ಊದಿಕೊಂಡ ದಿಶಾ ಪಟಾಣಿ ಮುಖ! ಎಲ್ಲೆಲ್ಲಿ ಕತ್ತರಿ ಹಾಕಿಸಿಕೊಂಡ್ರಿ ಎಂದ ಟ್ರೋಲಿಗರು

By Suvarna News  |  First Published May 12, 2023, 2:41 PM IST

ನಟಿ ದಿಶಾ ಪಟಾಣಿ ಫೋಟೋ ಶೇರ್​ ಮಾಡಿಕೊಂಡಿದ್ದು ಆಕೆಯ ಊದಿದ ಮುಖವನ್ನು ನೋಡಿ ನೆಟ್ಟಿಗರು ಟ್ರೋಲ್​ ಮಾಡುತ್ತಿದ್ದಾರೆ. ಏನಿದು ವಿಷಯ? 
 


ಬಾಲಿವುಡ್ ನಟಿ ದಿಶಾ ಪಟಾನಿಯನ್ನು(Disha Patani) ಬಾಲಿವುಡ್‌ನ ಬೋಲ್ಡ್, ಹಾಟ್ ಮತ್ತು ಮಾದಕ ನಟಿ ಎಂದು ಪರಿಗಣಿಸಲಾಗಿದೆ.  ಸಮುದ್ರ ತೀರವನ್ನು ತುಂಬಾ ಇಷ್ಟಪಡುವ ನಟಿ ಅಲ್ಲಿಯೇ ಫೋಟೋಶೂಟ್​  ಮಾಡಿಸಿಕೊಳ್ಳುವುದು ಹೆಚ್ಚು.  ಆಗಾಗ್ಗೆ ಸಮುದ್ರ ತೀರದಲ್ಲಿ ತಮ್ಮ  ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ದಿಶಾ  ಮಾಲ್ಡೀವ್ಸ್ (Maldives) ಪ್ರವಾಸದ ಹಳೆಯ ಫೋಟೋವನ್ನು (ಥ್ರೋಬ್ಯಾಕ್ ಚಿತ್ರಗಳು) ಹಂಚಿಕೊಂಡಿದ್ದರು. ಇದರಲ್ಲಿ   ಬಿಕಿನಿಯಲ್ಲಿ ಫೋಟೋಶೂಟ್‌ ಮಾಡಿಸಿಕೊಂಡು ಬಹಳ ಟ್ರೋಲ್​ಗೆ ಒಳಗಾಗಿದ್ದರು. ಆದರೂ ದಿಶಾ ಪಟಾನಿ ತಮ್ಮ ಧೈರ್ಯಶಾಲಿ ಫ್ಯಾಷನ್ ಸೆನ್ಸ್‌ಗಾಗಿ ಹೊಗಳಿಕೆ, ತೆಗಳಿಕೆಗೆ ಒಳಗಾಗುತ್ತಲೇ ಇರುತ್ತಾರೆ. ಎಷ್ಟೇ ಟ್ರೋಲ್​ಗೆ ಒಳಗಾದರೂ  ವಿಚಲಿತರಾಗದೇ ಉಳಿಯುವುದೇ ವಿಶೇಷ.  

