ನಟರ ನಡುವೆ ನಶೆ ಏರಿಸಿಕೊಂಡ ನಟಿಯ ಮುತ್ತಿನಾಟದ ವೀಡಿಯೋ ವೈರಲ್!

Published : Oct 17, 2024, 12:08 PM IST
ನಟರ ನಡುವೆ ನಶೆ ಏರಿಸಿಕೊಂಡ ನಟಿಯ ಮುತ್ತಿನಾಟದ ವೀಡಿಯೋ ವೈರಲ್!

ಸಾರಾಂಶ

ಬಾಲಿವುಡ್ ನಲ್ಲಿ ಪಾರ್ಟಿ ಕಾಮನ್. ಆದ್ರೆ ಮದ್ಯದ ನಶೆಯಲ್ಲಿ ಕಲಾವಿದರು ಏನ್ ಮಾಡ್ತಾರೆ ಎನ್ನುವ ಅರಿವಿರೋದಿಲ್ಲ. ಗೋವಾದಲ್ಲಿ ಮೋಜು ಮಾಡ್ತಿದ್ದ ಕಲಾವಿದರ ವಿಡಿಯೋ ವೈರಲ್ ಆಗಿದೆ. ಅವರ ಅವತಾರ ನೋಡಿ ನೆಟ್ಟಿಗರು ಗರಂ ಆಗಿದ್ದಾರೆ.   

ನಟ ಕರಣ್ ಕುಂದ್ರಾ (Actor Karan Kundra ) ಮತ್ತು ನಟಿ ತೇಜಸ್ವಿ ಪ್ರಕಾಶ್ (actress Tejaswi Prakash) ಟಿವಿ ಉದ್ಯಮದ ಪ್ರಸಿದ್ಧ ಜೋಡಿ. ಇಬ್ಬರೂ ತಮ್ಮ ಪ್ರೀತಿ (love) ವಿಷ್ಯದಲ್ಲಿ ಆಗಾಗ ಸುದ್ದಿಗೆ ಬರ್ತಿರ್ತಾರೆ. ಅವರ ಪ್ರೀತಿಗೆ ಪಾಲಕರ ಒಪ್ಪಿಗೆ ಸಿಕ್ಕಿದ್ದು, ಮದುವೆಯೊಂದೇ ಬಾಕಿ ಇದೆ. ಸದಾ ರೋಮ್ಯಾಂಟಿಕ್ ಮೂಡ್ ನಲ್ಲಿರುವ ಈ ಜೋಡಿ, ಈಗ ನಶೆಯಲ್ಲಿ ಮುತ್ತಿಟ್ಟುಕೊಂಡಿದ್ದಾರೆ. ಆ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಕಣ್ಣು ಕೆಂಪು ಮಾಡಿದ್ದಾರೆ. ಇಂಥ ಅಸಭ್ಯತೆ ಬೇಕಾ ಎಂದಿದ್ದಾರೆ.

ಕರಣ್ ಕುಂದ್ರಾ, ತೇಜಸ್ವಿ ಪ್ರಕಾಶ್, ಗೋವಾ ಪ್ರವಾಸವನ್ನು ಎಂಜಾಯ್ ಮಾಡ್ತಿದ್ದಾರೆ. ಅವರ ಜೊತೆ ನಟ ಅರ್ಜುನ್ ಬಿಜ್ಲಾನಿ (actor Arjun Bijlani) ಇರುವ ವಿಡಿಯೋ, ಟ್ರೋಲ್ ಆಗಿದೆ. ಇನ್ಸ್ಟಾ ಖಾತೆಯೊಂದರಲ್ಲಿ ಇವರ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ತೇಜಸ್ವಿ ಪ್ರಕಾಶ್, ಅರ್ಜುನ್ ಬಿಜ್ಲಾನಿ ಮತ್ತು ಕರಣ್ ಕುಂದ್ರಾ ಮೂವರೂ ಕ್ಲಬ್‌ನಲ್ಲಿ ಪಾರ್ಟಿ ಮಾಡ್ತಿದ್ದಾರೆ. ತೇಜಸ್ವಿ ಚೇರ್ ಮೇಲೆ ಕುಳಿತಿದ್ದು, ಪಕ್ಕದಲ್ಲಿ ಅರ್ಜುನ್ ಇದ್ದಾರೆ. ಅಲ್ಲಿಗೆ ಬರುವ ಕರಣ್, ತೇಜಸ್ವಿನಿಗೆ ಕಿಸ್ ಮಾಡ್ತಾರೆ. ಇದು ಬಲವಂತಕ್ಕೆ ನೀಡುವ ಕಿಸ್ ನಂತಿದೆ. ಹಾಗೆಯೇ ನಶೆ ಏರಿದ್ದು, ಅವರ ಮುಖ ನೋಡಿದ್ರೆ ಸ್ಪಷ್ಟವಾಗ್ತಿದೆ.  

