ಇಸ್ಲಾಂನಲ್ಲಿ ನಂಬಿಕೆ ಇಲ್ಲ ಎನ್ನುತ್ತಲೇ ಹಿಂದೂ ಧರ್ಮ ಅಪ್ಪಿದ ಮತ್ತೋರ್ವ ನಟಿ! ಕೊಟ್ಟ ಕಾರಣ ಹೀಗಿದೆ...

By Suvarna News  |  First Published Oct 31, 2023, 2:30 PM IST

ಇಸ್ಲಾಂನಲ್ಲಿ ನಂಬಿಕೆ ಇಲ್ಲ ಎನ್ನುತ್ತಲೇ ಹಿಂದೂ ಧರ್ಮ ಅಪ್ಪಿದ್ದಾರೆ ನಟಿ ಉರ್ಫಿ ಜಾವೇದ್​. ಇವರು ನೀಡಿದ ಹಳೆಯ ಸಂದರ್ಶನ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
 


 ಕೆಲ ದಿನಗಳ ಹಿಂದಷ್ಟೇ ನಟಿ ಫರ್ಹೀನ್ ಪ್ರಭಾಕರ್ ಅಲಿಯಾಸ್ ಬಿಂದಿಯಾ  ಅವರು ಕ್ರಿಕೆಟಿಗ ಮನೋಜ್ ಪ್ರಭಾಕರ್ ಅವರನ್ನು ಮದುವೆಯಾಗಿದ್ದು ಸುದ್ದಿಯಾಗಿತ್ತು. ಮುಸ್ಲಿಂ ಕುಟುಂಬದಲ್ಲಿ ಹುಟ್ಟಿದ್ದ ಫರ್ಹೀನ್​, ತಮ್ಮ ತಂದೆ ಮೂರು ಮದುವೆಯಾದ ಕಾರಣ, ತಾವು ಅನುಭವಿಸಬಾರದ ನೋವು ಅನುಭವಿಸಿದ್ದುದಾಗಿ ಹೇಳಿಕೊಂಡಿದ್ದರು. ನನಗೆ ಮುಸ್ಲಿಂ ಪುರುಷರಲ್ಲಿ ನಂಬಿಕೆ ಬಾಲ್ಯದಿಂದಲೂ ಇರಲಿಲ್ಲ. ಇದೇ ಕಾರಣಕ್ಕೆ, ಚಿಕ್ಕವಯಸ್ಸಿನಲ್ಲಿ  ಹಿಂದೂವನ್ನು ಮದುವೆಯಾಗುವ ಉತ್ಕಟ ಬಯಕೆ ಹೊಂದಿದ್ದೆ. ಅದನ್ನೇ ಈಗ ಈಡೇರಿಸುತ್ತಿದ್ದೇನೆ ಎಂದಿದ್ದರು. ಅಕ್ಷಯ್ ಕುಮಾರ್ ನಟನೆಯ  ಚಲನಚಿತ್ರ 'ಸೈನಿಕ' ದಲ್ಲಿ  ನಟಿಸಿ  ಪ್ರಸಿದ್ಧಿ ಪಡೆದ ಫರ್ಹೀನ್​,  1992 ರಲ್ಲಿ ಬಿಡುಗಡೆಯಾದ 'ಜಾನ್ ತೇರೆ ನಾಮ್' ಮೂಲಕ ಬಾಲಿವುಡ್‌ಗೆ ನಟಿ ಪದಾರ್ಪಣೆ ಮಾಡಿದರು. ನಂತರ ಅವರು ಕನ್ನಡ , ತಮಿಳು ಚಿತ್ರಗಳಲ್ಲೂ ನಟಿಸಿದ್ದಾರೆ.

