ಗುಟ್ಟು ರಟ್ಟಾಯ್ತು.. ರಣವೀರ್ ಸಿಂಗ್ ಸೇರಿ 'ಧುರಂಧರ್ 2' ಕಲಾವಿದರಿಗೆ ಕೊಟ್ಟ ಸಂಭಾವನೆ ಎಷ್ಟು? ಸಿಕ್ಕಿದೆ ಕೈತುಂಬಾ ಕಾಸು!

Published : Mar 22, 2026, 03:28 PM IST
Dhurandhar 2 Ranveer Singh

ಸಾರಾಂಶ

ಆದಿತ್ಯ ಧರ್ ನಿರ್ದೇಶನದ ಧುರಂಧರ್: ದಿ ರಿವೆಂಜ್ ಚಿತ್ರವು ಮಾರ್ಚ್ 19 ರಂದು ಬಿಡುಗಡೆಯಾಗಿದೆ. 3 ಗಂಟೆ 49 ನಿಮಿಷಗಳ ಸುದೀರ್ಘ ಅವಧಿಯ ಈ ಚಿತ್ರವು ಪ್ರೇಕ್ಷಕರಿಂದ ಮಾಸ್ಟರ್‌ಪೀಸ್' ಎಂದು ಕರೆಸಿಕೊಂಡಿದೆ. ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಪ್ರಮಾಣದಲ್ಲಿ ಗಳಿಕೆ ಮಾಡುತ್ತಿದೆ. ನಟನಟಿಯರ ಸಂಭಾವನೆ ಮಾಹಿತಿ ನೋಡಿ..

ಭಾರೀ ಗುಟ್ಟು ಬಹಿರಂಗ!

ಆದಿತ್ಯ ಧರ್‌ ನಿರ್ಮಾಣ ಮಾಡಿ, ನಿರ್ದೇಶಿಸಿರುವ ʻಧುರಂಧರ್‌ 2ʼ (Dhurandhar 2) ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಹವಾ ಕ್ರಿಯೆಟ್‌ ಮಾಡಿದೆ. ಮೂರೇ ದಿನಕ್ಕೆ ಈ ಚಿತ್ರದ ಗಳಿಕೆ ವಿಶ್ವಾದ್ಯಂತ 500 ಕೋಟಿ ರೂ. ಸಮೀಪದಲ್ಲಿದೆ. ಇದುವರೆಗೂ ಯಾವ ಸಿನಿಮಾವೂ ಮಾಡಿರದಂತಹ ದಾಖಲೆಗಳನ್ನು ಈ ಚಿತ್ರ ಮಾಡುತ್ತಿದೆ. ಈ ಮಧ್ಯೆ ಚಿತ್ರದ ಕಲಾವಿದರಿಗೆ ಸಿಕ್ಕಿರುವ ಸಂಭಾವನೆ ಕುರಿತಂತೆ ಚರ್ಚೆ ಆಗುತ್ತಿದೆ.

ಕಲಾವಿದರಿಗೆ ಸಿಕ್ಕ ಸಂಭಾವನೆ ಎಷ್ಟು?

ಜಿಯೋ ಸ್ಟುಡಿಯೋಸ್ ಮತ್ತು ಬಿ62 ಸ್ಟುಡಿಯೋಸ್ ನಿರ್ಮಿಸಿರುವ ಈ ಚಿತ್ರದಲ್ಲಿ ಹಮ್ಜಾ ಅಲಿ ಮಜಾರಿ / ಜಸ್ಕಿರತ್ ಸಿಂಗ್ ರಂಗಿ ಪಾತ್ರಗಳಲ್ಲಿ ಮಿಂಚಿರುವ ನಟ ರಣವೀರ್‌ ಸಿಂಗ್‌ ಅವರು ಸುಮಾರು 50 ಕೋಟಿ ರೂ. ನೀಡಲಾಗಿದೆಯಂತೆ. ಜೊತೆಗೆ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿರುವ ಸಾರಾ ಅರ್ಜುನ್‌ ಅವರಿಗೆ 1 ಕೋಟಿ ರೂ. ಹಣವನ್ನು ಸಂಭಾವನೆ ರೂಪದಲ್ಲಿ ನೀಡಲಾಗಿದೆಯಂತೆ.

ಆರ್‌. ಮಾಧವನ್‌ಗೆ ಸಿಕ್ಕಿದೆ 9 ಕೋಟಿ ರೂ.

