ಡಿಯರ್ ನೆಟ್‌ಫ್ಲಿಕ್ಸ್, ನಯನತಾರಾಗೆ ಮಗು ಆಯ್ತು, ಮದುವೆ ವಿಡಿಯೋ ಎಲ್ಲಿ? ಕಾಲೆಳೆಯುತ್ತಿರುವ ನೆಟ್ಟಿಗರು

Published : Oct 12, 2022, 06:16 PM IST
 ಡಿಯರ್ ನೆಟ್‌ಫ್ಲಿಕ್ಸ್, ನಯನತಾರಾಗೆ ಮಗು ಆಯ್ತು, ಮದುವೆ ವಿಡಿಯೋ ಎಲ್ಲಿ? ಕಾಲೆಳೆಯುತ್ತಿರುವ ನೆಟ್ಟಿಗರು

ಸಾರಾಂಶ

ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಯಾಗಿ ನಾಲ್ಕು ತಿಂಗಳಾದರೂ ನೆಟ್ ಫ್ಲಿಕ್ಸ್ ಇನ್ನು ವಿಡಿಯೋ ಪ್ರಸಾರ ಮಾಡಿಲ್ಲ. ಇದರಿಂದ ಕೆರಳಿರುವ ಅಭಿಮಾನಿಗಳು ನಯನತಾರಾಗೆ ಮಕ್ಕಳಾಯಿತು ಮದುವೆ ವಿಡಿಯೋ ಎಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.   

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೂನ್ 9ರಂದು ಚೆನ್ನೈನ ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದರು. ಸ್ಟಾರ್ ಜೋಡಿ ತಮ್ಮ ಮದುವೆಯ ವಿಡಿಯೋ ಹಕ್ಕನ್ನು ಒಟಿಟಿಗಳ ದೈತ್ಯ ನೆಟ್‌ಫ್ಲಿಕ್ಸ್ ಗೆ ಮಾರಾಟ ಮಾಡಿತ್ತು. ಮದುವೆಯ ಇಡೀ ಖರ್ಚನ್ನು ನೆಟ್‌ಫ್ಲಿಕ್ಸ್ ನೋಡಿಕೊಂಡಿತ್ತು. ಮೂಲಗಳ ಪ್ರಕಾರ ನೆಟ್‌ಫ್ಲಿಕ್ಸ್ ನಯನತಾರಾ ಮದುವೆ ವಿಡಿಯೋ ಹಕ್ಕನ್ನು ಬರೋಬ್ಬರಿ 25 ಕೋಟಿ ರೂಪಾಯಿಗೆ ಖರೀದಿ ಮಾಡಿದೆ ಎನ್ನುವ ಸುದ್ದಿ ಇದೆ. ಆದರೆ ಮದುವೆಯಾಗಿ ನಾಲ್ಕು ತಿಂಗಳಾದರೂ ನೆಟ್ ಫ್ಲಿಕ್ಸ್ ಇನ್ನು ಲೇಡಿ ಸೂಪರ್ ಸ್ಟಾರ್ ಮದುವೆ ವಿಡಿಯೋ ಪ್ರಸಾರ ಮಾಡಿಲ್ಲ. ಇದರಿಂದ ಕೆರಳಿರುವ ಅಭಿಮಾನಿಗಳು ನಯನತಾರಾಗೆ ಮಕ್ಕಳಾಯಿತು ಮದುವೆ ವಿಡಿಯೋ ಎಲ್ಲಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. 

ಇತ್ತೀಚಿಗಷ್ಟೆ ನೆಟ್‌‌ಫ್ಲಿಕ್ಸ್ ನಯನತಾರಾ ಮತ್ತು ವಿಘ್ನೇಶ್ ಮದುವೆಯ ಟೀಸರ್ ಮಾಡಿತ್ತು. ಅಲ್ಲದೇ ಶೀಘ್ರದಲ್ಲೇ ಸಂಪೂರ್ಣ ವಿಡಿಯೋ ರಿಲೀಸ್ ಮಾಡುವುದಾಗಿ ಹೇಳಿತ್ತು. ಆದರೆ ಇನ್ನು ವಿಡಿಯೋ ಪ್ರಸಾರ ಮಾಡದೆ ಇರುವ ನೆಟ್ ಫ್ಲಿಕ್ಸ್ ವಿರುದ್ಧ ಅಭಿಮಾನಿಗಳು ಆಕ್ರೋಶ ಹೊರಹಾಕುತ್ತಿದ್ದಾರೆ. ನಯನತಾರಾಗೆ ಮದುವೆಯಾಗಿ ಇಬ್ಬರೂ ಮಕ್ಕಳನ್ನು ಸ್ವಾಗತಿಸಿದರು. ಆದರೆ ಮದುವೆ ವಿಡಿಯೋ ಮಾತ್ರ ಇಲ್ಲ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಮದುವೆ ಸಾಕ್ಷ್ಯಚಿತ್ರದಲ್ಲಿ ಮಕ್ಕಳನ್ನು ಸಹ ಸೇರಿಸಲು ಕಾಯುತ್ತಿದ್ದಾರಾ ಅಥವಾ ಚೆನ್ನೈನಲ್ಲಿ ಮದುವೆ ಹೇಗಾಯಿತು ಎಂದು ನೋಡಲು ಸೆರೆಹಿಡಿದಿದ್ದಾರಾ ಎಂದು ಪ್ರಶ್ನಿಸುತ್ತಿದ್ದಾರೆ. 

