ನೀವು ಬರೀ ಅಡಲ್ಟ್ ಫಿಲ್ಮ್, ಕಾಮ ಪ್ರಚೋದಕ ಚಿತ್ರವನ್ನೇ ಮಾಡೋದ್ಯಾಕೆ ಎಂದು ಏಕ್ತಾ ಕಪೂರ್ಗೆ ಪ್ರಶ್ನೆ ಕೇಳಿದ್ರೆ ಅವರು ಹೇಳಿದ್ದೇನು?
ಕಿರುತೆರೆ ಹಾಗೂ ಬಾಲಿವುಡ್‌ನಲ್ಲಿ ತಮ್ಮ ಬಾಲಾಜಿ ಮೋಷನ್ ಪಿಕ್ಚರ್ಸ್ ಮೂಲಕ ಅನೇಕ ಸಿನಿಮಾ ಹಾಗೂ ಶೋಗಳಿಗೆ ಬಂಡವಾಳ ಹಾಕಿ ಸಿನಿರಂಗದಲ್ಲಿ ಏಕ್ತಾ ಕಪೂರ್ ಯಶಸ್ಸು ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚೆಗೆ ಕರಣ್ ಬೂಲಾನಿ ನಿರ್ದೇಶನದ ʼಥ್ಯಾಂಕ್ಯೂ ಫಾರ್ ಕಮಿಂಗ್ʼ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಕೆಲವು ದಶಕಗಳಿಂದ ದೂರದರ್ಶನ ವಾಹಿನಿ ಸೇರಿದಂತೆ ಹಲವಾರು ವಾಹಿನಿಗಳಲ್ಲಿ ಸೂಪರ್ಹಿಟ್ ಧಾರಾವಾಹಿಗಳನ್ನು ನೀಡಿರುವ ಕೀರ್ತಿಯು ಏಕ್ತಾ ಕಪೂರ್ ಅವರಿಗೆ ಸಲ್ಲುತ್ತದೆ. ಹಿರಿಯ ಬಾಲಿವುಡ್ ನಟ ಜೀತೇಂದ್ರ ಅವರ ಪುತ್ರಿಯಾಗಿರುವ ಏಕ್ತಾ ಕಪೂರ್, ಸಿನಿ ಜಗತ್ತಿನಲ್ಲಿ ಬಹಳ ಚಿರಪರಿಚರೇ ಸರಿ. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ವಯಸ್ಕರ ಚಿತ್ರಗಳನ್ನು ಮಾಡುವುದು ಹೆಚ್ಚಾಗುತ್ತಿದೆ. ಇದೇ ಕಾರಣಕ್ಕೆ ಇವರು ಹೋದಲ್ಲಿ, ಬಂದಲ್ಲಿ ಇದರ ಕುರಿತಾಗಿಯೇ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಎರಡು ವರ್ಷಗಳ ಹಿಂದೆ ಏಕ್ತಾ ಕಪೂರ್ ನಿರ್ಮಾಣದ ‘ತ್ರಿಪಲ್ ಎಕ್ಸ್-2’ ವೆಬ್ ಸೀರೀಸ್ ವಿವಾದದಲ್ಲಿ ಸಿಲುಕಿತ್ತು. ಸೀರೀಸ್ ನಲ್ಲಿ ಸೇನೆಯನ್ನು ಅಪಮಾನ ಮಾಡಿದ್ದು, ಭಾರತೀಯರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಎಫ್‍ಐಆರ್ ಸಹ ದಾಖಲಾಗಿತ್ತು. ನನಗೆ ಭಾರತೀಯ ಸೇನೆಗೆ ಕ್ಷಮೆ ಕೇಳಲು ಯಾವುದೇ ಹಿಂಜರಿಕೆ ಇಲ್ಲ ಎಂದು ಕೊನೆಗೆ ಏಕ್ತಾ ಕಪೂರ್ ಸಮಜಾಯಿಷಿ ನೀಡಿದ್ದರು. ಆದರೆ ತಮ್ಮ ವಿರುದ್ಧ ಟ್ರೋಲ್ ಮಾಡುವವರಿಗೆ ಖಡಕ್ ಉತ್ತರ ನೀಡಿ ಮತ್ತಷ್ಟು ಟ್ರೋಲ್ಗೆ ಒಳಗಾಗಿದ್ದರು ಏಕ್ತಾ. ಭಾರತೀಯ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಕೆಲ ವ್ಯಕ್ತಿಗಳು ತಾವು ದೊಡ್ಡ ಹೋರಾಟಗಾರರು ಎಂದು ತಿಳಿದು ನನ್ನನ್ನು ಮತ್ತು ನನ್ನ ತಾಯಿಯನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದಾರೆ. ನಮ್ಮನ್ನು ಆಶ್ಲೀಲವಾಗಿ ಟ್ರೋಲ್ ಮಾಡುವದರ ಜೊತೆಗೆ ಆತ್ಯಾಚಾರದ ಬೆದರಿಕೆಯೊಡ್ಡಿದ್ದಾರೆ. ಇದು ಸೆಕ್ಸ್ ಅಥವಾ ಸೇನೆಗೆ ಸಂಬಂಧಿಸಿದ ಸಮಸ್ಯೆ ಅಲ್ಲ. ರೇಪ್ ಮಾಡುವದಾಗಿ ಬೆದರಿಕೆಯೊಡ್ಡುವ ವ್ಯಕ್ತಿ ನನ್ನನ್ನು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದೀನಿ ಅಂತಾ ಆರೋಪಿಸುತ್ತಾನೆ. ಹಾಗಾದಾರೆ ರೇಪ್ ಮಾಡೋದಕ್ಕಿಂತ ಸೆಕ್ಸ್ ತುಂಬಾನೇ ಕೆಟ್ಟದ್ದು ಅಲ್ವಾ? ಎಂದು ಟ್ರೋಲರ್ ಗಳಿಗೆ ತಿರುಗೇಟು ನೀಡಿದ್ದರು.
ಕುಡುಕನಿಂದ ನಟಿಗೆ ವಿಮಾನದಲ್ಲಿ ರಾತ್ರಿಯೆಲ್ಲ ಕಿರುಕುಳ! ಆಘಾತಕಾರಿ ಮಾಹಿತಿ ಬಿಚ್ಚಿಟ್ಟ ದಿವ್ಯಪ್ರಭಾ
ಇದಾದ ಮೇಲೆ ಏಕ್ತಾ ಕಪೂರ್ ಮಾಲೀಕತ್ವದ ಆಲ್ಟ್ ಬಾಲಾಜಿ ಟೆಲಿಫಿಲ್ಮ್ಸ್ ‘ಗಂಧೀ ಬಾತ್’ (Gandhi Bath) ಎನ್ನುವ ವೆಬ್ ಸರಣಿಯನ್ನು ಆರಂಭಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ಪೋಸ್ಟರ್‌ವೊಂದನ್ನು ರಿಲೀಸ್ ಮಾಡಲಾಗಿತ್ತು. ಆ ಪೋಸ್ಟರ್‌ನಲ್ಲಿ ಲಕ್ಷ್ಮಿ ದೇವತೆಗೆ (Goddess Lakshmi) ಹೋಲುವಂತಹ ಮಹಿಳೆ ಇದ್ದಾಳೆ. ಆ ಮಹಿಳೆಯ ಮೂಲಕ ಲಕ್ಷ್ಮಿ ದೇವತೆಯನ್ನು ಅವಹೇಳನ ಮಾಡಲಾಗಿತ್ತು. ಇದರಿಂದಲೂ ಬಹಳ ವಿವಾದಕ್ಕೆ ಒಳಗಾಗಿದ್ದರು ಏಕ್ತಾ. ಗಂಧೀಬಾತ್ ವೆಬ್ ಸರಣಿಯ ಥಂಬ್ ನೈಲ್ ಪೋಸ್ಟರ್‌ನಲ್ಲಿ ಸೊಂಟದ ಬಳಿ ಕಮಲದ ಹೂವು, ಎರಡು ಬದಿಗಳಲ್ಲಿ ನವಿಲುಗಳೊಂದಿಗೆ ಇರುವ ಮಹಿಳೆ ಬಾಯಿ ಮೇಲೆ ಬೆರಳಿಟ್ಟು ‘ಶ್’ ಎನ್ನುವಂತೆ ಪೋಸ್ ಕೊಟ್ಟಿದ್ದಾರೆ. ಈ ಪೋಸ್ಟರ್ ವಿವಾದಕ್ಕೀಡಾಗಿತ್ತು. ಇದೊಂದು ಗ್ರಾಮೀಣ ಭಾರತದ ಕಾಮ ಪ್ರಚೋದಕ ಕಥೆಯನ್ನು ಒಳಗೊಂಡಿರುವ ವೆಬ್ ಸರಣಿಯಾಗಿದ್ದರಿಂದ ಕೆಲವರನ್ನು ಕಣ್ಣು ಕೆಂಪಗಾಗಿಸಿದ್ದವು.
