Halagali First Look: ದೊಡ್ಡ ಬಜೆಟ್‌ನ ಐತಿಹಾಸಿಕ ಚಿತ್ರಗಳನ್ನು ಒಪ್ಪಲು ಭಯ ಎಂದಿದ್ದೇಕೆ ಧನಂಜಯ

Kannadaprabha News, Ravi Janekal |   | Kannada Prabha
Published : Aug 17, 2025, 07:05 AM IST
halagali first look

ಸಾರಾಂಶ

ನಟ ಧನಂಜಯ ಅವರು ಐತಿಹಾಸಿಕ ಚಿತ್ರಗಳಲ್ಲಿ ನಟಿಸುವ ಆಸೆ ಹೊಂದಿದ್ದಾರೆ. ಆದರೆ, ದೊಡ್ಡ ಬಜೆಟ್‌ನ ಐತಿಹಾಸಿಕ ಚಿತ್ರಗಳನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತಾರೆ. 'ಹಲಗಲಿ' ಚಿತ್ರವು ಅವರ ಐತಿಹಾಸಿಕ ಸಿನಿಮಾ ಕನಸನ್ನು ಈಡೇರಿಸುತ್ತಿದೆ ಎಂದು ಹೇಳಿದ್ದಾರೆ.

ನನಗೆ ಐತಿಹಾಸಿಕ ಸಿನಿಮಾಗಳಲ್ಲಿ ನಟಿಸುವ ಆಸೆ ಇದೆ. ಆದರೆ, ದೊಡ್ಡ ಬಜೆಟ್‌ನ ಐತಿಹಾಸಿಕ ಚಿತ್ರಗಳನ್ನು ಒಪ್ಪುವುದಕ್ಕೆ ಭಯ ಆಗುತ್ತದೆ.

- ಹೀಗೆ ಹೇಳಿಕೊಂಡಿದ್ದು ನಟ ಧನಂಜಯ ಅವರು. ‘ಡಾ ರಾಜ್‌ಕುಮಾರ್‌ ಅವರು ನಟಿಸಿರುವ ಐತಿಹಾಸಿಕ ಚಿತ್ರಗಳನ್ನು ನೋಡಿ ತುಂಬಾ ಸ್ಫೂರ್ತಿಗೊಂಡವನು. ಆ ಕಾರಣಕ್ಕೆ ನಾನು‌ ಮೊದಲಿನಿಂದಲೂ ಐತಿಹಾಸಿಕ ಸಿನಿಮಾ ಮಾಡಬೇಕು ಎಂದು ಹೇಳುತ್ತಿದ್ದೆ. ಆದರೆ, ಐತಿಹಾಸಿಕ ಸಿನಿಮಾಗಳನ್ನು ಶುರು ಮಾಡುತ್ತಾರೆ. ಆಮೇಲೆ ಬಜೆಟ್ ಇರಲ್ಲ. ಅದಕ್ಕೆ ನ್ಯಾಯ ಒದಗಿಸಲು ಆಗುವುದಿಲ್ಲ. ಹೀಗಾಗಿ ಅಂಥ ಚಿತ್ರಗಳನ್ನು ಒಪ್ಪಲು ಭಯ ಆಗುತ್ತದೆ. ನನ್ನ ಕೆರಿಯರ್ ಆರಂಭದಲ್ಲಿ ಆ ರೀತಿಯ ಪ್ರಯತ್ನ ಮಾಡಿದ್ದೆ. ಆದರೆ, ನಟರಾಗಿ ನಮ್ಮ ಕಂಟ್ರೋಲ್‌ನಲ್ಲಿ ಏನೂ ಇರಲ್ಲ. ಕೆಲಸ ಮಾಡುತ್ತಿರುತ್ತೇವೆ. ಕೆಲವು ಸಂದರ್ಭಗಳಲ್ಲಿ ನಮ್ಮ ಕನಸು ಮುಂದಕ್ಕೆ ಹೋಗುತ್ತಿರುತ್ತದೆ’ ಎಂದರು.

