ಬ್ರೇಕಪ್‌ ಬೆನ್ನಲ್ಲೇ 'ಅದೊಂದು ಸಮಸ್ಯೆ' ಇದೆ ಎಂದ ಶ್ರುತಿ ಹಾಸನ್: ಕಮಲ್ ಪುತ್ರಿಗೆ ಆ ಭಾಗ್ಯ ಇಲ್ವಾ?

By Govindaraj S  |  First Published Jun 2, 2024, 8:23 PM IST

ಕಮಲ್ ಹಾಸನ್ ಮಗಳು ಶ್ರುತಿ ಹಾಸನ್‌ ಸೌತ್‌ನ ಸ್ಟಾರ್ ನಟಿಯಾಗಿದ್ದು, ದೊಡ್ಡ ದೊಡ್ಡ ಸ್ಟಾರ್‌ಗಳ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತ ಕೋಟಿ ಕೋಟಿ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ. ಇದೀಗ ಶ್ರುತಿ ತಮಗಿರುವ ಪಿಸಿಓಎಸ್ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. 


ಕಮಲ್ ಹಾಸನ್ ಮಗಳು ಶ್ರುತಿ ಹಾಸನ್‌ ಸೌತ್‌ನ ಸ್ಟಾರ್ ನಟಿಯಾಗಿದ್ದು, ದೊಡ್ಡ ದೊಡ್ಡ ಸ್ಟಾರ್‌ಗಳ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸುತ್ತ ಕೋಟಿ ಕೋಟಿ ಸಂಭಾವನೆಯನ್ನೂ ಪಡೆಯುತ್ತಿದ್ದಾರೆ. ಇದೀಗ ಶ್ರುತಿ ತಮಗಿರುವ ಪಿಸಿಓಎಸ್ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ಸಿನಿಮಾ ಮಾತ್ರವಲ್ಲದೆ ವೈಯಕ್ತಿಕ ವಿಚಾರಗಳ ಬಗ್ಗೆಯೂ ನಟಿ ಶ್ರುತಿ ಹಾಸನ್‌ ಆಗಾಗ ಸುದ್ದಿಯ ಮುನ್ನೆಲೆಗೆ ಬರುತ್ತಿರುತ್ತಾರೆ. ಅದರಲ್ಲೂ ಬಾಯ್‌ಫ್ರೆಂಡ್‌, ಬ್ರೇಕಪ್‌ ಬಗ್ಗೆ ಸದ್ದು ಮಾಡಿದ್ದೇ ಹೆಚ್ಚು ಈ ನಟಿ. ಬಹುಕಾಲದ ಗೆಳೆಯ ಶಾಂತನು ಹಜಾರಿಕಾ ಜತೆಗೆ ಲೀವ್‌ ಇನ್ ರಿಲೇಷನ್‌ಶಿಪ್‌ನಲ್ಲಿದ್ದ‌ ಶ್ರುತಿ, ಆತನಿಂದಲೂ ಇತ್ತೀಚೆಗಷ್ಟೇ ದೂರವಾಗಿದ್ದರು. 

ಇಬ್ಬರ ನಡುವಿನ ಪ್ರೀತಿಯೂ ಮುರಿದು ಬಿದ್ದಿತ್ತು. ಆತನ ಜತೆಗಿನ ಫೋಟೋಗಳನ್ನೂ ಅಳಿಸಿ ಹಾಕಿದ್ದರು. ಸೋಷಿಯಲ್‌ ಮೀಡಿಯಾದಲ್ಲೂ ಈ ವಿಚಾರ ವೈರಲ್‌ ಆಗಿತ್ತು. ಆದರೆ, ಈ ಬಗ್ಗೆ ಶ್ರುತಿ ಹಾಸನ್ ಮಾತ್ರ ತುಟಿ ಬಿಚ್ಚಿರಲಿಲ್ಲ.‌ ಈ ಪ್ರೀತಿ, ಬ್ರೇಕಪ್‌ ವದಂತಿಗಳ ನಡುವೆಯೇ ತಮಗಿರುವ ಆರೋಗ್ಯ ಸಮಸ್ಯೆ ಬಗ್ಗೆಯೂ ಶ್ರುತಿ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ತನಗೆ ಪಿಸಿಒಎಸ್‌ (Polycystic Ovary Syndrome) ಸಮಸ್ಯೆ ಇದೆ. ಅದರಿಂದ ಬಳಲುತ್ತಿದ್ದೇನೆ ಎಂದು ನೋವಿನ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

Tap to resize

Latest Videos

'ಹುಡುಗರಿಗೆ ಕ್ಯಾಚ್‌ ಹಾಕೋಕೆ ರೆಡಿ..' ಬ್ರೇಕಪ್ ನಂತ್ರ ಸೀರೆಯಲ್ಲಿ ಮಿಂಚಿದ ಶ್ರುತಿ ಹಾಸನ್‌ಗೆ ಹೀಗೆ ಹೇಳೋದಾ?

