ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿಧಾನಸಭೆಯಲ್ಲಿ ಮಾಡಿದ ಹೇಳಿಕೆಗಳಿಗೆ ನಟ ಅಲ್ಲು ಅರ್ಜುನ್ ಪ್ರತಿಕ್ರಿಯಿಸಿದ್ದಾರೆ. ತಮ್ಮ ವ್ಯಕ್ತಿತ್ವವನ್ನೇ ಹಾಳುಗೆಡುವಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸಂಧ್ಯಾ ಥಿಯೇಟರ್ ಘಟನೆ ಮತ್ತಷ್ಟು ಗಂಭೀರವಾಗುತ್ತಿದೆ. ಈ ಘಟನೆ ಸಿಎಂ ರೇವಂತ್ ರೆಡ್ಡಿ ಮತ್ತು ಅಲ್ಲು ಅರ್ಜುನ್ ನಡುವಿನ ಜಗಳವಾಗಿ ಪರಿಣಮಿಸಿದೆ. ವಿಧಾನಸಭೆಯಲ್ಲಿ ಸಿಎಂ ರೇವಂತ್ ರೆಡ್ಡಿ ಮಾಡಿದ ಹೇಳಿಕೆಗಳಿಗೆ ಅಲ್ಲು ಅರ್ಜುನ್ ಪ್ರತಿಕ್ರಿಯಿಸಿದ್ದಾರೆ. ಶನಿವಾರ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಈ ವೇಳೆ ಅವರು ಮಾತನಾಡಿ, ನಡೆದ ಘಟನೆ ಸಂಪೂರ್ಣವಾಗಿ ಆಕಸ್ಮಿಕ ಎಂದಿದ್ದಾರೆ. ಇದು ತುಂಬಾ ನೋವಿನ ಸಂಗತಿ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಮೃತ ಮಹಿಳೆಯ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಶ್ರೀತೇಜ್ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಸಂತೋಷವಾಗಿದೆ ಎಂದಿದ್ದಾರೆ.
ಈ ಬಗ್ಗೆ ಅಲ್ಲು ಅರ್ಜುನ್ ಮತ್ತಷ್ಟು ಮಾತನಾಡಿ, ನನ್ನ ಮೇಲೆ ಸುಳ್ಳು ಆರೋಪ ಮಾಡ್ತಿದ್ದಾರೆ. ನನ್ನ ವ್ಯಕ್ತಿತ್ವವನ್ನೇ ಹಾಳುಗೆಡುವುತಾರಲ್ಲ, ಬೇಸರವಾಗಿದೆ. ಇಷ್ಟು ದಿನ ನಾನು ಯಾವ ತಪ್ಪನ್ನೂ ಮಾಡಿಲ್ಲ. ನಾನು ರೋಡ್ ಶೋ ಮಾಡಿದೆ ಎಂಬ ಆರೋಪದಲ್ಲಿ ಸತ್ಯವಿಲ್ಲ ಎಂದು ಹೇಳಿದ್ದಾರೆ. ಪೊಲೀಸರು ನನಗೆ ಯಾವುದೇ ಮಾಹಿತಿ ನೀಡಿಲ್ಲ, ಈ ಘಟನೆಯ ಬಗ್ಗೆ ಹೇಳಿಲ್ಲ, ನನ್ನ ತಂಡದವರು, ಥಿಯೇಟರ್ ಮ್ಯಾನೇಜ್ಮೆಂಟ್‌ನವರು ಜನಸಂದಣಿ ಜಾಸ್ತಿ ಆಗ್ತಿದೆ, ಹೊರಗೆ ಹೋಗಿ ಅಂತ ಹೇಳಿದ್ರು. ಅವರಿಗೋಸ್ಕರ ನಾನು ಹೊರಗೆ ಬಂದೆ. ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಬಂದಿದ್ದರು. ಅವರು ನನಗಾಗಿ ಕೂಗುತ್ತಿದ್ದರು.
undefined
ಅವರನ್ನ ಬಿಟ್ಟು ಹೋದ್ರೆ ನನ್ನನ್ನ ದುರಹಂಕಾರಿ ಅಂತಾರೆ ಅಂತ ಅವರಿಗೋಸ್ಕರ ಕಾರಿನ ಮೇಲೆ ಬಂದು ಅಭಿವಾದನೆ ಸಲ್ಲಿಸಿದೆ. ನಾನು ಹೇಳಿದ್ರೆ ಮಾತ್ರ ಅಭಿಮಾನಿಗಳು ಮುಂದೆ ಹೋಗ್ತಾರೆ ಅಂತ ಪೊಲೀಸರು ಹೇಳಿದ್ರಿಂದ ನಾನು ಹಾಗೆ ಮಾಡಿದೆ, ಆದ್ರೆ ಸಂಭ್ರಮಾಚರಣೆಗಲ್ಲ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. ನಾನು ಸಿನಿಮಾ ಮಾಡೋದೇ ಪ್ರೇಕ್ಷಕರಿಗೆ ಮನರಂಜನೆ ನೀಡೋಕೆ ಅಂತ ಅಲ್ಲು ಅರ್ಜುನ್ ಹೇಳಿದ್ದಾರೆ. ತೆಲುಗು ಜನರ ಗೌರವ ಹೆಚ್ಚಿಸಬೇಕು ಅಂತ ನಾನು ಸಿನಿಮಾ ಮಾಡ್ತಿದ್ರೆ ನಾವೇ ನಮ್ಮನ್ನ ತಗ್ಗಿಸಿಕೊಳ್ಳುತ್ತಿದ್ದೇವೆ. ಶ್ರೀತೇಜ್ ವಿಷಯದಲ್ಲಿ ನಾನು ಎಲ್ಲ ರೀತಿಯಲ್ಲೂ ಸಹಕರಿಸಲು ಬದ್ಧನಾಗಿದ್ದೇನೆ, ಆದರೆ ನಾನು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದೇನೆ ಎಂಬ ಆರೋಪ ನೋವುಂಟು ಮಾಡಿದೆ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
ಡಾರ್ಲಿಂಗ್ ಪ್ರಭಾಸ್‌ಗೆ ಸ್ವೀಟಿ ಅನುಷ್ಕಾ ಶೆಟ್ಟಿ ಪೈಪೋಟಿ ಕೊಡ್ತಾರಂತೆ: ಮದ್ವೆ ವಿಚಾರವಂತೂ ಅಲ್ಲ!
