ಅಲ್ಲು ಅರ್ಜುನ್ ಅಭಿನಯದ 'ಪುಷ್ಪ: ದಿ ರೈಸ್' ಚಿತ್ರ ಡಿ.17ರಂದು ಬಿಡುಗಡೆಯಾಗಿದೆ. ಚಿತ್ರದ ಮೊದಲ ಭಾಗ ಬಿಡುಗಡೆಯಾದಗಿದ್ದು ಎರಡನೇ ಭಾಗ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಸ್ಟೈಲಿಷ್ ಸ್ಟಾರ್ ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಅಲ್ಲು ಅರ್ಜುನ್ ಫಸ್ಟ್ ಲುಕ್ ಬಿಡುಗಡೆಯಾದಾಗಿನಿಂದ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿತ್ತು. ಸುಕುಮಾರ್ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಸೇರಿದಂತೆ ಹಲವಾರು ದೇಶಗಳಲ್ಲಿ ಪ್ರೀಮಿಯರ್ ಪ್ರದರ್ಶನಗಳೊಂದಿಗೆ ವಿಶ್ವಾದ್ಯಂತ ಬಿಡುಗಡೆಗೆ ತೆರಳಿದ್ದಾರೆ. ಸ್ಯಾಂಡಲ್‌ವುಡ್, ಮಾಲಿವುಡ್, ಟಾಲಿವುಡ್ ಸ್ಟಾರ್‌ಗಳನ್ನು ಒಳಗೊಂಡ ಸಿನಿಮಾ ಆಗಿರುವುದರಿಂದಲೇ ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಸಖತ್ ಇಂಟ್ರೆಸ್ಟಿಂಗ್ ಹುಟ್ಟಿಸಿರೋ ಸಿನಿಮಾ ಇದು.
ಜಪಾನ್ ನಂತಹ ವಿದೇಶಗಳಲ್ಲಿ ಕಳ್ಳಸಾಗಣೆಯಾದ ರಕ್ತ ಚಂದನಕ್ಕೆ ಬೇಡಿಕೆ ಇದೆ ಎಂಬುದನ್ನು ತೋರಿಸುವ ದೃಶ್ಯಗಳೊಂದಿಗೆ ಸಿನಿಮಾ ಆರಂಭವಾಗುತ್ತದೆ. ಅಲ್ಲು ಅರ್ಜುನ್, 'ಪುಷ್ಪರಾಜ್' ಅಥವಾ 'ಪುಷ್ಪ' ಎಂಬ ಮುಖ್ಯ ಪಾತ್ರಧಾರಿಯಾಗಿದ್ದು, ಶೇಷಾಚಲಂ ಕಾಡುಗಳಿಂದ ಕೆಂಪು ಚಂದನದ ಮರಗಳನ್ನು ಕಳ್ಳಸಾಗಣೆ ಮಾಡುವಲ್ಲಿ ಸಮಾನವಾಗಿ ತೊಡಗಿಸಿಕೊಂಡಿರುವ ಟ್ರಕ್ ಚಾಲಕನ ಪಾತ್ರದಲ್ಲಿ ಮಿಂಚಿದ್ದಾರೆ. ಅಲ್ಲು ಅರ್ಜುನ್ ತಮ್ಮ ಚಿತ್ತೂರಿನ ಗ್ರಾಮ್ಯ ಸಂಭಾಷಣೆಗಳನ್ನು ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಅಲ್ಲು ಅರ್ಜುನ್ ಅವರನ್ನು ಚಿತ್ತೂರಿನ ಸ್ಥಳೀಯ ವ್ಯಕ್ತಿಯಂತೆ ಪ್ರೇಕ್ಷಕರ ಮುಂದಿಡುವಲ್ಲಿ ಸುಕುಮಾರ್ ಯಶಸ್ವಿಯಾಗಿದ್ದಾರೆ. ಅಲ್ಲು ಅರ್ಜುನ್ ತಮಗಾಗಿಯೇ ಸೃಷ್ಟಿಯಾದ ಪಾತ್ರವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಟಾಲಿವುಡ್ ಸ್ಟೈಲ್ ಕಿಂಗ್ ತಮ್ಮ ಹಳ್ಳಿಗಾಡಿನ ನೋಟದಿಂದ ಸ್ಕ್ರೀನ್ ಮೇಲೆ ಮೆರೆದರೆ, ಪ್ರೇಕ್ಷಕರು ಸಿನಿಮಾದ ಮೊದಲಾರ್ಧದ ಆರಂಭದಲ್ಲಿ ಡ್ರಾಗ್ ಮಾಡಿದ್ದು ಸ್ವಲ್ಪ ಜಾಸ್ತಿಯಾಯಿತು ಎಂದು ವಿಮರ್ಶಿಸಿದ್ದಾರೆ.
