ಪಠಾಣ್ ಭರ್ಜರಿ ಯಶಸ್ಸಿನತ್ತ ಮುನ್ನುಗ್ಗುತ್ತಿರುವ ನಡುವೆಯೇ ಅವರ ಅಭಿಮಾನಿಯೊಬ್ಬ ನಿಮ್ಮ ವಿರುದ್ಧ ಕೇಸ್ ಹಾಕುತ್ತೇನೆ ಎಂದಿದ್ದಾರೆ. ಏನಿದಕ್ಕೆ ಕಾರಣ?
ಪಠಾಣ್ (Pathaan) ಚಿತ್ರ ಬ್ಲಾಕ್ಬಸ್ಟರ್ ಆಗಿದ್ದು, ಮಕಾಡೆ ಮಲಗಿದ್ದ ಬಾಲಿವುಡ್ ಅನ್ನು ಎದ್ದು ನಿಲ್ಲಿಸಿದೆ. 250 ಕೋಟಿ ರೂಪಾಯಿಗಳಲ್ಲಿ ತಯಾರು ಮಾಡಲಾಗಿದ್ದ ಈ ಚಿತ್ರ ಸಾವಿರ ಕೋಟಿ ಗಡಿ ದಾಟಿ ಲಾಭ ಮಾಡಿದೆ. ದೇಶದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಪಠಾಣ್ ಅಬ್ಬರಕ್ಕೆ ಹಲವು ಚಿತ್ರಗಳು ತತ್ತರಿಸಿ ಹೋಗಿವೆ. ಚಿತ್ರ ಬಿಡುಗಡೆಯಾಗಿ ತಿಂಗಳಾಗುತ್ತಾ ಬಂದರೂ ಇದುವರೆಗೂ ಪಠಾಣ್ ಅಬ್ಬರ ನಿಂತಿಲ್ಲ. ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆಯವರು ಕೇಸರಿ ಬಿಕಿನಿ ತೊಟ್ಟು ಬೇಷರಂ ರಂಗ್ಗೆ ನೃತ್ಯ ಮಾಡಿದ್ದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿ, ಬಾಯ್ಕಾಟ್ ಪಠಾಣ್ ಟ್ರೆಂಡ್ ಕೂಡ ಶುರುವಾಗಿತ್ತು. ನಂತರ ಕೇಸರಿ ಬಿಕಿನಿ ಬಿಟ್ಟು ಕೇಸರಿ ಲುಂಗಿ ತೊಟ್ಟು ರೀಶೂಟ್ ಮಾಡಲಾಯಿತು. ಬಾಯ್ಕಾಟ್ ಅಭಿಯಾನವೂ ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆದಂತೆ ಕಾಣಿಸುತ್ತಿದ್ದು, ಅದು ಶರವೇಗದಿಂದ ಸಾಗುತ್ತಲೇ ಇದೆ.
