಂಬಾ ಕುಗ್ಗಿಹೋಗಿದ್ದೆ' ಎಂದಿದ್ದಾರೆ ನಟಿ ಸಮಂತಾ. 

ಕತ್ರಿನಾ ಕೈಫ್ ಬಗ್ಗೆ ವಿಜಯ್ ಸೇತುಪತಿ ಅದ್ಯಾಕೋ ಹಾಗೆ ಹೇಳ್ಬಿಟ್ರು; ಯಡವಟ್ಟಾಗಿದ್ದು ಎಲ್ಲಿ ?

ಅಂದಹಾಗೆ ನಟಿ ಸಮಂತಾ ಕಾಯಿಲೆಗಿಂತ ಮೊದಲು ನಟಿಸಿದ ಕಡೆಯ ಚಿತ್ರ ವಿಜಯ್ ದೇವರಕೊಂಡ ಜೋಡಿಯಾಗಿ ಕಾಣಿಸಿಕೊಂಡ ಯಶೋದಾ. ಈ ಸಿನಿಮಾ ತೆಲುಗು, ತಮಿಳು, ಕನ್ನಡ ಹಾಗು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಸದ್ಯ 'ಸಿತ್ರಾಡೆಲ್‌' ಎಂಬ ಆಕ್ಷನ್‌ ಸೀರಿಸ್‌ನಲ್ಲೂ ಸಮಂತಾ ನಟಿಸುತ್ತಿದ್ದಾರೆ. ಒಟ್ಟಿನಲ್ಲಿ, ಅಂದಿನ ಅನಿವಾರ್ಯತೆಯನ್ನು ಇಂದು ನಟಿ ಸಮಂತಾ ಪಾಡ್‌ಕಾಸ್ಟ್ ಮೂಲಕ ಹಂಚಿಕೊಂಡಿದ್ದಾರೆ. 

ಪೋಷಕ ಪಾತ್ರವೇ ನನಗೆ ಹೆಚ್ಚು ಆರಾಮದಾಯಕ ಎನಿಸುತ್ತದೆ; ಹೀಗಂದಿದ್ಯಾಕೆ ಶಿವಕಾರ್ತಿಕೇಯನ್?

click me!