ಆದರೆ ಈಗ ನಟಿ ಮತ್ತೊಮ್ಮೆ ಟ್ರೋಲ್​ಗೆ ಒಳಗಾಗಿದ್ದಾರೆ. ಆದರೆ ಈ ಬಾರಿ ತಮ್ಮ ಬಟ್ಟೆಯ ಸೆನ್ಸ್​ನಿಂದ ಅವರು ಟ್ರೋಲ್​ಗೆ ಒಳಗಾಗಲಿಲ್ಲ. ಬದಲಿಗೆ  ಮುಖದಿಂದಾಗಿ ಟ್ರೋಲ್​ಗೆ ಒಳಗಾಗಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ  ಕ್ಲೋಸ್ ಅಪ್‌ ಫೋಟೋಗಳನ್ನು ಶೇರ್​ ಮಾಡಿದ್ದಾರೆ.  ಆಕೆಯ ಅಭಿಮಾನಿಗಳು ಇದನ್ನು ಇಷ್ಟಪಟ್ಟಿದ್ದರೆ,  ಇಂಟರ್ನೆಟ್‌ನ ಒಂದು ವಿಭಾಗವು ಆಕೆಯ ಮುಖವು ಊದಿಕೊಂಡಿದೆ ಎಂದು ಟ್ರೋಲ್​ ಮಾಡುತ್ತಿದ್ದಾರೆ.  ಅವರು ಚಿತ್ರರಂಗಕ್ಕೆ ಬಂದಾಗ ಅವರ ಮುಖ ಇದ್ದಿದ್ದಕ್ಕೂ ಈಗ ಇರುವುದಕ್ಕೂ ಸಾಕಷ್ಟು ವ್ಯತ್ಯಾಸ ಇದೆ. ಇದನ್ನೇ ಇಟ್ಟುಕೊಂಡು ಟೀಕೆ ಮಾಡಲಾಗಿದೆ.  ಒಬ್ಬ ಬಳಕೆದಾರರು  'ನಿಮ್ಮ ಮುಖವು  ಜೇನುನೊಣಗಳು ಕಚ್ಚಿದಂತೆ ಕಾಣಿಸುತ್ತದೆ' ಎಂದರೆ, ಮತ್ತೆ ಕೆಲವರು ಕಚ್ಚಿದ್ದು ಹೌದು. ಆದರೆ ಜೇನುನೋಣವೋ ಅಥವಾ... ಎಂದು ಕಾಲೆಳೆದಿದ್ದಾರೆ. ಮತ್ತಿಷ್ಟು ಮಂದಿ ಈಗಷ್ಟೇ ಎದ್ದು ಮುಖ ತೊಳಿಯದೇ ಪೋಸ್​ ಕೊಟ್ಟಿರಬೇಕು ಅದಕ್ಕಾಗಿಯೇ ಹೀಗೆ ಕಾಣಿಸುತ್ತಿದ್ದಾಳೆ ಎಂದಿದ್ದಾರೆ. 

Tap to resize

Latest Videos

ಸನ್ನಿ ಡಿಯೋಲ್​ ಪುತ್ರನ ಡೇಟಿಂಗ್ ಫೋಟೋ ನೋಡಿ ಪ್ಯಾಂಟ್​ ಹರಿದು ಬಿಡಮ್ಮಾ ಎಂದ ನೆಟ್ಟಿಗರು!

ಆದರೆ ಇಷ್ಟಕ್ಕೆ ಈ ಟ್ರೋಲ್​ ನಿಲ್ಲಲಿಲ್ಲ. ಸಾಮಾನ್ಯವಾಗಿ ನಟಿಯರು ತಮ್ಮ ಅಂಗಾಂಗ ಚೆಂದ ಕಾಣಲು ಎಲ್ಲಾ ಅಂಗಗಳಿಗೂ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಮಾಮೂಲು. ಕಣ್ಣು, ಮೂಗು, ತುಟಿ, ಸ್ತನ... ಹೀಗೆ ಹಲವು ಕಡೆಗಳಲ್ಲಿ ಕತ್ತರಿ ಪ್ರಯೋಗ ಮಾಡಿಸಿಕೊಂಡು ಸುಂದರವಾಗಿ ಕಾಣಿಸಲು ಹವಣಿಸುತ್ತಾರೆ. ಇದೀಗ ಈಕೆಯ ಮುಖವನ್ನು ನೋಡಿದ ಟ್ರೋಲಿಗರು,  "ನಿಮ್ಮ ಇಡೀ ಮುಖದ ಮೇಲೆ ನೀವು ಎಷ್ಟು ಶಸ್ತ್ರಚಿಕಿತ್ಸೆಗಳನ್ನು (Operation) ಮಾಡಿದ್ದೀರಿ?" ಎಂದು ಪ್ರಶ್ನಿಸಿದ್ದಾರೆ. ಶಸ್ತ್ರ ಚಿಕಿತ್ಸೆ ಎಲ್ಲೆಲ್ಲಿ ಮಾಡಿಸಿಕೊಂಡಿರುವಿರಿ ಎಂದು ನಿಮ್ಮ ಫೋಟೋ ನೋಡಿದರೆ ಅರ್ಥವಾಗುತ್ತದೆ,  ಇನ್ನು ಮುಖಕ್ಕೆ ಎಷ್ಟು ಸಲ ಕತ್ತರಿ ಹಾಕಿಸಿಕೊಂಡಿದ್ದೀರಿ, ಹೀಗೆ ಮುಖ ಊದಿಕೊಂಡಿದೆಯಲ್ಲ ಎಂದು ಪ್ರಶ್ನಿಸುತ್ತಿದ್ದಾರೆ. 

