
ಪ್ರಭಾಸ್ ಸಿನಿಮಾ ಪ್ರದರ್ಶನದ ವೇಳೆ ಥಿಯೇಟರ್‌ಗೆ ಬೆಂಕಿ!
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ನಟನೆಯ 'ದಿ ರಾಜಾ ಸಾಬ್' ಸಿನಿಮಾ ಜನವರಿ 9ರಂದು () ಬಿಡುಗಡೆ ಆಗಿದೆ. ಡಾರ್ಲಿಂಗ್ ಪ್ರಭಾಸ್ ಅವರ ಅಭಿಮಾನಿಗಳು ಈ ಸಿನಿಮಾವನ್ನು ಬಹಳಷ್ಟು ಮುಗಿಬಿದ್ದು ನೋಡುತ್ತಿದ್ದಾರೆ. ಎಲ್ಲ ಚಿತ್ರಮಂದಿರಗಳಲ್ಲಿ ಸಂಭ್ರಮಾಚರಣೆ ಜೋರಾಗಿದೆ. ಆದರೆ ಕೆಲವರು ಸಂಭ್ರಮದ ವೇಳೆ ಮೈಮರೆತಿದ್ದಾರೆ. ಅದೀಗ ದೊಡ್ಡ ಯಡವಟ್ ಆಗಿದೆ.
'ದಿ ರಾಜಾ ಸಾಬ್' (The Raja Saab) ಸಿನಿಮಾ ಪ್ರದರ್ಶನ ಆಗುತ್ತಿದ್ದ ಚಿತ್ರಮಂದಿರದ ಒಳಗೆ ಪಟಾಕಿ ಸಿಡಿಸಲಾಗಿದೆ. ಆರತಿ ಬೆಳಗಲಾಗಿದೆ. ಇದರಿಂದಾಗಿ ಅಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್, ಯಾವುದೇ ಪ್ರಾಣ ಹಾನಿ ಆಗಿಲ್ಲ, ದೊಡ್ಡ ಅನಾಹುತ ಆಗುವುದು ತಪ್ಪಿದೆ. ಥಿಯೇಟರ್‌ನಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಒಳಗಿದ್ದ ಪ್ರೇಕ್ಷಕರು ದಿಕ್ಕಾಪಾಲಾಗಿ ಓಡಿದ್ದಾರೆ.
'ದಿ ರಾಜಾ ಸಾಬ್' ಚಿತ್ರವು ಪ್ರಭಾಸ್ ನಟಿಸಿರುವ ಮೊದಲ ಹಾರರ್ ಸಿನಿಮಾ. ಈ ಕಾರಣದಿಂದ ಈ ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಮಾರುತಿ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪ್ರಭಾಸ್ ಅವರು ಬೇರೆ ಬೇರೆ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಎಂಟ್ರಿ ಸೀನ್ ನೋಡಿ ಖುಷಿಯಾದ ಪ್ರೇಕ್ಷಕರು ಚಿತ್ರಮಂದಿರದ ಒಳಗೆ ಪಟಾಕಿ ಸಿಡಿಸಿದ್ದಾರೆ. ಆರತಿ ಬೆಳಗಿದ್ದಾರೆ. ಆಗಲೇ ಥಿಯೇಟರ್ ನಲ್ಲಿ ಬೆಂಕಿ ಹೊತ್ತಿಕೊಂಡಿದೆ.
ಅಂದಹಾಗೆ, ಈ ಘಟನೆ ನಡೆದಿರುವುದು ನಟ ಪ್ರಭಾಸ್ ಅವರ ತರವರು ನೆಲ ಆಂಧ್ರದಲ್ಲೋ ಅಥವಾ ತೆಲಂಗಾಣದಲ್ಲೋ ಅಲ್ಲ. ಬದಲಿಗೆ, ಒಡಿಸ್ಸಾದಲ್ಲಿ! ಹೇಳಿಕೇಳಿ ನಟ ಪ್ರಭಾಸ್ ಅವರು ಫ್ಯಾನ್ ಇಂಡಿಯಾ ಸ್ಟಾರ್. ಅವರಿಗೆ ಎಲ್ಲ ಕಡೆಗಳಲ್ಲಿ ಅಭಿಮಾನಿಗಳು ಇದ್ದಾರೆ. ಒಡಿಸ್ಸಾದ ರಾಯಗಡದಲ್ಲಿರುವ 'ಅಶೋಕ ಟಾಕೀಸ್'ನಲ್ಲಿ ಅಭಿಮಾನಿಗಳ ಸಂಭ್ರಮದ ನಡುವೆ ಈ ಘಟನೆ ನಡೆದಿದೆ.
