12.5 ಕೋಟಿ ರೂ.ಗೆ ಮನೆ ಮಾರಾಟ ಮಾಡಿ ಐಷಾರಾಮಿ ಕಾರು ಖರೀದಿಸಿದ ನಟಿ ಹೇಮಾ ಮಾಲಿನಿ

Published : Sep 02, 2025, 07:18 PM IST
Hema Malini New Car Price

ಸಾರಾಂಶ

ಬಾಲಿವುಡ್ ಡ್ರೀಮ್ ಗರ್ಲ್ ಹೇಮಾ ಮಾಲಿನಿ ಹೊಸ ಐಷಾರಾಮಿ ಕಾರು ಖರೀದಿಸಿದ್ದಾರೆ. ಪೂಜೆ ಮಾಡಿ ಹೊಸ ಕಾರು ಡ್ರೈವ್ ಮಾಡಿದ್ದಾರೆ. ವಿಶೇಷ ಅಂದರೆ ಹೇಮಾ ಮಾಲಿನಿ 12.5 ಕೋಟಿ ರೂಪಾಯಿಗೆ ಎರಡು ಮನೆ ಮಾರಾಟ ಮಾಡಿದ ಬೆನ್ನಲ್ಲೇ ಕಾರು ಖರೀದಿಸಿದ್ದಾರೆ.

ಮುಂಬೈ (ಸೆ.02) ಬಾಲಿವುಡ್ ಡ್ರೀಮ್ ಗರ್ಲ್ ಎಂದೇ ಗುರುತಿಸಿಕೊಂಡಿರುವ ನಟಿ, ಸಂಸದೆ ಹೇಮಾ ಮಾಲಿನಿ ಹೊಸ ಕಾರು ಖರೀದಿಸಿದ್ದಾರೆ. ಇದರಲ್ಲೇನು ವಿಶೇಷಾ ಅಂತೀರಾ? ಇಲ್ಲೆ ಇರೋದು ನೋಡಿ. ಇತ್ತೀಚೆಗಷ್ಟೇ ಹೇಮಾ ಮಾಲಿನಿ ಮುಂಬೈನಲ್ಲಿರುವ ಎರಡು ಮನೆಯನ್ನು ಮಾರಾಟ ಮಾಡಿದ್ದರು. 12.5 ಕೋಟಿ ರೂಪಾಯಿಗೆ ಮನೆ ಮಾರಾಟ ಮಾಡಿದ ಬೆನ್ನಲ್ಲೇ ಹೇಮಾ ಮಾಲಿನಿ ಐಷಾರಾಮಿ ಕಾರು ಖರೀದಿಸಿದ್ದಾರೆ. ಹೊಸ ಕಾರು ಖರೀದಿಸಿದ ಹೇಮಾ ಮಾಲಿನಿ ಸ್ವತಃ ಪೂಜೆ ಮಾಡಿ ಡ್ರೀಮ್ ಕಾರನ್ನು ಡ್ರೀಮ್ ಗರ್ಲ್ಟ್ ಡ್ರೈವ್ ಮಾಡಿದ್ದಾರೆ. ಈ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.