ಇದರ ನಡುವೆಯೇ ಶಾರುಖ್ ಖಾನ್ ಅವರು, ತಮ್ಮ ಅಭಿಮಾನಿಗಳ ಜೊತೆ #AskSRK ಟ್ವಿಟರ್ ಮಾತುಕತೆ ನಡೆಸುತ್ತಿದ್ದಾರೆ. ತಮ್ಮ ಬಳಿ ಏನಾದರೂ ಪ್ರಶ್ನೆಗಳನ್ನು ಕೇಳಬಹುದು ಎಂದು ಅವರು ಅಭಿಮಾನಿಗಳಿಗೆ ಆಹ್ವಾನ ನೀಡಿದ್ದಾರೆ. ಅಸಲಿಗೆ ಇದು ಪಠಾಣ್ ಚಿತ್ರ ಬಿಡುಗಡೆಯಾಗುವ ಮುಂಚೆಯೇ ಶುರುವಾಗಿದ್ದು, ಇದಾಗಲೇ ಲಕ್ಷಾಂತರ ಅಭಿಮಾನಿಗಳು ಪ್ರಶ್ನೆಗಳ ಸುರಿಮಳೆಯನ್ನೇ ಗೈದಿದ್ದಾರೆ. ಈ ಪೈಕಿ ಸಾಧ್ಯವಾದಷ್ಟು ಪ್ರಶ್ನೆಗಳಿಗೆ ಶಾರುಖ್ ಖಾನ್ ಉತ್ತರಿಸಿದ್ದಾರೆ. ಹಲವರು ತಮಾಷೆಯ ಪ್ರಶ್ನೆಗಳನ್ನು ಕೇಳುತ್ತಿದ್ದು, ಶಾರುಖ್ (Shah Rukh Khan) ಕೂಡ ಅಷ್ಟೇ ತಮಾಷೆ ಉತ್ತರ ನೀಡುತ್ತಿದ್ದಾರೆ. ಇನ್ನು ಕೆಲವರು ಕಾಲೆಳೆಯುವ ಪ್ರಶ್ನೆ ಕೇಳುತ್ತಿದ್ದು, ಅದಕ್ಕೆ ನಟ ಸ್ವಲ್ಪ ಗರಂ ಆಗಿಯೇ ಉತ್ತರಿಸುತ್ತಾರೆ.
ಖಾಸಗಿ ವಿಡಿಯೋ ವೈರಲ್: ನೋವು ತೋಡಿಕೊಂಡ ಖ್ಯಾತ ನಟಿ Priyanka
ಇದೀಗ ಅವರ ಅಭಿಮಾನಿಯೊಬ್ಬ ಶಾರುಖ್ ಖಾನ್ ವಿರುದ್ಧ ಪಠಾಣ್ಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲು ಮಾಡುವುದಾಗಿ ಹೇಳಿದ್ದಾರೆ! ಇದನ್ನು ಖುದ್ದು ಅವರು #AskSRK ನಲ್ಲಿಯೇ ಹೇಳಿದ್ದಾರೆ! “ಖಾನ್ ಸಾಹಬ್ ಎಫ್‌ಐಆರ್ ಫೈಲ್ ಕರ್ ರಹಾ ಹುನ್ ಆಪ್ ಕೆ ವಿರುದ್ಧ (ಖಾನ್ ಸಾಹಬ್ ನಿಮ್ಮ ವಿರುದ್ಧ ಎಫ್‌ಐಆರ್ ದಾಖಲು ಮಾಡುತ್ತಿದ್ದೇನೆ) ಎಂದಿದ್ದಾರೆ. ಅಷ್ಟಕ್ಕೂ ಹೀಗೆ ಹೇಳಲು ಕಾರಣ ತಮಾಷೆಯದ್ದಾಗಿದೆ. ಆ ಅಭಿಮಾನಿ ಹೇಳಿದ್ದೇನೆಂದರೆ, ಪದೇ ಪದೇ ತಮಗೆ 57 ವರ್ಷ ಎಂದು ನೀವು ಹೇಳುತ್ತಿದ್ದೀರಿ. ಹೀಗೆ ಸುಳ್ಳು ಹೇಳಬೇಡಿ. ನಿಮ್ಮ ಆ್ಯಕ್ಟಿಂಗ್, ನಿಮ್ಮ ವೇಷ-ಭೂಷಣ ನೋಡಿದರೆ ನಿಮಗೆ 57 ಎಂದು ಯಾರೂ ಹೇಳುವುದಿಲ್ಲ. ಹೀಗೆ ಪದೇ ಪದೇ 57 ವರ್ಷ ಎಂದು ಹೇಳುತ್ತಾ ಸುಳ್ಳು ನುಡಿಯುತ್ತಿದ್ದೀರಿ. ಹೀಗೆ ಸುಳ್ಳು ಹೇಳಿದರೆ ನಿಮ್ಮ ವಿರುದ್ಧ ಎಫ್‌ಐಆರ್ (FIR) ದಾಖಲಿಸುತ್ತೇನೆ ಎಂದಿದ್ದಾರೆ.
