ಡಿವೋರ್ಸ್, 2ನೇ ಗಂಡನ ಆತ್ಮಹ*ತ್ಯೆ; 62ನೇ ವಯಸ್ಸಿನಲ್ಲಿ ಫೋಟೋ ಲೀಕ್; ನಟಿ ಬದುಕಿನ ಅನಿರೀಕ್ಷಿತ ತಿರುವುಗಳು

Published : Jun 14, 2025, 08:59 PM IST
Jayasudha

ಸಾರಾಂಶ

ಅಭಿನಯದ ಮೂಲಕ ಮನೆಮಾತಾಗಿರುವ ನಟಿ ಬದುಕಿನಲ್ಲಿ ಅನೇಕ ಏರಿಳಿತಗಳಿವೆ. ಗಂಡನ ಆತ್ಮಹತ್ಯೆ, ಮಕ್ಕಳ ಜವಾಬ್ದಾರಿ, ವೈರಲ್ ಆದ ಫೋಟೋ, ಮೂರನೇ ಮದುವೆ ವದಂತಿ ಹೀಗೆ ಹಲವು ಘಟನೆಗಳನ್ನು ಎದುರಿಸಿದ್ದಾರೆ. ಜೊತೆಗೆ ಸಿನಿಮಾ ಮತ್ತು ರಾಜಕೀಯದಲ್ಲೂ ಛಾಪು ಮೂಡಿಸಿದ್ದಾರೆ.

ಬೆಂಗಳೂರು: ಕೆಲವು ನಟಿಯರು ಸಿನಿಮಾಗಳಲ್ಲಿ ಮಿಂಚುವ ಮೂಲಕ ಮನೆ ಮನೆ ಮಾತಾಗಿದ್ದಾರೆ. ಅದರಲ್ಲಿಯೂ ಪೋಷಕ ಪಾತ್ರಗಳಲ್ಲಿ ನಟಿಸುವ ಕಲಾವಿದರ ಬಗ್ಗೆ ಬಹುತೇಕರಿಗೆ ತಿಳಿದಿರಲ್ಲ. ಬೆಳ್ಳಿ ಪರದ ಮೇಲೆ ರಾಣಿಯಾಗಿ, ಮನೆಯ ಮಾಲೀಕ/ಒಡತಿ, ತುಂಬು ಕುಟುಂಬದ ಯಜಮಾನಿಯಾಗಿ ಕಾಣಿಸಿಕೊಂಡಿರುತ್ತಾರೆ. ಸಿನಿಮಾ ವೀಕ್ಷಣೆ ವೇಳೆ ಇವರ ಅಭಿನಯ ಕಂಡು ಪ್ರೇಕ್ಷಕರು ಮೂಕವಿಸ್ಮಿತರಾಗಿರುತ್ತಾರೆ. ಕೇವಲ ಹೀರೋ-ಹೀರೋಯಿನ್ ಮಾತ್ರವಲ್ಲ, ಇಂತಹ ಕಲಾವಿದರಿಂದ ಸಿನಿಮಾಗಳು ಗೆಲ್ಲುತ್ತವೆ. ಇಂದು ನಾವು ಹೇಳುತ್ತಿರುವ ನಟಿಯ ಜೀವನ ನೀವು ಅಂದ್ಕೊಂಡಂತೆ ಇರಲಿಲ್ಲ. ಗಂಡನ ಆತ್ಮಹತ್ಯೆ, ಇಬ್ಬರು ಮಕ್ಕಳನ್ನು ಬೆಳೆಸುವ ಜವಾಬ್ದಾರಿ ಈ ನಟಿಯ ಮೇಲಿತ್ತು. ಎಲ್ಲವೂ ಸರಿಯಾಗಿದೆ ಅನ್ನೋವಷ್ಟರಲ್ಲಿ 62ನೇ ವಯಸ್ಸಿನಲ್ಲಿ ನಟಿಯ ಖಾಸಗಿ ಫೋಟೋ ಲೀಕ್ ಆಗುತ್ತದೆ. 62ನೇ ವಯಸ್ಸಿನಲ್ಲಿ ಮದುವೆ ಆಗ್ತಾರೆ ಎಂಬ ವದಂತಿಗಳು ಹರಿದಾಡಿದ್ದವು.

ಸೂರ್ಯವಂಶ ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಪತ್ನಿಯಾಗಿ ನಟಿಸಿದ ಜಯಸುಧಾ, ಇಂದು ಸಹ ಪೋಷಕ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಸದ್ಯ ತೆಲಗು, ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಜಯಸುಧಾ ಮುಖಪರಿಚಯ ಗೊತ್ತಿಲ್ಲದವರು ತುಂಬಾ ವಿರಳ. ಚಿತ್ರಗಳಲ್ಲಿ ಹೀರೋ ತಾಯಿಯಾಗಿಯೇ ಜಯಸುಧಾ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಪೋಷಕಪಾತ್ರಕ್ಕಾಗಿ ಜಯಸುಧಾ ಬಹುಬೇಡಿಕೆಯ ನಟಿಯಾಗಿದ್ದಾರೆ.