 'ನನಗೆ ಬ್ಯಾಡ್ ಪಿರಿಯಡ್ಸ್ ಸಮಸ್ಯೆ ಇದೆ. ಮೊದಲಿನಿಂದಲೂ ಈ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಈಗಲೂ ಆ ನೋವಿನಿಂದ ನರಳುತ್ತಿದ್ದೇನೆ. ಆ ಅವಧಿಯಲ್ಲಿ ಯಾವ ಕೆಲಸವನ್ನೂ ಸರಿಯಾಗಿ ಮಾಡಲಾಗುವುದಿಲ್ಲ. ಆ ಸಮಸ್ಯೆಯಿಂದ ನನ್ನ ಜೀವನದಲ್ಲಿ ಸಾಕಷ್ಟು ಕಳೆದುಕೊಂಡಿದ್ದೇನೆ' ಎಂದು ಮುಟ್ಟಿನ ದಿನಗಳ ನೋವನ್ನು ಶ್ರುತಿ ಹಾಸನ್ ಹೇಳಿಕೊಂಡಿದ್ದಾರೆ.‌ ಋತುಸ್ರಾವದ ಸಮಯದಲ್ಲಿ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಮಾತನಾಡಿದ ಶ್ರುತಿ, ಆ ಸಮಯದಲ್ಲಿ ಮಹಿಳೆಯರ ದೇಹದಲ್ಲಿ ಸಾಕಷ್ಟು ಬದಲಾವಣೆಗಳಾಗುತ್ತವೆ. ದೈಹಿಕ ಮಾತ್ರವಲ್ಲದೆ, ಮಾನಸಿಕವಾಗಿಯೂ ಆಕೆ ಬಳಲುತ್ತಾಳೆ. ಮಾಸಾಂತ್ಯದ ದಿನಗಳಲ್ಲಿ ಒಂದು ರೀತಿ ಆಕೆ ತನ್ನ ದೇಹದ ಜತೆಗೆ ಯುದ್ದಕ್ಕೆ ನಿಂತಿರುತ್ತಾಳೆ. 

ಕೆಂಪು ಸೀರೆಯಲ್ಲಿ ಗುಲಾಬಿಯಂತೆ ಮಿಂಚಿದ ಕಮಲ್ ಪುತ್ರಿ: ಶ್ರುತಿ ಹಾಸನ್‌ ಅಂದ-ಚಂದ ನೋಡಿ ಊಫ್... ಎಂದ ನೆಟ್ಟಿಗರು

ಅದೊಂದು ರೀತಿ ಎರಡು ಅಂಚಿನ ಕತ್ತಿ ಎಂದೂ ಶ್ರುತಿ ಮುಟ್ಟಿನ ದಿನಗಳ ಬಗ್ಗೆ ಮಾತನಾಡಿದ್ದಾರೆ. ಜೊತೆಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸಿನಿಮಾ ಮಾಡುತ್ತಿರುವಾಗ, ಪಿರಿಯಡ್ ಪ್ರಾಬ್ಲಂ ಆದರೆ, ಅದರಂಥ ನರಕ ಇನ್ನೊಂದಿಲ್ಲ. ಇದರಿಂದಾಗಿ ನಾನು ಸಾಕಷ್ಟು ದೊಡ್ಡ ದೊಡ್ಡ ಆಫರ್‌ಗಳನ್ನು ಕಳೆದುಕೊಂಡಿದ್ದೇನೆ. ಆದರೆ ಕೆಲವು ನಿರ್ಮಾಪಕರು ಕೋಟಿಗಟ್ಟಲೆ ಖರ್ಚು ಮಾಡಿ ಶೂಟಿಂಗ್ ಮಾಡುತ್ತಿರುವಾಗ ನಿಮ್ಮ ಆರೋಗ್ಯ ಸಮಸ್ಯೆಯಿಂದ ಮುಂದೂಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದರು.‌ ಅಂಥ ಎಷ್ಟೋ ಸಂದರ್ಭಗಳನ್ನು ನಾನು ಎದುರಿಸಿದ್ದೇನೆ. ಪಿರಿಯಡ್‌ ಸಮಯದಲ್ಲಿಯೇ ಅತಿಯಾದ ನೋವಿನಲ್ಲಿಯೂ ಡಾನ್ಸ್‌ ಮಾಡಿದ್ದೇನೆ. ಸಿನಿಮಾಗಳಲ್ಲಿ ನಟಿಸಿದ್ದೇನೆ. ಅದು ಅನಿವಾರ್ಯ ಎಂದು ಶ್ರುತಿ ಹಾಸನ್ ಹೇಳಿದ್ದಾರೆ. ಅಂದಹಾಗೆ, ಚೆನ್ನೈ ಸ್ಟೋರಿಸ್, ಸಲಾರ್ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ಶ್ರುತಿ ಹಾಸನ್ ಬ್ಯುಸಿಯಾಗಿದ್ದಾರೆ.

click me!