Salman Khan dances with Genelia DSouza: ಬಾಲಿವುಡ್ ಕ್ಯೂಟ್ ನಟಿ ಜೆನಿಲಿಯಾ ಫನ್ ಲವಿಂಗ್ ಎನ್ನುವುದು ಎಲ್ಲರಿಗೂ ಗೊತ್ತು. ಸಲ್ಮಾನ್ ಮತ್ತು ಜೆನಿಲಿಯಾ ಜೊತೆಯಾದಾಗ ಫನ್ ಡಬಲ್
ಬಾಲಿವುಡ್ ನಟ ಸಲ್ಮಾನ್ ಖಾನ್(Salman Khan) ಹಾಗೂ ನಟಿ ಜೆನಿಲಿಯಾ ಡಿಸೋಜಾ(Genelia DSouza) ಸಖತ್ತಾಗಿ ಡ್ಯಾನ್ಸ್ ಮಾಡುತ್ತಿರೋ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್(Viral) ಆಗಿದೆ. ರಿತೇಷ್ ದೇಶ್‌ಮುಖ್ ಪತ್ನಿ ಜೆನಿಲಿಯಾ ಬಾಲಿವುಡ್ ಭಾಯ್ ಜೊತೆ ಸ್ಟೆಪ್ಸ್ ಹಾಕಿದ್ದು ಡ್ಯಾನ್ಸ್ ವಿಡಿಯೋ(Dance Video) ಕ್ಲಿಪ್ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ. ಹೌದು, ಸಲ್ಮಾನ್ ಖಾನ್ ಬರ್ತ್‌ಡೇ ಸಂದರ್ಭವೇ ಇಂಥದ್ದೊಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದರಲ್ಲಿ ಸಲ್ಲು ಭಾಯ್ ಹಾಗೂ ಬಾಲಿವುಡ್ ಕ್ಯೂಟ್ ನಟಿ ಜೆನಿಲಿಯಾರ ಡ್ಯಾನ್ಸ್ ಎಂಜಾಯ್ ಮಾಡಬಹುದು. ತಮ್ಮನ್ಯಾರೂ ನೋಡುತ್ತಲೇ ಇಲ್ಲ ಎನ್ನುವಷ್ಟು ಜಾಲಿಯಾಗಿ ಹೆಜ್ಜೆ ಹಾಕಿದ್ದಾರೆ ಇವರು.
ಬಾಲಿವುಡ್(Bollywood) ನಟ ಸಲ್ಮಾನ್ ಖಾನ್ ಹಾಗೂ ನಟಿ ಜೆನಿಲಿಯಾ ಡಿಸೋಜಾ ಸಖತ್ತಾಗಿ ಡ್ಯಾನ್ಸ್ ಮಾಡುತ್ತಿರೋ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಿತೇಷ್ ದೇಶ್‌ಮುಖ್ ಪತ್ನಿ ಜೆನಿಲಿಯಾ ಬಾಲಿವುಡ್ ಭಾಯ್ ಜೊತೆ ಸ್ಟೆಪ್ಸ್ ಹಾಕಿದ್ದು ಡ್ಯಾನ್ಸ್ ವಿಡಿಯೋ ಕ್ಲಿಪ್ ನೋಡಿ ಅಭಿಮಾನಿಗಳು ಖುಷ್ ಆಗಿದ್ದಾರೆ.
ಟೈಗರ್ ಹಾಗೂ ಹಾವು ಎರಡೂ ಚೆನ್ನಾಗಿವೆ ಎಂದ ಸಲ್ಮಾನ್ ಖಾನ್
undefined
ಜೆನಿಲಿಯಾ ಡಿಸೋಜ ಸಲ್ಲು ಭಾಯ್‌ಗೆ ಬರ್ತ್‌ಡೇ ದಿನ ವಿಡಿಯೋ ಮೂಲಕ ವಿಶ್ ಮಾಡಿದ್ದಾರೆ. ಸಲ್ಮಾನ್ ಖಾನ್ ಜೊತೆ ಡ್ಯಾನ್ಸ್ ಮಾಡೋ ವಿಡಿಯೋ ಶೇರ್ ಮಾಡಿ ಹುಟ್ಟಿದ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ ಜೆನಿಲಿಯಾ. ಸಲ್ಮಾನ್ ಖಾನ್ 56ನೇ ವರ್ಷದ ಹುಟ್ಟಿದ ಹಬ್ಬ ಆಚರಿಸಿಕೊಂಡಿದ್ದು, ಕುಟುಂಬ ಸದಸ್ಯರ ಜೊತೆ ತಮ್ಮ ಪಾನ್ವೆಲ್ ಫಾರ್ಮ್ ಹೌಸ್‌ನಲ್ಲಿ ಸೆಲೆಬ್ರೇಟ್ ಮಾಡಿದ್ದಾರೆ. ಹಿರಿಯ ನಟನಿಗೆ ಬರ್ತ್‌ಡೇ ವಿಶ್ ಮಾಡಲು ಜೆನಿಲಿಯಾ ವಿಡಿಯೋ ಶೇರ್ ಮಾಡಿದ್ದು ಇದರಲ್ಲಿ ನಟಿ ಕೆನ್ನಿ ಲಾಗಿನ್ಸ್ ಟ್ರಾಕ್ ಫೂಟ್‌ಲೂಸ್ ಹಾಡಿಗೆ ಡ್ಯಾನ್ಸ್ ಮಾಡುವುದನ್ನು ಕಾಣಬಹುದು. ವಿಡಿಯೋದಲ್ಲಿ ಇಬ್ಬರೂ ಕೆಂಪು ಕಲರ್‌ನ ಟೀಶರ್ಟ್‌ನಲ್ಲಿ ಮ್ಯಾಚ್ ಆಗಿದ್ದರು. ವಿಡಿಯೋ ಪೋಸ್ಟ್ ಮಾಡಿದ ನಟಿ, ವಿಶಾಲ ಹೃದಯದ ನಟನಿಗೆ ಹ್ಯಾಪಿ ಬರ್ತ್‌ಡೇ. ನಿಮಗೆ ದೇವರು ಖುಷಿ, ಆರೋಗ್ಯ ಹಾಗೂ ಪ್ರೀತಿ ನೀಡಿ ಆಶಿರ್ವದಿಸಲಿ. ನಾವು ನಿಮ್ಮನ್ನು ಪ್ರೀತಿಸುತ್ತೇವೆ, ಇವತ್ತು ಅಣ್ಣನ ಬರ್ತ್‌ಡೇ ಎಂದು ಬರೆದಿದ್ದಾರೆ.
ಸಲ್ಮಾನ್ ಖಾನ್‌ಗೆ ಹಾವು ಕಡಿತ:
ಶನಿವಾರ ರಾತ್ರಿ ಪಾನ್ವೆಲ್ ಫಾರ್ಮ್‌ಹೌಸ್‌ನಲ್ಲಿ ಸಲ್ಮಾನ್ ಖಾನ್ ಅವರಿಗೆ ಹಾವು ಕಚ್ಚಿತ್ತು. ಮೂರು ಬಾರಿ ನಟನಿಗೆ ಹಾವು ಕಚ್ಚಿದ್ದರೂ ಹಾವು ವಿಷರಹಿತವಾಗಿತ್ತು. ಅವರನ್ನು ನವಿ ಮುಂಬೈನ ಕಾಮೋಥೆಯಲ್ಲಿರುವ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಭಾನುವಾರ ಬೆಳಗ್ಗೆ ನಟನನ್ನು ಡಿಸ್ಚಾರ್ಜ್ ಮಾಡಲಾಗಿದೆ ಎನ್ನಲಾಗಿದೆ.
ನಟ, ಭಾನುವಾರದ ನಂತರ ಹಾವು ತನಗೆ ಮೂರು ಬಾರಿ ಕಚ್ಚಿದೆ ಎಂದು ಬಹಿರಂಗಪಡಿಸಿದ್ದಾರೆ. ನನ್ನ ಫಾರ್ಮ್‌ಹೌಸ್‌ನಲ್ಲಿ ಹಾವು ಒಂದು ಕೋಣೆಗೆ ಪ್ರವೇಶಿಸಿತು. ಮಕ್ಕಳು ಭಯಭೀತರಾದರು. ಆದ್ದರಿಂದ ನಾನು ಅದನ್ನು ಕೋಲಿನಿಂದ ಹೊರಗೆ ತೆಗೆದುಕೊಂಡು ಹೋದೆ. ಕ್ರಮೇಣ ಅದು ನನ್ನ ಕೈಗೆ ತಲುಪಿತು. ನಂತರ ನಾನು ಅದನ್ನು ಬಿಡಲು ನನ್ನ ಇನ್ನೊಂದು ಕೈಯಿಂದ ಹಿಡಿದೆ. ನಮ್ಮ ಸಿಬ್ಬಂದಿ ನೋಡಿದಾಗ ಹಾವು, ವಿಷಕಾರಿ ಎಂದು ಭಾವಿಸಿದ್ದರು. ನಂತರದ ಗಲಾಟೆಯಿಂದಾಗಿ ಹಾವು ನನಗೆ ಒಂದಲ್ಲ ಮೂರು ಬಾರಿ ಕಚ್ಚಿತು ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಜೆನಿಲಿಯಾ ಡಿಸೋಜಾ 2014 ರ ಜೈ ಹೋ ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡಿದ್ದಾರೆ. ನಟ ಕೊನೆಯದಾಗಿ ಆಂಟಿಮ್: ದಿ ಫೈನಲ್ ಟ್ರುತ್ ನಲ್ಲಿ ನಟಿಸಿದ್ದಾರೆ.