ಗಣೇಶನ ಮೆರವಣಿಗೆಯಲ್ಲಿ ಅಲ್ಲು ಅರ್ಜುನ್; ಮಗಳನ್ನು ಎತ್ತಿಕೊಂಡೇ ಕುಣಿದ 'ಪುಷ್ಪ' ಸ್ಟಾರ್

Published : Sep 06, 2022, 12:04 PM IST
 ಗಣೇಶನ ಮೆರವಣಿಗೆಯಲ್ಲಿ ಅಲ್ಲು ಅರ್ಜುನ್; ಮಗಳನ್ನು ಎತ್ತಿಕೊಂಡೇ ಕುಣಿದ 'ಪುಷ್ಪ' ಸ್ಟಾರ್

ಸಾರಾಂಶ

ತೆಲುಗು ಸ್ಟಾರ್ ಪುಷ್ಪ ಸಿನಿಮಾದ ಹೀರೋ ಅಲ್ಲು ಅರ್ಜುನ್ ಸಹಗ ಅದ್ದೂರಿಯಾಗಿ ಗಣೇಶ ಹಬ್ಬ ಮಾಡಿದ್ದಾರೆ. ತಮ್ಮ ನಿವಾಸದ ಬಳಿಯೇ ಗಣೇಶ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. 

ದೇಶದಾದ್ಯಂತ ಗಣೇಶ ಮೆರವಣಿಗೆಯ ಸಂಭ್ರಮ ಮುಗಿಲು ಮುಟ್ಟಿದೆ. ಗಣೇಶ ಹಬ್ಬ ಕಳೆದರು ಗಣಪನ ಮೆರವಣೆಗೆ ಜೋರಾಗಿದೆ. ಗಣೇಶನ್ನು ಕೂರಿಸಿ 3 ದಿನ, ಐದು ದಿನ, 11 ದಿನ  ಹೀಗೆ ತಮಗೆ ಇಷ್ಟದ ದಿನ ಮರವಣಿಗೆ ಮಾಡಿ ಗಣೇಶ ವಿಸರ್ಜನೆ ಮಾಡಲಾಗುತ್ತಿದೆ. 5ನೇ ದಿನದ ಗಣೇಶ ಉತ್ಸವದ ಸಂಭ್ರಮ ಜೋರಾಗಿತ್ತು. ಜನಸಾಮಾನ್ಯರು ಮಾತ್ರವಲ್ಲದೆ ಸಿನಿಮಾ ಸೆಲೆಬ್ರಿಟಿಗಳ ಸಹ ಗಣೇಶನ ಮೆರವಣಿಗೆಯಲ್ಲಿ ಭಾಗಿಯಾಗುತ್ತಾರೆ. ಕುಣಿದು ಕುಪ್ಪಳಿಸುತ್ತಾರೆ. ಗಣೇಶ ಹಬ್ಬವನ್ನು ಜಾತಿ, ಧರ್ಮಗಳ ಭೇದವಿಲ್ಲದೆ ಆಚರಿಸುತ್ತಾರೆ. ಬಾಲಿವುಡ್‌ನಲ್ಲಿಯೂ ಗಣೇಶ ಹಬ್ಬದ ಸಂಭ್ರಮ ಜೋರಾಗಿತ್ತು. ಬಾಲಿವುಡ್ ಖಾನ್ ಗಳು ಸಹ ಅದ್ದೂರಿಯಾಗಿ ಗಣೇಶ ಹಬ್ಬ ಮಾಡುತ್ತಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್ ಮನೆಯಲ್ಲಿ ಗಣೇಶ ಹಬ್ಬ ಮಾಡಿರುವ ವಿಡಿಯೋಗಳು ವೈರಲ್ ಆಗಿತ್ತು. 