ಹೀಗೆ ವಿವಾದಗಳು ಸದಾ ಏಕ್ತಾ ಕಪೂರ್ ವಿರುದ್ಧ ಸುತ್ತಿಕೊಂಡೇ ಇರುತ್ತವೆ. ಏಕ್ತಾ ಕಪೂರ್ (Ekta Kapoor) ಅವರು XXX ಚಿತ್ರ ನಿರ್ಮಾಣ ಮಾಡಿದ್ದ ವೇಳೆ ಖುದ್ದು ಸುಪ್ರೀಂಕೋರ್ಟ್ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. XXX ನಂತಹ ಚಿತ್ರಗಳಿಂದ ನೀವು ಯುವಕರನ್ನು ಹಾಳು ಮಾಡುತ್ತಿದ್ದೀರಿ ಎಂದಿತ್ತು. ಅದೇನೇ ಇದ್ದರೂ ಏಕ್ತಾ ಮಾತ್ರ ತಮ್ಮ ನಿಲುವನ್ನು ಬಿಟ್ಟಿಲ್ಲ. ಇದೇ ಚಿತ್ರವನ್ನೇ ಹೆಚ್ಚಾಗಿ ಮಾಡುತ್ತಾರೆ. ಇದೀಗ ನೆಟ್ಟಿಗರೊಬ್ಬರು ಇದೇ ಪ್ರಶ್ನೆಯನ್ನು ಏಕ್ತಾ ಕಪೂರ್ ಅವರ ಮುಂದಿಟ್ಟಿದ್ದಾರೆ. ನೀವು ಅಡಲ್ಟ್ ಫಿಲ್ಮ್ ಮಾಡುವುದನ್ನು ನಿಲ್ಲಿಸಿ. ನೀವೇಕೆ ಇಂಥ ಫಿಲ್ಮ್ ಮಾಡುತ್ತೀರಿ ಎಂದಿದ್ದಾರೆ. ಅದಕ್ಕೆ ಏಕ್ತಾ ಕಪೂರ್ ಏನು ಉತ್ತರ ಕೊಟ್ಟಿದ್ದಾರೆ ಗೊತ್ತಾ? ನಾನು ವಯಸ್ಕಳು, ಅದಕ್ಕಾಗಿಯೇ ವಯಸ್ಕರ ಫಿಲ್ಮ್ ಮಾಡುತ್ತೇನೆ, ಏನಿವಾಗ ಎಂದು ಪ್ರಶ್ನಿಸಿ ಪ್ರಶ್ನೆ ಕೇಳುಗರ ಬಾಯಿಮುಚ್ಚಿಸಿದ್ದಾರೆ. ಈ ಉತ್ತರಕ್ಕೆ ಥರಹೇವಾರಿ ಕಮೆಂಟ್ಗಳು ಬರುತ್ತಿವೆ.
ಪದೇ ಪದೇ ಚಡ್ಡಿ ಯಾಕೆ ತೋರಿಸ್ತಿಯಾ? ಪ್ಯಾಂಟ್ ಕೊಳ್ಳೋಕೂ ದುಡ್ ಇಲ್ವಾ? ನಿವೇದಿತಾಗೆ ನೆಟ್ಟಿಗರ ಕ್ಲಾಸ್!