ಬಿಗ್‌ಬಾಸ್‌ನಲ್ಲಿ ಕೈಕೈ ಮಿಲಾಯಿಸಿಕೊಂಡ ಸ್ಪರ್ಧಿಗಳು! ಜಗಳದ ಕಿಚ್ಚು ಹೊತ್ತಿಕೊಳ್ಳಲು ಕ್ಯಾಪ್ಟನ್ ಫೇವರಿಸಂ ಕಾರಣನಾ?

ಈ ವಿಡಿಯೋ ಇನ್ಸ್ಟಾದಲ್ಲಿ ವೈರಲ್ ಆಗಿದ್ದು, ಇದನ್ನು ನೋಡಿದ ಬಳಕೆದಾರರು ಕೋಪಗೊಂಡಿದ್ದಾರೆ. ಸ್ವಲ್ಪ ಮರ್ಯಾದೆ ಇಟ್ಕೊಳ್ಳಿ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ನಿಮಗೆ ನಾಚಿಕೆಯಿಲ್ಲ, ಎಲ್ಲಾ ಮಿತಿಗಳನ್ನು ದಾಟಿದ್ದೀರಿ ಎಂದು ಇನ್ನೊಬ್ಬರು ಹೇಳಿದ್ದಾರೆ.

ಬಿಗ್ ಬಾಸ್ ಸೀಸನ್ 15 ರಲ್ಲಿ ತೇಜಸ್ವಿ ಪ್ರಕಾಶ್ ಮತ್ತು ಕರಣ್ ಇಬ್ಬರೂ ಭೇಟಿಯಾದ್ದರು. ಶೋನಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರಿತ್ತು. ಶೋ ಮುಗಿದ ಮೇಲೂ ಜೋಡಿ, ತಮ್ಮ ಪ್ರೀತಿಯನ್ನು ಮುಂದುವರೆಸಿದ್ದಾರೆ. ಎಲ್ಲ ಕಡೆ ಈ ಜೋಡಿ ಒಟ್ಟಿಗೆ ಮಿಂಚುತ್ತಿದ್ದಾರೆ. ಅವರನ್ನು ನೋಡಿದ ಫ್ಯಾನ್ಸ್, ಯಾವಾಗ ಮದುವೆ ಎನ್ನುವ ಒಂದೇ ಪ್ರಶ್ನೆಯನ್ನು ಮುಂದಿಡ್ತಾರೆ. ಅಮ್ಮನ ಜೊತೆ ಚಾಟ್ ಶೋಗೆ ಬಂದಿದ್ದ ತೇಜಸ್ವಿ, ಮದುವೆ ಬಗ್ಗೆ ಚರ್ಚಿಸಿದ್ದರು. ಮಗಳಿಗೆ ಮದುವೆ ವಯಸ್ಸಾಗಿದೆ, ಯಾವಾಗ ಮದುವೆ ಎನ್ನುವ ಪ್ರಶ್ನೆಗೆ ಅವರ ತಾಯಿ, ಹುಡುಗ ಸಿಕ್ಕಾಗಿದೆ, ಹುಡುಗ ಒಳ್ಳೆಯವನು ಎಂದಿದ್ದರು. ಇದನ್ನು ಕೇಳಿದ್ದ ವೀಕ್ಷಕರು, ಕರಣ್ ಕುಂದ್ರಾ ಜೊತೆ ತೇಜಸ್ವಿ ಮದುವೆ ಗ್ಯಾರಂಟಿ ಅಂದ್ಕೊಂಡಿದ್ದಾರೆ. ಕರಣ್ ಕುಂದ್ರಾ, ತೇಜಸ್ವಿಗಿಂತ 8 ವರ್ಷ ದೊಡ್ಡವರು. ಕರಣ್ ಗೆ ಈಗ 39 ವರ್ಷ ವಯಸ್ಸು. ತೇಜಸ್ವಿನಿಗೆ 31 ವರ್ಷ ವಯಸ್ಸು. 