ಇದರ ಬೆನ್ನಲ್ಲೇ ಇದೀಗ ಮತ್ತೋರ್ವ ನಟಿ ಉರ್ಫಿ ಜಾವೇದ್​ ಕೂಡ ಇದೇ ಹಾದಿ ಹಿಡಿದಿದ್ದು, ಇವರ ಹಳೆಯ ಸಂದರ್ಶನವೊಂದು ಸಕತ್​ ವೈರಲ್​ ಆಗುತ್ತಿದೆ. ಉರ್ಫಿ ಜಾವೇದ್​ (Uorfi Javed) ಎಂದಾಕ್ಷಣ ಎಲ್ಲರ ಕಣ್ಣುಮುಂದೆ ಬರುವುದು ಅತ್ಯಂತ ಕನಿಷ್ಠ ಉಡುಪು ಅಥವಾ ಉಡುಪೇ ಇಲ್ಲದ ನಟಿಯ ರೂಪ. ಚುಮುಚುಮು ಚಳಿಯಲ್ಲಿಯೂ ಮೈಮೇಲೆ ತುಂಡು ಬಟ್ಟೆಯುಟ್ಟು ಪಡ್ಡೆ ಹುಡುಗರ ಬಿಸಿ ಏರಿಸ್ತಿರೋ ಈ ನಟಿ  ಸೋಷಿಯಲ್ ಮೀಡಿಯಾದಲ್ಲಿ  (Social media) ಸೆನ್ಸೇಷನ್ ಕ್ರಿಯೇಟ್​ ಮಾಡ್ತಿರೋದು ಹೊಸ ವಿಷಯವೇನಲ್ಲ. ಪ್ರತಿದಿನವೂ ಎಂಬಂತೆ ವಿಶಿಷ್ಟ ರೀತಿಯಲ್ಲಿ ಉಡುಗೆ ತೊಟ್ಟು ಅದರ ಫೋಟೋಶೂಟ್​ ಮಾಡಿಸಿಕೊಂಡು ಜಾಲತಾಣದಲ್ಲಿ ಪೋಸ್ಟ್​ ಮಾಡುವುದರಲ್ಲಿ ಉರ್ಫಿಯದ್ದು ಎತ್ತಿದ ಕೈ. ಕೆಲವೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್​ ನೀಡಿರುವ ಫೋಟೋಗಳೂ ಕಮ್ಮಿಯೇನಲ್ಲ. 

Tap to resize

Latest Videos

ಭಾರತದ ಸ್ಟಾರ್‌ ಕ್ರಿಕೆಟರ್‌ ಮದುವೆಯಾಗಿ ನಟನೆಗೆ ಗುಡ್‌ಬೈ ಹೇಳಿದ ಕನ್ನಡದ ನಟಿ!

ಕೆಲ ದಿನಗಳ ಹಿಂದೆ ಇವರ  ಎಂಗೇಜ್​ಮೆಂಟ್ ಆದಂಥ ವಿಡಿಯೋ ವೈರಲ್​ ಆಗಿತ್ತು.  ಈಕೆ ಒಬ್ಬ ನಿಗೂಢ ವ್ಯಕ್ತಿಯ ಜೊತೆ  ನಿಶ್ಚಿತಾರ್ಥ ಮಾಡಿರುವಂಥ ಫೋಟೋಗಳು ಅವು. ಈ ಜೋಡಿ ಪವಿತ್ರ ಹೋಮ ಕುಂಡದ ಮುಂದೆ ಕುಳಿತು ಅರ್ಚಕರು ಹೇಳಿದಂತೆ ಮಾಡುತ್ತಿದ್ದುದನ್ನು ವಿಡಿಯೋದಲ್ಲಿ ನೋಡಬಹುದಾಗಿತ್ತು. ಇದರ ಬೆನ್ನಲ್ಲೇ ನಟಿ ತಮಗೆ ಇಸ್ಲಾಂ ಧರ್ಮದಲ್ಲಿ ನಂಬಿಕೆ ಇಲ್ಲ ಎನ್ನುವ ಸಂದರ್ಶನ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.  ಈಕೆ ಇಂಡಿಯಾ ಟುಡೇಗೆ  ನೀಡಿದ್ದ ಹಳೆಯ  ಸಂದರ್ಶನದಲ್ಲಿ ತಾವು ಯಾವುದೇ ಮುಸಲ್ಮಾನರನ್ನು ಮದುವೆಯಾಗುವುದಿಲ್ಲ, ಇಸ್ಲಾಂನಲ್ಲಿ ನಂಬಿಕೆ ಇಲ್ಲ. ತಾವು ಏನಿದ್ದರೂ ಹಿಂದೂ ಹುಡುಗನನ್ನೇ ಮದುವೆಯಾಗುವುದು ಎಂದಿದ್ದಾರೆ. ತಮಗೆ ಭಗವದ್ಗೀತೆಯೇ ಶ್ರೇಷ್ಠ, ಅದನ್ನೇ ಓದುತ್ತಿದ್ದೇನೆ ಎಂದೂ ಹೇಳಿದ್ದಾರೆ. 
 