undefined
ಅಲ್ಲು ಸಿನಿಮಾ ವಿರುದ್ಧ ಮತ್ತೊಂದು ಕೇಸ್
ರಕ್ತ ಚಂದನದ ಕಳ್ಳಸಾಗಣೆ ಮತ್ತು ಅಲ್ಲು ಅರ್ಜುನ್ ಅಭಿನಯದ ಹಿನ್ನೆಲೆಯ ಚಿತ್ರ ಪ್ರೇಕ್ಷಕರಿಗೆ ಹಿಡಿಸಿದೆ. ಸುಕುಮಾರ್ ಪ್ರತಿಯೊಂದು ಪಾತ್ರಕ್ಕೂ ವಿಶೇಷ ಮರೆಗು ನೀಡಿದ್ದಾರೆ. ಪ್ರಮುಖ ಪಾತ್ರಗಳಾದ ಸುನಿಲ್, ಅನಸೂಯ, ರಶ್ಮಿಕಾ ಮಂದಣ್ಣ ಮತ್ತು ಫಹದ್ ಫಾಸಿಲ್ (ಮಲಯಾಳಂ ನಟ) ಅವರನ್ನು ಆಸಕ್ತಿದಾಯಕ ರೀತಿಯಲ್ಲಿ ಚಿತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಮ್ ಲಕ್ಷ್ಮಣ್ ಮತ್ತು ಪೀಟರ್ ಹೈನ್ ನಿರ್ದೇಶನದ ಸಾಹಸ ದೃಶ್ಯಗಳು ಪ್ರೇಕ್ಷಕರ ಮೆಚ್ಚುಗೆ ಪಡೆಯುವಲ್ಲಿ ಸಕ್ಸಸ್‌ಫುಲ್ ಆಗಿ ಕೆಲಸ ಮಾಡಿವೆ. ಆದರೂ ಕೆಲವು ದೃಶ್ಯಗಳನ್ನು ಸುಮ್ಮನೆ ಎಳೆದಿರುವ ಕಾರಣ ಸುಕುಮಾರ್ ನಿರ್ದೇಶಕನಾಗಿ ಸಿನಿಮಾದಲ್ಲಿ ತನ್ನ ಸಂಪೂರ್ಣ ಸಾಮರ್ಥ್ಯವನ್ನು ತೋರಿಸಿಲ್ಲ ಎಂದು ವಿಮರ್ಶೆಗಳು ಬಂದಿವೆ. ಚಿತ್ರದ ಮೊದಲ 20 ನಿಮಿಷಗಳನ್ನು ಬಿಟ್ಟು, ಚಿತ್ರದ ಮೊದಲಾರ್ಧ ಸಭ್ಯವಾಗಿದ್ದರೆ, ಪಾಯಿಂಟ್ ಟು ಇಂಟರ್ವಲ್ ಕೊಂಚ ಪ್ರಭಾವಶಾಲಿಯಾಗಿದೆ.