ಅವಳಿ ಗಂಡು ಮಗು ಪಡೆದ ನಯನ್ ತಾರಾ ಜೋಡಿಗೆ ಶಾಕ್, ಸಂಭ್ರಮದ ನಡುವೆ ಸಂಕಷ್ಟ!

ಯಾವುದೇ ಸೆಲೆಬ್ರಿಟಿಗಳ ಮದುವೆ ವಿಡಿಯೋ ಎಡಿಟ್ ಮಾಡಲು ಹೆಚ್ಚು ಎಂದರೆ ಒಂದು ತಿಂಗಳು ಬೇಕಾಗಲಿದೆ. ಆದರೆ ನಯನತಾರಾ ಮತ್ತು ವಿಘ್ನೇಶ್ ಮದುವೆಯಾಗಿ ನಾಲ್ಕು ತಿಂಗಳಾದರೂ ಇನ್ನು ಮದುವೆ ವಿಡಿಯೊ ಎಡಿಟ್ ಆಗಿಲ್ವಾ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಮೂಲಗಳ ಪ್ರಕಾರ ನೆಟ್‌ಫ್ಲಿಕ್ಸ್ ಮದುವೆ ವಿಡಿಯೋ ಜೊತೆಗೆ ನಯನತಾರಾ ಮತ್ತು ವಿಘ್ನೇಶ್ ಕುಟುಂಬದವರ ಸಾಕಷ್ಟು ವಿಚಾರಗಳನ್ನು ಸೇರಿಸುತ್ತಿದೆ, ಅವರ ಹಳೆಯ ಕಥೆ ಕೂಡ ಇದರಲ್ಲಿ ಇರಲಿದೆ ಹಾಗಾಗಿ ತಡವಾಗುತ್ತಿದೆ ಎನ್ನಲಾಗಿದೆ. ಇದುವರೆಗೂ ನೋಡಿರದ ಸೆಲೆಬ್ರಿಟಿ ಮದುವೆ ವಿಡಿಯೋ ಇದಾಗಲಿದೆ, ತುಂಬಾ ವಿಭಿನ್ನವಾಗಿ ಇರಲಿದೆ ಎನ್ನಲಾಗುತ್ತಿದೆ. ಎಷ್ಟರ ಮಟ್ಟಿಗೆ ಇರಲಿದೆ ಎಂದು ಅಭಿಮಾನಿಗಳು ಇನ್ನು ಕಾಯುತ್ತಿದ್ದಾರೆ. 

ಮದುವೆಯಾದ 4 ತಿಂಗಳಿಗೆ ಮುದ್ದಾದ ಅವಳಿ ಗಂಡು ಮಗು ಸ್ವಾಗತಿಸಿದ ನಯನತಾರ ಜೋಡಿ!

ಅವಳಿ ಮಕ್ಕಳನ್ನು ಸ್ವಾಗತಿಸಿದ ದಂಪತಿ

ಇತ್ತೀಚಿಗಷ್ಟೆ ನಯನತಾರಾ ಮತ್ತು ವಿಘ್ನೇಶ್ ದಂಪತಿ ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳನ್ನು ಪಡೆದಿದ್ದಾರೆ. ಮಕ್ಕಳನ್ನು ಸ್ವಾಗತಿಸಿದ ಸಂತಸದ ವಿಚಾರವನ್ನು ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. 'ನಮ್ಮೆಲ್ಲರ ಪಾರ್ಥನೆ, ಪೂರ್ವಜರ ಆಶೀರ್ವಾದ, ಎಲ್ಲಾ ಶುಭಕೋರಿಕೆ ಅವಳಿ ಮಕ್ಕಳ ರೂಪದಲ್ಲಿ ನಮಗೆ ಸಿಕ್ಕಿದೆ. ನಮ್ಮ ಉಸಿರು ಹಾಗೂ ಪ್ರಪಂಚ ನಿಮ್ಮೆಲ್ಲ ಆಶೀರ್ವಾದ ಬೇಕು. ನಿಮ್ಮ ಆಶೀರ್ವಾದದಿಂದ ನಮ್ಮ ಜೀವನ ಪ್ರಕಾಶಮಾನವಾಗಿ ಹಾಗೂ ಸುಂದರವಾಗಲಿದೆ' ಎಂದು ವಿಘ್ನೇಶ್ ಶಿವನ್ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ದೇಶಮುದುರು ಹೊಡೆತಕ್ಕೆ ಅಡ್ರೆಸ್ ಇಲ್ಲದಂತಾದ ಪ್ರಭಾಸ್ ಸಿನಿಮಾ.. ಒಂದೇ ವರ್ಷ ಬ್ಯಾಕ್ ಟು ಬ್ಯಾಕ್ ಫ್ಲಾಪ್
700 ಕೋಟಿಗೂ ಹೆಚ್ಚು ಆಸ್ತಿ, 10 ವರ್ಷ ಚಿಕ್ಕವನನ್ನು ಮದುವೆಯಾದ ನಟಿ, ಬೆಡ್‌ರೂಮ್ ಸೀಕ್ರೆಟ್ ಹೇಳಿದ್ಯಾರು?