ಹೀನಾಯ ಸೋತ 'ಶಾಕುಂತಲಂ' OTTಗೆ; ಸೈಲೆಂಟ್ ಆಗಿ ಸ್ಟ್ರೀಮಿಂಗ್ ಆರಂಭಿಸಿದ ಸಮಂತಾ ಸಿನಿಮಾ

Published : May 11, 2023, 05:11 PM IST
ಹೀನಾಯ ಸೋತ 'ಶಾಕುಂತಲಂ' OTTಗೆ; ಸೈಲೆಂಟ್ ಆಗಿ ಸ್ಟ್ರೀಮಿಂಗ್ ಆರಂಭಿಸಿದ ಸಮಂತಾ ಸಿನಿಮಾ

ಸಾರಾಂಶ

ಹೀನಾಯ ಸೋತ 'ಶಾಕುಂತಲಂ' ಸಿನಿಮಾ OTTಗೆ ಎಂಟ್ರಿ ಕೊಟ್ಟಿದೆ. ಅಮೆಜಾನ್ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ.

ಸೌತ್ ಸ್ಟಾರ್ ಸಮಂತಾ ಇತ್ತೀಚೆಗಷ್ಟೆ ಶಾಕುಂತಲಂ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಆದರೆ ಆ ಸಿನಿಮಾ ನಿರೀಕ್ಷೆಯ ಗೆಲುವು ದಾಖಲಿಸಿಲ್ಲ. ಚಿತ್ರಮಂದಿರಗಳಲ್ಲಿ ಶಾಕುಂತಲಂ ಸಿನಿಮಾ ಹೀನಾಯ ಸೋಲು ಕಂಡಿದ್ದು ಚಿತ್ರತಂಡಕ್ಕೆ ಭಾರಿ ನಿರಾಸೆಯಾಗಿತ್ತು. ಪೌರಾಣಿಕ ಕಥಾಹಂದರ ಹೊಂದಿದ್ದ ಶಾಕುಲತಂ ಸಿನಿಮಾ ಪ್ರೇಕ್ಷಕರಿಗೆ ಕೊಂಚವು ಇಷ್ಟವಾಗಿಲ್ಲ. ಹಾಗಾಗಿ ಬಾಕ್ಸ್​ ಆಫೀಸ್​ನಲ್ಲಿ ಈ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಈಗ ಈ ಸಿನಿಮಾ ಒಟಿಟಿ ಅಂಗಳಕ್ಕೆ ಕಾಲಿಟ್ಟಿದೆ. ಚಿತ್ರಮಂದಿರಗಳಲ್ಲಿ ಹೀನಾಯ ಸೋತ ಸಿನಿಮಾ ಸೈಲೆಂಟ್ ಆಗಿ ಒಟಿಟಿಗೆ ಎಂಟ್ರಿ ಕೊಟ್ಟಿದೆ. ವಿಶೇಷ ಎಂದರೆ ಯಾವುದೇ ಪ್ರಚಾರವಿಲ್ಲದೆ ಸಿನಿಮಾ ಒಟಿಟಿಗೆ ಲಗ್ಗೆ ಇಟ್ಟಿದೆ. 

ಶಾಕುಂತಲಂ ಸಿನಿಮಾ ‘ಅಮೇಜಾನ್​ ಪ್ರೈಂ ವಿಡಿಯೋ’ದಲ್ಲಿ ರಿಲೀಸ್ ಆಗಿದೆ. ಚಿತ್ರಮಂದಿರಗಳಲ್ಲಿ ಹೀನಾಯ ಸೋಲುಕಂಡ ಕಾರಣಕ್ಕೆ ಯಾವುದೇ ಪ್ರಚಾರವಿಲ್ಲದೇ ಶಾಕುಂತಲಂ ಸಿನಿಮಾ ಸೈಲೆಂಟ್ ಆಗಿ  ಒಟಿಟಿಯಲ್ಲಿ ಸ್ಟ್ರೀಮಿಂಗ್ ಆರಂಭಿಸಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಶಾಕುಂತಲಂ’ ಸಿನಿಮಾ ಸಿದ್ಧಗೊಂಡಿತ್ತು. ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡಲಾಗಿತ್ತು. ಅದ್ದೂರಿಯಾಗಿ ಸಿದ್ಧವಾಗಿದ್ದ ಶಾಕುಂತಲಂ ಅಭಿಮಾನಿಗಳಿಗೆ ಭಾರಿ ನಿರಾಸೆ ಮೂಡಿಸಿತ್ತು. ಇದೀಗ ಒಟಿಟಿಗೆ ಎಂಟ್ರಿ ಕೊಟ್ಟಿದ್ದು ಎಲ್ಲಾ ಭಾಷೆಯಲ್ಲೂ ‘ಶಾಕುಂತಲಂ’ ಚಿತ್ರ ವೀಕ್ಷಣೆಗೆ ಲಭ್ಯವಾಗಿದೆ. ಒಟಿಟಿ ಪ್ರೇಕ್ಷಕರನ್ನಾದ್ರೂ ಶಾಕುಂತಲಂ ಗಮನ ಸೆಳೆಯುತ್ತಾ ಎಂದು ಕಾದುನೋಡ ಬೇಕಿದೆ. 

ಏಪ್ರಿಲ್​ 14ರಂದು ಬಿಡುಗಡೆ ಆದ ಈ ಸಿನಿಮಾ ಮೊದಲ ವೀಕೆಂಡ್​ ಕಳೆದರೂ ಎರಡಂಕಿ ಮುಟ್ಟಲು ವಿಫಲವಾಯಿತು. 3 ದಿನಕ್ಕೆ ಬಾಕ್ಸ್​ ಆಫೀಸ್​ನಲ್ಲಿ 10 ಕೋಟಿ ರೂಪಾಯಿ ಕೂಡ ಕಲೆಕ್ಷನ್ ಮಾಡಿಲ್ಲ. ಇದು ಚಿತ್ರತಂಡಕ್ಕೆ ಭಾರಿ ನಿರಾಸೆ ಮೂಡಿಸುವ ಜೊತೆಗೆ ದೊಡ್ಡ ನಷ್ಟ ಅನುಭವಿಸಿದರು.  ಒಟಿಟಿಯಲ್ಲಾದರೂ ಈ ಸಿನಿಮಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಗಲಿದೆಯೇ ಕಾದು ನೋಡಡಬೇಕಿದೆ. ಈ ಸಿನಿಮಾ ಮೇಲೆ ಸಮಂತಾ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದರು. ಅನಾರೋಗ್ಯದ ನಡುವೆಯೂ ಪ್ರಚಾರದಲ್ಲಿ ಭಾಗಿಯಾಗಿದ್ದರು. ಅಬ್ಬರದ ಪ್ರಚಾರ ಮಾಡಿದ್ದರು. ಏನೇ ಮಾಡಿದರೂ ಪ್ರೇಕ್ಷಕರು ಮಾತ್ರ ಚಿತ್ರಮಂದಿರದ ಕಡೆ ಮುಖ ಮಾಡಿಲ್ಲ.

ಸಮಂತಾ ಜೊತೆ ವಿಚ್ಛೇದನಕ್ಕೆ ನಿಜವಾದ ಕಾರಣ ಬಹಿರಂಗಪಡಿಸಿದ ನಾಗ ಚೈತನ್ಯ

ಈ ಸಿನಿಮಾದಲ್ಲಿ ಶಕುಂತಲೆಯಾಗಿ ಸಮಂತಾ ರುತ್​ ಪ್ರಭು ಕಾಣಿಸಿಕೊಂಡಿದ್ದಾರೆ. ಮಲಯಾಳಂ ನಟ ದೇವ್ ಮೋಹನ್ ದುಷ್ಯಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಮೋಹನ್ ಬಾಬು ದುರ್ವಾಸ ಮಹರ್ಷಿ ಪಾತ್ರದಲ್ಲಿ ನಟಿಸಿದ್ದರು. ಸಮಂತಾ ಮಗಳ ಪಾತ್ರದಲ್ಲಿ ಅಲ್ಲುಅರ್ಜುನ್ ಪುತ್ರಿ ಅಲ್ಲು ಅರ್ಹಾ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಗುಣಶೇಖರ್​ ಆ್ಯಕ್ಷನ್​-ಕಟ್​ ಹೇಳಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?