ದುಬೈನ ರೆಸ್ಟೋರೆಂಟ್ ಒಂದಕ್ಕೆ ಹೋದ ನಟ ಸೋನು ಸೂದ್ ಅವರಿಗೆ ಅಚ್ಚರಿಯೊಂದು ಕಾದಿತ್ತು. ಹೋಟೆಲ್ ಬಿಲ್ ಪಾವತಿಸಿ ಟೇಬಲ್ ಮೇಲೆ ಈ ಬರಹ ಬರೆಯಲಾಗಿತ್ತು. ಏನದು?
ಬಾಲಿವುಡ್ ನಟ ಸೋನು ಸೂದ್ ನಟನೆಗಿಂತಲೂ ಹೆಚ್ಚಾಗಿ ಅವರು ಉದಾತ್ತ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರು ನಿರ್ಗತಿಕರಿಗೆ ಸಹಾಯ ಮಾಡಲು ಎಂದಿಗೂ ಹಿಂಜರಿಯುವುದಿಲ್ಲ. ಇದೇ ಕಾರಣಕ್ಕೆ ಜನರು ಆತನನ್ನು ‘ರಿಯಲ್ ಹೀರೋ’ ಎಂಬ ಹೆಸರಿನಿಂದ ಕರೆಯುತ್ತಾರೆ. ಇವರು ಭಾರಿ ಪ್ರಚಾರಕ್ಕೆ ಬಂದಿದ್ದು ಕೊರೋನಾ ಸಂದರ್ಭದಲ್ಲಿ ಹಲವರಿಗೆ ಸಹಾಯ ಮಾಡುವ ಮೂಲಕ. ಆ ಸಮಯದಲ್ಲಿ ಹಲವಾರು ಮಂದಿ ಸೋನು ಅವರನ್ನು ನೆನಪಿಸಿಕೊಂಡಿದ್ದಿದೆ. ಯಾವಾಗಲೂ ಎಲ್ಲರಿಗೂ ಒಳ್ಳೆಯದನ್ನು ಮಾಡುವ ಸೋನು ಸೂದ್ ಅವರಿಗೆ ಇದೀಗ ವ್ಯಕ್ತಿಯೊಬ್ಬರು ತುಂಬಾ ಸುಂದರವಾಗಿ ಧನ್ಯವಾದ ಹೇಳಿದ್ದಾರೆ. ಸೋನು ಸೂದ್ ರೆಸ್ಟೋರೆಂಟ್‌ಗೆ ಊಟಕ್ಕೆ ಹೋದಾಗ, ಅಪರಿಚಿತರು ಅವರ ಸಂಪೂರ್ಣ ಬಿಲ್ ಪಾವತಿಸಿದ್ದಾರೆ. ಇದರೊಂದಿಗೆ, ನಟನಿಗೆ ಸುಂದರವಾದ ಟಿಪ್ಪಣಿಯನ್ನು ಸಹ ಬಿಡಲಾಗಿದೆ. ಅದು ಕೂಡ ದುಬೈನಲ್ಲಿ ನಡೆದ ಘಟನೆ ಇದು!
ಸೋನು ಸೂದ್ ಅವರು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ ಸೋನು ಸೂದ್. ದುಬೈನ ರೆಸ್ಟೋರೆಂಟ್‌ಗೆ ತಿನ್ನಲು ಹೋದಾಗ ಅಪರಿಚಿತರು ತಮ್ಮ ಸಂಪೂರ್ಣ ಬಿಲ್ ಪಾವತಿಸಿದ್ದಾರೆ ಎಂದು ಅವರು ಹೇಳಿದ್ದಾರೆ. ಜೊತೆಗೆ ಅದರಲ್ಲಿ ಟಿಪ್ಪಣಿ ಬರೆದು ಇಟ್ಟಿದ್ದನ್ನು ತಿಳಿಸಿದ್ದಾರೆ. ದೇಶಕ್ಕಾಗಿ ನೀವು ಮಾಡುವ ಎಲ್ಲಾ ಒಳ್ಳೆಯ ಕೆಲಸಗಳಿಗೆ ಧನ್ಯವಾದಗಳು ಎಂದು ಅದರಲ್ಲಿ ಬರೆಯಲಾಗಿದೆ. 'ಇದನ್ನು ಯಾರು ಮಾಡಿದ್ದಾರೆಂದು ನನಗೆ ತಿಳಿದಿಲ್ಲ, ಆದರೆ ರೆಸ್ಟೋರೆಂಟ್‌ನಲ್ಲಿ ನಮ್ಮ ಊಟದ ಸಂಪೂರ್ಣ ಬಿಲ್ ಅನ್ನು ಯಾರೋ ಪಾವತಿಸಿದ್ದಾರೆ. ಈ ಸುಂದರ ಟಿಪ್ಪಣಿಯನ್ನು ಸಹ ಬರೆಯಲಾಗಿದೆ. ಅದು ಹೃದಯವನ್ನು ಮುಟ್ಟಿತು. ಧನ್ಯವಾದಗಳು ಗೆಳೆಯ ಎಂದು ನಟ ಹೇಳಿದ್ದಾರೆ.