ಆಕೆಯ ಫೋಟೋಗಳು ರೆಡ್ಡಿಟ್‌ನಲ್ಲಿ ವೈರಲ್ ಆಗಿವೆ, ಅಲ್ಲಿ ನೆಟಿಜನ್‌ಗಳು ಅವರ ಇತ್ತೀಚಿನ ಫೋಟೋಗಳನ್ನು ಎಂಎಸ್ ಧೋನಿ: ದಿ ಅನ್‌ಟೋಲ್ಡ್ ಸ್ಟೋರಿಯಿಂದ ಅವರ ಹಳೆಯ ದಿನಗಳಿಗೆ ಹೋಲಿಸಿದ್ದಾರೆ.  ಕೆಲಸದ ಕುರಿತು ಹೇಳುವುದಾದರೆ,  ದಿಶಾ ಪಟಾನಿ ಕೊನೆಯದಾಗಿ ಏಕ್ ವಿಲನ್ ರಿಟರ್ನ್ಸ್‌ನಲ್ಲಿ ಅರ್ಜುನ್ ಕಪೂರ್, ಜಾನ್ ಅಬ್ರಹಾಂ ಮತ್ತು ತಾರಾ ಸುತಾರಿಯಾ ಅವರೊಂದಿಗೆ ಪರದೆಯ ಜಾಗವನ್ನು ಹಂಚಿಕೊಂಡಿದ್ದಾರೆ. ಅವರು ಮುಂದೆ ಸಾಗರ್ ಅಂಬ್ರೆ ಮತ್ತು ಪುಷ್ಕರ್ ಓಜಾ ಅವರ ನಿರ್ದೇಶನದ ಯೋಧಾ ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ರಾಶಿ ಖನ್ನಾ ಅವರೊಂದಿಗೆ ಕಾಣಿಸಿಕೊಳ್ಳಲಿದ್ದಾರೆ. ಯೋಜನೆಯು ಪ್ರಸ್ತುತ ಅದರ ಉತ್ಪಾದನಾ ಹಂತದಲ್ಲಿದೆ. ಇದಲ್ಲದೆ, ಅವರು ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಅವರೊಂದಿಗೆ ಪ್ರಾಜೆಕ್ಟ್ ಕೆ ಮತ್ತು ಹೆಸರಿಸದ ಶಿವ ಚಲನಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಟೈಗರ್ ಶ್ರಾಫ್ ಜೊತೆ ದಿಶಾ ಪಟಾಣಿ ಡೇಟಿಂಗ್ (Dating) ಮಾಡುತ್ತಿದ್ದಾರೆ ಎನ್ನಲಾಗಿದೆ. ಆದರೆ, ಇದನ್ನು ದಿಶಾ ಒಪ್ಪಿಕೊಂಡಿಲ್ಲ. ಇವರು ಮದುವೆ ಆಗಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.

ಡಿವೋರ್ಸ್ ಬೆನ್ನಲ್ಲೇ ಬೆಡ್​ ಮೇಲೆ ರೋಷನ್ ಬೇಕೆಂದ ನಟಿ Niharika Konidela, ಸಂಚಲನ!

 

click me!