ಬಾಲಿವುಡ್‌ ಸಿನಿಮಾ ಕಾಪಿ ಮಾಡ್ಬೇಡಿ: ಪಾಕ್ ಪ್ರಧಾನಿ ಸೂಚನೆ

By Suvarna NewsFirst Published Jun 27, 2021, 3:49 PM IST
Highlights
  • ಬಾಲಿವುಡ್ ಸಿನಿಮಾ ನೋಡಿ ಕಾಪಿ ಮಾಡ್ಬೇಡಿ
  • ಪಾಕಿಸ್ತಾನದ ಸಿನಿಮಾ ಮಂದಿಗೆ ಪ್ರಧಾನಿ ಇಮ್ರಾನ್ ಖಾನ್ ಸೂಚನೆ

ಭಾರತದ ಹಿಂದಿ ಚಲನಚಿತ್ರೋದ್ಯಮವಾದ ಬಾಲಿವುಡ್ ಅನ್ನು ಕಾಪಿ ಮಾಡೋ ಬದಲು ಹೊಸ ಮತ್ತು ಮೂಲ ಸ್ವಂತ ವಿಚಾರದ ಸಿನಿಮಾಗಳನ್ನು ಮಾಡುವತ್ತ ಗಮನಹರಿಸಬೇಕೆಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ದೇಶದ ಚಲನಚಿತ್ರ ನಿರ್ಮಾಪಕರಿಗೆ ಸೂಚನೆ ಕೊಟ್ಟಿದ್ದಾರೆ.

ಇಸ್ಲಾಮಾಬಾದ್‌ನಲ್ಲಿ ನಡೆದ ಕಿರುಚಿತ್ರೋತ್ಸವವೊಂದರಲ್ಲಿ ಮಾತನಾಡಿದ ಖಾನ್, ಪಾಕಿಸ್ತಾನದ ಚಲನಚಿತ್ರೋದ್ಯಮವು ಬಾಲಿವುಡ್‌ನಿಂದ ಪ್ರಭಾವಿತವಾಗಿದ್ದರಿಂದ ಆರಂಭದಲ್ಲಿ ತಪ್ಪುಗಳು ನಡೆದಿವೆ, ಇದರ ಪರಿಣಾಮವಾಗಿ ಮತ್ತೊಂದು ರಾಷ್ಟ್ರದ ಸಂಸ್ಕೃತಿಯನ್ನು ನಕಲಿಸುವ ಮತ್ತು ಅಳವಡಿಸಿಕೊಳ್ಳುವ ಅಭ್ಯಾಸವನ್ನು ಮುಂದುವರೆಸಲಾಗಿದೆ ಎಂದಿದ್ದಾರೆ.

ಕೊರೋನಾ ಮುಗಿಯಲಿ ಎಂದು ಪ್ರತಿದಿನ ಪ್ರಾರ್ಥಿಸ್ತಾರೆ ಪೂಜಾ

ಆದ್ದರಿಂದ ನನ್ನ ಅನುಭವದ ಪ್ರಕಾರ, ಸ್ವಂತಿಕೆಯು ಮಾತ್ರ ಮಾರಾಟವಾಗುತ್ತದೆ - ನಕಲಿಗೆ ಯಾವುದೇ ಮೌಲ್ಯವಿಲ್ಲ ಎಂದು ನಾನು ಯುವ ಚಲನಚಿತ್ರ ನಿರ್ಮಾಪಕರಿಗೆ ಹೇಳಲು ಬಯಸುತ್ತೇನೆ ಎಂದಿದ್ದಾರೆ.

ಪಾಕಿಸ್ತಾನದ ಜನಪ್ರಿಯ ಸಂಸ್ಕೃತಿಯಲ್ಲಿ ಹಾಲಿವುಡ್ ಮತ್ತು ಬಾಲಿವುಡ್‌ನ ಪ್ರಭಾವವನ್ನು ಉಲ್ಲೇಖಿಸಿದ ಇಮ್ರಾನ್ ಖಾನ್, ಯುವ ಚಲನಚಿತ್ರ ನಿರ್ಮಾಪಕರಿಗೆ ನನ್ನ ಸಲಹೆ ಏನೆಂದರೆ ನಿಮ್ಮ ಸ್ವಂತ ಮೂಲ ಚಿಂತನೆಯನ್ನು ಸಿನಿಮಾ ಮೂಲಕ ತರುವುದು ಮತ್ತು ಅದರ ವೈಫಲ್ಯಕ್ಕೆ ಹೆದರಬೇಡಿ ಎಂದಿದ್ದಾರೆ.

click me!