ಇಂಟರ್ವೆಲ್ ನಂತರದ ಭಾಗದಲ್ಲಿ ಸೆಕೆಂಡ್ ಹಾಫ್ನಲ್ಲಿ ಬರುವ ಕೆಲವು ದೃಶ್ಯಗಳು ಮಸುಕಾಗಿ ಕಾಣುತ್ತವೆ. ಅಲ್ಲು ಅರ್ಜುನ್ ಹೇಗೆ ಕಳ್ಳಸಾಗಣೆಯಲ್ಲಿ ಪ್ರಮುಖ ವ್ಯಕ್ತಿಯಾಗಿ ಬೆಳೆಯುತ್ತಾರೆ ಎಂಬ ಕಥೆಯ ನಿರ್ಣಾಯಕ ಬಿಂದುವನ್ನು ತೋರಿಸುವ ದೃಶ್ಯವು ಒಂದು ಒಳ್ಳೆಯ ಗ್ರಿಪ್ ಹೊಂದಿದೆ. ತನ್ನ ದಾರಿಯಲ್ಲಿ ಎದುರು ಬಂದ ಎಲ್ಲರನ್ನು ಸೋಲಿಸಿ ಪುಷ್ಪ ಹೇಗೆ ಉನ್ನತ ಮಟ್ಟಕ್ಕೆ ತಲುಪುತ್ತಾನೆ ಎಂಬುದನ್ನು ಪ್ರಸ್ತುತಪಡಿಸುತ್ತದೆ. ಕಾಡಿನ ನಡುವಿನ ಕ್ಯಾಮೆರಾ ವರ್ಕ್, ಸಿನಿಮಟೋಗ್ರಫಿ ಪ್ರೇಕ್ಷಕರ ಮನಸಲ್ಲಿ ಅಚ್ಚಳಿಯದೆ ಉಳಿಯುವಂತಿದೆ.
ಅಭಿಮಾನಿಗಳಿಗೆ ಎಮೋಷನಲ್ ಪತ್ರ ಬರೆದ ಐಕಾನ್ ಸ್ಟಾರ್ ಅಲ್ಲು ಅರ್ಜುನ್
ದೇವಿಶ್ರೀ ಪ್ರಸಾದ್ ನೀಡಿರುವ ಹಿನ್ನೆಲೆ ಸಂಗೀತ ಅದರ ಮ್ಯಾಜಿಕ್ ಅನ್ನು ದೊಡ್ಡ ಮಟ್ಟದಲ್ಲಿ ತೋರಿಸುವಲ್ಲಿ ವಿಫಲವಾಗಿದೆ. ಪ್ರಮುಖ ದೃಶ್ಯಗಳಲ್ಲಿ ದೇವಿಶ್ರೀ ದೃಶ್ಯಕ್ಕೆ ತಕ್ಕುದಾಗಿ ಸಂಗೀತ ಸಾಥ್ ನೀಡುವಲ್ಲಿ ವಿಫಲರಾಗಿದ್ದಾರೆ ಎನಿಸುತ್ತದೆ. ಅಲ್ಲು ಅರ್ಜುನ್ ನಟನೆ, ತಂತ್ರಜ್ಞರ ಕೆಲಸ, ಚಿತ್ರದ ಕಥೆ ಮತ್ತು ಸಮಂತಾ ರುತ್ ಪ್ರಭು ಅವರ ಐಟಂ ಸಾಂಗ್ ಈ ಚಿತ್ರದ ಹೈಲೈಟ್ಸ್. ಕ್ಲೈಮ್ಯಾಕ್ಸ್ ದೃಶ್ಯಗಳು ಅತ್ಯಂತ ಸ್ಟ್ರಾಂಗ್ ಆಗಿ ಮೂಡಿಬಂದಿವೆ ಎನ್ನಬಹುದು. ಒಟ್ಟಿನಲ್ಲಿ ಸುಕುಮಾರ್ ಎರಡನೇ ಭಾಗಕ್ಕೆ 'ಪುಷ್ಪ: ದಿ ರೈಸ್' ಮೂಲಕ ಉತ್ತಮ ವೇದಿಕೆ ಕಲ್ಪಿಸಿದ್ದಾರೆ.