ಬಾತ್ ರೂಮ್ ಕನ್ನಡಿ ಮುಂದೆ ಹಾಟ್ ಕ್ವೀನ್, ರಾಗಿಣಿ ವಿಡಿಯೋಗೆ ಫ್ಯಾನ್ಸ್ ಬೋಲ್ಡ್

ಕರಣ್ ಕುಂದ್ರಾ ರೋಡೀಸ್ ನಲ್ಲಿ ಗ್ಯಾಂಗ್ ಲೀಡರ್ ಆಗಿ ಕಾಣಿಸಿಕೊಂಡಿದ್ದಾರೆ. ಕರಣ್ ಕುಂದ್ರಾ ಸ್ಪ್ಲಿಟ್ಸ್ವಿಲ್ಲಾ, ಲವ್ ಸ್ಕೂಲ್, ಟೆಂಪ್ಟೇಶನ್ ಐಲ್ಯಾಂಡ್ ಮತ್ತು ಲಾಕಪ್ ಹೋಸ್ಟ್ ಮಾಡಿದ್ದಾರೆ. ಇನ್ನು ತೇಜಸ್ವಿ, ಸಂಸ್ಕಾರ, ಪೆಹ್ರೆದಾರ್ ಪಿಯಾ ಕಿ, ರಿಶ್ತಾ ಲಿಖೇಂಗೆ ಹಮ್ ನಯಾ, ಸಿಲ್ಸಿಲಾ ಬದಲ್ತೆ ರಿಶ್ಟನ್ ಕಾ ಸೇರಿದಂತೆ ಅನೇಕ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ. ಫಿಯರ್ ಫ್ಯಾಕ್ಟರ್, ಖತ್ರೋನ್ ಕೆ ಕಿಲಾಡಿ 10 ಭಾಗವಾಗಿದ್ದರು ತೇಜಸ್ವಿನಿ. ಕರಣ್ ಹಾಗೂ ತೇಜಸ್ವಿನಿ ಸಾರ್ವಜನಿಕ ಪ್ರದೇಶದಲ್ಲಿ ಕಿಸ್ ಮಾಡ್ಕೊಂಡಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ ಇಬ್ಬರ ವಿಡಿಯೋ ವೈರಲ್ ಆಗಿತ್ತು. 

ಜೋಡಿ ಹಕ್ಕಿ ಮಧ್ಯೆ ಕಾಣಿಸಿಕೊಂಡಿರುವ ನಟ ಅರ್ಜುನ್ ಬಿಜ್ಲಾನಿಗೆ ಈಗಾಗಲೇ ಮದುವೆಯಾಗಿದೆ. ಉದ್ಯಮದ ಹಾಟೆಸ್ಟ್ ನಟರಲ್ಲಿ ಒಬ್ಬರಾಗಿರುವ ಅರ್ಜುನ್ ಬಿಜ್ಲಾನಿ ನೇಹಾ ಸ್ವಾಮಿ ಕೈ ಹಿಡಿದಿದ್ದಾರೆ. ಅವರಿಗೆ ಮುದ್ದಾದ ಮಗುವೊಂದಿದೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಮಾಧುರಿಗೆ 'ನಿನ್ನನ್ನು ತಾಯಿಯಾಗಿ ನೋಡುತ್ತೇನೆ' ಎಂದಿದ್ದ ಎಂಎಫ್ ಹುಸೇನ್; ಆದ್ರೆ ಮುಂದೆ ಆಗಿದ್ದೇನು?
ಮದುವೆ ಮುರಿದುಬಿದ್ದ ಬಳಿಕ ಸ್ಮೃತಿ ಮಂಧಾನ-ಪಲಾಶ್ ಲೈಫ್‌ ಸ್ಟೈಲ್‌ನಲ್ಲಿ ಏನೆಲ್ಲಾ ಆಗೋಯ್ತು ನೋಡಿ...!