ಇನ್ನು ಗಣೇಶನ ಆರಾಧನೆಯಲ್ಲಿ ಸೌತ್ ಸ್ಟಾರ್‌ಗಳೇನು ಕಮ್ಮಿ ಇಲ್ಲ. ಗಣೇಶ ಉತ್ಸವದಲ್ಲಿ ಸೌತ್ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ತೆಲುಗು ಸ್ಟಾರ್ ಪುಷ್ಪ ಸಿನಿಮಾದ ಹೀರೋ ಅಲ್ಲು ಅರ್ಜುನ್ ಸಹಗ ಅದ್ದೂರಿಯಾಗಿ ಗಣೇಶ ಹಬ್ಬ ಮಾಡಿದ್ದಾರೆ. ತಮ್ಮ ನಿವಾಸದ ಬಳಿಯೇ ಗಣೇಶ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಮಗಳನ್ನು ಎತ್ತಿಕೊಂಡೆ ಅಲ್ಲು ಅರ್ಜುನ್ ಗಣೇಶ ಮೆರವಣಿಗೆಯಲ್ಲಿ ಕಾಣಿಸಿಕೊಂಡಿದ್ದರು. 5 ವರ್ಷದ ಮಗಳು ಅರ್ಹಳನ್ನು ಎತ್ತಿಕೊಂಡು ಅಲ್ಲು ಅರ್ಜುನ್ ಗಣೇಶನ ಪೂಜೆ ಮಾಡಿದ್ದಾರೆ. ತೆಂಗಿನ ಕಾಯಿ ಒಡೆದು ಕುಣಿದು ಗಣೇಶನನ್ನು ಸಂಭ್ರಮಿಸಿದ್ದಾರೆ. ಅಲ್ಲು ಅರ್ಜುನ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ಅಲ್ಲು ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ 'ಗಣಪತಿ ಬಪ್ಪ ಮೋರಿಯಾ' ಎಂದು ಕ್ಯಾಪ್ಷನ್ ನೀಡಿದ್ದಾರೆ. 

ಅಪ್ಪು, ಕೆಜಿಎಫ್ ಗಣೇಶ ಜೊತೆ ಅಲ್ಲು ಅರ್ಜುನ್ 'ತಗ್ಗೋದೆ ಇಲ್ಲ' ಗಣೇಶ ಹವಾ

ಅಲ್ಲು ಅರ್ಜುನ್ 2011ರಲ್ಲಿ ಸ್ನೇಹಾ ರೆಡ್ಡಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ ಅಯಾನ್ ಮತ್ತು ಅರ್ಹಾ ಇಬ್ಬರು ಮಕ್ಕಳಿದ್ದಾರೆ. ಅಲ್ಲು ಅರ್ಜುನ್ ಪತ್ನಿ ಸ್ನೇಹಾ ಗಣೇಶ ಹಬ್ಬದ ದಿನ ಗಣಪತಿ ಹಬ್ಬದ ಸೆಟ್‌ನ ಫೋಟೋ ಹಂಚಿಕೊಂಡಿದ್ದರು. ಇಡಿ ಅಲ್ಲು ಅರ್ಜುನ್ ಕುಟುಂಬ ಗಣೇಶ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿತ್ತು. ಅಲ್ಲು ಅರ್ಜುನ್ ಮನೆಯ ಗಣೇಶ ಹಬ್ಬದ ಫೋಟೋಗಳು ಮತ್ತು ವಿಡಿಯೋ ಫ್ಯಾನ್ ಕ್ಲಬ್‌ಗಳಲ್ಲಿ ವೈರಲ್ ಆಗಿದೆ

ಕೊನೆಗೂ ಆರಂಭವಾಯ್ತು ಪುಷ್ಪ-2 ಶೂಟಿಂಗ್; ರಶ್ಮಿಕಾ ಮಂದಣ್ಣ ಹೇಳಿದ್ದೇನು?

ಇನ್ನು ಅಲ್ಲು ಅರ್ಜುನ್ ಸಿನಿಮಾ ವಿಚಾರಕ್ಕೆ ಬರುವುದಾದರೇ ಪುಷ್ಪ-2ನಲ್ಲಿ ಬ್ಯುಸಿಯಾಗಿದ್ದಾರೆ. 2021ರಲ್ಲಿ ಅಲ್ಲು ಅರ್ಜುನ್ ಪುಷ್ಪ; ದಿ ರೈಸ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಂದ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಸದ್ಯ ಪುಷ್ಪ ದಿ ರೂಲ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು ಸುಕುಮಾರ್ ಸಾರಥ್ಯದಲ್ಲಿ ಸಿನಿಮಾ ಮೂಡಿಬರುತ್ತಿದೆ.  ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದರು. ಎರಡನೇ ಬಾಗದಲ್ಲೂ ರಶ್ಮಿಕಾ ಪಾತ್ರ ಮುಂದುವರೆದಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?
10 ಭಾಷೆಗಳಲ್ಲಿ 90 ಸಿನಿಮಾಗಳು, ಗಂಗೂಲಿ ಜೊತೆ ಅಫೇರ್ ವದಂತಿ.. 50 ವರ್ಷವಾದರೂ ಮದುವೆಯಾಗದ ನಟಿ ಯಾರು?