Sandalwood
ಚಂದನವನದ ಹಾಟ್ ಬ್ಯೂಟಿ ಚೈತ್ರಾ ಆಚಾರ್. ಹೆಚ್ಚಾಗಿ ತಮ್ಮ ಬೋಲ್ಡ್ ಫೋಟೊ ಶೂಟ್ ಮೂಲಕ ನಟಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಾನೆ ಇರ್ತಾರೆ.
ಚೈತ್ರಾ ಆಚಾರ್ ಇದೀಗ ಹೊಸ ಫೋಟೊ ಶೂಟ್ ಮಾಡಿಸಿಕೊಂಡು ಶೇರ್ ಮಾಡಿದ್ದು, ಸದ್ಯ ಈ ಫೋಟೊ ಇಂಟರ್ನೆಟಲ್ಲಿ ಟೆಂಪ್ರೇಚರ್ ಹೆಚ್ಚಿಸಿದೆ. ನಟಿಯ ಬೋಲ್ಡ್ ನೆಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಡೀಪ್ ನೆಕ್ ಇರುವ ಬ್ಲ್ಯಾಕ್ ಡ್ರೆಸ್ ಧರಿಸಿರುವ ಚೈತ್ರಾ ಆಚಾರ್, ಅದರ ಜೊತೆಗೆ ಗಾಗಲ್ಸ್ ಧರಿಸಿದ್ದಾರೆ. ಜೊತೆಗೆ ಹೀಲ್ಸ್ ಶೂ ಧರಿಸಿದ್ದು, ಕುತ್ತಿಗೆಯಲ್ಲಿ ಸಿಲ್ವರ್ ನೆಕ್ಲೆಸ್ ಧರಿಸಿದ್ದಾರೆ.
ಚೈತ್ರಾ ತಮ್ಮ ಫೋಟೊ ಜೊತೆಗೆ Outside James Bond only…but inside Coolie daan ಎನ್ನುವ ಕ್ಯಾಪ್ಶನ್ ಕೂಡ ಹಾಕಿದ್ದಾರೆ.
ಚೈತ್ರಾ ಆಚಾರ್ ತಮ್ಮ ಕಾಮೆಂಟ್ ಸೆಕ್ಷನ್ ರಿಸ್ಟ್ರಿಕ್ಟ್ ಮಾಡಿದ್ದು, ಸೆಲೆಬ್ರಿಟಿಗಳು ಮಾತ್ರ ಕಾಮೆಂಟ್ ಮಾಡಬಹುದು. ನಟಿಯ ಫೋಟೊಗೆ ATE ಜೊತೆಗೆ ಫೈರ್ ಇಮೋಜಿ ಕಾಮೆಂಟ್ ಮಾಡಿದ್ದಾರೆ.
ಚೈತ್ರಾ ಸುಮಾರು ಫೋಟೊಗಳನ್ನು ಶೇರ್ ಮಾಡಿದ್ದು, ಎಲ್ಲಾ ಫೋಟೊಗಳಲ್ಲೂ ಒಂದೊಂದು ಪೋಸ್ ಕೊಟ್ಟಿದ್ದು, ಅವರ ಬೋಲ್ಡ್ ಲುಕ್, ಮ್ಯಾನರಿಸಂ, ಆಟಿಟ್ಯೂಡ್ ತುಂಬಾನೆ ಬೋಲ್ಡ್ ಆಗಿದೆ.
ತಮ್ಮ ಫೋಟೋಗಳಿಂದಾಗಿಯೇ ನಟಿ ಹೆಚ್ಚಾಗಿ ಕಾಂಟ್ರವರ್ಸಿಗೆ ತುತ್ತಾಗುತ್ತಿದ್ದಾರೆ. ಇತ್ತೀಚೆಗೆ ಒಬ್ಬರು ನೀವು ಪಾತ್ರಕ್ಕಾಗಿ ಸೆಕ್ಸ್ ಮಾಡಿದ್ರ ಅಂತ ಪ್ರಶ್ನಿಸಿದ್ದರು. ಇದಕ್ಕೆ ಚೈತ್ರಾ ಆಚಾರ್ ಖಡಕ್ ಆಗಿ ಉತ್ತರಿಸಿದ್ದರು.
ಚೈತ್ರಾ ಆಚಾರ್ ಸದ್ಯ ಮಾರ್ನಮಿ ಎನ್ನುವ ಚಿತ್ರ ಮಾಡುತ್ತಿದ್ದಾರೆ. ಈ ಚಿತ್ರಕ್ಕೂ ಮುಂಚೆ ಉತ್ತರಕಾಂಡ ಸಿನಿಮಾದಲ್ಲಿ ಲಚ್ಚಿ ಅನ್ನುವ ರೋಲ್ ಮಾಡಿದ್ದರು.
ಚೈತ್ರಾ ತಮಿಳಿನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿದ್ದು, ಒಂದು ಚಿತ್ರದಲ್ಲಿ ಸಿದ್ಧಾರ್ಥ್ ಹಾಗೂ ಮತ್ತೊಂದು ಸಿನಿಮಾದಲ್ಲಿ ತಮಿಳು ನಟ ಶಶಿಕುಮಾರ್ ಜೊತೆ ಚೈತ್ರಾ ನಟಿಸುತ್ತಿದ್ದಾರೆ.