ಡಿವೋರ್ಸ್, ಗಂಡನ ಸಾವು

1982ರಲ್ಲಿ ಸಿನಿಮಾ ನಿರ್ಮಾಪಕರೊಬ್ಬರ ಸಂಬಂಧಿಯನ್ನು ಜಯಸುಧ ಮದುವೆಯಾಗುತ್ತಾರೆ. ಆದರೆ ಈ ಮದುವೆ ಹೆಚ್ಚುದಿನ ಉಳಿಯಲ್ಲ. ವಿಚ್ಚೇದನಲ್ಲಿ ಜಯಸುಧಾ ಮೊದಲ ಮದುವೆ ಅಂತ್ಯವಾಗಿತ್ತು. ನಟಿ ಜಯಸುಧಾ ಅವರು ಬಾಲಿವುಡ್‌ನ ಖ್ಯಾತ ನಟ ಜಿತೇಂದ್ರ ಅವರ ಸಂಬಂಧಿಯಾಗಿದ್ದಾರೆ. 1985ರಲ್ಲಿ ಜಿತೇಂದ್ರ ಸಂಬಂಧಿ, ಸಿನಿಮಾ ನಿರ್ಮಾಪಕ ನಿತಿನ್ ಕಪೂರ್ ಅವರನ್ನು ಜಯಸುಧಾ ಮದುವೆಯಾಗುತ್ತಾರೆ. ನಿತಿನ್ ಕಪೂರ್-ಜಯಸುಧಾ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಅದು ಎಲ್ಲವೂ ಚೆನ್ನಾಗಿದ್ದ ಸಂದರ್ಭ, 2017ರಲ್ಲಿ ನಿತಿನ್ ಕಪೂರ್ ಖಿನ್ನತೆಯಿಂದ ಆತ್ಮಹ*ತ್ಯೆ ಮಾಡಿಕೊಳ್ಳುತ್ತಾರೆ.

ವಿದೇಶಿ ನಿರ್ಮಾಪಕನ ಜೊತೆಗಿನ ಫೋಟೋ ವೈರಲ್

ಪತಿ ನಿತಿನ್ ಕಪೂರ್ ನಿಧನದ ಬಳಿಕ ಜಯಸುಧಾ ಒಂಟಿಯಾಗಿ ಮಕ್ಕಳ ಜೊತೆ ಜೀವನ ಸಾಗಿಸುತ್ತಿರುತ್ತಾರೆ. ಇತ್ತೀಚೆಗಷ್ಟೇ ಜಯಸುಧಾ ಅವರ ಮೂರನೇ ಮದುವೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನುಂಟು ಮಾಡಿತ್ತು. ವಿದೇಶಿ ಸಿನಿಮಾ ನಿರ್ಮಾಪಕರ ಜೊತೆಗಿನ ಜಯಸುಧಾ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಗಾಸಿಪ್ ವೈರಲ್ ಆಗುತ್ತಿದ್ದಂತೆ ಮೂರನೇ ಮದುವೆ ಸುಳ್ಳು ಎಂದು ಜಯಸುಧಾ ಸ್ಪಷ್ಟನೆ ನೀಡಿದ್ದರು. ವೈರಲ್ ಆಗಿರುವ ಫೋಟೋದಲ್ಲಿರುವ ವ್ಯಕ್ತಿ ತಮ್ಮ ಜೀವನಚರಿತ್ರೆ ಆಧಾರಿತ ಕಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಎಲ್ಲಾ ಅಂತೆಕಂತೆಗಳಿಗೆ ತೆರೆ ಎಳೆದಿದ್ದರು.

ಜಯಸುಧಾ ಸಾಧನೆಗೆ ಪ್ರಮುಖ ಪ್ರಶಸ್ತಿಗಳು

ಕಳೆದ ಐದು ದಶಕಗಳಿಂದ ಹಿರಿಯ ನಟಿ ಜಯಸುಧಾ ಹಿಂದಿ, ತೆಲಗು ಮತ್ತು ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಚಿತ್ರರಂಗದಲ್ಲಿ ತಮ್ಮದೇ ಆದ ಸಾಧನೆಯನ್ನು ಮಾಡಿದ್ದಾರೆ. ತೆಲಗು ಸಿನಿಮಾಗಳ ಅಭಿನಯಕ್ಕಾಗಿ 1976, 1979, 1981, 1982, 1983ರಲ್ಲಿ ನಂದಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಫಿಲಂಫೇರ್‌ನಿಂದ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಿ ಜಯಸುಧಾ ಅವರನ್ನು ಗೌರವಿಸಿದೆ. ಕಲಾಸಾಗರ್, ಪ್ರೈಡ್ ಆಫ್ ಇಂಡಿಯನ್ ಸಿನಿಮಾ, ಆಂಧ್ರಪ್ರದೇಶ ಸಿನೆಗೋಯರ್ ಅಸೋಸಿಯೇಷನ್‌ನಿಂದ ಜೀವಮಾನ ಸಾಧನೆ, ಎಎನ್‌ಆರ್ ಪ್ರಶಸ್ತಿಗಳು ಜಯಸುಧಾ ಅವರಿಗೆ ಲಭಿಸಿವೆ.

ರಾಜಕೀಯದಲ್ಲಿಯೂ ಗುರುತಿಸಿಕೊಂಡಿರುವ ನಟಿ ಜಯಸುಧಾ

ಜಯಸುಧಾ ಅವರು 2009ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸಿಕಂದರಾಬಾದ್ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾದರು . ನಂತರ ಅವರು 2016 ರಲ್ಲಿ ತೆಲುಗು ದೇಶಂ ಪಕ್ಷಕ್ಕೆ ಸೇರಿದರು. ನಂತರ 2019 ರಲ್ಲಿ ಅವರು ತೆಲುಗು ದೇಶಂ ಪಕ್ಷವನ್ನು ತೊರೆದು ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು ಸೇರಿದರು . ಸಿನಿಮಾಗಳ ಜೊತೆ ರಾಜಕೀಯದಲ್ಲಿಯೂ ಜಯಸುಧಾ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