ಮುಸ್ಲಿಂ ಸಮಾಜ ಮಹಿಳೆಯರನ್ನು ಅವರಿಗೆ ಅನ್ನಿಸದಂತೆ ಇಡಲು ಬಿಡುವುದಿಲ್ಲ. ನನ್ನಂಥ ಮುಸ್ಲಿಂ ಮಹಿಳೆಯರು ಏನೇ ಮಾಡಿದರೂ  ಆಕ್ಷೇಪಾರ್ಹ ಕಮೆಂಟ್‌ಗಳನ್ನು ಮಾಡುತ್ತಾರೆ.  ಮುಸ್ಲಿಂ ಪುರುಷರು, ಮಹಿಳೆಯರು ತಾವು ರಚಿಸಿದ ವಲಯದಲ್ಲೇ ಉಳಿಯಬೇಕೆಂದು  ಬಯಸುವಂಥವರು.  ಅವರು ತಮ್ಮ ಸಮುದಾಯದ ಎಲ್ಲಾ ಮಹಿಳೆಯರನ್ನು ನಿಯಂತ್ರಿಸಲು ಬಯಸುತ್ತಾರೆ. ಇದರಿಂದಾಗಿ ನನಗೆ ಇಸ್ಲಾಂನಲ್ಲಿ ನಂಬಿಕೆ ಇಲ್ಲ.  ನಾನು ಎಂದಿಗೂ ಮುಸ್ಲಿಂ ಹುಡುಗನನ್ನು ಮದುವೆಯಾಗುವುದಿಲ್ಲ ಎಂದು ಈ ಸಂದರ್ಶನದಲ್ಲಿ ಹೇಳಿದ್ದಾರೆ.

 ನಾವು ಯಾರನ್ನು ಬೇಕಾದರೂ ಮದುವೆಯಾಗಬಹುದು. ಧರ್ಮಕ್ಕಾಗಿ ಯಾರನ್ನೂ ಬಲವಂತಪಡಿಸಬಾರದು.  ನಾನು 17 ವರ್ಷದವಳಿದ್ದಾಗ, ಅಪ್ಪ ಬಿಟ್ಟು ಹೋದರು.  ನನ್ನ ತಾಯಿ ತುಂಬಾ ಧಾರ್ಮಿಕ ಮಹಿಳೆ, ಆದರೆ ಅವರು ಎಂದಿಗೂ ತಮ್ಮ ಧರ್ಮವನ್ನು ನಮ್ಮ ಮೇಲೆ ಹೇರಲಿಲ್ಲ. ನನ್ನ ಒಡಹುಟ್ಟಿದವರು ಇಸ್ಲಾಂ ಧರ್ಮವನ್ನು ಅನುಸರಿಸುತ್ತಾರೆ. ಆದರೆ ನಾನು ಹಾಗೆ ಮಾಡುವುದಿಲ್ಲ. ನಿಮ್ಮ ಧರ್ಮವನ್ನು ನಿಮ್ಮ ಹೆಂಡತಿ ಮತ್ತು ಮಕ್ಕಳ ಮೇಲೆ ಹೇರಲು ಸಾಧ್ಯವಿಲ್ಲ. ಅದು ಹೃದಯದಿಂದ ಇರಬೇಕು. ಇಲ್ಲದಿದ್ದರೆ ನೀವು ಸಂತೋಷವಾಗಿರುವುದಿಲ್ಲ ಮತ್ತು ಅಲ್ಲಾಹನೂ ಸಂತೋಷವಾಗಿರುವುದಿಲ್ಲ ಎಂದಿರೋ ಉರ್ಫಿ,  ನಾನು ಹಿಂದೂ ಧರ್ಮದ ಬಗ್ಗೆ ಆಳವಾಗಿ ತಿಳಿದುಕೊಳ್ಳಲು ಬಯಸುತ್ತೇನೆ, ಆದ್ದರಿಂದ ಭಗವಗ್ದೀತೆ ಓದುತ್ತಿದ್ದೇನೆ ಎಂದಿದ್ದಾರೆ.

ನಿಗೂಢ ವ್ಯಕ್ತಿ ಜೊತೆ ಉರ್ಫಿ ಎಂಗೇಜ್​ಮೆಂಟ್​ ಸುದ್ದಿ ಕೇಳುತ್ತಲೇ ಮಾಜಿ ಬಾಯ್​ಫ್ರೆಂಡ್​ನಿಂದ ದುಬಾರಿ ಗಿಫ್ಟ್​!

click me!