ನನ್ನ ಐತಿಹಾಸಿಕ ಕನಸು ಈಡೇರುತ್ತಿದೆ

‘ಈಗ ‘ಹಲಗಲಿ’ ಸಿನಿಮಾ ನನ್ನ ಐತಿಹಾಸಿಕ ಸಿನಿಮಾ ಕನಸು ಈಡೇರಿಸುತ್ತಿದೆ. ಈ ಚಿತ್ರದ ನಿಜವಾದ ಹೀರೋಗಳು ನಿರ್ಮಾಪಕ ಕಲ್ಯಾಣ್‌ ಚಕ್ರವರ್ತಿ ಹಾಗೂ ನಿರ್ದೇಶಕ ಸುಕೇಶ್‌ ನಾಯಕ್‌ ಅವರು. ‘ಹಲಗಲಿ’ ಸ್ಕ್ರೀಪ್ಟ್ ಓದುತ್ತಾ ಓದುತ್ತಾ ಖುಷಿಯಾಯ್ತು. ನಂತರ ತಂಡವನ್ನು ಭೇಟಿಯಾದೆ. ಅವರು ಆಗಲೇ ಬ್ರಿಟಿಷರ ಎಪಿಸೋಡ್‌ಗಳ ಶೂಟಿಂಗ್‌ ಮುಗಿಸಿದ್ದರು. ಅದನ್ನು ನೋಡಿದ ನಂತರ ನನಗೆ ತಂಡದ ಮೇಲೆ ನಂಬಿಕೆ ಬಂತು.‘ಹಲಗಲಿ’ ಚಿತ್ರದ ಭಾಗವಾಗಿರುವುದಕ್ಕೆ ಖುಷಿ ಕೊಟ್ಟಿದೆ’ ಎಂದು ಧನಂಜಯ ಹೇಳಿಕೊಂಡರು.

ಇದನ್ನೂ ಓದಿ: Dhananjaya Halagali Movie: ಸ್ವಾತಂತ್ರ್ಯ ವೀರ, ಯೋಧನ ಕಥೆಯಲ್ಲಿ ಡಾಲಿ ಧನಂಜಯ! ಹೊನ್ನಿಯಾದ ನಟಿ ಸಪ್ತಮಿ ಗೌಡ

ಇಮ್ಮಡಿ ಪುಲಿಕೇಶಿ ಯೋಚನೆ

‘ಇಮ್ಮಡಿ ಪುಲಿಕೇಶಿ ಮೇಲೆ ಚಿತ್ರ ಮಾಡುವ ಬಗ್ಗೆ ನನಗೆ ಹಲವು ಬಾರಿ ಯೋಚನೆಗಳು ಬಂದಿವೆ. ಅದು ನನ್ನ ಮತ್ತೊಂದು ದೊಡ್ಡ ಕನಸು. ಆ ನಿಟ್ಟಿನಲ್ಲಿ ಒಂದಿಷ್ಟು ಕೆಲಸಗಳು ನಡೆಯುತ್ತಿವೆ. ನಮ್ಮ ‘ಡೇರ್‌ಡೆವಿಲ್‌ ಮುಸ್ತಾಫಾ’ ಚಿತ್ರ ಮಾಡಿದ ನಿರ್ದೇಶಕರ ತಂಡ ಆ ಕೆಲಸ ಮಾಡುತ್ತಿದೆ. ನೋಡೋಣ ನಾವು ಅಂದುಕೊಂಡಂತೆ ಬಜೆಟ್‌ ತೂಗಿಸುವ ನಿರ್ಮಾಪಕರು ಸಿಕ್ಕರೆ ಇಮ್ಮಡಿ ಪುಲಿಕೇಶಿ ಚಿತ್ರಕ್ಕೆ ಚಾಲನೆ ಕೊಡುತ್ತೇವೆ’

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?