ಸಂವಹನದಲ್ಲಿ ದೊಡ್ಡ ಅಂತರ ಬಂದಿದೆ, ಸುಳ್ಳು ಆರೋಪ ಮಾಡ್ತಿದ್ದಾರೆ, ವ್ಯಕ್ತಿತ್ವ ಹಾಳು ಮಾಡ್ತಿದ್ದಾರೆ ಎಂದು ಹೇಳಿದ್ದಾರೆ. ಇಪ್ಪತ್ತು ವರ್ಷಗಳ ಕಷ್ಟ, ವಿಶ್ವಾಸಾರ್ಹತೆಯನ್ನ ಒಂದೇ ರಾತ್ರಿಯಲ್ಲಿ ಮುರಿಯುತ್ತಿದ್ದಾರೆ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ. ಆ ರಾತ್ರಿ ಆ ಘಟನೆಯ ಬಗ್ಗೆ ಗೊತ್ತಿರಲಿಲ್ಲ, ಬೆಳಿಗ್ಗೆ ಗೊತ್ತಾದ ತಕ್ಷಣ ವಿಡಿಯೋ ಮೂಲಕ ಪ್ರತಿಕ್ರಿಯಿಸಿದೆ. ಆಸ್ಪತ್ರೆಗೆ ಹೋಗಿ ಆ ಹುಡುಗನನ್ನ ಭೇಟಿ ಮಾಡಬೇಕು ಅಂತಿದ್ದೆ, ಆದರೆ ಆಸ್ಪತ್ರೆಯವರು, ನನ್ನ ಸ್ನೇಹಿತ ಬನ್ನಿ ವಾಸು ಆಸ್ಪತ್ರೆಗೆ ಹೋಗಿ ಪರಿಸ್ಥಿತಿ ನೋಡಿ ಆಸ್ಪತ್ರೆಗೆ ಬರಬೇಡಿ ಅಂತ ಹೇಳಿದ್ರಿಂದ ನಾನು ಹಿಂದೆ ಸರಿದೆ. ಈ ಬಗ್ಗೆ ಕೇಸ್ ಆಗಿರೋದ್ರಿಂದ ಕಾನೂನು ಸಮಸ್ಯೆಗಳಿಂದ ನಾನು ಸುಮ್ಮನಿದ್ದೆ ಅಂತ ಅಲ್ಲು ಅರ್ಜುನ್ ಹೇಳಿದ್ದಾರೆ.
ಪುಷ್ಪ 2 ಸಿನಿಮಾ ಪ್ರೀಮಿಯರ್ ದಿನ ರಾತ್ರಿ ಸಂಧ್ಯಾ ಥಿಯೇಟರ್‌ಗೆ ಅಲ್ಲು ಅರ್ಜುನ್ ತಂಡದೊಂದಿಗೆ ಬಂದಿದ್ದು ಗೊತ್ತೇ ಇದೆ. ಅಭಿಮಾನಿಗಳ ನಡುವೆ ಸಿನಿಮಾ ನೋಡಲು, ಅಭಿಮಾನಿಗಳಲ್ಲಿ ಉತ್ಸಾಹ ತುಂಬಲು ಅವರು ಥಿಯೇಟರ್‌ಗೆ ಬಂದಿದ್ದರು. ಅಲ್ಲು ಅರ್ಜುನ್ ಬರ್ತಿದ್ದಾರೆ ಅಂತ ಗೊತ್ತಾಗಿ ಅವರಿಗಾಗಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ಬಂದಿದ್ದರಿಂದ ಥಿಯೇಟರ್ ಬಳಿ ಕಾಲ್ತುಳಿತ ಉಂಟಾಯಿತು. ಈ ಘಟನೆಯಲ್ಲಿ ಮಹಿಳಾ ಅಭಿಮಾನಿ ರೇವತಿ ಸ್ಥಳದಲ್ಲೇ ಮೃತಪಟ್ಟರು, ಆಕೆಯ ಮಗ ಶ್ರೀತೇಜ್ ಇನ್ನೂ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದಾನೆ. ಈ ಘಟನೆಯಲ್ಲಿ ಥಿಯೇಟರ್ ಮಾಲೀಕರು ಮತ್ತು ನಟ ಅಲ್ಲು ಅರ್ಜುನ್ ಮೇಲೆ ಚಿಕ್ಕಡಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಮೃತ ರೇವತಿ ಪತಿ ಭಾಸ್ಕರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಅಲ್ಲು ಅರ್ಜುನ್‌ರನ್ನು ಬಂಧಿಸಲಾಯಿತು. ನಾಂಪಳ್ಳಿ ನ್ಯಾಯಾಲಯ ಅವರಿಗೆ ರಿಮಾಂಡ್ ವಿಧಿಸಿತು. ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿದ್ದರಿಂದ ಬನ್ನಿ ಹೊರಬಂದರು. ಆದರೆ ಆ ರಾತ್ರಿ ಜೈಲಿನಲ್ಲಿ ಕಳೆದರು.