ಕಂಗನಾ ರಣಾವತ್ರ 10 ಕೋಟಿಯ ಆಸ್ತಿಯ ಒಡತಿಯಾದ ನಟಿ ಮೃಣಾಲ್ ಠಾಕೂರ್! ಏನಿದು ವಿಷ್ಯ?
ನಟನ ಈ ಪೋಸ್ಟ್‌ಗೆ ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ನೀವು ಗಳಿಸಿದ್ದು, ಪ್ರೀತಿ ಮತ್ತು ಗೌರವ ತೋರುವ ನಿಮ್ಮ ಬಳಗ ದೊಡ್ಡದಿದೆ ಎಂದಿದ್ದಾರೆ. ಇನ್ನು ಕೆಲವರು, ನೀವು ಮಾಡುತ್ತಿರುವ ಕೆಲಸಕ್ಕೆ ನೀವು ಅರ್ಹರು' ಎಂದು ಬರೆದಿದ್ದಾರೆ. ನೀವು ಎಂದಾದರೂ ನನ್ನನ್ನು ರೆಸ್ಟೋರೆಂಟ್‌ನಲ್ಲಿ ಭೇಟಿಯಾದರೆ, ನಾನು ಅದೇ ರೀತಿ ಮಾಡುತ್ತೇನೆ' ಎಂದು ಇನ್ನೊಬ್ಬ ಬಳಕೆದಾರ ಬರೆದಿದ್ದಾರೆ. ಸಾಕಷ್ಟು ಸಹಾಯ ಮಾಡುತ್ತಿರುವ ಸೋನು ಸೂದ್ ಆದಾಯದ ಬಗ್ಗೆ ಕೂಡ ಈ ಹಿಂದೆ ಪ್ರಶ್ನೆ ಎದ್ದಿತ್ತು. ಅದಕ್ಕೆ ಉತ್ತರ ನೀಡಿದ್ದ ಸೋನು ಸೂದ್, ನನ್ನ ಆದಾಯದ ಬಗ್ಗೆ ಯಾರು ಬೇಕಾದರೂ ಪ್ರಶ್ನೆಗಳನ್ನು ಕೇಳಲಿ. ಉತ್ತರ ಕೊಡಬೇಕಾಗಿರುವವರಿಗೆ ನಾನು ಉತ್ತರ ಕೊಡುತ್ತೇನೆ. ನಾನು ಯಾವುದಕ್ಕೂ ಹೆದರೋದಿಲ್ಲ. ನಾನು ಮಾಡುತ್ತಿರುವ ಕೆಲಸವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಅವಶ್ಯವಿರುವವರಿಗೆ ನಾನು ಸಹಾಯ ಮಾಡಿಯೇ ಮಾಡುತ್ತೇನೆ" ಎಂದು ಹೇಳಿದ್ದರು.
ಸೋನು ಸೂದ್ ಅವರ ಕುರಿತು ಹೇಳುವುದಾದರೆ, ಸೋನು ಪಂಜಾಬಿನ ಮೊಗಾದಲ್ಲಿ ಜನಿಸಿದರು, ಇವರ ತಂದೆ ಉದ್ಯಮಿಯಾಗಿದ್ದರೆ, ತಾಯಿ ಇಂಗ್ಲೀಷ್ ಮತ್ತು ಇತಿಹಾಸದ ಪ್ರೊಫೆಸರ್ ಆಗಿದ್ದರು. ಇವರಿಗೆ ಇಬ್ಬರು ಸಹೋದರಿಯರಿದ್ದಾರೆ. ಪಂಜಾಬಿನಲ್ಲಿ ವಿಧ್ಯಾಭ್ಯಾಸ ಮಾಡಿದ ಇವರು ನಂತರ ನಾಗಪುರದಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಇವರು ತಮ್ಮ ಪದವಿಯ ಕೊನೆಯ ವರ್ಷ ಓದುತ್ತಿದ್ದಾಗ ಗ್ರಾಸಿಮ್ `ಮಿ.ಇಂಡಿಯಾ' ಸ್ಪರ್ಧೆಯಲ್ಲಿ ಭಾಗವಹಿಸಿ ಟಾಪ್ ಫೈವ್‌ನಲ್ಲಿ ಸ್ಥಾನ ಪಡೆದರು. ಸೋನಾಲಿ ಎಂಬುವವರನ್ನು ಮದುವೆಯಾಗಿರುವ ಇವರಿಗೆ ಇಷಾನ್ ಎಂಬ ಪುತ್ರನಿದ್ದಾನೆ.
ಶಾರುಖ್ಗೆ ಕರಣ್ ಜೋಹರ್, ಪ್ರಿಯಾಂಕಾ ಜೊತೆ ಸಂಬಂಧವಿತ್ತಾ? ನಿರ್ಮಾಪಕ ವಿವೇಕ್ ವಾಸ್ವಾನಿ ಹೇಳಿದ್ದೇನು?