ಅದಕ್ಕೆ ತಮಾಷೆಯಾಗಿ ಶಾರುಖ್ ಖಾನ್ 'ಮತ್ ಕರೋ ಯಾರ್. ಠೀಕ್ ಹೈ, ಮೈ ಯೇ ಮಾನ್ ಜಾತಾ ಹೂಂ ಮುಝೆ 30 ಬರಸ್ ಠೀಕ್ ಹೈ? (ಎಫ್‌ಐಆರ್ ಮಾಡಬೇಡಪ್ಪಾ... ನಾನು ಒಪ್ಪಿಕೊಳ್ತೇನೆ. ನನಗೆ 30 ವರ್ಷ ಎಂದು ಒಪ್ಪಿಕೊಳ್ಳುತ್ತೇನೆ) ಎಂದಿದ್ದಾರೆ. ಇದು ಸತ್ಯನಪ್ಪಾ... ಅದಕ್ಕಾಗಿಯೇ ನನ್ನ ಮುಂದಿನ ಚಿತ್ರಕ್ಕೂ ಜವಾನ್ ಎಂದು ಹೆಸರಿಡಲಾಗಿದೆ ಎಂದು ತಮಾಷೆ ಮಾಡಿದ್ದಾರೆ. ಅದಕ್ಕೆ ಅನೇಕ ಮಂದಿ ಪ್ರತಿಕ್ರಿಯೆ ನೀಡಿದ್ದು, ನಿಮಗೆ ಎಷ್ಟೇ ವಯಸ್ಸಾದರೂ ನೀವು ಇನ್ನೂ ನಮಗೆ ಯಂಗ್ ಆ್ಯಂಡ್ ಎನರ್ಜೆಟಿಕ್ ಆಗಿಯೇ ಇರುತ್ತೀರಿ. ನಿಮಗೆ ವಯಸ್ಸು ಆಗುತ್ತದೆ ಎಂದರೆ ನಾವು ಒಪ್ಪುವುದೇ ಇಲ್ಲ ಎಂದಿದ್ದಾರೆ.
ಬಾಲಿವುಡ್ನ ನಾಲ್ವರು ಖ್ಯಾತ ನಟಿಯರ ಬುಟ್ಟಿಗೆ ಹಾಕಿಕೊಂಡಿದ್ದ ಈ ಮಾಜಿ ಪ್ರಧಾನಿ!
ಸದ್ಯ ಶಾರುಖ್ ಅವರು ಅಟ್ಲೀ ಅವರ ನಿರ್ದೇಶನದ ಜವಾನ್ (Jawan) ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಅವರು ಇತ್ತೀಚೆಗೆ ಚಿತ್ರದ ಚಿತ್ರೀಕರಣಕ್ಕಾಗಿ ಪುಣೆಗೆ ತೆರಳಿದ್ದರು. ನಯನತಾರಾ ಕೂಡ ನಟಿಸಿರುವ ಈ ಚಿತ್ರವು ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಐದು ಭಾಷೆಗಳಲ್ಲಿ ಜೂನ್ 2 ರಂದು ಥಿಯೇಟರ್‌ಗಳನ್ನು ಹಿಟ್ ಮಾಡಲು ಸಿದ್ಧವಾಗಿದೆ. ಇದು ಹೈ-ಆಕ್ಟೇನ್ ಆಕ್ಷನ್ ಸೀಕ್ವೆನ್ಸ್‌ಗಳೊಂದಿಗೆ ಈವೆಂಟ್ ಫಿಲ್ಮ್ ಎಂದು ಬಿಂಬಿಸಲಾಗಿದೆ. ಶಾರುಖ್ ಅವರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಇದನ್ನು ನಿರ್ಮಿಸಿದೆ. ಜೂನ್ 2022 ರಲ್ಲಿ, ಚಿತ್ರದ ಟೀಸರ್ ಅನ್ನು ಶಾರುಖ್ ಖಾನ್ ಅನಾವರಣಗೊಳಿಸಿದ್ದರು.