ಇನ್ನು, ʻಧುರಂಧರ್‌: ದಿ ರಿವೆಂಜ್‌ʼ ಚಿತ್ರದಲ್ಲಿ ಪ್ರಮುಖ ಪಾತ್ರ ಎಂದರೆ, ಇಂಟೆಲಿಜೆನ್ಸ್ ಬ್ಯೂರೋ (IB) ಮುಖ್ಯಸ್ಥನ ಪಾತ್ರ. ಅಜಯ್‌ ಸನ್ಯಾಲ್‌ ಹೆಸರಿನ ಈ ಪಾತ್ರವನ್ನು ನಟ ಮಾಧವನ್‌ ನಿಭಾಯಿಸಿದ್ದು, ಅದಕ್ಕಾಗಿ ಅವರು ತಮ್ಮ ಲುಕ್‌ ಅನ್ನು ಕೂಡ ಅವರು ಬದಲಾಯಿಸಿಕೊಂಡಿದ್ದರು. ಈ ಚಿತ್ರಕ್ಕಾಗಿ ಅವರು ಭರ್ತಿ 9 ಕೋಟಿ ರೂ. ಚಾರ್ಜ್‌ ಮಾಡಿದ್ದಾರಂತೆ. ಎಸ್‌ಪಿ ಚೌಧರಿ ಅಸ್ಲಂ ಪಾತ್ರವನ್ನು ಮಾಡಿರುವ ನಟ ಸಂಜಯ್‌ ದತ್‌, 10 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ.

ಪಾರ್ಟ್‌ 1ರಲ್ಲಿ ಮಿಂಚಿದ್ದ ಅಕ್ಷಯ್‌ ಖನ್ನಾ

ಧುರಂಧರ್‌ ಪಾರ್ಟ್‌ 1ರಲ್ಲಿ ರೆಹಮಾನ್ ಡಕಾಯತ್ ಪಾತ್ರದಲ್ಲಿ ಮಿಂಚಿದ್ದ ನಟ ಅಕ್ಷಯ್‌ ಖನ್ನಾ ಅವರು 2.50 ಕೋಟಿ ರೂಪಾಯಿ ಪಡೆದಿದ್ದಾರೆ. ಮೇಜರ್ ಇಕ್ಬಾಲ್ ಪಾತ್ರಕ್ಕಾಗಿ ಅರ್ಜುನ್ ರಾಂಪಾಲ್‌ಗೆ 1 ಕೋಟಿ ರೂಪಾಯಿ ಸಂಭಾವನೆ ಸಿಕ್ಕಿದೆ. ಜಮೀಲ್‌ ಜಮಾಲಿ ಪಾತ್ರಕ್ಕಾಗಿ ಹಿರಿಯ ನಟ ರಾಕೇಶ್ ಬೇಡಿ ಅವರಿಗೆ ಅಂದಾಜು 50 ಲಕ್ಷದಿಂದ 1 ಕೋಟಿ ರೂಪಾಯಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಅಂದಹಾಗೆ, ಈ ಸಂಭಾವನೆಯು ಎರಡು ಪಾರ್ಟ್‌ಗಳಿಗೆ ಸೇರಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಎರಡು ಪಾರ್ಟ್‌ಗಳನ್ನು ನಿರ್ಮಾಣ ಮಾಡಲು ಬರೋಬ್ಬರಿ 300 ಕೋಟಿ ರೂ.ಗಳಿಗೂ ಅಧಿಕ ಹಣ ಖರ್ಚಾಗಿದ್ದು, ಪಾರ್ಟ್‌ 1ರಿಂದಲೇ ಸುಮಾರು 350 ಕೋಟಿ ರೂ. ಲಾಭವನ್ನು ನಿರ್ಮಾಪಕರು ಕಂಡಿದ್ದಾರೆ. ಈಗ ಪಾರ್ಟ್‌ 2ರಿಂದ ಬರುವುದೆಲ್ಲವೂ ಲಾಭವೆಂದೇ ಹೇಳಲಾಗುತ್ತಿದೆ.

ಆದಿತ್ಯ ಧರ್ ನಿರ್ದೇಶನದ ಧುರಂಧರ್: ದಿ ರಿವೆಂಜ್ ಚಿತ್ರವು ಮಾರ್ಚ್ 19 ರಂದು ಬಿಡುಗಡೆಯಾಗಿದೆ. 3 ಗಂಟೆ 49 ನಿಮಿಷಗಳ ಸುದೀರ್ಘ ಅವಧಿಯ ಈ ಚಿತ್ರವು ಪ್ರೇಕ್ಷಕರಿಂದ ಮಾಸ್ಟರ್‌ಪೀಸ್' ಎಂದು ಕರೆಸಿಕೊಂಡಿದೆ. ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಪ್ರಮಾಣದಲ್ಲಿ ಗಳಿಕೆ ಮಾಡುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಮುಚ್ಚಿಡಲು ಏನೂ ಇಲ್ಲ, ಮೂರು ಡಿವೋರ್ಸ್ ಬಳಿಕ ಮದ್ವೆ ಜೀವನ ಬಗ್ಗೆ ಮೌನ ಮುರಿದ ನಟಿ ಮೀರಾ
Dhurandhar 2: ರಣವೀರ್ ಸಿಂಗ್ 'ಧುರಂಧರ್ 2' ಸಿನಿಮಾ ಮೆಚ್ಚಿ ಪೋಸ್ಟ್ ಹಂಚಿಕೊಂಡ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