ಗಣೇಶ ಹಬ್ಬಕ್ಕೆ ಹೊಸ ಕಾರು ಮನೆಗೆ ತಂದ ಹೇಮಾ ಮಾಲಿನಿ

ಗಣೇಶ ಹಬ್ಬಕ್ಕೆ ಹೇಮಾ ಮಾಲಿನಿ ಹೊಸ ಕಾರು ಮನೆಗೆ ತಂದಿದ್ದಾರೆ. ಹೇಮಾ ಮಾಲಿನಿ ಖರೀದಿಸಿದ ಹೊಸ ಕಾರು ಎಂಜಿ ಎಂ 9 ಎಲೆಕ್ಟ್ರಿಕ್ ಕಾರು. ಕಾರು ಡೆಲಿವರಿ ಪಡೆದ ಹೇಮಾ ಮಾಲಿನಿ ಕಾರಿಗೆ ವಿಶೇಷ ಪೂಜೆ ಮಾಡಿದ್ದಾರೆ. ಸ್ವತಃ ತಾವೇ ಪೂಜೆ ಮಾಡಿದ್ದಾರೆ. ಬಳಿಕ ಕಾರು ಡ್ರೈವ್ ಮಾಡಿ ಸಂಭ್ರಮಿಸಿದ್ದಾರೆ. ಕಾರಿನ ಬೂಟ್ ಬಳಿ ಹೇಮಾ ಮಾಲಿನಿ ಹಾಗೂ ಕುಟುಂಬದ ಫೋಟೋ ಸ್ಟಿಕ್ ಮಾಡಿ ಅಲಂಕರಿಸಲಾಗಿತ್ತು. ಕಾರಿನಲ್ಲಿ ಬಲೂನ್ ತುಂಬಿಸಿ ಅಲಂಕರಿಸಲಾಗಿತ್ತು.

ಹೇಮಾ ಮಾಲಿನಿ ಖರೀದಿಸಿದ ಎಂಜಿ ಎಂ9 ಕಾರಿನ ಬೆಲೆ ಎಷ್ಟು?

ಹೇಮಾ ಮಾಲಿನಿ ಖರೀದಿಸಿದ ಎಂಜಿ ಮೋಟಾರ್ಸ್ ಎಂ9 ಎಲೆಕ್ಟ್ರಿಕ್ ಕಾರಿನ ಬೆಲೆ ಬರೋಬ್ಬರಿ 69.90 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ). ಈ ಕಾರಿನ ಆನ್‌ರೋಡ್ ಬೆಲೆ 75 ರಿಂದ 80 ಲಕ್ಷ ರೂಪಾಯಿ. ಒಂದು ಬಾರಿ ಚಾರ್ಜ್ ಮಾಡಿದರೆ 548 ಕಿಲೋಮೀಟರ್ ಮೈಲೇಜ್ ನೀಡಲಿದೆ.

ಎರಡು ಅಪಾರ್ಟ್‌ಮೆಂಟ್ ಮಾರಾಟ ಮಾಡಿರುವ ಡ್ರೀಮ್ ಗರ್ಲ್

ಹೇಮಾ ಮಾಲಿನಿ ಆಗಸ್ಟ್ ತಿಂಗಳಲ್ಲಿ ಎರಡು ಅಪಾರ್ಟ್‌ಮೆಂಟ್ ಮಾರಾಟ ಮಾಡಿದ್ದಾರೆ. ಮುಂಬೈನ ಒಬೆರಾಯ್ ಸ್ಪ್ರಿಂಗ್ಸ್‌ನಲ್ಲಿರುವ ಎರಡು ಮನೆಗಳನ್ನು ಮಾರಾಟ ಮಾಡಿದ್ದಾರೆ. ಕಾರು ಪಾರ್ಕಿಂಗ್ ಸ್ಥಳವಕಾಶ ಸೇರಿದಂತೆ ಒಂದು ಅಪಾರ್ಟ್‌ಮೆಂಟ್ ಬೆಲೆ 6.25 ಕೋಟಿ ರೂಪಾಯಿ. ಹೀಗೆ ಎರಡು ಅಪಾರ್ಟ್‌ಮೆಂಟ್ ಒಟ್ಟು 12.50 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಪ್ರತಿ ಅಪಾರ್ಟ್‌ಮೆಂಟ್‌ಗೆ ಸ್ಟಾಂಪ್ ಡ್ಯೂಟಿ 31.25 ಲಕ್ಷ ರೂಪಾಯಿ ಹಾಗೂ 30,000 ರೂಪಾಯಿ ರಿಜಿಸ್ಟ್ರೇಶನ್ ಫೀಸ್ ನೀಡಲಾಗಿದೆ.

 

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?