ಫ್ಯಾನ್ ಬೆಳಗಿದ ಆರತಿ, ಸಿಡಿಸಿದ ಪಟಾಕಿಯೇ ಈ ಅವಗಡಕ್ಕೆ ಕಾರಣರಾಗಿದ್ದಾರೆ. ಇದರಿಂದ ಚಿತ್ರಮಂದಿರದ ಪರದೆ ಬಳಿ ಬೆಂಕಿ ಹೊತ್ತಿಕೊಂಡಿದೆ. ಅದು ಬಳಿಕ ಒಳಗೆಲ್ಲಾ ವ್ಯಾಪಿಸಿದೆ. ಈ ಸಂದರ್ಭದ ವಿಡಿಯೋ, ಪೊಟೋಗಳು ವೈರಲ್ ಆಗಿದೆ. ತಕ್ಷಣವೇ ಅಲ್ಲಿದ್ದವರು ಎಚ್ಚರಿಕೆ ಸ್ಟೆಪ್ ತೆಗೆದುಕೊಂಡು ಬೆಂಕಿ ನಂದಿಸಿದ್ದಾರೆ. ಇದರಿಂದ 'ಆಗಬಹುದಾಗಿದ್ದ ಹೆಚ್ಚಿನ ದೊಡ್ಡ ಅನಾಹುತಿ ತಪ್ಪಿದೆ' ಎಂದು ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಅಂದಹಾಗೆ, ಬೇರೆ ಚಿತ್ರಮಂದಿರಗಳಲ್ಲಿ ಪ್ರಭಾಸ್ ಅವರ ಅಭಿಮಾನಿಗಳು ಮೊಸಳೆಯ ಪ್ರತಿಕೃತಿಯನ್ನು ಹಿಡಿದು ಬಂದಿದ್ದಾರೆ. ಈ ಸಿನಿಮಾದಲ್ಲಿ ನಟ ಪ್ರಭಾಸ್ ಅವರು ಮೊಸಳೆ ಜೊತೆ ಫೈಟ್ ಮಾಡುವ ದೃಶ್ಯವಿದೆ. ಅದರಿಂದ ಪ್ರೇರೇಪಿತರಾದ ಅಭಿಮಾನಿಗಳು ಚಿತ್ರಮಂದಿರಕ್ಕೆ ಮೊಸಳೆ ಬೊಂಬೆ ಹೊತ್ತು ತಂದಿದ್ದಾರೆ.
ಆದರೆ, ಅಚ್ಚರಿ ಎಂಬಂತೆ, ಬಿಗ್ ಬಜೆಟ್ ಚಿತ್ರವಾದ 'ದಿ ರಾಜಾ ಸಾಬ್' ಸಿನಿಮಾವು ಮಿಶ್ರ ಪ್ರತಿಕ್ರಿಯೆ ಪಡೆದಿದೆ. ನಿರೀಕ್ಷಿತ ಮಟ್ಟಕ್ಕಿಂತ ಕಡಿಮೆ ಕಲೆಕ್ಷನ್ ಆಗುತ್ತಿದೆ. ಪ್ರಭಾಸ್, ಸಂಜಯ್ ದತ್, ನಿಧಿ ಅಗರ್‌ವಾಲ್, ಬೋಮನ್ ಇರಾನಿ, ಮಾಳವಿಕಾ ಮೋಹನನ್, ರಿದ್ದಿ ಕುಮಾರ್ ಮುಂತಾದ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಆದರೆ, ಬಿಡುಗಡೆಯಾದ 'ದಿ ರಾಜಾ ಸಾಬ್' ಚಿತ್ರ ನೋಡಿ ಹಲವು ಅಭಿಮಾನಿಗಳು ನಿರಾಸೆ ಅನುಭವಿಸಿದ್ದಾರೆ ಎಂಬ ಮಾತೀಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ. ಕಾರಣ, ನಿರೀಕ್ಷೆ ಮಟ್ಟದಲ್ಲಿ ಸಿನಿಮಾ ಮೂಡಿಬಂದಿಲ್ಲ ಎಂಬ ಮಾತಿಘ ಕೇಳಿಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.